Asianet Suvarna News Asianet Suvarna News

ಸಿದ್ಧರಾಮಯ್ಯಗೆ ವೇದಿಕೆಗಳಲ್ಲಿ ಮಾತ್ರ ರೈತರ ಬಗ್ಗೆ ಕನಿಕರ: ಡಿ.ವಿ.ಸದಾನಂದ ಗೌಡ ಆರೋಪ

ಕೇವಲ ವೇದಿಕೆಗಗಳಲ್ಲಿ ರೈತರ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಸಿದ್ದರಾಮಯ್ಯ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ದಿನದಲ್ಲಿ 7 ಗಂಟೆ ತ್ರಿ ಫೇಸ್ ವಿದ್ಯುತ್‌ ನೀಡುತ್ತೇವೆ ಎಂದು ಹೇಳಿಕೊಂಡು ಪ್ರಚಾರ ಗಿಟ್ಟಿಸುವ ಇವರು ವಾಸ್ತವದಲ್ಲಿ ಕೇವಲ ಒಂದು ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಆರೋಪಿಸಿದರು.

Ex CM DV Sadananda Gowda Slams On CM Siddaramaiah At Hassan gvd
Author
First Published Nov 9, 2023, 1:20 AM IST

ಹಾಸನ (ನ.09): ಕೇವಲ ವೇದಿಕೆಗಗಳಲ್ಲಿ ರೈತರ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಸಿದ್ದರಾಮಯ್ಯ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ದಿನದಲ್ಲಿ 7 ಗಂಟೆ ತ್ರಿ ಫೇಸ್ ವಿದ್ಯುತ್‌ ನೀಡುತ್ತೇವೆ ಎಂದು ಹೇಳಿಕೊಂಡು ಪ್ರಚಾರ ಗಿಟ್ಟಿಸುವ ಇವರು ವಾಸ್ತವದಲ್ಲಿ ಕೇವಲ ಒಂದು ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಆರೋಪಿಸಿದರು.

ಅರಸಿಕೆರೆ ತಾಲೂಕಿನ ಗೇರುಮರ ಗ್ರಾಮದಲ್ಲಿ ಬುಧವಾರ ಬರ ಅಧ್ಯಯನ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ತು ಹೋಗಿರುವ ಸರ್ಕಾರವನ್ನು ಎಚ್ಚರಿಸಬೇಕಿದೆ. ಮುಖ್ಯಮಂತ್ರಿಗಳು ಕೇವಲ ಮಾತನಾಡುತ್ತಾರೆ. ಹಾಸನ ಜಿಲ್ಲೆಗೆ 12 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ಹೇಳುತ್ತಿದ್ದು, ಅದು ಇನ್ನೂ ಸಹ ಜಿಲ್ಲಾಧಿಕಾರಿ ಕಚೇರಿಯಲ್ಲೇ ಇದೆ ಎಂದು ದೂರಿದರು. ಹಾಸನ ಜಿಲ್ಲೆಯಲ್ಲಿ 73ರಷ್ಟು ಮಳೆ ಕೊರತೆಯಾಗಿದೆ. 125 ವರ್ಷಗಳಲ್ಲಿಯೇ ಕಂಡು ಕೇಳರಿಯದ ಬರ ಪರಿಸ್ಥಿತಿ ಎದುರಾಗಿದ್ದು ಅನ್ನ ನೀಡುವಂತಹ ರೈತನಿಗೆ ಅನ್ನ ಸಿಗದ ಸ್ಥಿತಿ ಉದ್ಭವಿಸಿದೆ. ಸರ್ಕಾರ ಕೂಡಲೇ ರೈತ ಪರ ನೀಲ್ಲಬೇಕಿದೆ ಎಂದು ಆಗ್ರಹಿಸಿದರು.

‘ನಾವು ವರದಿಯನ್ನು ಸಂಗ್ರಹಿಸಿ ಕೇಂದ್ರಕ್ಕೆ ಮನದಟ್ಟು ಮಾಡುವ ಕೆಲಸ ಮಾಡುತ್ತೇವೆ. ಹಾಸನ ಜಿಲ್ಲೆಯಲ್ಲಿ ರೈತರ ಸಂಕಷ್ಟ ಸಮಸ್ಯೆ ಹೆಚ್ಚಿದ್ದು, ಮಳೆ ಈಗಲಾದರೂ ಚೆನ್ನಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. ಇಂತಹ ಸ್ಥಿತಿಯಲ್ಲಿ ಮಳೆ ಬಂದರೆ ಕಟಾವಿಗೆ ಬಂದಿರುವ ಬೆಳೆ ಉಳಿಯುವುದಿಲ್ಲ. ಆದರೆ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ಬಗೆಹರಿಯಲಿದೆ ಎಂದು ಸದಾನಂದಗೌಡ ತಿಳಿಸಿದರು.

ಎಚ್‌.ಡಿ.ರೇವಣ್ಣ ಕಂಡರೆ ಮೊದಲಿನಿಂದಲೂ ಪ್ರೀತಿ: ಸಿಎಂ ಸಿದ್ದರಾಮಯ್ಯ

ಉಂಡ ಮನೆಗೆ ಎರಡು ಬಗೆಯಬಾರದು: ‘ಸಮಯಕ್ಕೆ ಸರಿಯಾಗಿ ರೈತರಿಗೆ ನೆರವು ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಇಂದು ಹಾಸನದಲ್ಲಿ ಬರ ಸಮೀಕ್ಷೆ ನಡೆಸಿ ನಾಳೆ ಮಂಡ್ಯ ಜಿಲ್ಲೆಗೆ ಹೋಗುತ್ತಿದ್ದೇವೆ. ನಮ್ಮದೇ ಸರ್ಕಾರ ಕೇಂದ್ರದಲ್ಲಿ ಇದೆ ಎಂದು ಸುಮ್ಮನೆ ಕೂರುವುದಿಲ್ಲ. ರೈತರಿಗೆ ಪರಿಹಾರ ಕೊಡಿ ಎಂದು ಒತ್ತಾಯ ಮಾಡುತ್ತೇವೆ. ನಮ್ಮ ರಾಜ್ಯ ಸರ್ಕಾರ ಉಂಡ ಮನೆಗೆ ಎರಡು ಬಗೆಯುವ ಕೆಲಸ ಮಾಡಬಾರದು’ ಎಂದು ಕಿಡಿಕಾರಿದರು.

Follow Us:
Download App:
  • android
  • ios