Asianet Suvarna News Asianet Suvarna News

ರಂಗಸ್ಥಳದಲ್ಲೇ ಹೃದಯಾಘಾತವಾಗಿ ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರು ನಿಧನ

ಕಟೀಲು 4ನೇ ಮೇಳದ ಹಿರಿಯ ಕಲಾವಿದ ಗುರುವಪ್ಪ ಬಾಯಾರು (58) ಅವರು ಕಟೀಲಿನ ಸರಸ್ವತೀ ಸದನದಲ್ಲಿ ಗುರುವಾರ ರಾತ್ರಿ ನಡೆಯುತ್ತಿದ್ದ ಯಕ್ಷಗಾನದ ಸಂದರ್ಭ ರಂಗಸ್ಥಳದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. 

Kateelu Mela Artist Guruvappa Bayaru Passed Away due to Heart Attack At Mangaluru gvd
Author
First Published Dec 23, 2022, 8:27 AM IST

ಮಂಗಳೂರು (ಡಿ.23): ಕಟೀಲು 4ನೇ ಮೇಳದ ಹಿರಿಯ ಕಲಾವಿದ ಗುರುವಪ್ಪ ಬಾಯಾರು (58) ಅವರು ಕಟೀಲಿನ ಸರಸ್ವತೀ ಸದನದಲ್ಲಿ ಗುರುವಾರ ರಾತ್ರಿ ನಡೆಯುತ್ತಿದ್ದ ಯಕ್ಷಗಾನದ ಸಂದರ್ಭ ರಂಗಸ್ಥಳದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸರಸ್ವತೀ ಸದನದಲ್ಲಿ ಕಟೀಲು ನಾಲ್ಕನೇ ಮೇಳದ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ತ್ರಿಜನ್ಮ ಮೋಕ್ಷ ಪ್ರಸಂಗದ ಕೊನೆಯ ಭಾಗ ಪ್ರದರ್ಶನಗೊಳ್ಳುತ್ತಿತ್ತು. ರಂಗಸ್ಥಳದಲ್ಲಿ ನಿಂತಿದ್ದ ಗುರುವಪ್ಪ ಬಾಯಾರು ಅವರು ಸ್ಥಳದಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ನಸುಕಿನ ಸುಮಾರು 12.15ರ ವೇಳೆಗೆ ಈ ಘಟನೆ ನಡೆದಿದೆ.

ಹೊಸಹಳ್ಳಿ ಕೇಶವಮೂರ್ತಿ ನಿಧನ: ಗಮಕ ಕಲೆಯನ್ನು ರಾಷ್ಟ್ರಮಟ್ಟದಲ್ಲಿ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹೊಸಹಳ್ಳಿ ಎಚ್‌.ಆರ್‌. ಕೇಶವಮೂರ್ತಿ (88) ಅವರು ಬುಧವಾರ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅವರಿಗೆ ಪತ್ನಿ ರಾಜೇಶ್ವರಿ, ಪುತ್ರಿ ಉಷಾ, ಅಳಿಯ, ವಯೋಲಿನ್‌ ಕಲಾವಿದ ಹೊಸಹಳ್ಳಿ ವೆಂಕಟರಾಮ್‌ ಸೇರಿ ಕುಟುಂಬ ಸದಸ್ಯರು ಇದ್ದಾರೆ. ಗುರುವಾರ ಮಧ್ಯಾಹ್ನ ಹೊಸಹಳ್ಳಿಯಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ. ಅಲ್ಲಿವರೆಗೆ ಹೊಸಹಳ್ಳಿಯ ಅವರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.

ಕಿತ್ತೂರು, ಕಲ್ಯಾಣ ಕರ್ನಾಟಕದ 13 ಜಲಯೋಜನೆಗಳಿಗೆ ಅಸ್ತು: ಸಚಿವ ಸಂಪುಟ ಒಪ್ಪಿಗೆ

ಎಚ್‌.ಆರ್‌. ಕೇಶವಮೂರ್ತಿಯವರ ನಿಧನದೊಂದಿಗೆ ರಾಜ್ಯದ ಪ್ರಮುಖ ಗಮಕ ಕಲೆಯ ಕೊಂಡಿಯೊಂದು ಕಳಚಿದಂತಾಗಿದೆ. ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಪಂಪನ ಮಹಾ ಭಾರತ, ರನ್ನನ ಗಧಾಯುದ್ಧ, ರಘುವಂಶ, ಕುಮಾರ ಸಂಭವದ ಶ್ಲೋಕಗಳಿಗೆ ರಾಗ ಸಂಯೋಜನೆ ಮಾಡಿ ಆರು ದಶಕಗಳ ಕಾಲ ಗಮಕವನ್ನು ದೇಶದೆಲ್ಲೆಡೆ ಪಸರಿಸಿದ ಹೆಮ್ಮೆ ಇವರದ್ದು. 80 ರ ದಶಕದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಮುಂಜಾನೆ ಪ್ರಸಾರವಾಗುತ್ತಿದ್ದ ಮತ್ತೂರು ಕೃಷ್ಣಮೂರ್ತಿ-ಕೇಶವಮೂರ್ತಿ ಜೋಡಿಯ ಗಮಕ ವಾಚನ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿತ್ತು. ಕೃಷ್ಣಮೂರ್ತಿಯವರ ಭಾವಾನಾತ್ಮಕ ವಿಶ್ಲೇಷಣೆಗೆ ಸರಿಸಮನಾಗಿ ಗಮಕ ವಾಚನ ಮಾಡುತ್ತಿದ್ದ ಎಚ್‌. ಆರ್‌. ಕೇಶವಮೂರ್ತಿಯವರು ಅಗ್ರಗಣ್ಯರಾಗಿ ಮುಂಚೂಣಿಗೆ ಬಂದಿದ್ದರು.

ಕೃಷಿ ಜಮೀನಲ್ಲಿ ಮನೆ ಕಟ್ಟಲು ಏಳೇ ದಿನಗಳಲ್ಲಿ ಅನುಮತಿ: ಭೂಕಂದಾಯ ತಿದ್ದುಪಡಿ ಮಸೂದೆ ಪಾಸ್‌

ಪದ್ಮಶ್ರೀ ಪ್ರಶಸ್ತಿ: ಗಮಕ ಕಲೆಯಲ್ಲಿ ಸಲ್ಲಿಸಿದ ಸೇವೆಗಾಗಿ ಹೆಚ್‌.ಆರ್‌. ಕೇಶವಮೂರ್ತಿಯವರಿಗೆ 2022ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕೇಶವಮೂರ್ತಿಯವವರಿಂದ ಆಶೀರ್ವಾದ ಪಡೆದಿದ್ದರು. ಈ ಚಿತ್ರ ಸಾಕಷ್ಟುವೈರಲ್‌ ಆಗಿತ್ತು. ಇದಲ್ಲದೆ, ಶಾಂತಲನಾಟ್ಯಶ್ರೀ ಪ್ರಶಸ್ತಿ, ಕುಮಾರವ್ಯಾಸ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರ ಮಡಿಲಿಗೆ ಬಂದಿದೆ.

Follow Us:
Download App:
  • android
  • ios