Asianet Suvarna News Asianet Suvarna News

ಕಾಸರಗೋಡಿನ ಸ್ಥಿತಿ ದಕ್ಷಿಣ ಕನ್ನಡಕ್ಕೂ ಬರಬಹುದು: ರಾಘವೇಶ್ವರ ಶ್ರೀ

ನೆರೆಯ ಕಾಸರಗೋಡಿಗೆ ಬಂದ ಪರಿಸ್ಥಿತಿ ನಾಳೆ ದಕ್ಷಿಣ ಕನ್ನಡಕ್ಕೂ ಬರಬಹುದು, ಇಂಥ ಸಂಕಷ್ಟಗಳನ್ನು ದಿಟ್ಟವಾಗಿ ಎದುರಿಸಲು ಇಡೀ ಸಮುದಾಯ ಸಂಘಟಿತವಾಗಬೇಕು ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಕರೆ ನೀಡಿದ್ದಾರೆ.

Kasaragod Condition may come to Dakshina Kannada Raghaveshwara Shree Sat
Author
First Published Nov 13, 2022, 12:09 PM IST


ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತದಲ್ಲಿ ನಾವೇ ಪರಕೀಯರಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ನೆರೆಯ ಕಾಸರಗೋಡಿಗೆ ಬಂದ ಪರಿಸ್ಥಿತಿ ನಾಳೆ ದಕ್ಷಿಣ ಕನ್ನಡಕ್ಕೂ ಬರಬಹುದು, ಇಂಥ ಸಂಕಷ್ಟಗಳನ್ನು ದಿಟ್ಟವಾಗಿ ಎದುರಿಸಲು ಇಡೀ ಸಮುದಾಯ ಸಂಘಟಿತವಾಗಬೇಕು. ಇಡೀ ಸಮಾಜ ಎಚ್ಚರಗೊಂಡು ಇಂಥ ಘಟನೆ ಮರುಕಳಿಸದಂತೆ ತಕ್ಕ ಉತ್ತರ ನೀಡಬೇಕು ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ.

ನ.12ರಂದು ಮಾಣಿ ಮಠದ (Maani Math) ಸಪರಿವಾರ ಶ್ರೀರಾಮಚಂದ್ರ (Shriramachandra) ದೇವರ ಶಿಲಾಮಯ ಗರ್ಭಗುಡಿ ನಿರ್ಮಾಣದ ಕಾಮಗಾರಿ ವೀಕ್ಷಿಸಿ, ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ (Brahmakalashotsava) ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಶಿಷ್ಯರ ಮಾರ್ಗದರ್ಶನ ಸಭೆಯಲ್ಲಿ ಆಶೀರ್ವಚನ ನೀಡಿದ ಸಂದರ್ಭದಲ್ಲಿ ಮಾತನಾಡಿದರು. ಈ ವೇಳೆ ಬದಿಯಡ್ಕದ ದಂತವೈದ್ಯ ಡಾ.ಕೃಷ್ಣಮೂರ್ತಿ ಅವರ ನಿಗೂಢ ಸಾವಿನ ಬಗ್ಗೆ ಉಲ್ಲೇಖಿಸಿದರು. ಮುಂದುವರೆದು ಇಡೀ ಸಮಾಜ ಎಚ್ಚರಗೊಂಡು ಇಂಥ ಘಟನೆ ಮರುಕಳಿಸದಂತೆ ತಕ್ಕ ಉತ್ತರ ನೀಡಬೇಕು ಎಂದು ತಿಳಿಸಿದರು.

ಸದ್ಯದಲ್ಲೇ ಪರಂಪರಾ ವಿಶ್ವವಿದ್ಯಾನಿಲಯ ಸ್ಥಾಪನೆ: ರಾಘವೇಶ್ವರ ಶ್ರೀ

ಜ.23ರಿಂದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ:
ಶ್ರೀರಾಮಚಂದ್ರ ಮಠವನ್ನು ಕಟ್ಟಿ ರಾಮನಿಗೆ ಕಾಣಿಕೆಯಾಗಿ ಸಮರ್ಪಿಸುವ ಪವಿತ್ರ ಸಂದರ್ಭ ಇದಾಗಿದೆ. ರಾಮ ನಡೆದ ಹಾದಿಯಲ್ಲಿ ಮುನ್ನಡೆಯುವ ಪಣ ತೊಡಬೇಕು. ಜೊತೆಗೆ  ಇಂಥ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರೂ 2023ರ ಜ.23ರಿಂದ 25ರ ವರೆಗೆ ನಡೆಯುವ ಪುನಃಪ್ರತಿಷ್ಠಾ (Punaha Prathista) ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಿ ಎಂದು ಸ್ವಾಮೀಜಿ ಸಲಹೆ ನೀಡಿದರು. ಅಗಲಿದ ಶಿಷ್ಯಬಂಧು ಡಾ.ವೈ.ವಿ.ಕೃಷ್ಣಮೂರ್ತಿಗೆ (Dr.Krishnamurthi) ಶ್ರದ್ಧಾಂಜಲಿ ಸಮರ್ಪಿಸಿದರು. ಅಡಕೆಗೆ ಬಂದ ಎಲೆ ಚುಕ್ಕಿ ರೋಗದ (Spot Disease) ನಿವಾರಣೆಗೆ ಪ್ರಾರ್ಥಿಸಿ, ಇಡೀ ಶಿಷ್ಯವೃಂದದ ಪರವಾಗಿ ಶ್ರೀಕರಾರ್ಚಿತ ರಾಮದೇವರಿಗೆ ವಿಶೇಷ ಹರಕೆ ಪ್ರಾರ್ಥನೆ ಸಲ್ಲಿಸಿದರು.

ಕರ್ನಾಟಕದಲ್ಲೂ ಪ್ರಕರಣ ದಾಖಲು:
ಕಾಸರಗೋಡಿನ (Kasaragod) ಬದಿಯಡ್ಕದ ದಂತ ವೈದ್ಯ ಡಾ.ಕೃಷ್ಣಮೂರ್ತಿ ನಿಗೂಢ ಸಾವಿಗೆ ಸಂಬಂಧಿಸಿ ಕರ್ನಾಟಕದಲ್ಲೂ ಪ್ರತ್ಯೇಕ ಕೇಸು ದಾಖಲಾಗಲಿದೆ. ಕುಂದಾಪುರದಲ್ಲಿ ವೈದ್ಯರ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ ವೈದ್ಯರ ಕುಟುಂಬಸ್ಥರು  ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿಗೆ (Udupi SP)ದೂರು ನೀಡಿದ್ದಾರೆ.  ವೈದ್ಯರ ಬೈಕ್‌ ಕುಂಬಳೆಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಬದಿಯಡ್ಕ ಪೊಲೀಸರು ಬದಿಯಡ್ಕ-ಕುಂಬಳೆ ರಸ್ತೆ ಬದಿಯ ಸಿಸಿ ಕ್ಯಾಮರಾ (CCTV) ಪರಿಶೀಲನೆ ನಡೆಸಿದ್ದಾರೆ. ಕುಂಬಳೆಯಲ್ಲಿ ಕೇವಲ ಬೈಕ್‌ ಪತ್ತೆಯಾಗಿದ್ದು, ಅದರ ಕೀ ನಾಪತ್ತೆಯಾಗಿದೆ. ಅಲ್ಲಿ ಕೂಡ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದು, ವೈದ್ಯರು ಸಂಚರಿಸಿದ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ತಿಳಿಯಲಾಗಿದೆ. ಇದೇ ರೀತಿ ಕುಂದಾಪುರ ಪೊಲೀಸರು ಕೂಡ ವೈದ್ಯರ ಶವ ಪತ್ತೆಯಾದ ರೈಲು ಹಳಿಯ ಸುತ್ತಮುತ್ತ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ. ವೈದ್ಯರ ಉಡುಪು (Dress) ಬದಲಾದ ಬಗೆ, ಅವರಲ್ಲಿದ್ದ ಪರ್ಸ್‌ ಹಾಗೂ ಚಪ್ಪಲಿ ನಾಪತ್ತೆಯಾದ ಬಗ್ಗೆ ಹಾಗೂ ಅವರು ಕುಂದಾಪುರಕ್ಕೆ ಹೇಗೆ ಬಂದರು ಎಂಬ ಬಗ್ಗೆ ಕುಂದಾಪುರ ಪೊಲೀಸರು (Kundapura Police) ಕೂಲಂಕಷ ತನಿಖೆ (Investigation) ನಡೆಸುತ್ತಿದ್ದಾರೆ.

ಕಾಸರಗೋಡಿನ ವೈದ್ಯ ನಿಗೂಢ ಸಾವು: ಕೇರಳ ಪೊಲೀಸರಿಂದ ಐವರ ಬಂಧನ

ವೈದ್ಯರ ಸಾವಿನ ಹಿಂದೆ ಲ್ಯಾಂಡ್‌ ಜಿಹಾದ್‌?:
ವೈದ್ಯ ಡಾ.ಕೃಷ್ಣಮೂರ್ತಿ ಅವರ ಕ್ಲಿನಿಕ್‌ ಹಾಗೂ ಜಾಗ ಹೆದ್ದಾರಿ (Highway) ಬದಿ ಇದ್ದು, ಅದನ್ನು ಮಾರಾಟ ಮಾಡುವಂತೆ ಬಹುದಿನಗಳಿಂದ ಭೂ (Land) ಮಾಫಿಯಾ ಬೇಡಿಕೆ ಇಡುತ್ತಿತ್ತು. ವೈದ್ಯರು ನಿರಾಕರಿಸುತ್ತಲೇ ಇದ್ದರು. ಇದು ಹೆದ್ದಾರಿ ಬದಿಯಾಗಿದ್ದು, ವೈದ್ಯರು ಸುಮಾರು ಆರು ಎಕರೆ ಜಾಗ ಹೊಂದಿದ್ದರು. ಇದನ್ನು ಕಬಳಿಸಲು ವೈದ್ಯರನ್ನು ಹನಿಟ್ರ್ಯಾಪ್‌ಗೆ ಯತ್ನಿಸಿರಬೇಕು ಎಂದು ಹಿಂದೂ ಸಂಘಟನೆಗಳು ಹಾಗೂ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇದರ ಹಿಂದೆ ಮುಸ್ಲಿಂ ಲ್ಯಾಂಡ್‌ ಜಿಹಾದ್‌ (Land Jihad) ಇದ್ದು, ಈ ಬಗ್ಗೆ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ತನಿಖೆ ನಡೆಸುವಂತೆ ಸಂಘಟನೆಗಳು ಆಗ್ರಹಿಸಿವೆ.

Follow Us:
Download App:
  • android
  • ios