ತುಮಕೂರು-ದಾವಣಗೆರೆ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ ನಿರ್ಮಾಣದ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಸೆಪ್ಟೆಂಬರ್ ಮತ್ತು ಅಕ್ಟೋಬರ್ 2026ರಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ತೊಳಹುಣಸೆ ಯಾರ್ಡ್‌ನಲ್ಲಿ ಸಂಪರ್ಕ ಜೋಡಣೆ ಕಾರ್ಯ ನಡೆಯುತ್ತಿರುವುದರಿಂದ ಕೆಲವು ರೈಲುಗಳ ಮಾರ್ಗ ಬದಲಾವಣೆ ಹಾಗೂ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗಿದೆ.
ಬೆಂಗಳೂರು: ತುಮಕೂರು-ದಾವಣಗೆರೆ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ, ತೊಳಹುಣಸೆ ಯಾರ್ಡ್‌ನಲ್ಲಿ ಸಂಪರ್ಕ ಜೋಡಣೆ (Interlocking Work) ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ 2026ರಲ್ಲಿ ನೈಋತ್ಯ ರೈಲ್ವೆ ವಲಯವು ಹಲವು ಪ್ರಮುಖ ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದು, ಕೆಲ ರೈಲುಗಳ ಮಾರ್ಗ ಬದಲಾವಣೆ, ಭಾಗಶಃ ರದ್ದು ಹಾಗೂ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಈ ಸಂಬಂಧ ಎಸ್‌ಡಬ್ಯೂಆರ್ ಅಧಿಕೃತ ಪ್ರಕಟಣೆ ಹೊರಡಿಸಿದೆ. ರೈಲು ವ್ಯತ್ಯಯದ ಸಂಫೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ಪೂರ್ಣ ಪ್ರಮಾಣದಲ್ಲಿ ರದ್ದಾದ ರೈಲುಗಳು
ರೈಲು ಸಂಖ್ಯೆ 16214 (ಎಸ್‌ಎಸ್‌ಎಸ್ ಹುಬ್ಬಳ್ಳಿ - ಅರಸೀಕೆರೆ ಡೈಲಿ ಎಕ್ಸ್‌ಪ್ರೆಸ್): ಅಕ್ಟೋಬರ್ 08 ಮತ್ತು ಅಕ್ಟೋಬರ್ 09 ರಂದು 2 ದಿನಗಳು ಸಂಚಾರ ಸಂಪೂರ್ಣ ರದ್ದಾಗಲಿದೆ.
ರೈಲು ಸಂಖ್ಯೆ 16213 (ಅರಸೀಕೆರೆ - ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್): ಅಕ್ಟೋಬರ್ 09 ಮತ್ತು ಅಕ್ಟೋಬರ್ 10 ರಂದು ಒಟ್ಟು 2 ದಿನ ಸೇವೆಯನ್ನು ರದ್ದುಗೊಳಿಸಲಾಗಿದೆ.
ಭಾಗಶಃ ರದ್ದುಗೊಂಡ ಪ್ರಮುಖ ರೈಲು ಸೇವೆಗಳು
1.ಸಿದ್ದಗಂಗಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
ಕೆಎಸ್‌ಆರ್ ಬೆಂಗಳೂರು - ಧಾರವಾಡ (12725): ಸೆಪ್ಟೆಂಬರ್ 22, 23, 27 ಹಾಗೂ ಅಕ್ಟೋಬರ್ 01, 02, 03, 06, 07, 08 ಮತ್ತು 09, 2026 ರಂದು (ಒಟ್ಟು 10 ದಿನಗಳು) ಹೊರಡುವ ರೈಲು ಬೀರೂರು ಮತ್ತು ಧಾರವಾಡ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಬೀರೂರಿನಲ್ಲೇ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.
ಧಾರವಾಡ - ಕೆಎಸ್‌ಆರ್ ಬೆಂಗಳೂರು (12726): ಸೆಪ್ಟೆಂಬರ್ 23, 24, 28 ಹಾಗೂ ಅಕ್ಟೋಬರ್ 02, 03, 04, 07, 08, 09 ಮತ್ತು 10, 2026 ರಂದು (ಒಟ್ಟು 10 ದಿನಗಳು) ಹೊರಡುವ ರೈಲು ಧಾರವಾಡದ ಬದಲಿಗೆ ಬೀರೂರು ನಿಲ್ದಾಣದಿಂದಲೇ ನಿಗದಿತ ಸಮಯಕ್ಕೆ ಬೆಂಗಳೂರಿಗೆ ಪ್ರಯಾಣ ಆರಂಭಿಸಲಿದೆ
2.ಹುಬ್ಬಳ್ಳಿ - ಚಿತ್ರದುರ್ಗ ಡೈಲಿ ಎಕ್ಸ್‌ಪ್ರೆಸ್
ಎಸ್‌ಎಸ್‌ಎಸ್ ಹುಬ್ಬಳ್ಳಿ - ಚಿತ್ರದುರ್ಗ (17347): ಸೆಪ್ಟೆಂಬರ್ 25, 26, 27 ಹಾಗೂ ಅಕ್ಟೋಬರ್ 01, 05, 06, 11, 12 ಮತ್ತು 13, 2026 ರಂದು (ಒಟ್ಟು 9 ದಿನಗಳು) ಹರಿಹರ ಮತ್ತು ಚಿತ್ರದುರ್ಗ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಹರಿಹರದಲ್ಲಿಯೇ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.
ಚಿತ್ರದುರ್ಗ - ಎಸ್‌ಎಸ್‌ಎಸ್ ಹುಬ್ಬಳ್ಳಿ (17348): ಸೆಪ್ಟೆಂಬರ್ 25, 26, 27 ಹಾಗೂ ಅಕ್ಟೋಬರ್ 01, 05, 06, 11, 12 ಮತ್ತು 13, 2026 ರಂದು (ಒಟ್ಟು 9 ದಿನಗಳು) ಚಿತ್ರದುರ್ಗದ ಬದಲಿಗೆ ಹರಿಹರದಿಂದಲೇ ತನ್ನ ನಿಗದಿತ ಸಮಯಕ್ಕೆ ಪ್ರಯಾಣವನ್ನು ಪ್ರಾರಂಭಿಸಲಿದೆ.
3.ಮೈಸೂರು - ಬೆಳಗಾವಿ ವಿಶ್ವಮಾನವ/ಎಕ್ಸ್‌ಪ್ರೆಸ್
ಮೈಸೂರು - ಬೆಳಗಾವಿ (20676): ಸೆಪ್ಟೆಂಬರ್ 25, 26, 27 ಹಾಗೂ ಅಕ್ಟೋಬರ್ 01, 05, 06, 11, 12 ಮತ್ತು 13, 2026 ರಂದು (ಒಟ್ಟು 9 ದಿನಗಳು) ಹೊರಡುವ ರೈಲು ಬೀರೂರು ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಬೀರೂರಿನಲ್ಲೇ ತನ್ನ ಪ್ರಯಾಣ ಕೊನೆಗೊಳಿಸಲಿದೆ.
ಬೆಳಗಾವಿ - ಮೈಸೂರು (20675): ಸೆಪ್ಟೆಂಬರ್ 26, 27, 28 ಹಾಗೂ ಅಕ್ಟೋಬರ್ 02, 05, 06, 11, 12 ಮತ್ತು 13, 2026 ರಂದು (ಒಟ್ಟು 9 ದಿನಗಳು) ಬೆಳಗಾವಿಯ ಬದಲಿಗೆ ಬೀರೂರು ನಿಲ್ದಾಣದಿಂದಲೇ ತನ್ನ ನಿಗದಿತ ಸಮಯಕ್ಕೆ ಮೈಸೂರಿಗೆ ಹೊರಡಲಿದೆ.
ಮಾರ್ಗ ಬದಲಾವಣೆಯಾದ ಪ್ರಮುಖ ರೈಲುಗಳ ವಿವರ
1. ಉದಯಪುರ ಸಿಟಿ - ಮೈಸೂರು ಹಮ್‌ಸಫರ್ ಎಕ್ಸ್‌ಪ್ರೆಸ್ (19657):
ಸೆಪ್ಟೆಂಬರ್ 21 ಮತ್ತು ಅಕ್ಟೋಬರ್ 05 (ಒಟ್ಟು 2 ದಿನಗಳು) ಉದಯಪುರ ಸಿಟಿಯಿಂದ ಹೊರಡುವ ಈ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿ, ಬಳ್ಳಾರಿ, ಗುಂತಕಲ್, ಧರ್ಮಾವರಂ ಹಾಗೂ ಕೆಎಸ್‌ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ದಾವಣಗೆರೆ ನಿಲ್ದಾಣದಲ್ಲಿ ಇದರ ನಿಗದಿತ ನಿಲುಗಡೆ ಇರುವುದಿಲ್ಲ.
2. ಶ್ರೀ ಗಂಗಾನಗರ - ತಿರುಚಿರಾಪಳ್ಳಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (22497):
ಸೆಪ್ಟೆಂಬರ್ 21 ಮತ್ತು ಅಕ್ಟೋಬರ್ 05 ರಂದು (ಒಟ್ಟು 2 ದಿನಗಳು) ಶ್ರೀ ಗಂಗಾನಗರದಿಂದ ಹೊರಡುವ ಈ ರೈಲು ಹುಬ್ಬಳ್ಳಿ, ಬಳ್ಳಾರಿ, ಗುಂತಕಲ್, ಧರ್ಮಾವರಂ ಹಾಗೂ ಕೃಷ್ಣರಾಜಪುರಂ ಮಾರ್ಗವಾಗಿ ಸಾಗಲಿದೆ. ಇದರಿಂದಾಗಿ ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಬಾಣಸವಾಡಿ ನಿಲ್ದಾಣಗಳಲ್ಲಿ ನಿಲುಗಡೆ ರದ್ದಾಗಿದೆ.
3. ಹರಿಹರ - ಹೊಸಪೇಟೆ - ಹರಿಹರ ಡೈಲಿ ಪ್ಯಾಸೆಂಜರ್ (56529 / 56530):
ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 13 ರವರೆಗೆ (ಒಟ್ಟು 23 ದಿನಗಳು) ಎರಡೂ ಕಡೆಗಳಿಂದ ಹೊರಡುವ ಪ್ಯಾಸೆಂಜರ್ ರೈಲುಗಳು ಅಮರಾವತಿ ಕಾಲೋನಿ ಮತ್ತು ತೇಲಗಿ ಮಾರ್ಗವಾಗಿ ಸಂಚರಿಸಲಿವೆ. ಪರಿಣಾಮವಾಗಿ ದಾವಣಗೆರೆ ಮತ್ತು ತೊಳಹುಣಸೆ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
4. ವಾಸ್ಕೋ ಡ ಗಾಮ - ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ (17310):
ಸೆಪ್ಟೆಂಬರ್ 22, 23, 27 ಹಾಗೂ ಅಕ್ಟೋಬರ್ 01, 02, 03, 06, 07, 08, 09 ಮತ್ತು 11, 2026 ರಂದು (ಒಟ್ಟು 11 ದಿನಗಳು) ಹೊರಡುವ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿ, ಬಳ್ಳಾರಿ, ರಾಯದುರ್ಗ ಹಾಗೂ ಚಿಕ್ಕಜಾಜೂರು ಮಾರ್ಗವಾಗಿ ಸಂಚರಿಸಲಿದೆ. ಇದರಿಂದ ಹಾವೇರಿ, ರಾಣಿಬೆನ್ನೂರು, ಹರಿಹರ ಮತ್ತು ದಾವಣಗೆರೆ ನಿಲ್ದಾಣಗಳಲ್ಲಿ ನಿಲುಗಡೆ ರದ್ದಾಗಲಿದೆ.
5. ಕೆಎಸ್‌ಆರ್ ಬೆಂಗಳೂರು - ಸಿಂಧನೂರು ಡೈಲಿ ಎಕ್ಸ್‌ಪ್ರೆಸ್ (17391):
ಸೆಪ್ಟೆಂಬರ್ 22, 23 ಹಾಗೂ ಅಕ್ಟೋಬರ್ 01, 02, 06, 07, 08 ಮತ್ತು 09, 2026 ರಂದು (ಒಟ್ಟು 8 ದಿನಗಳು) ಹೊರಡುವ ರೈಲು ಚಿಕ್ಕಜಾಜೂರು, ರಾಯದುರ್ಗ ಹಾಗೂ ಗಿಣಿಗೇರಾ ಮಾರ್ಗವಾಗಿ ಸಾಗಲಿದೆ. ಹೀಗಾಗಿ ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಗದಗ, ಕೊಪ್ಪಳ ಸೇರಿದಂತೆ ಮಧ್ಯಂತರದ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
6. ಪ್ರಯಾಗ್‌ರಾಜ್ - ಎಸ್‌ಎಸ್‌ಎಸ್ ಹುಬ್ಬಳ್ಳಿ - ಪ್ರಯಾಗ್‌ರಾಜ್ ವಿಶೇಷ ರೈಲು (04113 / 04114):
ಪ್ರಯಾಗ್‌ರಾಜ್ - ಹುಬ್ಬಳ್ಳಿ (04113): ಅಕ್ಟೋಬರ್ 03 ಮತ್ತು 10, 2026 ರಂದು (2 ದಿನಗಳು) ದೋಣ್, ಗುತ್ತಿ, ಗುಂತಕಲ್, ಬಳ್ಳಾರಿ ಮಾರ್ಗವಾಗಿ ಸಂಚರಿಸಲಿದೆ. ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ, ತುಮಕೂರು, ಅರಸೀಕೆರೆ, ದಾವಣಗೆರೆ ಮತ್ತು ಹಾವೇರಿಯಲ್ಲಿ ನಿಲುಗಡೆ ಇರುವುದಿಲ್ಲ.
ಹುಬ್ಬಳ್ಳಿ - ಪ್ರಯಾಗ್‌ರಾಜ್ (04114): ಅಕ್ಟೋಬರ್ 06, 2026 ರಂದು (1 ದಿನ) ಬಳ್ಳಾರಿ, ಗುಂತಕಲ್, ಗುತ್ತಿ, ದೋಣ್ ಮಾರ್ಗವಾಗಿ ಚಲಿಸಲಿದ್ದು, ಹಾವೇರಿ, ದಾವಣಗೆರೆ, ಅರಸೀಕೆರೆ, ತುಮಕೂರು, ಯಲಹಂಕ, ಹಿಂದೂಪುರ, ಧರ್ಮಾವರಂ ಹಾಗೂ ಅನಂತಪುರದಲ್ಲಿ ನಿಲುಗಡೆ ಹೊಂದಿರುವುದಿಲ್ಲ.
7.ಯಶವಂತಪುರ - ಬಾರ್ಮೇರ್ ಸಾಪ್ತಾಹಿಕ ಎಸಿ ಎಕ್ಸ್‌ಪ್ರೆಸ್ (14805):
ಅಕ್ಟೋಬರ್ 05 ರಂದು (1 ದಿನ) ಹೊರಡುವ ರೈಲು ಬೀರೂರು, ಚಿಕ್ಕಜಾಜೂರು, ರಾಯದುರ್ಗ, ಬಳ್ಳಾರಿ ಹಾಗೂ ಗದಗ ಮಾರ್ಗವಾಗಿ ಸಾಗಲಿದ್ದು, ದಾವಣಗೆರೆ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
8. ಕೊಲ್ಲಂ - ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ (07314):
ಅಕ್ಟೋಬರ್ 05 ರಂದು (1 ದಿನ) ಹೊರಡುವ ರೈಲು ಎಸ್‌ಎಂವಿಟಿ ಬೆಂಗಳೂರು, ಧರ್ಮಾವರಂ, ಗುಂತಕಲ್ ಹಾಗೂ ಬಳ್ಳಾರಿ ಮಾರ್ಗವಾಗಿ ಸಂಚರಿಸಲಿದ್ದು, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ ಮತ್ತು ಹಾವೇರಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ತಡವಾಗಿ ಹೊರಡಲಿರುವ ರೈಲುಗಳ ವಿವರ (Rescheduled Trains):
1. ವಾಸ್ಕೋ ಡ ಗಾಮ - ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ (17310):
ಸೆಪ್ಟೆಂಬರ್ 20 ಮತ್ತು ಸೆಪ್ಟೆಂಬರ್ 28 ರಂದು (ಒಟ್ಟು 2 ದಿನಗಳು) ಈ ರೈಲು ತನ್ನ ಮೂಲ ನಿಲ್ದಾಣವಾದ ವಾಸ್ಕೋ ಡ ಗಾಮಾದಿಂದ ನಿಗದಿತ ಸಮಯಕ್ಕಿಂತ 90 ನಿಮಿಷಗಳು (1 ಗಂಟೆ 30 ನಿಮಿಷ) ತಡವಾಗಿ ಹೊರಡಲಿದೆ.
2. ಎಸ್‌ಎಸ್‌ಎಸ್ ಹುಬ್ಬಳ್ಳಿ - ತಿರುವನಂತಪುರಂ ನಾರ್ತ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12777):
ಸೆಪ್ಟೆಂಬರ್ 23 ಮತ್ತು ಅಕ್ಟೋಬರ್ 07 ರಂದು (ಒಟ್ಟು 2 ದಿನಗಳು) ಈ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ 120 ನಿಮಿಷಗಳು (2 ಗಂಟೆ) ತಡವಾಗಿ ಹೊರಡಲಿದೆ.
3. ಎಸ್‌ಎಸ್‌ಎಸ್ ಹುಬ್ಬಳ್ಳಿ - ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ (07355):
ಅಕ್ಟೋಬರ್ 04 ರಂದು (1 ದಿನ ಮಾತ್ರ) ಈ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ 120 ನಿಮಿಷಗಳು (2 ಗಂಟೆ) ತಡವಾಗಿ ತನ್ನ ಪ್ರಯಾಣವನ್ನು ಆರಂಭಿಸಲಿದೆ.
4. ರಾಮೇಶ್ವರಂ - ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ (07356):
ಅಕ್ಟೋಬರ್ 05 ರಂದು (1 ದಿನ ಮಾತ್ರ) ಈ ರೈಲು ರಾಮೇಶ್ವರಂ ನಿಲ್ದಾಣದಿಂದ 120 ನಿಮಿಷಗಳು (2 ಗಂಟೆ) ತಡವಾಗಿ ಹೊರಡಲಿದೆ.
5.ಧಾರವಾಡ - ಕೆಎಸ್‌ಆರ್ ಬೆಂಗಳೂರು ಸಿದ್ಧಗಂಗಾ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12726):
ಅಕ್ಟೋಬರ್ 12 ರಂದು (1 ದಿನ ಮಾತ್ರ) ಈ ರೈಲು ಧಾರವಾಡ ನಿಲ್ದಾಣದಿಂದ 60 ನಿಮಿಷಗಳು (1 ಗಂಟೆ) ತಡವಾಗಿ ಹೊರಡಲಿದೆ.
ಮಾರ್ಗಮಧ್ಯೆ ನಿಯಂತ್ರಿಸಲ್ಪಡುವ (ವಿಳಂಬವಾಗುವ) ಪ್ರಮುಖ ರೈಲುಗಳ ವಿವರ:
1. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು:
ಬೆಳಗಾವಿ - ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ (26751): 24 ಸೆಪ್ಟೆಂಬರ್ 2026 ಮತ್ತು 08 ಅಕ್ಟೋಬರ್ 2026 ರಂದು (2 ದಿನಗಳು) ಮಾರ್ಗಮಧ್ಯೆ 120 ನಿಮಿಷಗಳು; 28 ಸೆಪ್ಟೆಂಬರ್ 2026 ರಂದು (1 ದಿನ) 60 ನಿಮಿಷಗಳು; ಹಾಗೂ 02 ಅಕ್ಟೋಬರ್ 2026, 03 ಅಕ್ಟೋಬರ್ 2026, 04 ಅಕ್ಟೋಬರ್ 2026, 09 ಅಕ್ಟೋಬರ್ 2026 ಮತ್ತು 10 ಅಕ್ಟೋಬರ್ 2026 ರಂದು (5 ದಿನಗಳು) 90 ನಿಮಿಷಗಳ ಕಾಲ ಮಾರ್ಗಮಧ್ಯೆ ನಿಯಂತ್ರಿಸಲ್ಪಡಲಿದೆ.
ಕೆಎಸ್‌ಆರ್ ಬೆಂಗಳೂರು - ಧಾರವಾಡ ವಂದೇ ಭಾರತ್ (20661): 09 ಅಕ್ಟೋಬರ್ 2026 ರಂದು (1 ದಿನ) 75 ನಿಮಿಷಗಳು ಹಾಗೂ 10 ಅಕ್ಟೋಬರ್ 2026 ರಂದು (1 ದಿನ) 90 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.
ಕೆಎಸ್‌ಆರ್ ಬೆಂಗಳೂರು - ಬೆಳಗಾವಿ ವಂದೇ ಭಾರತ್ (26752): 01 ಅಕ್ಟೋಬರ್ 2026, 05 ಅಕ್ಟೋಬರ್ 2026, 06 ಅಕ್ಟೋಬರ್ 2026 ಮತ್ತು 11 ಅಕ್ಟೋಬರ್ 2026 ರಂದು (4 ದಿನಗಳು) ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.
2. ಜನಶತಾಬಿ ಹಾಗೂ ಸಿದ್ದಗಂಗಾ ಎಕ್ಸ್‌ಪ್ರೆಸ್:
ಕೆಎಸ್‌ಆರ್ ಬೆಂಗಳೂರು - ಎಸ್‌ಎಸ್‌ಎಸ್ ಹುಬ್ಬಳ್ಳಿ ಜನಶತಾಬಿ (12079): 09 ಅಕ್ಟೋಬರ್ 2026 ಮತ್ತು 10 ಅಕ್ಟೋಬರ್ 2026 ರಂದು (2 ದಿನಗಳು) ಮಾರ್ಗಮಧ್ಯೆ 45 ನಿಮಿಷಗಳು ತಡೆಯಲ್ಪಡಲಿದೆ.
ಧಾರವಾಡ - ಕೆಎಸ್‌ಆರ್ ಬೆಂಗಳೂರು ಸಿದ್ದಗಂಗಾ (12726): 21 ಸೆಪ್ಟೆಂಬರ್ 2026 ಮತ್ತು 29 ಸೆಪ್ಟೆಂಬರ್ 2026 ರಂದು (2 ದಿನಗಳು) 30 ನಿಮಿಷಗಳು ನಿಯಂತ್ರಿಸಲ್ಪಡಲಿದೆ.
ಕೆಎಸ್‌ಆರ್ ಬೆಂಗಳೂರು - ಧಾರವಾಡ ಸಿದ್ದಗಂಗಾ (12725): 01 ಅಕ್ಟೋಬರ್ 2026, 05 ಅಕ್ಟೋಬರ್ 2026, 06 ಅಕ್ಟೋಬರ್ 2026 ಮತ್ತು 11 ಅಕ್ಟೋಬರ್ 2026 ರಂದು (4 ದಿನಗಳು) 30 ನಿಮಿಷಗಳ ಕಾಲ ಮಾರ್ಗಮಧ್ಯೆ ತಡೆಯಲ್ಪಡಲಿದೆ.
3. ದೈನಂದಿನ ಹಾಗೂ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳು:
ಬೆಳಗಾವಿ - ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್ (20675): 25 ಸೆಪ್ಟೆಂಬರ್ 2026 ಮತ್ತು 01 ಅಕ್ಟೋಬರ್ 2026 ರಂದು (2 ದಿನಗಳು) 75 ನಿಮಿಷಗಳು ವಿಳಂಬವಾಗಲಿದೆ.
ಯಶವಂತಪುರ - ಬಿಕಾನೇರ್ ಎಕ್ಸ್‌ಪ್ರೆಸ್ (16587): 25 ಸೆಪ್ಟೆಂಬರ್ 2026 ರಂದು 100 ನಿಮಿಷ, 27 ಸೆಪ್ಟೆಂಬರ್ 2026 ರಂದು 45 ನಿಮಿಷ ಹಾಗೂ 11 ಅಕ್ಟೋಬರ್ 2026 ರಂದು 150 ನಿಮಿಷಗಳ ಕಾಲ ಮಾರ್ಗಮಧ್ಯೆ ನಿಯಂತ್ರಿಸಲ್ಪಡಲಿದೆ.
ಯಶವಂತಪುರ - ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ (12649): 25 ಸೆಪ್ಟೆಂಬರ್ 2026 ಮತ್ತು 26 ಸೆಪ್ಟೆಂಬರ್ 2026 ರಂದು 30 ನಿಮಿಷ; ಹಾಗೂ 05 ಅಕ್ಟೋಬರ್ 2026 ಮತ್ತು 11 ಅಕ್ಟೋಬರ್ 2026 ರಂದು 60 ನಿಮಿಷಗಳ ಕಾಲ ವಿಳಂಬವಾಗಲಿದೆ.
ಬಿಕಾನೇರ್ - ಯಶವಂತಪುರ ಎಕ್ಸ್‌ಪ್ರೆಸ್ (16588): 22 ಸೆಪ್ಟೆಂಬರ್ 2026 ಮತ್ತು 06 ಅಕ್ಟೋಬರ್ 2026 ರಂದು (2 ದಿನಗಳು) 70 ನಿಮಿಷಗಳು ನಿಯಂತ್ರಿಸಲ್ಪಡಲಿದೆ.
ಎಸ್‌ಎಸ್‌ಎಸ್ ಹುಬ್ಬಳ್ಳಿ - ಚಿತ್ರದುರ್ಗ ಎಕ್ಸ್‌ಪ್ರೆಸ್ (17347): 23 ಸೆಪ್ಟೆಂಬರ್ 2026, 24 ಸೆಪ್ಟೆಂಬರ್ 2026, 02 ಅಕ್ಟೋಬರ್ 2026, 03 ಅಕ್ಟೋಬರ್ 2026, 07 ಅಕ್ಟೋಬರ್ 2026 ಮತ್ತು 08 ಅಕ್ಟೋಬರ್ 2026 ರಂದು (6 ದಿನಗಳು) 60 ನಿಮಿಷಗಳು ವಿಳಂಬವಾಗಲಿದೆ.
ಅರಸೀಕೆರೆ - ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ (16213): 22 ಸೆಪ್ಟೆಂಬರ್ 2026 ರಂದು (1 ದಿನ) 30 ನಿಮಿಷಗಳು ಮಾರ್ಗಮಧ್ಯೆ ತಡೆಯಲ್ಪಡಲಿದೆ.
ತಿರುಚಿರಾಪಳ್ಳಿ - ಶ್ರೀ ಗಂಗಾನಗರ ಸೂಪರ್‌ಫಾಸ್ಟ್ (22498): 25 ಸೆಪ್ಟೆಂಬರ್ 2026 ರಂದು 60 ನಿಮಿಷಗಳು ನಿಯಂತ್ರಿಸಲ್ಪಡಲಿದೆ.
ಮೈಸೂರು - ಉದಯಪುರ ಸಿಟಿ ಎಕ್ಸ್‌ಪ್ರೆಸ್ (19668): 01 ಅಕ್ಟೋಬರ್ 2026 ರಂದು 90 ನಿಮಿಷಗಳು ವಿಳಂಬವಾಗಲಿದೆ.
ಕೆಎಸ್‌ಆರ್ ಬೆಂಗಳೂರು - ಸಿಂಧನೂರು ಎಕ್ಸ್‌ಪ್ರೆಸ್ (17391): 03 ಅಕ್ಟೋಬರ್ 2026 ರಂದು 75 ನಿಮಿಷಗಳು ನಿಯಂತ್ರಿಸಲ್ಪಡಲಿದೆ.
ಬಾರ್ಮೇರ್ - ಯಶವಂತಪುರ ಎಸಿ ಎಕ್ಸ್‌ಪ್ರೆಸ್ (14806): 08 ಅಕ್ಟೋಬರ್ 2026 ರಂದು 60 ನಿಮಿಷಗಳು ವಿಳಂಬವಾಗಲಿದೆ.
ತಿರುವನಂತಪುರಂ ನಾರ್ತ್ - ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ (12778): 08 ಅಕ್ಟೋಬರ್ 2026 ರಂದು 90 ನಿಮಿಷಗಳು ನಿಯಂತ್ರಿಸಲ್ಪಡಲಿದೆ.
ಕೊಲ್ಲಂ - ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ರೈಲು (07314): 12 ಅಕ್ಟೋಬರ್ 2026 ರಂದು 100 ನಿಮಿಷಗಳು ತಡೆಯಲ್ಪಡಲಿದೆ.
ರಾಮೇಶ್ವರಂ - ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ರೈಲು (07356): 12 ಅಕ್ಟೋಬರ್ 2026 ರಂದು 60 ನಿಮಿಷಗಳು ವಿಳಂಬವಾಗಲಿದೆ.
ದಾದರ್ - ಪುದುಚೇರಿ ಎಕ್ಸ್‌ಪ್ರೆಸ್ (11005): 12 ಅಕ್ಟೋಬರ್ 2026 ರಂದು 75 ನಿಮಿಷಗಳ ಕಾಲ ಮಾರ್ಗಮಧ್ಯೆ ನಿಯಂತ್ರಿಸಲ್ಪಡಲಿದೆ.
ತೊಳಹುಣಸೆಯಲ್ಲಿ ನಿಲುಗಡೆ ರದ್ದಾಗಿರುವ ರೈಲುಗಳ ವಿವರ:
1. ಅರಸೀಕೆರೆ - ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ (16213):
21 ಸೆಪ್ಟೆಂಬರ್ 2026 ರಿಂದ 08 ಅಕ್ಟೋಬರ್ 2026 ರವರೆಗೆ ಹಾಗೂ 11 ಅಕ್ಟೋಬರ್ 2026 ರಿಂದ 13 ಅಕ್ಟೋಬರ್ 2026 ರವರೆಗೆ (ಒಟ್ಟು 21 ದಿನಗಳು) ಅರಸೀಕೆರೆಯಿಂದ ಹೊರಡುವ ಈ ರೈಲು ತೊಳಹುಣಸೆ ನಿಲ್ದಾಣದಲ್ಲಿ ನಿಲ್ಲುವುದಿಲ್ಲ.
2. ಎಸ್‌ಎಸ್‌ಎಸ್ ಹುಬ್ಬಳ್ಳಿ - ಅರಸೀಕೆರೆ ಡೈಲಿ ಎಕ್ಸ್‌ಪ್ರೆಸ್ (16214):
21 ಸೆಪ್ಟೆಂಬರ್ 2026 ರಿಂದ 07 ಅಕ್ಟೋಬರ್ 2026 ರವರೆಗೆ ಹಾಗೂ 10 ಅಕ್ಟೋಬರ್ 2026 ರಿಂದ 13 ಅಕ್ಟೋಬರ್ 2026 ರವರೆಗೆ (ಒಟ್ಟು 21 ದಿನಗಳು) ಹುಬ್ಬಳ್ಳಿಯಿಂದ ಹೊರಡುವ ಈ ರೈಲಿಗೆ ತೊಳಹುಣಸೆಯಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.
3. ಎಸ್‌ಎಸ್‌ಎಸ್ ಹುಬ್ಬಳ್ಳಿ - ಚಿತ್ರದುರ್ಗ ಡೈಲಿ ಎಕ್ಸ್‌ಪ್ರೆಸ್ (17347):
21 ಸೆಪ್ಟೆಂಬರ್ 2026 ರಿಂದ 24 ಸೆಪ್ಟೆಂಬರ್ 2026 ರವರೆಗೆ, 26 ಸೆಪ್ಟೆಂಬರ್ 2026 ರಂದು, 28 ಸೆಪ್ಟೆಂಬರ್ 2026 ರಿಂದ 30 ಸೆಪ್ಟೆಂಬರ್ 2026 ರವರೆಗೆ, 02 ಅಕ್ಟೋಬರ್ 2026 ರಿಂದ 04 ಅಕ್ಟೋಬರ್ 2026 ರವರೆಗೆ ಹಾಗೂ 07 ಅಕ್ಟೋಬರ್ 2026 ರಿಂದ 10 ಅಕ್ಟೋಬರ್ 2026 ರವರೆಗೆ (ಒಟ್ಟು 15 ದಿನಗಳು) ಹುಬ್ಬಳ್ಳಿಯಿಂದ ಹೊರಡುವ ಈ ರೈಲು ತೊಳಹುಣಸೆಯಲ್ಲಿ ನಿಲ್ಲದೆ ಸಾಗಲಿದೆ.
4. ಚಿತ್ರದುರ್ಗ - ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ (17348):
21 ಸೆಪ್ಟೆಂಬರ್ 2026 ರಿಂದ 24 ಸೆಪ್ಟೆಂಬರ್ 2026 ರವರೆಗೆ, 26 ಸೆಪ್ಟೆಂಬರ್ 2026 ರಂದು, 28 ಸೆಪ್ಟೆಂಬರ್ 2026 ರಿಂದ 30 ಸೆಪ್ಟೆಂಬರ್ 2026 ರವರೆಗೆ, 02 ಅಕ್ಟೋಬರ್ 2026 ರಿಂದ 04 ಅಕ್ಟೋಬರ್ 2026 ರವರೆಗೆ ಹಾಗೂ 07 ಅಕ್ಟೋಬರ್ 2026 ರಿಂದ 10 ಅಕ್ಟೋಬರ್ 2026 ರವರೆಗೆ (ಒಟ್ಟು 15 ದಿನಗಳು) ಚಿತ್ರದುರ್ಗದಿಂದ ಹೊರಡುವ ಈ ರೈಲಿಗೆ ತೊಳಹುಣಸೆ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.


