Asianet Suvarna News Asianet Suvarna News

ಮೈಸೂರು ಅರಮನೆಗೆ ಎರಡು ದಿನ ಪ್ರವೇಶ ನಿಷೇಧ: ಪ್ರವಾಸಿಗರೇ ಗಮನಿಸಿ

ರಾಜ್ಯದ ಸಾಂಸ್ಕೃತಿಕ ನಗರಿಯ ಪ್ರಮುಖ ಪ್ರವಾಸಿ ಕೇಂದ್ರವಾದ ಮೈಸೂರು ಅರಮನೆಗೆ ಎರಡು ದಿನಗಳ ಕಾಲ ಎಲ್ಲ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.

Karnataka Tourist entry restrictions to Mysuru Palace for Two days G20 meeting sat
Author
First Published Jul 30, 2023, 10:56 PM IST

ಮೈಸೂರು (ಜು.30): ರಾಜ್ಯದ ಸಾಂಸ್ಕೃತಿಕ ನಗರಿ ಎಂದು ಕರೆಯುವ ಹಾಗೂ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮೈಸೂರಿನ ಅರಮನೆಗೆ ಎರಡು ದಿನಗಳ ಕಾಲ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ. ಮೈಸೂರು ನಗರಕ್ಕೆ ಪ್ರವಾಸ ಹಮ್ಮಿಕೊಂಡಿರುವ ಎಲ್ಲರೂ ಈ ಸುದ್ದಿಯನ್ನು ಒಮ್ಮೆ ಓದಿ ಹೋದಲ್ಲಿ ನಿಮ್ಮ ಪ್ರಯಾಣದ ಸಮಯ ಉಳಿತಾಯ ಆಗಲಿದೆ.

ಹೌದು, ರಾಜ್ಯಾದ್ಯಂತ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಪ್ರವಾಸಿ ತಾಣಗಳು ತುಂಬಿ ತುಳುಕುತ್ತವೆ. ಅದರಲ್ಲಿಯೂ ಸರ್ವ ಋತುವಿನಲ್ಲಿಯೂ ಪ್ರವಾಸಿಗರಿಂದ ಗಿಜಿಗುಡುವ ಮೈಸೂರಿನದ ಅರಮನೆ ಅಪರೂಪಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ. ಆದರೆ, ಈ ಬಾರಿ ಆಗಸ್ಟ್‌ 1 ಮತ್ತು ಆಗಸ್ಟ್‌ 2ರಂದು (ಮಂಗಳವಾರ ಮತ್ತು ಬುಧವಾರ) ಎಲ್ಲ ಮಾದರಿಯ ಪ್ರವಾಸಿಗರಿಗೂ ಮೈಸೂರು ಸಂಸ್ಥಾನದ ಅರಮನೆಯನ್ನು ವೀಕ್ಷಣೆ ಮಾಡಲು ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ, ಎರಡು ದಿನಗಳು ಮೈಸೂರಿನತ್ತ ಪ್ರವಾಸ ಬಂದರೂ ಪ್ರಮುಖ ಪ್ರವಾಸಿ ಸ್ಥಳವಾದ ಅರಮನೆಯನ್ನೇ ನೋಡದೆ ವಾಪಸ್‌ ಹೋಗಬೇಕಾಗುತ್ತದೆ.

2,000 ರೂ. ನೋಟ್‌ ಎಕ್ಸ್‌ಚೇಂಜ್‌ ಹೆಸರಲ್ಲಿ 25 ಲಕ್ಷ ರೂ. ವಂಚನೆ: ತಿರುಪತಿಗೆ ಕರೆಸಿ ನಾಮ ಹಾಕಿದ ಖದೀಮರು

ಅರಮನೆ ಪ್ರವೇಶ ನಿರ್ಬಂಧಕ್ಕೆ ಕಾರಣ ಇಲ್ಲಿದೆ:  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಗಸ್ಟ್ 1 ಮತ್ತು 2 ರಂದು ನಡೆಯುವ ಜಿ 20 ಶೃಂಗಸಭೆಯಲ್ಲಿ (G20 Summit) ಭಾಗಿಯಾಗುವ ವಿದೇಶಿ ಗಣ್ಯರು ಮೈಸೂರು ಅರಮನೆಗೆ (Mysuru Palace) ಭೇಟಿ ನೀಡಲಿದ್ದಾರೆ. ಆದ್ದರಿಂದ ಪೊಲೀಸರು ಹಾಗೂ ರಾಜ್ಯ ಸರ್ಕಾರವು ಅಗತ್ಯ ಮುಂಜಾಗೃತ ಕ್ರಮವನ್ನು ಕೈಗೊಳ್ಳುವ ದೃಷ್ಟಿಯಿಂದ ಎಲ್ಲ ಮಾದರಿಯ ಪ್ರವಾಸಿಗರ ಪ್ರವೇಶಕ್ಕೆ‌ ನಿರ್ಬಂಧ ವಿಧಿಸಿ, ಮೈಸೂರು ಅರಮನೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

ಧ್ವನಿ ಬೆಳಕು ಕಾರ್ಯಕ್ರಮಕ್ಕೂ ಪ್ರವೇಶವಿಲ್ಲ: ಮೈಸೂರು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಟಿ. ಎಸ್. ಸುಬ್ರಮಣ್ಯ ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಆಗಸ್ಟ್ 1ರ ಮಧ್ಯಾಹ್ನ 2.30 ರಿಂದ ಮೈಸೂರು ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ನಂತರ, ಆಗಸ್ಟ್ 2 ರಂದು ರಾತ್ರಿ 7 ರಿಂದ 8 ಗಂಟೆಯವರೆಗೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮದವರೆಗೂ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದ್ದರಿಂದ ಎರಡು ದಿನಗಳ ಜಾಲ ರಾಜ್ಯದ ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹಕಾರ ನೀಡಬೇಕು ಎಂದು ಅರಮನೆ ಆಡಳಿತ ಮಂಡಳಿಯು ಮನವಿ ಮಾಡಿದೆ. 

ಮುಸ್ಲಿಂ ದರ್ಗಾದಲ್ಲಿ ಕೇಸರಿ ವಸ್ತ್ರವೇ ಗೆಲ್ಲುವುದಾಗಿ ಭವಿಷ್ಯ ನುಡಿದ ಲಾಲಸಾಬ್‌ ಅಜ್ಜ

ಬೆಂಗಳೂರಲ್ಲಿ ಮತ್ತೊಂದು ಸುತ್ತು ಜಿ-20 ಶೃಂಗಸಭೆ : ಮತ್ತೊಂದೆಡೆ, ದೇಶದ ರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಜಿ-20 ಶೃಂಗಸಭೆಗೆ ಚಾಲನೆ ನೀಡಲಾಗಿತ್ತು. ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ 3 ಕಡೆಗಳಲ್ಲಿ ಶೃಂಗಸಭೆಯ ಸಭೆಗಳನ್ನು ಆಯೋಜನೆ ಮಾಡಲಾಗಿದೆ. ಈ ಪೈಕಿ ಬೆಂಗಳೂರು ಮತ್ತು ಹಂಪಿಯಲ್ಲಿ ಶೃಂಗಸಭೆಯ ಸಭೆಗಳು ಮುಕ್ತಾಯಗೊಂಡಿದ್ದು, ಮೈಸೂರಿನಲ್ಲಿ ಆಗಸ್ಟ್ 1 ಮತ್ತು ಆಗಸ್ಟ್‌ 2ರಂದು ನಡೆಯಲಿದೆ. ಆದ್ದರಿಂದ ಮೈಸೂರು ಅರಮನೆಗೆ ಸಾಮಾನ್ಯ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಉಳಿದಂತೆ ಆಗಸ್ಟ್ 16ರಿಂದ 19ರ ವರೆಗೆ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಶೃಂಗಸಭೆಯ ಸಭೆಗಳು ನಡೆಯಲಿವೆ.

Follow Us:
Download App:
  • android
  • ios