Asianet Suvarna News Asianet Suvarna News

ಎಲ್ಲರೂ ಕಳ್ಳರೇ ಇರುವಾಗ ಪ್ರಜ್ವಲ್‌ ರೇವಣ್ಣನ ಹೇಗೆ ಹಿಡಿತಾರೆ? : ವಾಟಾಳ್ ನಾಗರಾಜ

ರಾಜ್ಯ ಸರ್ಕಾರ ಈಗಾಗಲೇ ಅಡೆತಡೆ ಇಲ್ಲದೆ ತಮಿಳನಾಡಿಗೆ ನೀರು ಬಿಟ್ಟಿದೆ. ಯಾವ ಸರ್ಕಾರವೂ ಬಿಡದಷ್ಟು ಈ ಸರ್ಕಾರ ನೀರು ಹರಿಸಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

Karnataka tamilnadu water dispute vatal nagaraj sparks against congress government at mandya rav
Author
First Published May 24, 2024, 4:37 PM IST

ಮಂಡ್ಯ (ಮೇ.24): ರಾಜ್ಯ ಸರ್ಕಾರ ಈಗಾಗಲೇ ಅಡೆತಡೆ ಇಲ್ಲದೆ ತಮಿಳನಾಡಿಗೆ ನೀರು ಬಿಟ್ಟಿದೆ. ಯಾವ ಸರ್ಕಾರವೂ ಬಿಡದಷ್ಟು ಈ ಸರ್ಕಾರ ನೀರು ಹರಿಸಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

ತಮಿಳುನಾಡು 2.5 ಟಿಎಂಸಿ ನೀರು ಕೇಳಿರುವ ವಿಚಾರ ಸಂಬಂಧ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ತಮಿಳುನಾಡು ಮತ್ತು ಕರ್ನಾಟಕ ಸರ್ಕಾರ ಇಬ್ಬರು ಬೀಗರು ಆಗಬೇಕು. ಸ್ಟಾಲಿನ್ ಹೇಳಿದಷ್ಟು ನೀರನ್ನು ಇವರು ಬಿಟ್ಟಿದ್ದಾರೆ. ನೀರು ಬಿಡಬೇಡಿ ಎಂದು ರಾಜ್ಯಾದ್ಯಂತ ರೈತರು ಕನ್ನಡಪರ ಹೋರಾಟಗಾರರು ಪ್ರತಿಭಟನೆ ಮಾಡಿದ್ರೂ ಸಹ ನೀರು ಬಿಟ್ಟಿದ್ದಾರೆ. ಅದರ ಪರಿಣಾಮ ಈಗ ಕುಡಿಯಲು ನೀರು ಇಲ್ಲದಂತಾಗಿದೆ. ಯಾರು ಏನೇ ಹೇಳಿದ್ರೂ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು ಆದರೆ ಇವರು ತಮಿಳನಾಡು ಕೇಳಿದಷ್ಟು ನೀರು ಬಿಟ್ಟಿದ್ದಾರೆ. ಬೆಂಗಳೂರು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜನರು ಬೀದಿಗೆ ಬಿಂದಿಗೆ ಹಿಡಿದು ಬಂದಿದ್ದಾರೆ. ಯಾವ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಇನ್ಮುಂದೆ ಯಾವ ಕಾರಣಕ್ಕೂ ತಮಿಳನಾಡಿಗೆ ನೀರು ಬಿಡಬಾರದು ಬಿಟ್ಟರೆ ರೈತರಿಗೆ ತೊಂದರೆ ಆಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

ಕರ್ನಾಟಕ ಬರದಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ, ತಮಿಳುನಾಡು ಬೇಡಿಕೆ ತಿರಸ್ಕರಿಸಿದ CWRC! 

ಪೆನ್‌ಡ್ರೈವ್ ಪ್ರಕರಣ; ಊರೆಲ್ಲ ಕಳ್ಳರೇ ಎಂದ ವಾಟಾಳ್

ಇನ್ನು ಹಾಸನ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಒಂದು ಪೆನ್‌ಡ್ರೈವ್ ಬಗ್ಗೆ ಮಾತಾಡಿದ್ರೆ ಹತ್ತಾರು ಪೆನ್‌ಡ್ರೈವ್ ಬರ್ತಾವೆ. ಯಾವುದರ ಬಗ್ಗೆ ಮಾತಾಡೋದು, ಯಾರ ಬಗ್ಗೆ ಮಾತಾಡೋದು. ಮಾತಾಡಿದ್ರೆ ಎಲ್ಲಾ ಪಕ್ಷದವರ ಬಗ್ಗೆ ಮಾತಾಡಬೇಕಾಗುತ್ತೆ. ಈ ಪ್ರಕರಣ ಹೋಗ್ತಾ ಹೋಗ್ತಾ ಬೇರೆ ಕಡೆ ಹೋಗುತ್ತೆ. ಊರೆಲ್ಲಾ ಕಳ್ಳರು ಇದ್ದಾರೆ, ಕಳ್ಳನನ್ನು ಹಿಡಿಯೋದು ಹೇಗೆ? ಎಂದು ಪ್ರಶ್ನಿಸಿದರು.

1962ರಲ್ಲಿ ಮಧುಗಿರಿಯ ಪೊಲೀಸ್ ಠಾಣೆಯಲ್ಲಿ ರೇಪ್ ಆಗಿತ್ತು. ಆಗ ಗೃಹಮಂತ್ರಿ ಎಂ.ಇ.ರಾಮರಾವ್ ಆಗಿದ್ರು. ಆ ವೇಳೆ ಅವರ ಇಲಾಖೆಯ ಲೋಪದ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿದ್ದರು. ಆ ಕಾಲದ ರಾಜಕಾರಣಿಗಳು ಈಗ ಇಲ್ಲ. ಈಗ ಪರಿಸ್ಥಿತಿ ತುಂಬಾ ಹಾಳಾಗಿದೆ. ಚುನಾವಣೆಯಲ್ಲಿ‌ ದುಡ್ಡು ಮಾತ್ರ ಬೇಕಾಗಿದೆ. ಅನಾಚಾರ ಮಾಡಿದ್ರೂ ಸಹ ಅಂತವರಿಗೆ ಟಿಕೆಟ್ ನೀಡ್ತಾರೆ. ಚುನಾವಣೆಗಳಲ್ಲಿ ಕುಟುಂಬ ರಾಜಕೀಯ ಬಂದಿದೆ. 25 ವರ್ಷದಿಂದ ಇಡೀ ದೇಶ, ರಾಜ್ಯ ಚುನಾವಣೆ ವ್ಯವಸ್ಥೆಯಲ್ಲಿ ಹಾಳಾಗಿವೆ.
ಪ್ರಾಮಾಣಿಕ ರಾಜಕಾರಣಿಗಳು ಬರ್ತಾ ಇಲ್ಲ. ಎಲ್ಲರೂ ಕಳ್ಳರು ಇರುವಾಗ ಪ್ರಜ್ವಲ್‌ ನ ಹೇಗೆ ಹಿಡಿಯುತ್ತಾರೆ. ಊರೆಲ್ಲಾ ಕಳ್ಳರೇ 
ಈ ರೀತಿಯ ವ್ಯವಸ್ಥೆ ಸದ್ಯ ಇದೆ. ಇಡೀ ಪ್ರಪಂಚಕ್ಕೆ ಪೆನ್‌ಡ್ರೈವ್ ಪ್ರಕರಣ ಕೆಟ್ಟ ಸುದ್ದಿ ಹೋಯ್ತು. ರಾಜಕಾರಣಿಗಳು ಪ್ರಾಮಾಣಿಕರು ಆಗಿದ್ರೆ, ಕರ್ನಾಟಕದ ಎಂಪಿ, ಎಂಎಲ್‌ಎ ಎಲ್ಲರೂ ರಾಜೀನಾಮೆ ಕೊಡಬೇಕಾಗಿತ್ತು ಎಂದು ಮಾತಿನಲ್ಲೇ ತಿವಿದರು.

Latest Videos
Follow Us:
Download App:
  • android
  • ios