ಮಹಿಳೆಯರ ಫ್ರೀ ಬಸ್ ಟಿಕೆಟ್ ಪುರುಷರಿಗೆ ವಿತರಣೆ; ಶಕ್ತಿ ಯೋಜನೆಯಲ್ಲಿ ನಡಿತೀದೆ ದೋಖಾ?
ನಿನ್ನೆ ಬೇಡರಪುರದಿಂದ ಚಾಮರಾಜನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಚಾರ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಈ ವೇಳೆ ಹಣ ಪಡೆದು ಮಹಿಳೆಯರ ಉಚಿತ ಟಿಕೆಟ್ ವಿತರಣೆ ಮಾಡಿದ ಆರೋಪ ಕೇಳಿಬಂದಿದೆ.
ಚಾಮರಾಜನಗರ (ಅ.27): ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಒದಗಿಸಿದ ಶಕ್ತಿ ಯೋಜನೆ ದುರುಪಯೋಗವಾಗುತ್ತಿರುವ ಆರೋಪ ಕೇಳಿಬಂದಿದೆ. ಬಸ್‌ನಲ್ಲಿ ಮಹಿಳಾ ಪ್ರಯಾಣಿಕರು ಇಲ್ಲದಿದ್ದರೂ ಮಹಿಳೆಯರ ಹೆಸರಲ್ಲಿ ಪುರುಷರಿಗೆ ಟಿಕೆಟ್ ಕೊಟ್ಟು ಹಣ ಪಡೆಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು ರಾಜ್ಯಾದ್ಯಂತ ಮಹಿಳೆಯರು ಎಲ್ಲಿ ಬೇಕಾದರೂ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡಬಹುದು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲಸ ಕಂಡಕ್ಟರ್‌ಗಳು ಮಹಿಳೆಯರ ಹೆಸರಲ್ಲಿ ಟಿಕೆಟ್ ಪುರುಷರಿಗೆ ನೀಡಿ ಹಣ ಹೊಡೆಯುವ ಕೆಲಸಕ್ಕೆ ಮುಂದಾಗಿರುವ ಆರೋಪ ಪ್ರಯಾಣಿಕರಿಂದಲೇ ಕೇಳಿಬಂದಿದೆ.
ಮುಂದುವರಿದ ಮಹಿಳೆಯರ 'ಶಕ್ತಿ' ಪ್ರದರ್ಶನ; ಕಂಡಕ್ಟರ್, ಡ್ರೈವರ್ ಮೇಲೆಯೇ ಮನಬಂದಂತೆ ಹಲ್ಲೆ ನಡೆಸಿದ ರೌಡಿ ಗ್ಯಾಂಗ್!
ನಿನ್ನೆ ಬೇಡರಪುರದಿಂದ ಚಾಮರಾಜನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಚಾರ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಈ ವೇಳೆ ಹಣ ಪಡೆದು ಮಹಿಳೆಯರ ಉಚಿತ ಟಿಕೆಟ್ ವಿತರಣೆ ಮಾಡಿದ್ದ ಕಂಡಕ್ಟರ್. ಹಣ ಪಡೆದು ಮಹಿಳೆಯರ ಉಚಿತ ಟಿಕೆಟ್ ನೀಡಿದ್ದನ್ನು ಪ್ರಶ್ನಿಸಿದ್ದ ವಿದ್ಯಾರ್ಥಿಗಳು. ಈ ವೇಳೆ ಟಿಕೆಟ್ ಕೊಟ್ಟ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದಾನೆ.
ನಮಗಷ್ಟೇ ಅಲ್ಲ ಬಸ್ ನಲ್ಲಿದ್ದ ಇನ್ನೂ ಕೆಲವರಿಗೂ ಕೂಡ ಮಹಿಳೆಯರ ಉಚಿತ ಟಿಕೆಟ್ ವಿತರಿಸಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣ ದುರುಪಯೋಗ ಆಗುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ.
ಫ್ರೀ ಬಸ್ ಎಫೆಕ್ಟ್..ಪ್ರವಾಸಿ ತಾಣಗಳು ಫುಲ್ ರಶ್: ಸ್ಥಳೀಯರು, ಶಾಲಾ ವಿದ್ಯಾರ್ಥಿಗಳಿಗೆ ಸಾರಿಗೆ ಸಂಕಷ್ಟ
ಕಂಡಕ್ಟರ್ ವಿರುದ್ಧ ಆರೋಪ ಮಾಡಿರುವ ವಿದ್ಯಾರ್ಥಿಗಳು. ಕಂಡಕ್ಟರ್ ನಡೆ ಖಂಡಿಸಿ ಚಾಮರಾಜನಗರ ಸಂಚಾರಿ ನಿಯಂತ್ರಕರಿಗೆ ದೂರು ಕೊಟ್ಟ ಸರ್ಕಾರಿ ಇಂಜಿನಿಯರಿಂಗ್ ವಿಧ್ಯಾರ್ಥಿಗಳು. ಕಂಡಕ್ಟರ್ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ.