ಕರವೇ ನಾರಾಯಣಗೌಡ ಮತ್ತೊಮ್ಮೆ ಅರೆಸ್ಟ್: ಎರಡುಬಾರಿ ಜೈಲು, ಮೂರನೇ ಬಾರಿ ಬಂಧನ!

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡರು, ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬರುತ್ತಿದ್ದಂತೆಯೇ, ಮೂರನೇ ಬಾರಿಗೆ ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 

Karnataka Rakshana Vedike President Narayanagowda again arrested sat

ಬೆಂಗಳೂರು (ಜ.10): ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರು ಎರಡನೇ ಬಾರಿಗೆ ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಕೂಡಲೇ ಈಗ ಮೂರನೇ ಬಾರಿಗೆ ಹಲಸೂರು ಗೆಟ್‌ ಪೊಲೀಸ್‌ಠಾಣೆ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮುಂದೆಯೇ ಬಂಧಿಸಿ ಕರೆದೊಯ್ದಿದ್ದಾರೆ.

ಹೌದು, ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕುರಿತ ಪ್ರತಿಭಟನೆಯನ್ನು ಬಂಧನವಾದ ಕರವೇ ಅಧ್ಯಕ್ಷ ನಾರಾಯಣಗೌಡರಿಗೆ ಜಾಮೀನು ಲಭ್ಯವಾದರೂ ಮತ್ತೊಂದು ಪ್ರಕರಣದಲ್ಲಿ ಅವರನ್ನು ಬಂಧಿಸಲಾಗುತ್ತಿದೆ. ಈಗ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ಹಾಕಿ ಕೇಸ್‌ನಲ್ಲಿ ಜಾಮೀನು ಸಿಕ್ಕಿದ್ದರೂ ಅವರನ್ನು ಪುನಃ ಪೊಲೀಸರು ಮತ್ತೊಂದು ಕೆಸ್‌ನಲ್ಲಿ ಬಂಧಿಸಿ ಜೈಲಿಗಟ್ಟಿದ್ದರು. ಈಗ ಈ ಪ್ರಕರಣದಲ್ಲಿಯೂ ನಾರಾಯಣಗೌಡರಿಗೆ ಷರತ್ತುಬದ್ಧ ಜಾಮೀನು ಲಭ್ಯವಾಗಿದ್ದರೂ, ನಿಮ್ಮ ಮೇಲೆ ಜಾಮೀನು ರಹಿತ ವಾರೆಂಟ್ (ನಾನ್‌ ಬೇಲೇಬಲ್ ವಾರೆಂಟ್) ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಂಧಿಸಿದ್ದಾರೆ.

ಇಂದು ಜೈಲಿನಿಂದ ಕರವೇ ನಾರಾಯಣಗೌಡ ಸೇರಿ 29 ಕಾರ್ಯಕರ್ತರ ಬಿಡುಗಡೆ; ಪರಪ್ಪನ ಅಗ್ರಹಾರ ಬಳಿ 144 ಸೆಕ್ಷನ್ ಜಾರಿ!

ಪರಪ್ಪನ ಅಗ್ರಹಾರದ ಮುಂದೆ ಕರವೇ ಅಧ್ಯಕ್ಷ ನಾರಾಯಣಗೌಡ ಅವರು ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಹಲಸೂರು ಗೇಟ್ ಪೊಲೀಸರಿಂದ ಬಂಧನ ಮಾಡಲಾಗಿದೆ. ನಿನ್ನೆ ಬೆಳ್ಳಗ್ಗೆ ಬಿಡುಗಡೆಯಾಗಿ ಬಂಧನಕ್ಕೊಳಗಾಗಿದ್ದರು. ಇಂದು ಷರತ್ತುಬದ್ಧ ಜಾಮೀನು ಸಿಗುತ್ತಿದ್ದಂತೆ ಮತ್ತೊಮ್ಮೆ ಹಲಸೂರು ಗೇಟ್ ಪೊಲೀಸರು ಅವರನ್ನು ಬಂಧಿಸಿ ಕರದೊಯ್ದಿದ್ದಾರೆ. ಜೈಲಿನಿಂದ ಹಲಸೂರು ಗೇಟ್ ಪೊಲೀಸ್‌ ಠಾಣೆಗೆ ಕರೆತರುತ್ತಿರುವ ಪೊಲೀಸರು, ನಂತರ ಮಾರ್ಥಾಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಬಳಿಕ 1ನೇ ಎಸಿಎಂಎಂ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. 

ಚುನಾವಣೆಯಲ್ಲಿ ನಿಮಗೆ ಶಕ್ತಿ ತುಂಬಿದ್ದೆವು, ಈಗ ಕ್ರಮ ಕೈಗೊಳ್ಳಿ ಅಂತೀರಿ: ಸಿಎಂ ವಿರುದ್ಧ ಕರವೇ ನಾರಾಯಣ ಗೌಡ ಆಕ್ರೋಶ!

ಕೋವಿಡ್‌ ಅವಧಿಯಲ್ಲಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರವೇ ಕಾರ್ಯಕರ್ತರೊಂದಿಗೆ ನಾರಾಯಣಗೌಡ ಅವರು ಪ್ರತಿಭಟನೆ ನಡೆಸಿದ್ದರು. ಈ ಕುರಿತಾಗಿ 2020ರಲ್ಲಿ ಕೊರೊನಾ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ NDMA ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸರು ನಾರಾಯಣಗೌಡ ಅವರನ್ನು ಪುನಃ ಬಂಧಿಸಿ ಕೋರ್ಟ್‌ ಮುಂದೆ ಹಾಜರುಪಡಿಸಲಿದ್ದಾರೆ.

Latest Videos
Follow Us:
Download App:
  • android
  • ios