Asianet Suvarna News Asianet Suvarna News

ಸರ್ಕಾರದ ವಿರುದ್ಧ ತೊಡೆ ತಟ್ಟಿದ ಕರವೇ; ಪಕ್ಷ ಕಟ್ಟಿ ಪಾಠ ಕಲಿಸೋದಾಗಿ ಪ್ರತಿಜ್ಞೆ!

ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಗಾರರನ್ನು ಕೀಳಾಗಿ ನಡೆಸಿಕೊಳ್ಳುತ್ತಾ ಜೈಲಿಗಟ್ಟುವ ಕಾಂಗ್ರೆಸ್‌ ಸರ್ಕಾರಕ್ಕೆ  ನಾವೇ ಸ್ವಂತ ಪಕ್ಷ ಕಟ್ಟಿ ಚುನಾವಣೆಯಲ್ಲಿ ತಪ್ಪ ಪಾಠ ಕಲಿಸುವುದಾಗಿ ಕರವೇ ಪ್ರತಿಜ್ಞೆ ಮಾಡಿದೆ.

Karnataka rakshana vedike has challenged the Congress government to form political party sat
Author
First Published Jan 10, 2024, 5:05 PM IST | Last Updated Jan 10, 2024, 5:05 PM IST

ಬೆಂಗಳೂರು (ಜ.10): ರಾಜ್ಯದ ರಾಜಧಾನಿ ಬೆಂಗಳೂರಿನ ವಾಣಿಜ್ಯ ಮಳಿಗೆಗಳ ಮೇಲೆ ಕನ್ನಡ ನಾಮಫಲಕ ಅಳವಡಿಕೆ ಕುರಿತ ಪ್ರತಿಭಟನೆ ವೇಳೆ ಬಂಧನವಾದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರನ್ನು ಬಂಧಿಸಿದ್ದು, ಅವರು ಜಾಮೀನು ಪಡೆದರೂ ಬೇರೆ ಬೇರೆ ಕೇಸ್‌ಗಳಲ್ಲಿ ಸರ್ಕಾರ ಬಂಧಿಸಿ ಪುನಃ ಜೈಲಿಗಟ್ಟುತ್ತಿದೆ. ಆದರೆ, ಕನ್ನಡ ಹೋರಾಟಗಾರರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವ ಸರ್ಕಾರದ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದು, ಪ್ರಾದೇಶಿಕ ಪಕ್ಷವನ್ನು ಕಟ್ಟಿ ನಿಮಗೆ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ರಾಜ್ಯಾಧ್ಯಕ್ಷೆ ಅಶ್ವಿನಿಗೌಡ ಅವರು, ಕನ್ನಡ ಪರ ಹೋರಾಟಗಾರರನ್ನು ಕೀಳಾಗಿ ನಡೆಸುಕೊಳ್ಳುತ್ತಿದ್ದಾರೆ. ಕನ್ನಡಕ್ಕಾಗಿ ಹೋರಾಟ ಮಾಡಿದವರನ್ನು ಜೈಲಿಗೆ ಕಳಿಸುತ್ತಿದ್ದಾರೆ. ನಮ್ಮ ಕಣ್ಣ ಒರೆಸುವ ಕೈಗಳು ಜೈಲಿನಲ್ಲಿ ಇದ್ದಾರೆ. ನಾವು ಪ್ರಾದೇಶಿಕ ಪಕ್ಷ ವನ್ನು ಕಟ್ಟಿ ಯಶಸ್ವಿಯಾಗ್ತೀವಿ. ಮುಂದಿನ ದಿನಗಳಲ್ಲಿ ಇದೆಲ್ಲದಕ್ಕು ಸಹ ನಾವು ಉತ್ತರ ಕೊಡ್ತೀವಿ ಎಂದು ಅಶ್ವಿನಿಗೌಡ ಭಾವುಕರಾಗಿ ಮಾತನಾಡುತ್ತಾ ಪ್ರಾದೇಶಿಕ ಪಕ್ಷ ಕಟ್ಟಿ ಪಾಠ ಕಲಿಸೋದಾಗಿ ಪ್ರತಿಜ್ಞೆ ಮಾಡಿದರು.

ಕರವೇ ನಾರಾಯಣಗೌಡ ಮತ್ತೊಮ್ಮೆ ಅರೆಸ್ಟ್: ಎರಡುಬಾರಿ ಜೈಲು, ಮೂರನೇ ಬಾರಿ ಬಂಧನ!

ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕುರಿತ ಪ್ರತಿಭಟನೆಯನ್ನು ಬಂಧನವಾದ ಕರವೇ ಅಧ್ಯಕ್ಷ ನಾರಾಯಣಗೌಡರಿಗೆ ಜಾಮೀನು ಲಭ್ಯವಾದರೂ ಮತ್ತೊಂದು ಪ್ರಕರಣದಲ್ಲಿ ಅವರನ್ನು ಬಂಧಿಸಲಾಗುತ್ತಿದೆ. ಈಗ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ಹಾಕಿ ಕೇಸ್‌ನಲ್ಲಿ ಜಾಮೀನು ಸಿಕ್ಕಿದ್ದರೂ ಅವರನ್ನು ಪುನಃ ಪೊಲೀಸರು ಮತ್ತೊಂದು ಕೆಸ್‌ನಲ್ಲಿ ಬಂಧಿಸಿ ಜೈಲಿಗಟ್ಟಿದ್ದರು. ಈಗ ಈ ಪ್ರಕರಣದಲ್ಲಿಯೂ ನಾರಾಯಣಗೌಡರಿಗೆ ಷರತ್ತುಬದ್ಧ ಜಾಮೀನು ಲಭ್ಯವಾಗಿದ್ದರೂ, ನಿಮ್ಮ ಮೇಲೆ ಜಾಮೀನು ರಹಿತ ವಾರೆಂಟ್ (ನಾನ್‌ ಬೇಲೇಬಲ್ ವಾರೆಂಟ್) ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಂಧಿಸುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ಮತ್ತೊಮ್ಮೆ ಜೈಲು ಸೇರಿದ ಕರವೇ ನಾರಾಯಣಗೌಡ: ಕೋವಿಡ್‌ ಅವಧಿಯಲ್ಲಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರವೇ ಕಾರ್ಯಕರ್ತರೊಂದಿಗೆ ನಾರಾಯಣಗೌಡ ಅವರು ಪ್ರತಿಭಟನೆ ನಡೆಸಿದ್ದರು. ಈ ಕುರಿತಾಗಿ 2020ರಲ್ಲಿ ಕೊರೊನಾ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ NDMA ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿದ್ದರೂ, ನಾರಾಯಣಗೌಡರು ಪೊಲೀಸ್‌ ಠಾಣೆಗಾಗಲೀ ಅಥವಾ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಆದ್ದರಿಂದ ಕಾನೂನು ಉಲ್ಲಂಘನೆಗೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸರು ನಾರಾಯಣಗೌಡ ಅವರನ್ನು ಪುನಃ ಬಂಧಿಸಿ ಕೋರ್ಟ್‌ ಮುಂದೆ ಹಾಜರುಪಡಿಸಲಿದ್ದಾರೆ.

ಮಗುವಿನ ಪ್ರಜ್ಞೆ ತಪ್ಪಿಸಲೋಗಿ ಕೊಂದೇಬಿಟ್ಟೆ; ತಪ್ಪೊಪ್ಪಿಕೊಂಡ ಬೆಂಗಳೂರು ಸ್ಟಾರ್ಟಪ್ ಸಿಇಒ ಸುಚನಾ ಸೇಠ್!

ಷರತ್ತುಬದ್ಧ ಜಾಮೀನು ನೀಡಿದ್ದ ನ್ಯಾಯಾಲಯ: ಇನ್ನು ಸಾರ್ವಜನಿಕ ಆಸ್ತಿಗೆ ಹಾನಿ ಹಿನ್ನೆಲೆಯಲ್ಲಿ ಬಂಧನವಾಗಿದ್ದ ನಾರಾಯಣಗೌಡರಿಗೆ 30ನೇ ಎಸಿಎಂಎಂ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಲಾಗಿತ್ತು. ಈ ವೇಳೆ ಇಬ್ಬರು ವ್ಯಕ್ತಿಗಳ ಶ್ಯೂರಿಟಿ ನೀಡಬೇಕು. ಪೊಲೀಸರ ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿತ್ತು.

Latest Videos
Follow Us:
Download App:
  • android
  • ios