07:14 PM (IST) Feb 12

ಫ್ರಾನ್ಸ್‌ನಲ್ಲಿ ಮಿನಿ ಸೂರ್ಯನ ಸೃಷ್ಟಿಸುವ ITER ಸೈಟ್‌ನಲ್ಲಿ ಪ್ರಧಾನಿ ಮೋದಿ!

 ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ ಭೇಟಿಯಲ್ಲಿದ್ದಾರೆ. ಫ್ರಾನ್ಸ್‌ ಭೇಟಿಯ ಸಂದರ್ಭದಲ್ಲಿ ಅವರು ಬುಧವಾರ ಭಾರತದ ಪಾಲು ಹೊಂದಿರುವ ಜಗತ್ತಿನ ಅತ್ಯಂತ ಅತ್ಯಾಧುನಿಕ ಫ್ಯುಶನ್‌ ಎನರ್ಜಿ ರಿಯಾಕ್ಟರ್‌ ಸೈಟ್‌ಗೆ ಭೇಟಿ ನೀಡಿ ಅಲ್ಲಿನ ಪ್ರಗತಿ ಪರಿಶೀಲನೆ ಮಾಡಿದರು.

Explainer :ಫ್ರಾನ್ಸ್‌ನಲ್ಲಿ ಭೂಮಿಯ ಮೇಲೆ ಸೂರ್ಯನ ಸೃಷ್ಟಿಗೆ 17 ಸಾವಿರ ಕೋಟಿಯ ವಾಗ್ದಾನ ಕೊಟ್ಟಿದ್ದೇಕೆ ಭಾರತ?

06:31 PM (IST) Feb 12

ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕಾನೂನಿನ ಅಡಿಯಲ್ಲಿ ಸಾಲ ಕೊಟ್ಟವರಿಗೆ ಯಾವುದು ತೊಂದರೆ ಆಗಬಾರದು. ಮೂಲಭೂತ ಹಕ್ಕುಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಿ ಎಂಚು ಎಚ್ಚರಿಕೆ ನೀಡಿ ಸಹಿ ಹಾಕಿದ್ದಾರೆ.

06:15 PM (IST) Feb 12

ರಾಜ್ಯ ಸರ್ಕಾರ ನಮ್ಮ ಮೆಟ್ರೋ ದರ ಹೆಚ್ಚಳಕ್ಕೆ ಪತ್ರ ಬರೆದಂತೆ, ಈಗ ತಗ್ಗಿಸಲು ಪತ್ರ ಬರೆಯಲಿ

ಬೆಂಗಳೂರು ಮೆಟ್ರೋ ದರ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದ್ದು, ದರ ಪರಿಷ್ಕರಣೆ ಮಾಡುವಂತೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ. ಕೇಂದ್ರ ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ರಾಜ್ಯ ಸರ್ಕಾರ ಮತ್ತೊಂದು ಪತ್ರ ಬರೆದು ದರ ಪರಿಷ್ಕರಣೆಗೆ ಮನವಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ನಮ್ಮ ಮೆಟ್ರೋ ದರ ಹೆಚ್ಚಳಕ್ಕೆ ಪತ್ರ ಬರೆದಂತೆ, ಈಗ ತಗ್ಗಿಸಲು ಪತ್ರ ಬರೆಯಲಿ; ಸಂಸದ ತೇಜಸ್ವಿ ಸೂರ್ಯ

05:50 PM (IST) Feb 12

Tirupati Laddu Row: ನಾಲ್ವರ ಬಂಧಿಸಿದ ಸಿಬಿಐ, ಟಿಟಿಡಿ ಇ-ಟೆಂಡರ್‌ ಪಕ್ರಿಯೆಯಲ್ಲಿ ಭಾರೀ ಲೋಪ!

ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆಯಲ್ಲಿ ಪಾಣಿಗಳ ಕೊಬ್ಬು ಮಿಶ್ರಿತ ತುಪ್ಪವನ್ನು ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ ನಾಲ್ವರನ್ನು ಬಂಧಿಸಿದೆ. ಅದರೊಂದಿಗೆ ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಇ-ಟೆಂಡರ್ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳನ್ನು ಬಯಲು ಮಾಡಿದೆ ಎಂದು ಎಎನ್‌ಐ ವರದಿ ಮಾಡಿದೆ. 

Tirupati Laddu Row: ನಾಲ್ವರ ಬಂಧಿಸಿದ ಸಿಬಿಐ, ಟಿಟಿಡಿ ಇ-ಟೆಂಡರ್‌ ಪಕ್ರಿಯೆಯಲ್ಲಿ ಭಾರೀ ಲೋಪ!

05:21 PM (IST) Feb 12

ಸಿಖ್ ವಿರೋಧಿ ದಂಗೆಯಲ್ಲಿ ಕೈ ನಾಯಕ ಸಜ್ಜನ್ ಕುಮಾರ್ ದೋಷಿ

1984ರಲ್ಲಿ ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರ ನಡೆದ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ಸಿಗ, ಮಾಜಿ ಸಂಸದ ಸಜ್ಜನ್ ಕುಮಾರ್ ದೋಷಿ ಎಂದು ದೆಹಲಿ ಕೋರ್ಟ್ ತೀರ್ಪು ನೀಡಿದೆ. 

ಇಂದಿರಾ ಹತ್ಯೆಯ ನಂತರ ನಡೆದ 1984 ರ ಸಿಖ್ ವಿರೋಧಿ ದಂಗೆಯಲ್ಲಿ ಕೈ ನಾಯಕ ಸಜ್ಜನ್ ಕುಮಾರ್ ದೋಷಿ

04:58 PM (IST) Feb 12

ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್​! ವಿಮಾನದ ಮೇಲೆ ಭಯೋತ್ಪಾದನಾ ದಾಳಿ ಎಚ್ಚರಿಕೆ... ಆಗಿದ್ದೇನು?

ಫ್ರಾನ್ಸ್​, ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸ್ಕೆಚ್ ಮಾಡಲಾಗಿರುವ ವಿಷಯ ಬೆಳಕಿಗೆ ಬಂದಿದೆ. ವಿಮಾನದ ಮೇಲೆ ಭಯೋತ್ಪಾದನಾ ದಾಳಿ ಎಚ್ಚರಿಕೆ ನೀಡಲಾಗಿದೆ. ಆಗಿದ್ದೇನು?

ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್​! ವಿಮಾನದ ಮೇಲೆ ಭಯೋತ್ಪಾದನಾ ದಾಳಿ ಎಚ್ಚರಿಕೆ... ಆಗಿದ್ದೇನು?

04:18 PM (IST) Feb 12

ಎಂದಾದರೂ 'ಅದನ್ನ' ನೋಡಿದ್ದೀಯಾ ಎಂದಿದ್ದ ಅಪೂರ್ವ ಮಖೀಜಾಗೂ ಪೊಲೀಸ್ ಕ್ಲಾಸ್‌!

ರಣವೀರ್‌ ನೀಡಿರುವ ಹೇಳಿಕೆಗಳ ನಡುವೆ ಸಮಯ್‌ ರೈನಾ ಅವರ ವಿವಾದಿತ ಇಂಡಿಯಾಸ್‌ಗಾಟ್‌ ಲ್ಯಾಟೆಂಟ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೊಬ್ಬ ಕಂಟೆಂಟ್‌ ಕ್ರಿಯೇಟರ್‌ ವಿರುದ್ಧವೂ ದೂರು ದಾಖಲಾಗಿದೆ. ಇದರಲ್ಲಿ ಒಬ್ಬರು ರೆಬಲ್‌ ಕಿಡ್‌ ಖ್ಯಾತಿಯ ಅಪೂರ್ವ ಮಖೀಜಾ. ಬುಧವಾರ ರೋಸ್ಟ್ ಶೋನಲ್ಲಿ ತನ್ನ ಅಸಭ್ಯ ಹೇಳಿಕೆಗಳಿಗಾಗಿ ಟೀಕೆಗೆ ಗುರಿಯಾಗಿರುವ ಅಪೂರ್ವ ಮುಖಿಜಾ ಅಕಾ ದಿ ರೆಬೆಲ್ ಕಿಡ್, ಪ್ರಕರಣದಲ್ಲಿ ಹೇಳಿಕೆ ದಾಖಲಿಸಲು ಮುಂಬೈ ಪೊಲೀಸರು ಕರೆ ಮಾಡಿದ ನಂತರ ತನ್ನ ವಕೀಲರೊಂದಿಗೆ ಖಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿದರು.

ಜನ್ಮತಾಳಿದ ಬಳಿಕ ಮತ್ತೆ ಎಂದಾದರೂ 'ಅದನ್ನ' ನೋಡಿದ್ದೀಯಾ ಎಂದಿದ್ದ ಅಪೂರ್ವ ಮಖೀಜಾಗೂ ಪೊಲೀಸ್ ಕ್ಲಾಸ್‌!
https://kannada.asianetnews.com/tv-talk/indias-got-latent-judge-who-is-apoorva-mukhija-aka-rebel-kid-san-srkfsb

03:35 PM (IST) Feb 12

ಫೆ.20ಕ್ಕೆ ಕ್ಯಾಬಿನೆಟ್‌ ಸಭೆ

20 ನೇ ತಾರೀಕು ಸಚಿವ ಸಂಪುಟ ಸಭೆ ನಡೆಯಲಿದೆ. ಜನವರಿ 30 ರಂದು ಕೊನೆಯ ಬಾರಿಗೆ ಕ್ಯಾಬಿನೆಟ್ ಸಭೆ ನಡೆದಿತ್ತು. ಸಿಎಂ ಕಾಲಿಗೆ ಪೆಟ್ಟಾದ ಬಳಿಕ ಕ್ಯಾಬಿನೆಟ್ ಮೀಟಿಂಗ್ ನಡೆದಿರಲಿಲ್ಲ ಮುಂದಿನ ಕ್ಯಾಬಿನೆಟ್ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಬೇಕಿತ್ತು. ಆದರೆ ಕಾಲಿನ ಸಮಸ್ಯೆ ಕಾರಣಕ್ಕೆ ಮಲೆ ಮಹದೇಶ್ವರ ಬೆಟ್ಟದ ಕ್ಯಾಬಿನೆಟ್ ರದ್ದು. ಬೆಂಗಳೂರಿನಲ್ಲೇ ಫೆ.20ರಂದು ಕ್ಯಾಬಿನೆಟ್‌ ಸಭೆ ನಡೆಯಲಿದೆ.

03:24 PM (IST) Feb 12

KPCC ವಕ್ತಾರ ಲಕ್ಷ್ಮಣ್‌ ವಿರುದ್ಧ ದೂರು

YouTube video player

02:39 PM (IST) Feb 12

ಬದಲಾವಣೆ ಜಗದ ನಿಯಮ

ಎಲ್ಲಾ ಪಕ್ಷದಲ್ಲೂ ಸಮಾಧಾನ, ಅಸಮಾಧಾನ ಇದ್ದೇ ಇರುತ್ತೆ. ರಾಜಕೀಯ ಪಕ್ಷ ಅಂದಮೇಲೆ ಇದು ಮಾಮೂಲು. ಬದಲಾವಣೆ ಜಗದ ನಿಯಮ, ಸೂಕ್ತ ಸಮಯ ಬಂದಾಗ ಆಗುತ್ತೆ.
ನಾಳೆಯೇ ಆಗಬೇಕು ಅಂತ ಹೇಳಿಲ್ವಲ್ಲ ಎಂದು ಮಾಗಡಿ ತಾಲೂಕಿನ ಸುಗ್ಗನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದ್ದಾರೆ. 

02:16 PM (IST) Feb 12

ಕುಂಭಮೇಳದಲ್ಲಿ ಸತೀಶ್ ಜಾರಕಿಹೋಳಿ ಸಿಎಂ ಆಗಲಿ ಎಂದು ಹರಕೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ‌ ಕಾಂಗ್ರೆಸ್ ಮುಖಂಡರು ಸಚಿವ ಸತೀಶ್ ಜಾರಕಿಹೋಳಿ ಸಿಎಂ ಆಗುವಂತೆ ಹರಕೆ ಹೊತ್ತಿದ್ದಾರೆ. ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಆಗಲಿ ಎಂದು ಹರಕೆ ಹೊತ್ತಿದ್ದಾರೆ.

01:12 PM (IST) Feb 12

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಮುಹೂರ್ತ ಫಿಕ್ಸ್

YouTube video player

12:49 PM (IST) Feb 12

ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು

ಮೈಸೂರು ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಹಿನ್ನೆಲೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಡಿಜಿಪಿ ಅಲೋಕ್ ಮೋಹನ್ ಅವರನ್ನು ಭೇಟಿಯಾಗಿ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವ ಕುರಿತು ಚರ್ಚೆ ನಡೆಸಿದರು. ಘಟನೆ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ. 

12:34 PM (IST) Feb 12

ರಾಜ್ಯ ಜಾಗತಿಕ ಕೇಂದ್ರವಾಗಿಸುವ ಗುರಿ: ಡಿ.ಕೆ. ಶಿವಕುಮಾರ್‌

Scroll to load tweet…
11:56 AM (IST) Feb 12

ಇದೇನಾ ಸಂವಿಧಾನದ ಪ್ರಕಾರ ನಡೆಯುವುದು?

ಹಿಂದುಳಿದ ವರ್ಗದ ಅಧಿಕಾರಿಗಳ ಮೇಲೆ ಕಿರುಕುಳ ನಿರಂತರವಾಗುತ್ತಿದೆ. ಮಾತು ಎತ್ತಿದರೆ ಪರಮೇಶ್ವರ್ ಸಂವಿಧಾನ ಸಂವಿಧಾನ ಎನ್ನುತ್ತಾರೆ. ಇದೇನಾ ಸಂವಿಧಾನದ ಪ್ರಕಾರ ನಡೆಯುವುದು? ಆದರೆ ಮೇಲ್ವರ್ಗದ ನಾಯಕರ ಪುತ್ರರಿಂದ ಈ ರೀತಿ ಹಿಂದುಳಿದ ವರ್ಗದ ಅಧಿಕಾರಿಯ ಮೇಲೆ ಆಗುತ್ತಿರುವ ಕಿರುಕುಳ ಸಹಿಸಲು ಅಸಾಧ್ಯ. ಶಾಸಕ ಸಂಗಮೇಶ್ ಪುತ್ರ ಬಸವೇಶ್ವರ್ ವಿರುದ್ಧ ಗೂಂಡಾ ಆಕ್ಟ್ ಜಾರಿಗೊಳಿಸಬೇಕು ಗಣಿ ಮತ್ತು ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಪರವಾಗಿ ಸಂಪೂರ್ಣ ಈಡಿಗ ಸಮುದಾಯ ನಿಂತಿದೆ ಎಂದು ಪ್ರಣವಾನಂದ ಸ್ವಾಮೀಜಿ ಎಂದು ಹೇಳಿದ್ದಾರೆ.

11:44 AM (IST) Feb 12

ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ವಿಧಿವಶ

Scroll to load tweet…
11:02 AM (IST) Feb 12

ಮೆಟ್ರೋ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ

ಮೋದಿ ಮುಖವಾಡ‌ ಧರಿಸಿ, ಪ್ಲೇ ಕಾರ್ಡ್ ಹಿಡಿದು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರಯಾಣ ಮಾಡಿದ್ದಾರೆ. ಮೆಟ್ರೋ ದರ ಇಳಿಕೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಎಂದು ಬರೆದಿರುವ ಫಲಕಗಳನ್ನು ಹಿಡಿಯಲಾಗಿತ್ತು

10:37 AM (IST) Feb 12

ಕೆಪಿಸಿಸಿ ಅಧ್ಯಕ್ಷ ಬದಲಾವಣೆ: ದೆಹಲಿ ಭೇಟಿ ಕುರಿತು ಯಾವುದೇ ಮುಚ್ಚುಮರೆ ಇಲ್ಲ, ಸಚಿವ ರಾಜಣ್ಣ

Scroll to load tweet…
10:18 AM (IST) Feb 12

ಮೆಟ್ರೋ ಪ್ರಯಾಣ ದರ ಏರಿಕೆ‌; ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯ ಶಿಫಾರಸ್ಸಿನಂತೆ ಮೋದಿ ಸರ್ಕಾರ ಅವೈಜ್ಞಾನಿಕವಾಗಿ ಮೆಟ್ರೋ ದರವನ್ನು ಏರಿಕೆ ಮಾಡಿದೆ. ಈ ಸತ್ಯವನ್ನು ಮುಚ್ಚಿಟ್ಟು ರಾಜ್ಯ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮೆಟ್ರೋ ದರವನ್ನು ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಇಂದು ಮೆಟ್ರೋ ನಿಲ್ದಾಣ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ ಮಾಡಲಿದೆ. 

10:00 AM (IST) Feb 12

ನಾನೇನು ಕಾಮೆಂಟ್ ಮಾಡಲಿ ಹೇಳಿ

ಸಚಿವ ರಾಜಣ್ಣ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ದೆಹಲಿಗೆ ಹೋಗುತ್ತಿದ್ದೇನೆ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಅವರು ದೊಡ್ಡವರು, ನಾನು ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ. ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಬಗ್ಗೆ ನಾನೇನು ಕಾಮೆಂಟ್ ಮಾಡಲಿ ಹೇಳಿ ಎಂದಿದ್ದಾರೆ.