ಜನ್ಮತಾಳಿದ ಬಳಿಕ ಮತ್ತೆ ಎಂದಾದರೂ 'ಅದನ್ನ' ನೋಡಿದ್ದೀಯಾ ಎಂದಿದ್ದ ಅಪೂರ್ವ ಮಖೀಜಾಗೂ ಪೊಲೀಸ್ ಕ್ಲಾಸ್!
ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾ ಅವರ ವಿವಾದಾತ್ಮಕ ಹೇಳಿಕೆಗಳ ನಂತರ, ಇಂಡಿಯಾಸ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೊಬ್ಬ ಕಂಟೆಂಟ್ ಕ್ರಿಯೇಟರ್ ರೆಬೆಲ್ ಕಿಡ್ ವಿರುದ್ಧ ದೂರು ದಾಖಲಾಗಿದೆ. ಅವರ ಅಸಭ್ಯ ಹೇಳಿಕೆಗಳಿಂದಾಗಿ ಟೀಕೆಗೆ ಗುರಿಯಾಗಿರುವ ರೆಬೆಲ್ ಕಿಡ್ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಾರೆ.

ನವದೆಹಲಿ (ಫೆ.12): ಯೂಟ್ಯೂಬರ್ ಹಾಗೂ ಪಾಡ್‌ಕಾಸ್ಟರ್ ರಣವೀರ್ ಅಲ್ಲಾಬಾದಿಯಾ ಅವರ ಹೇಳಿಕೆಗಳ ವಿವಾದ ಹೆಚ್ಚುತ್ತಲೇ ಇದೆ. ದೇಶಾದ್ಯಂತ ಅವರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದ್ದು, ಮುಂಬೈ ಹಾಗೂ ಅಸ್ಸಾಂನಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಅವರ ವಿಚಾರಣೆ ನಡೆಯುತ್ತಿದೆ. ಇನ್ನು ರಣವೀರ್ ನೀಡಿರುವ ಹೇಳಿಕೆಗಳ ನಡುವೆ ಸಮಯ್ ರೈನಾ ಅವರ ವಿವಾದಿತ ಇಂಡಿಯಾಸ್‌ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೊಬ್ಬ ಕಂಟೆಂಟ್ ಕ್ರಿಯೇಟರ್ ವಿರುದ್ಧವೂ ದೂರು ದಾಖಲಾಗಿದೆ. ಇದರಲ್ಲಿ ಒಬ್ಬರು ರೆಬಲ್ ಕಿಡ್ ಖ್ಯಾತಿಯ ಅಪೂರ್ವ ಮಖೀಜಾ. ಬುಧವಾರ ರೋಸ್ಟ್ ಶೋನಲ್ಲಿ ತನ್ನ ಅಸಭ್ಯ ಹೇಳಿಕೆಗಳಿಗಾಗಿ ಟೀಕೆಗೆ ಗುರಿಯಾಗಿರುವ ಅಪೂರ್ವ ಮುಖಿಜಾ ಅಕಾ ದಿ ರೆಬೆಲ್ ಕಿಡ್, ಪ್ರಕರಣದಲ್ಲಿ ಹೇಳಿಕೆ ದಾಖಲಿಸಲು ಮುಂಬೈ ಪೊಲೀಸರು ಕರೆ ಮಾಡಿದ ನಂತರ ತನ್ನ ವಕೀಲರೊಂದಿಗೆ ಖಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿದರು.ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಅಪೂರ್ವ ಮಖೀಜಾರನ್ನು ಸಾಮಾನ್ಯವಾಗಿ ಗುರುತಿಸೋದು ರೆಬಲ್ ಕಿಡ್ ಅಥವಾ ಕಲೇಶಿ ಔರತ್ ಎನ್ನುವ ಹೆಸರುಗಳಿಂದ. ತಮ್ಮ ಇನ್ಸ್‌ಟಾಗ್ರಾಮ್ ರೀಲ್ಸ್‌ಗಳು ಹಾಗೂ ವಿಡಿಯೋಗಳಿಂದ ಪ್ರಖ್ಯಾತಿಗೆ ಬಂದಿದ್ದರು. ಅದರಲ್ಲೂ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಇವರ ರೀಲ್‌ಗಳು ಸುಪ್ರಸಿದ್ಧವಾಗಿದ್ದವು.
ಆಧುನಿಕ ಸಂಬಂಧಗಳು ಮತ್ತು ಮನರಂಜನೆಯಂತಹ ವಿಷಯಗಳ ಕುರಿತು ಪ್ರಾಮಾಣಿಕ ವ್ಯಾಖ್ಯಾನ ಮತ್ತು ಬಲವಾದ ಭಾಷೆಯನ್ನು ಒಳಗೊಂಡಿರುವ ದಿ ರೆಬೆಲ್ ಕಿಡ್‌ನ ವಿಷಯವು ಯುವ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸಿತು, ಇದು ಮುಖಿಜಾಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಫಾಲೋವರ್ಸ್‌ಗಳನ್ನು ಗಳಿಸಲು ಕಾರಣವಾಯಿತು.
ಅವರ ಜನಪ್ರಿಯತೆಯ ನಂತರ, ಅವರು ತಮ್ಮ ವಿಷಯದಲ್ಲಿ ಫ್ಯಾಷನ್ ಮತ್ತು ಟ್ರಾವೆಲ್ ವ್ಲಾಗಿಂಗ್ ಅನ್ನು ಸೇರಿಸಿಕೊಂಡರು ಮತ್ತು ಪ್ರಮುಖ ಅಂತರರಾಷ್ಟ್ರೀಯ ಕಂಪನಿಗಳು ಮತ್ತು ಕ್ರಿಯೆಟರ್‌ಳೊಂದಿಗೆ ಪಾಲುದಾರಿಕೆಯನ್ನು ಪ್ರಾರಂಭಿಸಿದರು. ಫೋರ್ಬ್ಸ್ ಅವರನ್ನು ಟಾಪ್ 100 ಡಿಜಿಟಲ್ ಸ್ಟಾರ್‌ಗಳಲ್ಲಿ ಒಬ್ಬರೆಂದು ಹೆಸರಿಸಿದೆ ಮತ್ತು ಅವರು ನೈಕ್, ಅಮೆಜಾನ್, ಮೆಟಾ ಮತ್ತು ಮೇಬೆಲ್‌ಲೈನ್‌ನಂತಹ ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿ ಕಾಣಿಸಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದೆ. ಹಾಗಿದ್ದರೂ, ಅವರ ಜನಪ್ರಿಯತೆಯು ಅವರನ್ನು ವಿವಾದಗಳಿಂದ ರಕ್ಷಿಸುವಲ್ಲಿ ವಿಫಲವಾಗಿದೆ. ಸಾಮಾನ್ಯವಾಗಿ ಆಕೆ ಬಳಸುವ ಅಸಭ್ಯ ಭಾಷೆಗಳ ಕಾರಣಕ್ಕೆ ಟೀಕೆಗಳನ್ನು ಎದುರಿಸಿದ್ದಾರೆ.
'ಅಪ್ಪ-ಅಮ್ಮನ ಸೆ** ನೋಡೋಕೆ ಇಷ್ಟಪಡ್ತೀರಾ?' ಬೀರ್ ಬೈಸೆಪ್ಸ್ ಕ್ರಿಯೇಟರ್ ರಣವೀರ್ ಮೇಲೆ ದೇಶಾದ್ಯಂತ ಆಕ್ರೋಶ!
ಇತ್ತೀಚೆಗೆ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (DTU) ನಡೆದ ಕಾರ್ಯಕ್ರಮವೊಂದರಲ್ಲಿ ಪ್ರೇಕ್ಷಕರೊಂದಿಗೆ ವಾಗ್ವಾದಕ್ಕೆ ಅವರು ಇಳಿದಿದ್ದರು. ಕೆಲವು ಆಕೆಯ ವಿರುದ್ಧ ಘೋಷಣೆ ಕೂಗಿದ ಹಂತದಲ್ಲಿ ಆತನನ್ನು ಉದ್ದೇಶಿಸಿ, '100 ಬಾರ್ ಔರ್ ತೋಡುಂಗಿ ಔರ್ ತು ಇಧರ್ ಆಜಾ ತೇರಿ ಹಡಿಯಾನ್ ಭಿ ತೋಡುಂಗಿ. ತು ಇಧರ್ ಉಧರ್ ಭಾಗ್ ರಹಾ ಥಾ ನ ಚುಪ್ ಚುಪ್ಕೆ. ಆಜಾ' (100 ಸಾರಿ ಮತ್ತೆ ಮುರೀತೀಸಿ, ಹಾಗೆ ನೀನು ಇಲ್ಲಿ ಬಾ ನಿನ್ನ ಮೂಳೆ ಕೂಡ ಮುರೀತೀನಿ. ನೀನು ಅಲ್ಲಿಂದ ಇಲ್ಲಿಗೆ ಕದ್ದು ಮುಚ್ಚಿ ಓಡಾಡ್ತಿದ್ದೀಯಲ್ಲ, ಎದುರುಗಡೆ ಬಾ)' ಎಂದು ಹೇಳಿದ್ದರು.
ಮದ್ಯಪಾನದ ದಾಸನಾಗಿದ್ದ BeerBiceps ರಣವೀರ್ ಅಲ್ಲಾಬಾದಿಯಾ ಶ್ರೀಮಂತ ಯೂಟ್ಯೂಬರ್ ಆಗಿದ್ದೇಗೆ? ಇವರ ಆಸ್ತಿ ಎಷ್ಟು?
ಅಪೂರ್ವ ಹೇಳಿದ್ದೇನು: ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋನಲ್ಲಿ ಅಪೂರ್ವ ಮಖೀಜಾ ಸ್ಪರ್ಧಿಯೊಂದಿಗೆ ಮಾತನಾಡುವ ವೇಳೆ, 'ಅಮ್ಮನ ಯೋನಿಯಿಂದ ಹೊರಬಂದ ಬಳಿಕ, ನೀನು ಎಂದಾದರೂ ಅದನ್ನು ನೋಡಿದ್ದೀಯಾ, ಲೌಡೇ..' ಎಂದು ಹೇಳಿದ್ದು ಕೇಳಿದೆ. 'ಪತಿ ಪರಮೇಶ್ವರ್ ನನಗೆ ಬೇಕು, ಎಲ್ಲಿಂದ ಸಿಗ್ತಾರೆ ಹೇಳು..6.4 ಇಂಚು ಇರಬೇಕು ಮತ್ತೆ ಕೆಳಗಿನಿಂದ ಕನಿಷ್ಠ 6 ಇಂಚು ಇರಬೇಕು..' ಎಂದು ಹೇಳಿದ್ದರು.