ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಡಿಕೆ ಶಿವಕುಮಾರ್ ಹಿಂದೂತ್ವದ ಜಪ ಮಾಡುತ್ತಿರುವುದನ್ನು ಸ್ವಾಗತಿಸಿದ್ದಾರೆ. ಮೊಘಲರಿಂದ ಭಾರತೀಯ ಸಂಸ್ಕೃತಿ ಹಾಳಾಗಿದ್ದು, ಡಿಕೆಶಿ ಈಗ ಸರಿ ದಾರಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿ (ಮಾ.1): ಡಿಕೆ ಶಿವಕುಮಾರಗೆ ಕೊನೆಗೂ ಬುದ್ಧಿ ಬಂದಿದೆ. ಇಂಥ ಬುದ್ಧಿ ಸಿದ್ದರಾಮಯ್ಯ ಅವರಿಗೂ ಬರಲಿ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಹೇಳಿದರು.

ಡಿಕೆ ಶಿವಕುಮಾರ ಹಿಂದೂತ್ವ ಜಪ:

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ ಕುಂಭಮೇಳಕ್ಕೆ ಹೋಗಿದ್ದಾರೆ, ಕೊಯಮತ್ತೂರಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹಿಂದೆಲ್ಲ ಹಿಂದೂ ವಿರೋಧಿಯಂತೆ ವರ್ತಿಸುತ್ತಿದ್ದ ಡಿಕೆ ಶಿವಕುಮಾರ ಇದೀಗ ಹಿಂದೂತ್ವದ ಜಪ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿರೋದು ತಾಲಿಬಾನ್ ಸರ್ಕಾರ; ಬಿವೈ ವಿಜಯೇಂದ್ರ ವಾಗ್ದಾಳಿ, ಡಿಕೆ ಶಿವಕುಮಾರ ಬಗ್ಗೆ ಹೇಳಿದ್ದೇನು?

ಮೊಘಲರಿಂದ ಭಾರತೀಯರ ಸಂಸ್ಕೃತಿ ಹಾಳು:

ಮೊಘಲರಿಂದಲೇ ಭಾರತೀಯ ಸಂಸ್ಕೃತಿ ಹಾಳಾಗಿದ್ದು. ಭಾರತೀಯ ಸಂಸ್ಕೃತಿ ನಾಶ ಮಾಡಿದ ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಿದ್ರು. ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ಸಿಗರು ಯಾಕೆ ಹೋರಾಟ ಮಾಡಿದ್ರು? ಹಳೇ ಕಾಂಗ್ರೆಸ್ಸಿಗರ ರಕ್ತ ಈಗಲೂ ಕೆಲವೊಬ್ಬರ ಬಳಿ ಇದೆ. ಅದರಲ್ಲಿ ಡಿಕೆ ಶಿವಕುಮಾರ್ ಒಬ್ಬರು. ಇದರಿಂದ ಡಿಕೆ ಶಿವಕುಮಾರ ಹೊರಬಂದಿದ್ದಾರೆ. ಈಗ ಅವರು ಅನುಸರಿಸುತ್ತಿರುವ ಮಾರ್ಗವೇ ಹಿಂದುತ್ವ ಎಂದರು. 

ಈಗಿನ ಕಾಂಗ್ರೆಸ್ ನವರ ಬಗ್ಗೆ ನಾನು ಮಾತನಾಡೊಲ್ಲ. ಓಟ್ ಬ್ಯಾಂಕ್ ಗಾಗಿ ಮಾತಾಡ್ತಾರೆ. ಸ್ವಂತ ಧರ್ಮವನ್ನ ಅವಮಾನ ಮಾಡ್ತಾರೆ. ಡಿಕೆ ಶಿವಕುಮಾರ ಪ್ರಯಾಗರಾಜ್‌ಗೆ ಹೋಗಿದ್ರು. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ರು. ಅದನ್ನು ಕಾಂಗ್ರೆಸ್ ನಾಯಕರೇ ಟೀಕಿಸಿದಾಗ, ಆಕ್ಷೇಪ ವ್ಯಕ್ತಪಡಿಸಿದಾಗ ಡಿಕೆ ಶಿವಕುಮಾರ ತಿರುಗೇಟು ಕೊಟ್ಟಿದ್ದಾರೆ, 'ಹಿಂದೂವಾಗಿ ಹುಟ್ಟಿದ್ದೇನೆ ಹಿಂದೂ ಆಗಿ ಸಾಯ್ತೀನೆ' ಅಂದಿದ್ದಾರೆ. ನಾವು ಇದನ್ನೇ ಹಿಂದೂತ್ವ ಅನ್ನೋದು ಎಂದರು.

ಇದನ್ನೂ ಓದಿ: ಕರ್ನಾಟಕದ ಏಕನಾಥ್ ಶಿಂಧೆ ಆಗಲಿದ್ದಾರಾ ಡಿಕೆ ಶಿವಕುಮಾರ? ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದೇನು?

ಹಳೇ ಕಾಂಗ್ರೆಸಗಿರ ಮತ್ತು ಮಹಾತ್ಮ ಗಾಂಧಿ ಆತ್ಮಕ್ಕೆ ಡಿಕೆ ಶಿವಕುಮಾರ್ ಮಾದರಿಯಾಗಿದ್ದಾರೆ. ಹಿಂದುತ್ವ ಬಿಜೆಪಿ ಸ್ವತ್ತಲ್ಲಾ, ಹಿಂದುತ್ವ ಬಿಜೆಪಿ ಆಸ್ತಿ ಹೇಗಾಗುತ್ತೆ. ಮಹಾತ್ಮ ಗಾಂಧಿ ಸಹ ಹೇ ರಾಮ್ ಅಂತ ಪ್ರಾಣ ಬಿಟ್ಟಿದ್ದಾರೆ. ಗಾಂಧಿ ಸಮಾಧಿ ಮೇಲೆ ಹೇ ರಾಮ್ ಅಂತಲೇ ಬರೆದಿದೆ, ಹೊರತು ಅಲ್ಲಾ ಹೋ ಅಕ್ಬರ ಅಂತ ಇಲ್ಲ. ಆದರೆ ಈಗಿರುವ ಹೊಸ ಕಾಂಗ್ರೆಸ್ ನಲ್ಲಿ ಇದು ಇಲ್ಲ. ಕೆಲವರು ಬೇರೆಯವರನ್ನು ಮೆಚ್ಚಿಸಲು ಏನೋನೋ ಮಾತನಾಡುತ್ತಾರೆ. ಡಿಕೆ ಶಿವಕುಮಾರ ಹಿಂದುತ್ವ ಪ್ರತಿಪಾದನೆ ನಾಟಕನೋ ಏನೋ ಗೊತ್ತಿಲ್ಲ ಅದನ್ನ ದೇವರು ನೋಡಿಕೊಳ್ತಾನೆ. ಆದರೆ ತಾನು ಹಿಂದೂ, ಹಿಂದೂ ಆಗಿಯೇ ಸಾಯ್ತೇನೆ ಎಂದಿದ್ದಾರಲ್ಲ ಅದಷ್ಟೇ ಮುಖ್ಯ. ಯಾವ ದೇವರಿಗಾದ್ರೂ ಪೂಜೆ ಮಾಡು, ಒಂದೇ ದೇವರಿಗೆ ಹೋಗುತ್ತೆ. ಹಿಂದುತ್ವ ವಿರುದ್ಧ ಇರುವ ವ್ಯಕ್ತಿ, ಪಕ್ಷಗಳು ದೇಶದಲ್ಲಿ ನಿರ್ನಾಮ ಆಗ್ತಾ ಇದೆ ಎಂದರು.