ಬೆಳಗಾವಿಯಲ್ಲಿ ಕಂಟೋನ್ಮೆಂಟ್ ಬೋರ್ಡ್ ಸಭೆಯಲ್ಲಿ ಮೂರು ಕಾಲನಿಗಳ ಸಮಸ್ಯೆ ಬಗ್ಗೆ ಚರ್ಚಿಸಲಾಗಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಕಿತ್ತೂರು ಧಾರವಾಡ ರೈಲ್ವೆ ಕಾಮಗಾರಿ ನೆನೆಗುದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಬೆಳಗಾವಿ (ಫೆ.28): ಕಂಟೋನ್ಮೆಂಟ್ ಬೋರ್ಡ್ ಮೀಟಿಂಗ್ ಇತ್ತು. ಇವತ್ತು ಆ ಸಭೆಯಲ್ಲಿ ಮೂರು ಕಾಲನಿಗಳ ಸಮಸ್ಯೆಯ ಕುರಿತು ಚರ್ಚೆ ಮಾಡಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದರು.
ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಸಂಸದರು, ಬೆಳಗಾವಿಯ ನೂರು ಕಾಲನಿಗಳಲ್ಲಿ ಆರ್ಮಿ ಲ್ಯಾಂಡ್ ಇದೆ. ಅಲ್ಲಿ ರಸ್ತೆ ಮಾರ್ಗಗಳನ್ನು ಮಾಡುತ್ತಿದ್ದರು. ಅದನ್ನು ಡಿಫೆನ್ಸ್ ನವರು ಬಂದ್ ಮಾಡಿದ್ದು ಕಂಡು ಬಂತು. ಡಿಫೆನ್ಸ್ ಕಮೀಟಿಯ ಚೇರ್ಮನ್ ಗಮನಕ್ಕೆ ತಂದಿದ್ದೇನೆ ಎಂದರು.
ಇನ್ ಕಮ್ ಟ್ಯಾಕ್ಸ್ ಬಿಲ್ ಅನ್ನ ಹಣಕಾಸು ಇಲಾಖೆ ಮಂಡಣೆ ಮಾಡಿದೆ. ಅಮೆಂಡ್ ಮೆಂಟ್ ಬಿಲ್ 2025 ಬಿಡುಗಡೆ ಮಂಡಣೆ ಮಾಡಿದ್ದಾರೆ. ರಾಷ್ಟ್ರದಲ್ಲಿ 62 ಕಡೆ ಕಂಟೋನ್ಮೆಂಟ್ ಬೋರ್ಡ್ ಇದೆ. 600 ಎಕರೆ ಭೂಮಿಯನ್ನು ಕಂಟೋನ್ಮೆಂಟ್ ನವರು ಬಿಡ್ತಿಲ್ಲ. ಕಾರ್ಪೋರೇಷನ್ ನವರು ಎನು ಮಾಡ್ತಾರೋ ಬಿಡ್ತಾರೋ ಅದನ್ನ ಆ ಮೇಲೆ ನೋಡೊಣ. ಪಾಲಿಸಿ ಡಿಷಿಜನ್ ಆಗಿದೆ ಅದನ್ನು ಇಂದಲ್ಲ ನಾಳೆ ನೀವು ಕೊಡಲೇಬೇಕು ಎಂದರು.
ಇದನ್ನೂ ಓದಿ: ಡಿಕೆ ಶಿವಕುಮಾರ ನಿಮ್ಮ ತತ್ವದ ವಿರುದ್ಧ ಇದ್ರೆ ಸಸ್ಪೆಂಡ್ ಮಾಡಿ ನೋಡೋಣ: ಕಾಂಗ್ರೆಸ್ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ!
ಕಿತ್ತೂರು ಧಾರವಾಡ ರೈಲ್ವೆ ಕಾಮಗಾರಿ:
ಕಿತ್ತೂರು ಧಾರವಾಡ ರೈಲ್ವೆ ಕಾಮಗಾರಿ ನೆನೆಗುದಿ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದರು, ಈಗಾಗಲೇ ಬೈಪಾಸ್ ಕಾಮಗಾರಿ ಪ್ರಾರಂಭವಾಗಿದೆ. ಅದಕ್ಕೆ ಭೂಸ್ವಾಧೀನ ಸಮಸ್ಯೆ ಇದ್ದಿದ್ದವೆಲ್ಲ ಸಮಸ್ಯೆ ಬಗೆಹರಿದಿವೆ. ಇನ್ನೊಂದು ಬಾರಿ ನಾವು ಮೀಟಿಂಗ್ ಮಾಡುತ್ತೇವೆ. ಇನ್ನು ಮೂರು ತಿಂಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಯುತ್ತೆ. ಏರ್ಪೋರ್ಟ್ ಡೆವಲೆಪ್ ಆಗಬೇಕು ಅಂದ್ರೆ ಫೋರ್ ಲೈನ್ ಆಗಬೇಕು. ಬೆಳಗಾವಿಯಿಂದ ಸಾಂಬ್ರಾ ವರೆಗೆ ಫೋರ್ ಲೈನ್ ಆಗಬೇಕು ಈ ಬಜೆಟ್ ನಲ್ಲಿ ಅದನ್ನ ಘೋಷಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದೇನೆ ಎಂದರು.
ವಂದೇ ಭಾರತ್ ಆಲ್ ಮೋಸ್ಟ್ ಫೈನಲ್:
ಈಗಾಗಲೇ ವಂದೇ ಭಾರತ್ ಬಹುತೇಕ ಫೈನಲ್ ಆಗಿದೆ. ಟೈಮಿಂಗ್ ಅಡ್ಜೆಸ್ಟ್ ಮೆಂಟ್ ಮಾಡಬೇಕು ಈಗಾಗಲೇ ಕೇಂದ್ರನಾಯಕರ ಜೊತೆಗೆ ಮಾತಾಡಿದ್ದೇನೆ. ಎಲ್ಲರೂ ಸಹ ಒಪ್ಪಿಕೊಂಡಿದ್ದಾರೆ ಎಂದರು. ಇದೇ ವೇಳೆ ಕೈಗಾರಿಕೆಗಳಿಗೆ ನೀರು ಸರಬರಾಜು ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಸರ್ಕಾರ ನಡೆಸೋದು ಜಗದೀಶ ಶೆಟ್ಟರ್ ಅಲ್ಲ. ಉಸ್ತುವಾರಿ ಸಚಿವರು ಹಾಗೂ ಸರ್ಕಾರ ಉತ್ತರ ಕೊಡಬೇಕು. ನಾನು ಎನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ ಎಂದರು.
ಮರಾಠಿಗರಿಂದ ಕನ್ನಡಿಗರಿಗೆ ಅನ್ಯಾಯ:
ಆಗಿರುವ ಘಟನೆಗಳನ್ನು ಒಂದಕ್ಕೊಂದು ಟ್ಯಾಕಲ್ ಮಾಡಬಾರದು. ಭಾಷಾ ವಿಚಾರವಾಗಿ ಪರಿವರ್ತನೆ ಆಗೋದನ್ನ ನಾನು ಒಪ್ಪೋದಿಲ್ಲ. ಮರಾಠಿಗರು ಕನ್ನಡಿಗರು ಅಣ್ಣ ತಮ್ಮಂದಿರ ಹಾಗೆ ಇದ್ದಾರೆ. ನಾವು ಅಭಿವೃದ್ದಿಯತ್ತ ಲಕ್ಷ್ಯ ನೀಡೋಣ ಎಂದರು. ಇದೇ ವೇಳೆ ಗಡಿ ಉಸ್ತುವಾರಿ ಸಚಿವರ ನೇಮಕ ಅದನ್ನು ರಾಜ್ಯ ಸರ್ಕಾರ ಮಾಡಬೇಕು ಎಂದರು.
ಇದನ್ನೂ ಓದಿ: ವಿರೋಧಿಗಳಿಗೆ ದೊಡ್ಡದಾಗಿ ಮೆಸೇಜ್ ಕೊಟ್ಟ ಡಿ.ಕೆ.ಶಿವಕುಮಾರ್; ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ!
ಅಮಿತ್ ಶಾ ಜೊತೆ ಡಿಕೆಶಿ ವೇದಿಕೆ:
ಡಿಕೆಶಿ ಮತ್ತು ಅಮಿತ್ ಶಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು, ಅದಕ್ಕೆ ಡಿಕೆ ಶಿವಕುಮಾರ ಅವರೇ ಉತ್ತರ ನೀಡಬೇಕು. ಅವರು ಮಹಾರಾಷ್ಟ್ರದ ಏಕನಾಥ ಶಿಂಧೆ ಆಗ್ತಾರೋ, ಅಜಿತ್ ಪವಾರ್ ಆಗ್ತಾರೋ ಅವರೇ ಹೇಳಬೇಕು. ಡಿಕೆಶಿ ಸಿದ್ದರಾಮಯ್ಯ ಮಧ್ಯೆ ವಾರ್ ಶುರುವಾಗಿದೆ. ಅವರು ಕಾಂಗ್ರೆಸ್‌ನಲ್ಲಿ ಒಂಟಿಯಾಗಿದ್ದಾರೆ. ಅವರಲ್ಲಿ ಪವರ್ ಹಂಚಿಕೆ ವಿಚಾರ ವಿವಾದ ಆಗಿದೆ. ಅದನ್ನ ನೇರವಾಗಿ ಡಿಕೆ ಶಿವಕುಮಾರಗೆ ಹೇಳಲು ಆಗ್ತಿಲ್ಲ. ಇವತ್ತಿಲ್ಲ ನಾಳೆ ಇದರಿಂದ ಸರ್ಕಾರ ಪತನವಾಗುತ್ತೆ ಎಂದು ಭವಿಷ್ಯ ನುಡಿದರು.
