06:11 AM (IST) Oct 05

Karnataka News Live 5 October 2026 Bengaluru - ಶೇ.43ರಷ್ಟು ಮುಂಗಾರು ಮಳೆ ಕೊರತೆ, ಬತ್ತಿದ ಕೆರೆಗಳು - ಕಾದಿದೆಯಾ ಜಲಕಂಟಕ?

ಬೆಂಗಳೂರಿನಲ್ಲಿ ಈ ಬಾರಿ ಶೇ.43ರಷ್ಟು ಮುಂಗಾರು ಮಳೆ ಕೊರತೆಯಾಗಿದ್ದು, ಕೆರೆಗಳಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕುಸಿದಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿದು ಮುಂಬರುವ ಬೇಸಿಗೆಯಲ್ಲಿ ನಗರದಲ್ಲಿ ಭಾರಿ ನೀರಿನ ಅಭಾವ ಮತ್ತು ಟ್ಯಾಂಕರ್ ನೀರಿನ ದರ ಹೆಚ್ಚಾಗುವ ಆತಂಕ ಎದುರಾಗಿದೆ.
Read Full Story
05:59 AM (IST) Oct 05

Karnataka News Live 5 October 2026 ಬೆಂಗಳೂರಿನ ಕೆರೆ ಏರಿ ಕಬಳಿಕೆ - 9 ವರ್ಷಗಳ ಹಿಂದಿನ ಪ್ರಕರಣದ ತನಿಖೆಗೆ ಹೈಕೋರ್ಟ್ ಆದೇಶ

ಬೆಂಗಳೂರಿನ ಕೆರೆ ಏರಿ ಪ್ರದೇಶ ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿದ 9 ವರ್ಷಗಳ ಹಿಂದಿನ ಪ್ರಕರಣದ ತನಿಖೆ ಮುಂದುವರಿಸಲು ಹೈಕೋರ್ಟ್ ಆದೇಶಿಸಿದೆ. ಒಂದೇ ಪ್ರಕರಣದಲ್ಲಿ ಯಲಹಂಕ ಠಾಣೆ ಮತ್ತು ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಕೋರಿದ್ದ ಕಂದಾಯ ಅಧಿಕಾರಿಗಳ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

Read Full Story
05:50 AM (IST) Oct 05

Karnataka News Live 5 October 2026 ನಕಲಿ ಔಷಧ ದಂಧೆ - ಟರ್ಕಿಯಿಂದ ಅಸಲಿ ಲೇಬಲ್ ತಂದು ಅಂಟಿಸಿ ಕೋಟ್ಯಂತರ ರೂಪಾಯಿ ವ್ಯವಹಾರ

ಬಿಡದಿ ಸೇರಿ ಹಲವೆಡೆ ನಡೆದ ದಾಳಿಯಲ್ಲಿ ನಕಲಿ ಫೈಜರ್ ಔಷಧಿ ಜಾಲ ಪತ್ತೆಯಾಗಿದೆ. ಪ್ರಕರಣದ ಕಿಂಗ್‌ಪಿನ್ ಪ್ರಶಾಂತ್ ಟರ್ಕಿಯಿಂದ ಅಸಲಿ ಲೇಬಲ್ ತಂದು ನಕಲಿ ಔಷಧಿಗೆ ಅಂಟಿಸಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದನು. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.
Read Full Story
05:45 AM (IST) Oct 05

Karnataka News Live 5 October 2026 ಬೆಂಗಳೂರಿನ ನೀರಿನ ಭವಿಷ್ಯ - ವಿಶ್ವಬ್ಯಾಂಕ್ ನೆರವಿನಿಂದ ಜಲಮಂಡಳಿಯ ಹೊಸ ಹೆಜ್ಜೆ ಏನು?

ವಿಶ್ವಬ್ಯಾಂಕ್ ನೆರವಿನಿಂದ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ 148 ಎಂಎಲ್‌ಡಿ ಸಾಮರ್ಥ್ಯದ 9 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಕಾಮಗಾರಿಯನ್ನು ಚುರುಕುಗೊಳಿಸಲು ಜಲಮಂಡಳಿ ಅಧ್ಯಕ್ಷೆ ಸೂಚಿಸಿದ್ದಾರೆ. ಅಲ್ಲದೆ, ಜೈಕಾ ನೆರವಿನ ಕಾವೇರಿ 6ನೇ ಹಂತದ ಕುಡಿಯುವ ನೀರಿನ ಯೋಜನೆಗೂ ಅಂತಿಮ ರೂಪ ನೀಡಲಾಗಿದೆ.
Read Full Story