07:40 AM (IST) Sep 30

Karnataka News Live 30 September 2026 ಕೊಪ್ಪಳದ ಆಟೋ ಚಾಲಕ ಯಲ್ಲಪ್ಪವರ ಇಬ್ಬರು ಮಕ್ಕಳಿಗೂ ಸಿಕ್ತು ಎಂಬಿಬಿಎಸ್ ಸೀಟ್; ದುಬಾರಿ ಶುಲ್ಕದ ಹೊರೆ

ಆಟೋ ಚಾಲಕ ಯಲ್ಲಪ್ಪ ಅವರ ಇಬ್ಬರು ಮಕ್ಕಳು ಎಂಬಿಬಿಎಸ್ ಸೀಟು ಪಡೆದು ಅಪರೂಪದ ಸಾಧನೆ ಮಾಡಿದ್ದಾರೆ. ಮಕ್ಕಳ ಈ ಸಾಧನೆಯಿಂದ ತಂದೆ-ತಾಯಿಗೆ ಅತೀವ ಸಂತೋಷವಾಗಿದ್ದರೂ, ವೈದ್ಯಕೀಯ ಶಿಕ್ಷಣದ ದುಬಾರಿ ಶುಲ್ಕದ ಹೊರೆ ಅವರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿದೆ.

Read Full Story
07:32 AM (IST) Sep 30

Karnataka News Live 30 September 2026 NCERT 9ನೇ ತರಗತಿ ಪಠ್ಯದಲ್ಲಿ ಸೇರಿದ ಕರಾವಳಿಯ ಆ ವೀರರಾಣಿ ಯಾರು?

Rani Abbakka history in NCERT ಹೊರತಂದಿರುವ 9ನೇ ತರಗತಿಯ ನೂತನ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕಳ ವೀರಗಾಥೆಯನ್ನು ಸೇರ್ಪಡೆಗೊಳಿಸಲಾಗಿದೆ. ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದ ಅಬ್ಬಕ್ಕಳ ಸಾಹಸ ಹಾಗೂ ವಿಜಯನಗರದ ಕುಮಾರ ಕಂಪಣನ ಐತಿಹ್ಯವನ್ನು ಇದರಲ್ಲಿ ವಿವರಿಸಲಾಗಿದೆ.

Read Full Story
07:31 AM (IST) Sep 30

Karnataka News Live 30 September 2026 Chamarajnagar - ರಾತ್ರಿ ಸುರಿದ ಧಾರಾಕಾರ ಮಳೆಗೆ ಕೊಚ್ಚಿ ಹೋಯ್ತು ಸೇತುವೆ, ದೇವಾಲಯ

ಚಾಮರಾಜನಗರ ಜಿಲ್ಲೆಯ ಹನೂರು ಮತ್ತು ಬೇಗೂರು ಭಾಗದಲ್ಲಿ ಸುರಿದ ಧಾರಾಕಾರ ಮಳೆಗೆ ಸೇತುವೆ ಹಾಗೂ ದೇವಾಲಯ ಕೊಚ್ಚಿಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಳೆಯಿಂದಾಗಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದರೂ, ದೀರ್ಘಕಾಲದ ಬರಗಾಲದ ನಂತರ ಬಂದ ಮಳೆಯು ರೈತರಿಗೆ ಹುರುಳಿ ಬಿತ್ತನೆಗೆ ಆಶಾಭಾವನೆ ಮೂಡಿಸಿದೆ.
Read Full Story
07:18 AM (IST) Sep 30

Karnataka News Live 30 September 2026 Gadag - ಅಂತೂ ಬಂತು ಐತಿಹಾಸಿಕ ಲಕ್ಕುಂಡಿ ಕೆರೆಗಳಿಗೆ ಬಂತು ತುಂಗಾಭದ್ರಾ ಕಾಲುವೆ ನೀರು

ರೈತರ ನಿರಂತರ ಹೋರಾಟದ ಫಲವಾಗಿ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದ ಕೆರೆಗಳಿಗೆ ತುಂಗಾಭದ್ರಾ ನೀರು ಹರಿಸಲಾಗುತ್ತಿದೆ. ಇದರಿಂದ ಹಾಲಗೊಂಡ ಬಸವೇಶ್ವರ ಹಾಗೂ ದಂಡಿನ ದುರ್ಗಾದೇವಿ ಕೆರೆಗಳು ತುಂಬುತ್ತಿದ್ದು, ಅಂತರ್ಜಲ ಮಟ್ಟ ವೃದ್ಧಿಸುವ ಜೊತೆಗೆ ಜಾನುವಾರುಗಳಿಗೆ ಅನುಕೂಲವಾಗಲಿದೆ.
Read Full Story
07:04 AM (IST) Sep 30

Karnataka News Live 30 September 2026 Kolar - ಅನಧಿಕೃತ ಬೈಕ್ ಟ್ಯಾಕ್ಸಿಗಳಿಗೆ ಬ್ರೇಕ್ ಹಾಕಲು ಆಟೋ ಚಾಲಕರಿಂದ ಮನವಿ ಸಲ್ಲಿಕೆ

ಬಂಗಾರಪೇಟೆಯಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ಹಾವಳಿಯಿಂದ ಆಟೋ ಚಾಲಕರ ಜೀವನಕ್ಕೆ ತೊಂದರೆಯಾಗಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ಈ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಟೋ ಚಾಲಕರ ಸಂಘವು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದೆ.
Read Full Story
07:02 AM (IST) Sep 30

Karnataka News Live 30 September 2026 ಬೆಂಗಳೂರು ಮಳೆ ಅವಾಂತರ - ಬೆಳ್ಳಂಬೆಳಗ್ಗೆ ಖಾಸಗಿ ಬಸ್‌ಗೆ ಡಿಕ್ಕಿಯಾದ ಇವಿ ಬಸ್, ತಪ್ಪಿದ ಅನಾಹುತ

ಬೆಳಗಿನ ಜಾವ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರಿನ ಜನಜೀವನ, ಕೆಆರ್ ಮಾರ್ಕೆಟ್ ವ್ಯಾಪಾರ ಅಸ್ತವ್ಯಸ್ತಗೊಂಡಿತು. ಇನ್ನು ಬೆಳಗಿನ ಜಾವದಲ್ಲಿ ಮಳೆಯಿಂದ ಮುಸುಕಿನ ವಾತಾವರಣದಲ್ಲಿ ಖಾಸಗಿ ಬಸ್‌ಗೆ ಬಿಎಂಟಿಸಿ ಇವಿ ಬಸ್ ಟಚ್ ಆದ ಘಟನೆಯೂ ನಡೆದಿದೆ.

Read Full Story
06:47 AM (IST) Sep 30

Karnataka News Live 30 September 2026 Bengaluru - 100 ಕೋಟಿ ರೂ. ಮೌಲ್ಯದ 3 ಎಕರೆ 13 ಗುಂಟೆ ಸರ್ಕಾರಿ ಜಮೀನು ವಶಕ್ಕೆ ಪಡೆದ ಜಿಬಿಎ

ಬೆಂಗಳೂರಿನ ಬನಶಂಕರಿ ದೇವಾಲಯದ ಬಳಿ ಇದ್ದ 100 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿಯನ್ನು ಜಿಬಿಎ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ಜಾಗವನ್ನು ಜಿಬಿಎ ಕೇಂದ್ರ ಕಚೇರಿ ನಿರ್ಮಾಣಕ್ಕಾಗಿ ಸರ್ಕಾರ ಮಂಜೂರು ಮಾಡಿದ್ದು, ಅನಧಿಕೃತ ಶೆಡ್‌ಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿದೆ.
Read Full Story
06:35 AM (IST) Sep 30

Karnataka News Live 30 September 2026 ಸೈಕಲ್ ಹೊತ್ತು ಮಧುಗಿರಿಯ ಏಕಶಿಲಾ ಬೆಟ್ಟ ಏರಿದ ಆಂಧ್ರ ಎಂಜಿನಿಯರ್‌! ಯಾರು ಈ ಸಾಹಸಿ?

ಆಂಧ್ರಪ್ರದೇಶದ ಎಂಜಿನಿಯರ್ ಸಾಯಿ ಕುಮಾರ್ ಅವರು ವಿಶ್ವ ಪ್ರವಾಸೋದ್ಯಮ ದಿನದಂದು ಸೈಕಲ್ ಹೊತ್ತುಕೊಂಡು ತುಮಕೂರಿನ ಮಧುಗಿರಿ ಏಕಶಿಲಾ ಬೆಟ್ಟವನ್ನು ಏರುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಗ್ರಾಮೀಣ ಜೀವನ ಮತ್ತು ಪರಂಪರೆಯನ್ನು ಅಧ್ಯಯನ ಮಾಡಲು ಇವರು ಸೈಕ್ಲಿಂಗ್ ಚಾರಣವನ್ನು ಹವ್ಯಾಸವಾಗಿಸಿಕೊಂಡಿದ್ದಾರೆ.

Read Full Story