ಐತಿಹಾಸಿಕ ಬಸವನಗುಡಿ ಕಡಲೇಕಾಯಿ ಪರೀಷೆ ದಿನಾಂಕ ನಿಗದಿ, ನಾಳೆ ಮೊದಲ ಸಭೆ, ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ನಡೆಯಲಿರುವ ಈ ಪರಿಷೇ ಅತ್ಯಂತ ಜನಪ್ರಿಯವಾಗಿದೆ. ರಾಜ್ಯದ ಮೂಲೆ ಮೂಲೆಯಿಂದ ಜನರು ಆಗಮಿಸುತ್ತಾರೆ.
Karnataka News Live: ಐತಿಹಾಸಿಕ ಬಸವನಗುಡಿ ಕಡಲೇಕಾಯಿ ಪರೀಷೆ ದಿನಾಂಕ ನಿಗದಿ, ನಾಳೆ ಮೊದಲ ಸಭೆ

ಕಲಬುರಗಿ: ಜಿಲ್ಲೆಯ ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನಕ್ಕೆ ಅನುಮತಿ ಕೋರಿ ಆರ್ಎಸ್ಎಸ್ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಕಲಬುರಗಿ ಹೈಕೋರ್ಟ್ ಪೀಠದ ಸೂಚನೆಯಂತೆ ಆರ್ಎಸ್ಎಸ್ ಜಿಲ್ಲಾ ಚಾಲಕ ಅಶೋಕ ಪಾಟೀಲ್, ಸಂಘದ ಮುಖಂಡರು, ಬೌದ್ಧಿಕ ಪ್ರಮುಖ ಕೃಷ್ಣಾ ಜೋಕಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರನ್ನು ಖುದ್ದು ಭೇಟಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನಕ್ಕೆ ಆರ್ಎಸ್ಎಸ್ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ಭೀಮ್ ಆರ್ಮಿ ಸಂಘಟನೆಯವರು ನ.2ರಂದೇ ಚಿತ್ತಾಪುರದಲ್ಲಿ ತಮಗೂ ಪಥಸಂಚಲನಕ್ಕೆ ಅನುಮತಿ ಕೊಡಿ ಎಂದು ಕೋರಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಭೀಮ್ ಆರ್ಮಿ ಭಾರತ ಐಕ್ರಾ ಮಿಶನ್ ಯುವ ಸಂಘಟನೆ ಪ್ರಮುಖರು ಮಂಗಳವಾರ ಡಿಸಿ ಕಚೇರಿಗೆ ತೆರಳಿ ನವೆಂಬರ್ 2ರಂದ ನಮಗೂ ಅನುಮತಿ ನೀಡಿ ಎಂದು ಅರ್ಜಿ ಸಲ್ಲಿಸಿದ್ದಾರೆ.
Karnataka News Live 22 October 2025 ಐತಿಹಾಸಿಕ ಬಸವನಗುಡಿ ಕಡಲೇಕಾಯಿ ಪರೀಷೆ ದಿನಾಂಕ ನಿಗದಿ, ನಾಳೆ ಮೊದಲ ಸಭೆ
Karnataka News Live 22 October 2025 ಪಾಂಡವರ ಪರ ಕರ್ಣ, ಮತ್ತೆ ಅದೇ ಸೆಂಟಿಮೆಂಟ್‌ನಲ್ಲಿ ಪ್ರಭಾಸ್.. 'ಫೌಜಿ' ಕಥೆ ಡಿಕೋಡ್ ಮಾಡಿದ ನೆಟ್ಟಿಗರು!
ಹನು ರಾಘವಪುಡಿ ನಿರ್ದೇಶನದಲ್ಲಿ ಪ್ರಭಾಸ್ ನಟಿಸುತ್ತಿರುವ ಹೊಸ ಸಿನಿಮಾದ ಪ್ರೀ ಲುಕ್ ಪೋಸ್ಟರ್‌ನಿಂದ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಈ ಚಿತ್ರದ ಕಥೆ ಏನು? ಇದರಲ್ಲಿ ಕರ್ಣನ ಅಂಶ ಹೇಗೆ ಇರಲಿದೆ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.
Karnataka News Live 22 October 2025 ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದು ಹೇಳಿಕೆ ಕೈಲಾಗದವನು ಮೈ ಪರಚಿಕೊಂಡಂತಿದೆ - ಸಂಸದ ಕ್ಯಾ.ಚೌಟ
ಸಿಎಂ ಸಿದ್ದರಾಮಯ್ಯನವರು ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಜನಪ್ರಿಯತೆ ಅರಗಿಸಿಕೊಳ್ಳಲು ಸಾಧ್ಯವಾಗದೆ ಸುಳ್ಳು ಹೇಳಿಕೆ ನೀಡುವ ಮೂಲಕ ಹತಾಶೆ ವ್ಯಕ್ತಪಡಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
Karnataka News Live 22 October 2025 ಅನ್ಕೊಂಡಿದ್ದು ಒಂದು, ಆಗಿದ್ದು ಇನ್ನೊಂದು - ಪ್ಲಾನ್ ಫ್ಲಾಪ್ ಆಗಿದ್ದಕ್ಕೆ ರಮೇಶ್‌ಗೆ ಆಯ್ತು ಭ್ರಮನಿರಸನ
ಕರ್ಣನ ಸಂತೋಷವನ್ನು ಕಸಿದುಕೊಳ್ಳಲು ರಮೇಶ್ ಮಾಡಿದ ಪ್ಲಾನ್ ವಿಫಲವಾಗಿದೆ. ಪತ್ನಿ ನಿಧಿ ಮತ್ತು ಅನಿರೀಕ್ಷಿತವಾಗಿ ತಾಳಿ ಕಟ್ಟಿದ ನಿತ್ಯಾ ಇಬ್ಬರೂ ಒಂದೇ ಸೂರಿನಡಿ ಬಂದರೂ, ಕರ್ಣನ ಮುಖದಲ್ಲಿನ ನಗು ಮಾಸಿಲ್ಲ.
Karnataka News Live 22 October 2025 ಕಾಂಗ್ರೆಸ್ಸಿಗೆ ಕರ್ನಾಟಕ ಎಟಿಎಂ - ರಾಜ್ಯ ಸರ್ಕಾರದ ವಿರುದ್ಧ ಸಂಸದ ಜಗದೀಶ್ ಶೆಟ್ಟರ್ ಕಿಡಿ
ಸಿದ್ದರಾಮಯ್ಯ ಆಡಳಿತದಲ್ಲಿ ಹಿಡಿತ ಕಳೆದುಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ವನ್ನು ಕಾಂಗ್ರೆಸ್ ಎದುರು ಹಾಕಿಕೊಂಡಿದೆ. ಇದು ಕಾಂಗ್ರೆಸ್ಸಿನ ಅಂತ್ಯದ ಆರಂಭ ಎಂದು ಸಂಸದ ಜಗದೀಶ್ ಶೆಟ್ಟರ್ ಕಿಡಿಕಾರಿದರು.
Karnataka News Live 22 October 2025 Karna Serial - ನಿತ್ಯಾ, ನಿಧಿ ಎಂಟ್ರಿಯಿಂದ ನಯನತಾರಾಳ ಆತಂಕ, ಬಯಲಾಗುವುದೇ ಆ ಕರಾಳ ರಹಸ್ಯ?
ರಮೇಶ್‌ನ ಕುತಂತ್ರದಿಂದ ನಿಧಿ ಮತ್ತು ನಿತ್ಯಾ ಕರ್ಣನ ಮನೆ ಸೇರಿದ್ದು, ಇದರಿಂದ ತನ್ನೆಲ್ಲಾ ರಹಸ್ಯಗಳು ಬಯಲಾಗಬಹುದೆಂಬ ಆತಂಕದಲ್ಲಿ ನಯನತಾರಾ ಇದ್ದಾಳೆ. ಗಂಡನ ಸಂಚು ತಿಳಿದರೂ ಕರ್ಣನ ತಾಯಿ ಅಸಹಾಯಕಳಾಗಿದ್ದು, ಕರ್ಣ, ನಿತ್ಯಾ, ನಿಧಿಯ ಮುಂದಿನ ಜೀವನದ ಬಗ್ಗೆ ಕುತೂಹಲವಿದೆ.
Karnataka News Live 22 October 2025 ಸಚಿವ ಪ್ರಿಯಾಂಕ್ ಖರ್ಗೆಗೆ ಜನತೆಯೇ ಪಾಠ ಕಲಿಸ್ತಾರೆ - ಮಾಜಿ ಸಚಿವ ಶ್ರೀರಾಮುಲು
ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳಲು ಆರೆಸ್ಸೆಸ್ಸಿನೊಂದಿಗೆ ಸಂಘರ್ಷ ಮಾಡುತ್ತಿರುವ ಪ್ರಿಯಾಂಕ್ ಖರ್ಗೆಗೆ ಮುಂದಿನ ಚುನಾವಣೆಯಲ್ಲಿ ಕಲುಬುರಗಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
Karnataka News Live 22 October 2025 ಮಠ, ಮಂದಿರಗಳೇ ಟಾರ್ಗೆಟ್, ಹಾವೇರಿ ರಾಘವೇಂದ್ರ ಸ್ವಾಮಿ ಮಠದಲ್ಲಿ 10 ಲಕ್ಷ ರೂ ಆಭರಣ ಕಳವು
ಮಠ, ಮಂದಿರಗಳೇ ಟಾರ್ಗೆಟ್, ಹಾವೇರಿ ರಾಘವೇಂದ್ರ ಸ್ವಾಮಿ ಮಠದಲ್ಲಿ 10 ಲಕ್ಷ ರೂ ಆಭರಣ ಕಳವು, ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಹಲವು ಚಿನ್ನದ ಆಭರಣಗಳು, ಪೂಜಾ ಸಾಮಾಗ್ರಿಗಳನ್ನು ಕಳವು ಮಾಡಲಾಗಿದೆ.
Karnataka News Live 22 October 2025 ಗಾಯವಾದ್ರೂ ಲೆಕ್ಕಿಸದೆ ನಟನೆ.. 'ಥಾಮಾ' ಚಿತ್ರಕ್ಕಾಗಿ ರಶ್ಮಿಕಾ ಪಟ್ಟ ಕಷ್ಟ ನೋಡಿ - ಇಲ್ಲಿದೆ ವೈರಲ್ ಫೋಟೋಸ್
ಇತ್ತೀಚೆಗೆ ಬಿಡುಗಡೆಯಾದ 'ಥಾಮಾ' ಚಿತ್ರದಲ್ಲಿನ ನಟನೆಗೆ ರಶ್ಮಿಕಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಶೂಟಿಂಗ್ ವೇಳೆ ಪಟ್ಟ ಕಷ್ಟವನ್ನು ವಿವರಿಸಿ ರಶ್ಮಿಕಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Karnataka News Live 22 October 2025 Bigg Boss, ನಾನು ಇಲ್ಲಿ ಸಿಂಗಲ್, ನನ್ನ ಎಕ್ಸ್ ಕಳಿಸಿಕೊಡಿ, ಪ್ಲೀಸ್ ಎಂದು ಗೋಗರೆದ ಮಹಿಳಾ ಸ್ಪರ್ಧಿ!
Bigg Boss Show: ಬಿಗ್ ಬಾಸ್ ಶೋನಲ್ಲಿ ಪ್ರೀತಿ ಹುಟ್ಟುವುದು, ದ್ವೇಷವೂ ಆಗುವುದು, ಸ್ನೇಹ ದ್ವೇಷವಾಗಿ ತಿರುಗಿದರೂ ಆಶ್ಚರ್ಯವಿಲ್ಲ. ಈಗ ಬೇರೆ ಸ್ಪರ್ಧಿಗಳು ಲವ್‌ನಲ್ಲಿರೋದು ನೋಡಿ ಸ್ಪರ್ಧಿಯೋರ್ವರು ನನಗೆ ಎಕ್ಸ್ ಬೇಕು ಎಂದು ಹೇಳಿದ್ದಾರೆ. ಹಾಗಾದರೆ ಅವರು ಯಾರು?
Karnataka News Live 22 October 2025 ಸರ್ಕಾರದ ನಿರ್ದೇಶನದಂತೆ ಮುಜರಾಯಿ ದೇಗುಲಗಳಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿದ ಗೋಪೂಜೆ!
ಸರ್ಕಾರದ ನಿರ್ದೇಶನದಂತೆ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ರಾಜ್ಯದ ಎಲ್ಲಾ ಅಧಿಸೂಚಿತ ದೇವಸ್ಥಾನಗಳಲ್ಲಿ ಇಂದು ದೀಪಾವಳಿ (ಬಲಿಪಾಡ್ಯಮಿ) ಹಬ್ಬದ ದಿನ ಶಾಸ್ತ್ರೋಕ್ತವಾಗಿ ಗೋಪೂಜೆ ಕಾರ್ಯಕ್ರಮ ನೆರವೇರಿದೆ.
Karnataka News Live 22 October 2025 ಸಿದ್ದರಾಮಯ್ಯ ಸ್ಥಾನ ತುಂಬಬಲ್ಲ ಶಕ್ತಿ ಈ ನಾಯಕನಿಗಿದೆ, ಪುತ್ರ ಯತೀಂದ್ರ ಮಾತಿನಿಂದ ಸಂಚಲನ
ಸಿದ್ದರಾಮಯ್ಯ ಸ್ಥಾನ ತುಂಬಬಲ್ಲ ಶಕ್ತಿ ಈ ನಾಯಕನಿಗಿದೆ, ಪುತ್ರ ಯತೀಂದ್ರ ಮಾತಿನಿಂದ ಸಂಚಲನ ಸೃಷ್ಟಿಯಾಗಿದೆ. 2028ರ ಚುನಾವಣೆಗೆ ಸಿದ್ದರಾಮಯ್ಯ ಸ್ಪರ್ಧಿಸಲ್ಲ, ಅವರ ಸ್ಥಾನ ತುಂಬಬಲ್ಲ ಶಕ್ತಿ ಯಾರಿಗಿದೆ ಅನ್ನೋದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
Karnataka News Live 22 October 2025 Sharade Serial - ಶಾರದೆ ಧಾರಾವಾಹಿಯಿಂದ ಏಕಕಾಲಕ್ಕೆ ಹೊರಬಿದ್ದ ನಟ, ನಟಿ! ಕಾರಣ ಏನು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಶಾರದೆ ಧಾರಾವಾಹಿಯಿಂದ ಏಕಕಾಲಕ್ಕೆ ನಟ, ನಟಿ ಇಬ್ಬೂ ಹೊರಗಡೆ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.
Karnataka News Live 22 October 2025 ಪ್ರಜಾಪ್ರಭುತ್ವ ಉಳಿಯಲು ಮತಕಳ್ಳತನ ನಿಲ್ಲಲಿ - ಸಚಿವ ಆರ್.ಬಿ.ತಿಮ್ಮಾಪೂರ
ಬಿಜೆಪಿಯವರು ಮತ ಕಳ್ಳತನ ಮಾಡಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ್ದಾರೆ. ಮತಕಳ್ಳತನ ನಿಲ್ಲಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಮತದಾರರ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದೆ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
Karnataka News Live 22 October 2025 Lakshmi Nivasa - ಬಳೆ ವಿಷ್ಯದಲ್ಲಿ ವೀಕ್ಷಕರ ಲೆಕ್ಕಾಚಾರ ಉಲ್ಟಾ! ಕೈಕೊಟ್ಟ ಶಾಂತಮ್ಮ- ಸತ್ಯ ಗೊತ್ತಾಗೋಯ್ತು - ಕಥೆ ಫಿನಿಷ್!
ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಜಾಹ್ನವಿಯ ಪ್ಲ್ಯಾನ್ ಫ್ಲಾಪ್ ಆಗುವ ಹಂತದಲ್ಲಿದೆ. ಜಾಹ್ನವಿಯ ಹಸಿರು ಬಳೆ ಸೈಕೋ ಜಯಂತ್ ಕೈಗೆ ಸಿಕ್ಕಿದ್ದು, ಆಕೆ ಬದುಕಿರುವುದನ್ನು ತಿಳಿದು ಆತ ಹೊಸ ಆಟ ಶುರುಮಾಡಿದ್ದಾನೆ. ಇದರಿಂದಾಗಿ ವಿಶ್ವ ಮತ್ತು ಜಾಹ್ನವಿಯ ಮುಂದಿನ ನಡೆ ನಿಗೂಢವಾಗಿದೆ.
Karnataka News Live 22 October 2025 ಇನ್ಮುಂದೆ ಮೆಗಾಸ್ಟಾರ್ ಚಿರಂಜೀವಿ ಹೆಸರು, ಫೋಟೋ ಬಳಸಿದರೆ ಜೈಲು ಗ್ಯಾರಂಟಿ.. ಕೋರ್ಟ್ ಆದೇಶದಲ್ಲೇನಿದೆ?
ಮೆಗಾಸ್ಟಾರ್ ಚಿರಂಜೀವಿ ಅವರ ಹೆಸರು ಮತ್ತು ಫೋಟೋಗಳನ್ನು ಇಲ್ಲಿಯವರೆಗೆ ಯಾರು ಬೇಕಾದರೂ ಬಳಸುತ್ತಿದ್ದರು. ಹಣ ಮಾಡಿಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ಹಾಗೆ ನಡೆಯುವುದಿಲ್ಲ. ಅವರ ಹೆಸರು, ಫೋಟೋಗಳನ್ನು ದುರುಪಯೋಗಪಡಿಸಿಕೊಂಡರೆ ಜೈಲು ಸೇರುವುದು ಖಚಿತ.
Karnataka News Live 22 October 2025 ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ಮಹಿಳೆ ಮೇಲೆ ಗ್ಯಾಂಗ್ ರೇP ಪ್ರಕರಣ, ಮೂವರು ಆರೋಪಿಗಳು ಅರೆಸ್ಟ್
ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ಮಹಿಳೆ ಮೇಲೆ ಗ್ಯಾಂಗ್ ರೇP ಪ್ರಕರಣ, ಮೂವರು ಆರೋಪಿಗಳು ಅರೆಸ್ಟ್ ಮಾಡಲಾಗಿದೆ. ಅರೆಸ್ಟ್ ಬಳಿಕ ಸ್ಫೋಟಕ ಮಾಹಿತಿ ಬಯಲಾಗಿದ್ದು, ಇನ್ನಿಬ್ಬರು ಆರೋಪಿಗಳಿಗೆ ಪೊಲೀಸರ ತನಿಖೆ ತೀವ್ರಗೊಂಡಿದೆ.
Karnataka News Live 22 October 2025 ಬಿಜೆಪಿ ಸಿಎಂಗಳಿದ್ದಾಗ ಎಲ್ಲೆಲ್ಲಿಗೆ ಎಷ್ಟು ಹಣ ಹೋಗಿದೆ? - ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳಿದ್ದಾಗಿನ ನಾಲ್ವರು ಮುಖ್ಯಮಂತ್ರಿಗಳು ಯಾವ್ಯಾವ ರಾಜ್ಯಕ್ಕೆ ಎಷ್ಟೆಷ್ಟು ಹಣ ಕಳುಹಿಸಿದ್ದರು ಎಂದು ಜನರಿಗೆ ಉತ್ತರ ಕೊಡಲಿ ಎಂದು ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.
Karnataka News Live 22 October 2025 ರೈಲು ಪ್ರಯಾಣಿಕರಿಗೆ ಕೊಡ್ತಿದ್ದ ಬಿಳಿ ಬ್ಲಾಂಕೆಟ್‌ಗಳಿಗೆ ವಿದಾಯ; ಹೊಸದಾಗಿ ಬಂತು ಪ್ರಿಂಟೆಡ್ ಹೊದಿಕೆ!
ಭಾರತೀಯ ರೈಲ್ವೆಯು ಎಸಿ ಕಂಪಾರ್ಟ್‌ಮೆಂಟ್‌ಗಳಲ್ಲಿ ಬಳಸಲಾಗುತ್ತಿದ್ದ ಕೊಳಕಾದ ಬಿಳಿ ಬ್ಲಾಂಕೆಟ್‌ಗಳನ್ನು ತೆಗೆದುಹಾಕಲು ನಿರ್ಧರಿಸಿದೆ. 'ವೋಕಲ್ ಫಾರ್ ಲೋಕಲ್' ಮಿಷನ್‌ನ ಭಾಗವಾಗಿ, ಪ್ರಯಾಣಿಕರ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರಿಂಟೆಡ್ ಬ್ಲಾಂಕೆಟ್‌ಗಳನ್ನು ಪರಿಚಯಿಸಲಾಗಿದೆ.
Karnataka News Live 22 October 2025 ಭ್ರಷ್ಟಾಚಾರದಲ್ಲಿ ದಾಖಲೆ ಬರೆಯುತ್ತಿರುವ ಕಾಂಗ್ರೆಸ್ ಸರ್ಕಾರ - ಸಂಸದ ಬಿ.ವೈ.ರಾಘವೇಂದ್ರ ಲೇವಡಿ
ಕಾಂಗ್ರೆಸ್ ಸರ್ಕಾರದ ದುರಾಡಳಿತದ ಕುರಿತಂತೆ ಜನಸಾಮಾನ್ಯರು, ಮಾಧ್ಯಮಗಳು ಹೇಳುತ್ತಿರುವುದನ್ನು ಕೇಳಿಸಿ ಕೊಂಡಿದ್ದಲ್ಲಿ, ಸರ್ಕಾರ ತನ್ನ ಭ್ರಷ್ಟಾಚಾರದ ಕುರಿತು ದಾಖಲೆಗಳನ್ನು ಕೇಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಲೇವಡಿ ಮಾಡಿದ್ದಾರೆ.