- Home
- Entertainment
- TV Talk
- Lakshmi Nivasa: ಬಳೆ ವಿಷ್ಯದಲ್ಲಿ ವೀಕ್ಷಕರ ಲೆಕ್ಕಾಚಾರ ಉಲ್ಟಾ! ಕೈಕೊಟ್ಟ ಶಾಂತಮ್ಮ- ಸತ್ಯ ಗೊತ್ತಾಗೋಯ್ತು: ಕಥೆ ಫಿನಿಷ್!
Lakshmi Nivasa: ಬಳೆ ವಿಷ್ಯದಲ್ಲಿ ವೀಕ್ಷಕರ ಲೆಕ್ಕಾಚಾರ ಉಲ್ಟಾ! ಕೈಕೊಟ್ಟ ಶಾಂತಮ್ಮ- ಸತ್ಯ ಗೊತ್ತಾಗೋಯ್ತು: ಕಥೆ ಫಿನಿಷ್!
ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಜಾಹ್ನವಿಯ ಪ್ಲ್ಯಾನ್ ಫ್ಲಾಪ್ ಆಗುವ ಹಂತದಲ್ಲಿದೆ. ಜಾಹ್ನವಿಯ ಹಸಿರು ಬಳೆ ಸೈಕೋ ಜಯಂತ್ ಕೈಗೆ ಸಿಕ್ಕಿದ್ದು, ಆಕೆ ಬದುಕಿರುವುದನ್ನು ತಿಳಿದು ಆತ ಹೊಸ ಆಟ ಶುರುಮಾಡಿದ್ದಾನೆ. ಇದರಿಂದಾಗಿ ವಿಶ್ವ ಮತ್ತು ಜಾಹ್ನವಿಯ ಮುಂದಿನ ನಡೆ ನಿಗೂಢವಾಗಿದೆ.

ವೀಕ್ಷಕರ ಲೆಕ್ಕಾಚಾರ ಉಲ್ಟಾ
ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ನಲ್ಲಿ ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗಿ ಬಿಟ್ಟಿದೆ. ಮೊದಲೇ ಸೈಕೋ ಜಯಂತ್ನನ್ನು ಸೈಕೋ ಎಂದು ಮಾಡಲು ಜಾಹ್ನವಿ ಮತ್ತು ವಿಶ್ವ ಸೇರಿ ಮಾಡ್ತಿರೋ ಪ್ಲ್ಯಾನ್ ಫ್ಲಾಪ್ ಆಗೋ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.
ಕೈಹಿಡಿದಿದ್ದ ಜಯಂತ್
ಅಷ್ಟಕ್ಕೂ , ಜಾಹ್ನವಿ ಮನೆಗೆ ಬಂದಾಗ ಆಕೆಯ ಕೈಯನ್ನು ಹಿಡಿದಿದ್ದ ಜಯಂತ್. ಇದನ್ನೇ ನೆನಪಿಸಿಕೊಳ್ತಾ ಇರುವಷ್ಟರಲ್ಲಿಯೇ ಜಯಂತ್ಗೆ ಜಾಹ್ನವಿಯ ಬಳೆ ಸಿಕ್ಕಿದೆ. ಅಲ್ಲಿಗೆ ಜಾಹ್ನವಿ ತನ್ನ ಜೊತೆ ಆಟ ಆಡ್ತಾ ಇರೋದು ತಿಳಿದಿದೆ.
ಶಾಂತಮ್ಮನ ಕೈಯಲ್ಲೂ ಅದೇ ಬಳೆ
ಅಲ್ಲಿಯೇ ಇದ್ದ ಶಾಂತಮ್ಮನ ಕೈಯಲ್ಲಿಯೂ ಅದೇ ರೀತಿಯ ಹಸಿರು ಬಳೆ ಇತ್ತು. ಇದನ್ನು ನೋಡಿದ ವೀಕ್ಷಕರು ಆ ಬಳೆ ತನ್ನದೇ ಎಂದು ಹೇಳಿ ಶಾಂತಮ್ಮ ಬಚಾವ್ ಮಾಡುತ್ತಾಳೆ, ಅದಕ್ಕಾಗಿಯೇ ಆಕೆಗೂ ಹಸಿರು ಬಳೆಯನ್ನೇ ತೊಡಿಸಲಾಗಿದೆ ಎಂದು ಅಂದುಕೊಂಡಿದ್ದರು.
ಶಾಂತಮ್ಮ ಬರಲಿಲ್ಲ ನೆರವಿಗೆ
ಸೋಷಿಯಲ್ ಮೀಡಿಯಾದಲ್ಲಿಯೂ ಹಸಿರು ಬಳೆ ವಿಷ್ಯದಲ್ಲಿ ಶಾಂತಮ್ಮ ಜಾಹ್ನವಿಯನ್ನು ಬಚಾವ್ ಮಾಡ್ತಾಳೆ ಎಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ. ಶಾಂತಮ್ಮ ಈ ವಿಷ್ಯವನ್ನು ಹೇಳಲೇ ಇಲ್ಲ. ಬದಲಿಗೆ ಜಾಹ್ನವಿ ಬದುಕಿದ್ದಾಳೆ ಎಂದು ಜಯಂತ್ ಅಂದುಕೊಳ್ತಿರುವಾಗ ಆಕೆ ಅದನ್ನು ಕೇಳಿ ಸುಮ್ಮನಾಗಿದ್ದಾಳೆ.
ಹೇಳಿ ಕೇಳಿ ಸೈಕೋ ಜಯಂತ್
ಇನ್ನು ಜಾಹ್ನವಿ ಆಟ ಆಡಿಸ್ತಾ ಇದ್ದಾಳೆ ಎಂದು ತಿಳಿದ ಮೇಲೆ ಸೈಕೋ ಜಯಂತ್ ಸುಮ್ನೆ ಇರ್ತಾನಾ? ಪತ್ನಿಯ ಮೇಲೆ ಕೋಪ ನೆತ್ತಿಗೇರಿದೆ. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪತ್ನಿಯ ಫೋಟೋ ಬೇಡ ಎಂದಿದ್ದ ಜಯಂತ್, ಫೋನ್ ಮಾಡಿ ಆಕೆಯ ಫೋಟೋ ಹಾಕುವಂತೆ ಹೇಳಿದ್ದಾರೆ. ಅಲ್ಲಿಗೆ ಬೇರೆಯದ್ದೇ ರೀತಿಯಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾನೆ.
ಜಾಹ್ನವಿಗೆ ಆತಂಕ
ಇನ್ನು ಅತ್ತ ವಿಶ್ವ ಮತ್ತು ತನು ಬಾಳಿನಲ್ಲಿ ತಾನು ಸಮಸ್ಯೆ ತಂದೊಡ್ಡಬಹುದು ಎಂದು ಜಾಹ್ನವಿ ಅಂದುಕೊಳ್ಳುತ್ತಿದ್ದಾಳೆ. ಹಾಗೇನೂ ಆಗಲ್ಲ ಹೆದರಬೇಡ ಎನ್ನುತ್ತಿದ್ದಾನೆ ವಿಶ್ವ.
ವಿಶ್ವನ ಕಥೆ ಗೋವಿಂದ!
ಇನ್ನು ವಿಶ್ವನೇ ಜಾಹ್ನವಿಗೆ ತನ್ನ ಮನೆಯಲ್ಲಿ ಆಶ್ರಯ ಕೊಟ್ಟಿದ್ದಾನೆ ಎಂದು ತಿಳಿದರೆ ಅಲ್ಲಿಗೆ ಎರಡು ಹೆ*ಣ ಬೀಳೋದು ಕನ್ಫರ್ಮ್. ಪತ್ನಿಯನ್ನು ಸಾಯಿಸದಿದ್ದರೂ ವಿಶ್ವನನ್ನು ಸುಮ್ಮನೇ ಬಿಡಲ್ಲ ಜಯಂತ್. ಮುಂದೇನಾಗುತ್ತೆ ಎಂದು ವೀಕ್ಷಕರು ಊಹಿಸೋದು ಕಷ್ಟವಾಗಿದೆ.