- Home
- Entertainment
- TV Talk
- Bigg Boss, ನಾನು ಇಲ್ಲಿ ಸಿಂಗಲ್, ನನ್ನ ಎಕ್ಸ್ ಕಳಿಸಿಕೊಡಿ, ಪ್ಲೀಸ್ ಎಂದು ಗೋಗರೆದ ಮಹಿಳಾ ಸ್ಪರ್ಧಿ!
Bigg Boss, ನಾನು ಇಲ್ಲಿ ಸಿಂಗಲ್, ನನ್ನ ಎಕ್ಸ್ ಕಳಿಸಿಕೊಡಿ, ಪ್ಲೀಸ್ ಎಂದು ಗೋಗರೆದ ಮಹಿಳಾ ಸ್ಪರ್ಧಿ!
Bigg Boss Show: ಬಿಗ್ ಬಾಸ್ ಶೋನಲ್ಲಿ ಪ್ರೀತಿ ಹುಟ್ಟುವುದು, ದ್ವೇಷವೂ ಆಗುವುದು, ಸ್ನೇಹ ದ್ವೇಷವಾಗಿ ತಿರುಗಿದರೂ ಆಶ್ಚರ್ಯವಿಲ್ಲ. ಈಗ ಬೇರೆ ಸ್ಪರ್ಧಿಗಳು ಲವ್‌ನಲ್ಲಿರೋದು ನೋಡಿ ಸ್ಪರ್ಧಿಯೋರ್ವರು ನನಗೆ ಎಕ್ಸ್ ಬೇಕು ಎಂದು ಹೇಳಿದ್ದಾರೆ. ಹಾಗಾದರೆ ಅವರು ಯಾರು?

ಆಧ್ಯಾತ್ಮಿಕ ಗುರು, ಉದ್ಯಮಿ
ಬಿಗ್ ಬಾಸ್ 19 ಶೋನಲ್ಲಿ ಆಧ್ಯಾತ್ಮಿಕ ಗುರು, ಉದ್ಯಮಿ ಎಂದು ಹೇಳಿಕೊಳ್ಳುವ ತಾನ್ಯಾ ಮಿತ್ತಲ್ ಅವರು ಸುಳ್ಳು ಹೇಳಿಕೊಂಡು ಸದ್ದು ಮಾಡುತ್ತಿದ್ದಾರೆ. ಪಕ್ಕಾ ಸಂಪ್ರದಾಯವಾದಿ, ಯುಟ್ಯೂಬ್ ನೋಡಿ ಇಂಗ್ಲಿಷ್ ಕಲಿತೆ ಎಂದು ಹೇಳುವ ತಾನ್ಯಾರ ಲಕ್ಷುರಿ ಜೀವನವನ್ನು ಅಂಬಾನಿ ಕೂಡ ನಡೆಸೋದಿಲ್ಲ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಬಸೀರ್ ಲವ್ ಶುರು
ಇನ್ನೋರ್ವ ಸ್ಪರ್ಧಿ ನೇಹಾಲ್ ಅವರು ಬಸೀರ್ ಅಲಿ ಅವರ ತೊಡೆ ಮೇಲೆ ಮಲಗಿದ್ದರು. ಇವರಿಬ್ಬರ ಲವ್ ಸ್ಟೋರಿ ಕೂಡ ಶುರುವಾಗಿದೆ. ಇದನ್ನು ನೋಡಿ ತಾನ್ಯಾ ಮಿತ್ತಲ್ ಅವರು ಬಿಗ್ ಬಾಸ್‌ಗೆ ತನ್ನ ಎಕ್ಸ್ ಕರೆಸಿ ಎಂದು ಕೇಳಿಕೊಂಡಿದ್ದಾರೆ.
ದೊಡ್ಮನೆಯಲ್ಲಿ ಚರ್ಚೆ
ಇತ್ತೀಚಿಗೆ ಬಿಗ್ ಬಾಸ್ ಮನೆಯಲ್ಲಿ ನೇಹಾ ಮತ್ತು ಬಸೀರ್ ಅಲಿ ನಡುವೆ ಆತ್ಮೀಯತೆ ಹೆಚ್ಚುತ್ತಿದೆ. ಇದು ದೊಡ್ಮನೆಯಲ್ಲಿ ಸಾಕಷ್ಟು ಚರ್ಚೆಯನ್ನು ಸೃಷ್ಟಿಸಿದೆ.
ನಾನು ತುಂಬ ಒಂಟಿ
ಈ ಜೋಡಿ ಒಟ್ಟಿಗೆ ಇರುವುದನ್ನು ನೋಡಿದ ತಾನ್ಯಾ ಮಿತ್ತಲ್ ಅವರು, "ನನಗೆ ಈ ಮನೆಯಲ್ಲಿ ನಾನು ತುಂಬ ಒಂಟಿ ಅನಿಸುತ್ತಿದೆ. ಬಿಗ್ ಬಾಸ್, ದಯವಿಟ್ಟು ನನ್ನ ಮಾಜಿ ಪ್ರಿಯಕರನನ್ನು ಇಲ್ಲಿಗೆ ಕಳುಹಿಸಿಕೊಡಿ" ಎಂದು ಮನವಿ ಮಾಡಿದ್ದಾರೆ. ಇದು ನೇಹಾ, ಬಸೀರ್‌ಗೆ ಅಚ್ಚರಿ ಉಂಟು ಮಾಡಿದೆ.
ಕುನಿಕಾ ಸದಾನಂದ್ ಕೂಡ ಈ ಜೋಡಿಗೆ "ಈ ಕ್ಷಣಗಳನ್ನು ಆನಂದಿಸಿ" ಎಂದಿದ್ದರು. ನೇಹಾ ಮೇಲೆ ಬಸೀರ್‌ಗೆ ಲವ್ ಇಲ್ಲ, ನಕಲಿ ಎಂದು ಫರ್ಹಾನಾ ಭಟ್ ಅವರು ಹೇಳಿದ್ದಾರೆ.
ತಾನ್ಯಾ ಮುಖವಾಡ ಬಯಲು
ವೈಲ್ಡ್ ಕಾರ್ಡ್ ಸ್ಪರ್ಧಿ ಮಾಲ್ತಿ ಅವರು ತಾನ್ಯಾ ನೀವು ಅಂದುಕೊಂಡ ಹಾಗೆ ಇಲ್ಲ, ಸೀರೆ ಅಲ್ಲ, ಕಂಪ್ಲೀಟ್ ಹೇಗೆ ಬಟ್ಟೆ ಧರಿಸಬೇಕು ಎಂದು ಅವಳು ವಿಡಿಯೋ ಮಾಡುತ್ತಾಳೆ, ಅಡ*ಲ್ಟ್ ಐಟಂಗಳನ್ನು ಮಾರಾಟ ಮಾಡುತ್ತಿದ್ದಳು. ಅವಳ ಲಕ್ಷುರಿ ಜೀವನ ಕೂಡ ಇಲ್ಲ ಎಂದೆಲ್ಲ ಹೇಳಿದ್ದರು.