ಬಿಬಿಎಂಪಿ ಇಲಾಖೆಯಲ್ಲಿ ಸುಮಾರು ₹40 ಸಾವಿರ ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ. ಈ ಹಗರಣದಲ್ಲಿ 255 ಅಧಿಕಾರಿಗಳು, 437 ಬಿಲ್ಡರ್‌ಗಳು ಭಾಗಿಯಾಗಿದ್ದು, 22 ಲಕ್ಷ ಗ್ರಾಹಕರಿಗೆ ವಂಚಿಸಲಾಗಿದೆ ಎಂದು ಲೋಕಾಯುಕ್ತ ಮತ್ತು ಇಡಿಗೆ ದೂರು ನೀಡಿದ್ದಾರೆ.
- Home
- News
- State
- Karnataka News Live: ಬಿಬಿಎಂಪಿಯಲ್ಲಿ 40 ಸಾವಿರ ಕೋಟಿ ಹಗರಣ ಆರೋಪ, 9,700 ಪುಟಗಳ ದಾಖಲೆ ಸಹಿತ ದೂರು ಕೊಟ್ಟ ರಮೇಶ್ !
Karnataka News Live: ಬಿಬಿಎಂಪಿಯಲ್ಲಿ 40 ಸಾವಿರ ಕೋಟಿ ಹಗರಣ ಆರೋಪ, 9,700 ಪುಟಗಳ ದಾಖಲೆ ಸಹಿತ ದೂರು ಕೊಟ್ಟ ರಮೇಶ್ !

ಬೆಂಗಳೂರು: ಹಟ್ಟಿ ಚಿನ್ನದ ಗಣಿ ಕಂಪನಿ (ಎಚ್ಜಿಎಂಎಲ್) 2025-26 ನೇ ಸಾಲಿನಲ್ಲಿ ಹೊಂದಿದ್ದ 1,700 ಕೆ.ಜಿ. ಚಿನ್ನ ಉತ್ಪಾದಿಸುವ ಗುರಿ ಪೈಕಿ ಶೇ.99.50ರಷ್ಟು ಅಂದರೆ 1,691.50 ಕೆ.ಜಿ. ಚಿನ್ನ ಉತ್ಪಾದಿಸಿದೆ. ಆ ಮೂಲಕ ಇದೇ ಮೊದಲ ಬಾರಿಗೆ ₹1,910 ಕೋಟಿ ವಹಿವಾಟು ನಡೆಸಿದ್ದು, ₹844 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷರು ಹಾಗೂ ಶಾಸಕರಾದ ಜೆ.ಟಿ. ಪಾಟೀಲ ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ವರದಿ ನೀಡಿದರು. ಈ ವೇಳೆ ಗೃಹ ಸಚಿವ ಡಾ। ಜಿ. ಪರಮೇಶ್ವರ್, ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆರ್.ಶಿಲ್ಪಾ ಹಾಜರಿದ್ದರು.
Karnataka News Live 17 May 2026 ಬಿಬಿಎಂಪಿಯಲ್ಲಿ 40 ಸಾವಿರ ಕೋಟಿ ಹಗರಣ ಆರೋಪ, 9,700 ಪುಟಗಳ ದಾಖಲೆ ಸಹಿತ ದೂರು ಕೊಟ್ಟ ರಮೇಶ್ !
Karnataka News Live 17 May 2026 ರಾಜ್ಯದ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಭಾರೀ ಉತ್ತೇಜನ, 1600ಕೋಟಿ ಗೂ ಮೀರಿ ವಿನಿಯೋಗ, ಈ ಜಿಲ್ಲೆಗಳಿಗೆ ಜಾಕ್‌ಪಾಟ್!
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 1122 ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು (550 ಪಿಜಿ ಮತ್ತು 572 ಎಂಬಿಬಿಎಸ್) ಮಂಜೂರು ಮಾಡಿದೆ. ಈ ಸೀಟುಗಳನ್ನು ರಾಜ್ಯದ ವಿವಿಧ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹಂಚಲಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ₹1090 ಕೋಟಿ ಅನುದಾನವನ್ನೂ ನೀಡಲಾಗಿದೆ.
Karnataka News Live 17 May 2026 ಬೆಂಗಳೂರು ಮುಂಬೈ ನಡುವೆ ಹೊಸ ದ್ವಿಸಾಪ್ತಾಹಿಕ ಎಕ್ಸಪ್ರೆಸ್ ರೈಲು ಆರಂಭ, ಸಚಿವ ಜೋಶಿ ಚಾಲನೆ, ವೇಳಾಪಟ್ಟಿ ಇಲ್ಲಿದೆ
Karnataka News Live 17 May 2026 ಯುದ್ಧ ವಿಮಾನ ಕ್ಯಾಂಪಸ್ ಕರ್ನಾಟಕದಲ್ಲಿ ಸ್ಥಾಪಿಸಲು ಕೇಂದ್ರಕ್ಕೆ ಬಲವಾದ ಮನವಿ, 650ಎಕರೆ ಭೂಮಿ ನೀಡಲು ರಾಜ್ಯ ಸಿದ್ಧತೆ
ಮಧ್ಯಮ ಸ್ತರದ ಯುದ್ಧ ವಿಮಾನ ನಿರ್ಮಾಣ ಯೋಜನೆಯನ್ನು ರಾಜ್ಯದಲ್ಲಿ ಸ್ಥಾಪಿಸಲು ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಬಲವಾದ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯದ ಬಲಿಷ್ಠ ವೈಮಾಂತರಿಕ್ಷ ಪರಿಸರ ವ್ಯವಸ್ಥೆ ಮತ್ತು ಯೋಜನೆಗೆ 650ಎಕರೆ ಭೂಮಿ ನೀಡುವ ಸಿದ್ಧತೆಯನ್ನು ವಿವರಿಸಿ ರಕ್ಷಣಾ ಸಚಿವರಿಗೆ ಪತ್ರ ಬರೆದಿದೆ.
Karnataka News Live 17 May 2026 ಬೆಳಗಾವಿ ವಿಮಾನ ನಿಲ್ದಾಣ ಜುಲೈಗೆ ಪೂರ್ಣ, ನೂತನ ಟರ್ಮಿನಲ್ ಪಿಎಂ ಮೋದಿಯಿಂದ ಉದ್ಘಾಟನೆ
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಟರ್ಮಿನಲ್ ಕಾಮಗಾರಿಯು ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಕಮಲ ಬಸದಿ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಈ ಟರ್ಮಿನಲ್ ಅನ್ನು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟಿಸಲು ಯೋಜಿಸಲಾಗಿದೆ.
Karnataka News Live 17 May 2026 ಬೆಂಗಳೂರು ವಿಮಾನ ನಿಲ್ದಾಣ - 40 ಕೋಟಿ ಪ್ರಯಾಣಿಕರ ದಾಖಲೆ! ಕಾರ್ಗೊ ಸಾಗಣೆಯಲ್ಲೂ ಟಾಪ್, ಐತಿಹಾಸಿಕ ಮೈಲಿಗಲ್ಲು!
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 40 ಕೋಟಿ ಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. 2025-26ನೇ ಸಾಲಿನಲ್ಲಿ 44.47 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.23.9ರಷ್ಟು ಭಾರೀ ಏರಿಕೆ ಕಂಡಿದೆ.
Karnataka News Live 17 May 2026 Varicose Veins - ಕಾಲುಗಳಲ್ಲಿ ನೀಲಿ ರಕ್ತನಾಳಗಳು ಕಾಣಿಸ್ತಿದ್ಯಾ? ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
ಇತ್ತೀಚಿನ ದಿನಗಳಲ್ಲಿ ವೆರಿಕೋಸ್ ವೇಯ್ನ್ಸ್ ಸಮಸ್ಯೆ ತುಂಬಾ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಕಾಲುಗಳಲ್ಲಿ ರಕ್ತನಾಳಗಳು ಊದಿಕೊಂಡು, ತಿರುಚಿಕೊಂಡು ನೀಲಿ ಅಥವಾ ನೇರಳೆ ಬಣ್ಣದಲ್ಲಿ ಕಾಣಿಸುತ್ತವೆ.
Karnataka News Live 17 May 2026 ಹಸಿರು ಸೇಬಿನಲ್ಲಿದೆ ಆರೋಗ್ಯದ ಗುಟ್ಟು - ದಿನಾ ಒಂದ್ ತಿಂದ್ರೆ ಸಾಕು, ಹೇಗೆ ಅಂತೀರಾ?
ಹಸಿರು ಸೇಬಿನಲ್ಲಿ 'ಪೆಕ್ಟಿನ್' ಅನ್ನೋ ಅಂಶ ಇದೆ. ಇದು ನಮ್ಮ ಕರುಳಿನಲ್ಲಿರೋ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತೆ. ಇದರಲ್ಲಿರೋ ನಾರಿನಂಶ ಜೀರ್ಣಕ್ರಿಯೆಗೂ ತುಂಬಾ ಒಳ್ಳೇದು.
Karnataka News Live 17 May 2026 ಬೆಂಗಳೂರು - ನಿರಾಶ್ರಿತರ ಆಶ್ರಮದಲ್ಲಿ ಇರಿಸಿದ್ದ ಅಕ್ರಮ ವಿದೇಶಿ ಮಹಿಳಾ ಪ್ರಜೆಗಳು ಗ್ರಿಲ್ ಮುರಿದು ಎಸ್ಕೇಪ್
ಬೆಂಗಳೂರಿನ ಕೊತ್ತನೂರು ಬಳಿಯ 'ಹೋಮ್ ಆಫ್ ಹೋಪ್' ನಿರಾಶ್ರಿತ ಕೇಂದ್ರದಿಂದ ನಾಲ್ವರು ಅಕ್ರಮ ವಿದೇಶಿ ಮಹಿಳೆಯರು ಕಿಟಕಿಯ ಗ್ರಿಲ್ ಮುರಿದು ಪರಾರಿಯಾಗಿದ್ದಾರೆ. ವೀಸಾ ಅವಧಿ ಮುಗಿದಿದ್ದರಿಂದ FRRO ವಶದಲ್ಲಿದ್ದ ಉಗಾಂಡ ಮತ್ತು ನೈಜೀರಿಯಾ ಮೂಲದ ಈ ಮಹಿಳೆಯರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
Karnataka News Live 17 May 2026 ರಾಯಚೂರು - ದಿನಾಲು ಕುಡಿದು ತಾಯಿ ಜತೆಗೆ ಜಗಳವಾಡ್ತಿದ್ದ ಅಣ್ಣನ ಕೊಂದ ತಮ್ಮಆತ್ಮ*ಹತ್ಯೆ ಎಂದು ನಂಬಿಸಲು ಹೆಣ ನೇತು ಹಾಕಿದ!
Karnataka News Live 17 May 2026 NEET - ಪರೀಕ್ಷಾ ಪೇ ಚರ್ಚಾ ಮಾಡೋ ಮೋದಿಯವರೇ ನೀಟ್ ಬಗ್ಗೆ ಚರ್ಚೆ ಯಾವಾಗ? ಆರೆಸ್ಸೆಸ್ ಬಿಜೆಪಿ ವಿರುದ್ಧ ಖರ್ಗೆ ಗಂಭೀರ ಆರೋಪ
ನೀಟ್ ಪರೀಕ್ಷೆ ಗೊಂದಲ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ವ್ಯವಸ್ಥಿತ ದುರಂತವಾಗಿದ್ದು, ಇದರಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪಾತ್ರವಿದೆ ಎಂದು ಆರೋಪಿಸಿದರು.
Karnataka News Live 17 May 2026 ಬೆಳಗಾವಿ ಶಿವಂ ಅಸೋಸಿಯೇಟ್ಸ್ 4500 ಕೋಟಿ ರೂ ಹಗರಣ ಸಿಐಡಿಗೆ, ಪ್ರಕರಣ ಬೆಳಕಿಗೆ ಬರಲು ಕಾರಣ 15 ಸಾವಿರ ಬಂದೂಕು!
Karnataka News Live 17 May 2026 ನಾನು ಮಾಡ್ತಿರೋದು ಬ್ಯುಸಿನೆಸ್, ಪುಕ್ಕಟ್ಟೆ ತೊಗೊಂಡ್ರೆ ಭಿಕ್ಷೆ ಆಗುತ್ತೆ - ಬೆಂಗಳೂರಿನ ಹೂ ಮಾರುವ ಬಾಲೆ
Karnataka News Live 17 May 2026 ಮೆಟ್ರೋ ಪ್ರಯಾಣ ಬಿಜೆಪಿಯ ನಾಟಕ, ನಮ್ಮ 'ಶಕ್ತಿ ಯೋಜನೆ' ಬಳಸಿಕೊಂಡು ಬಸ್‌ಗಳಲ್ಲೇ ಪ್ರಯಾಣಿಸಲಿ - ಪ್ರಿಯಾಂಕ್ ಖರ್ಗೆ ಸವಾಲು!
ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿ ನಾಯಕರ ಮೆಟ್ರೋ ಪ್ರಯಾಣವನ್ನು 'ನಾಟಕ' ಎಂದು ಟೀಕಿಸಿದ್ದಾರೆ. ಪ್ರತಿದಿನ ಸಾರ್ವಜನಿಕ ಸಾರಿಗೆ ಬಳಸುವಂತೆ ಸವಾಲು ಹಾಕಿರುವ ಅವರು, ಮತದಾರರ ಪಟ್ಟಿ ಪರಿಷ್ಕರಣೆಯ 'SIR' ಪ್ರಕ್ರಿಯೆಯು ಬಿಜೆಪಿಗೆ ಅನುಕೂಲ ಮಾಡಿಕೊಡುವ ಸಂಚು ಎಂದು ಗಂಭೀರ ಆರೋಪ ಮಾಡಿದ್ದಾರೆ.
Karnataka News Live 17 May 2026 ಜನಸಾಮಾನ್ಯರಿಗೆ ಮತ್ತೊಂದು ಶಾಕ್, ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ದಿನಸಿ ದರ ಹೆಚ್ಚಳ
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದೀಗ ದಿನಸಿ ಬೆಲೆ ಗಗನಕ್ಕೇರಿದೆ. ರಾಜ್ಯಾದ್ಯಂತ ಅಕ್ಕಿ, ತೊಗರಿಬೇಳೆ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಹೆಚ್ಚಳವಾಗಿದೆ.
Karnataka News Live 17 May 2026 ದರ್ಶನ್ ಸಿಎಂ, ನಾನು ಡಿಸಿಎಂ - ರೈಲು, ವಿಮಾನ ಹಿಡಿದು ಎಲ್ಲಾ ಫ್ರೀ - ಪವಿತ್ರಾ ಗೌಡ ಲಾಯರ್ ಭರ್ಜರಿ ಆಫರ್ಸ್
ನಟ ದರ್ಶನ್ ರಾಜಕೀಯಕ್ಕೆ ಬರಬೇಕೆಂಬುದು ಅಭಿಮಾನಿಗಳ ಆಸೆಯಾಗಿದ್ದು, ತಮಿಳುನಾಡಿನ ನಟ ವಿಜಯ್ರಂತೆ ಕರ್ನಾಟಕದಲ್ಲೂ ನಟನೊಬ್ಬ ಸಿಎಂ ಆಗಬೇಕೆಂದು ಬಯಸಿದ್ದಾರೆ. ಇದರ ನಡುವೆ, ಪವಿತ್ರಾ ಗೌಡರ ವಕೀಲ ಬಾಲನ್, 'ದರ್ಶನ್ ಸಿಎಂ ಆದರೆ ನಾನು ಡಿಸಿಎಂ' ಎಂದು ರಾಜಕೀಯ ಉಚಿತ ಕೊಡುಗೆಗಳನ್ನು ವ್ಯಂಗ್ಯವಾಡಿದ್ದಾರೆ.
Karnataka News Live 17 May 2026 ಚಲಿಸುತ್ತಿದ್ದ 12431 ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ, ಕ್ಷಣಾರ್ಧದಲ್ಲೇ ಹಲವು ಬೋಗಿಗಳು ಆಗ್ನಿಗೆ ಆಹುತಿ
ದೆಹಲಿ ಮುಂಬೈ ಮಾರ್ಗದಲ್ಲಿ ಚಲಿಸುತ್ತಿದ್ದ 12431 ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲವೇ ಕ್ಷಣದಲ್ಲಿ ಹಲವು ಬೋಗಿಗಳು ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕದಳ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ.
Karnataka News Live 17 May 2026 Train Number 16553/554 - ಬೆಂಗಳೂರು-ಹುಬ್ಬಳ್ಳಿ-ಮುಂಬೈ ರೈಲ್ವೆಗೆ ಸಿಕ್ತು ಚಾಲನೆ
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮಾರ್ಗವಾಗಿ ಮುಂಬೈಗೆ ತೆರಳುವ ಹೊಸ ರೈಲಿಗೆ ಚಾಲನೆ ನೀಡಿದರು. ಈ ರೈಲು (16553/16554) ಸರ್ ಎಂ ವಿಶ್ವೇಶರಯ್ಯ ಟರ್ಮಿನಲ್‌ನಿಂದ ಲೋಕಮಾನ್ಯ ಟರ್ಮಿನಲ್‌ವರೆಗೆ ಸಂಚರಿಸಲಿದೆ.
Karnataka News Live 17 May 2026 ಶನಿಮಹಾತ್ಮ ಜಯಂತಿ ದಿನವೇ ಆಂಜನೇಯ ದೇಗುಲ ಕಳ್ಳತನ, ಹುಂಡಿ ಮುಟ್ಟದೆ ಬೆಳ್ಳಿ ಸಾಮಾಗ್ರಿ ಕಳವು
ರಾಯಚೂರಿನ ಆಂಜನೇಯ ಸ್ವಾಮಿ ದೇಗುಲದಲ್ಲಿ ಕಳ್ಳತನ ನಡೆದಿದೆ. ಕಳ್ಳರು ಹುಂಡಿಯನ್ನು ಮುಟ್ಟಿಲ್ಲ. ಆದರೆ ದೇಗುಲದಲ್ಲಿರುವ ಬೆಳ್ಳಿ ಸೇರಿದಂತೆ ಆಭರಣ ಒಂದನ್ನು ಬಿಡದೆ ಕಳ್ಳತನ ಮಾಡಿರುವುದು ಸಿಸಿಟಿಯಲ್ಲಿ ಸೆರೆಯಾಗಿದೆ.
Karnataka News Live 17 May 2026 Dclutter App - ಬೆಂಗಳೂರಿಗರಿಗೆ ಗುಡ್‌ನ್ಯೂಸ್! ಹಳೆಯ ಬೆಡ್, ಸೋಫಾ, ಟಿವಿ ತೊಲಗಿಸಲು ಈಗ ಆ್ಯಪ್ ಸಾಕು!
ಬೆಂಗಳೂರಿನಲ್ಲಿ ಇನ್ನು ಮುಂದೆ ಮನೆಗಳಲ್ಲಿನ ಹಳೆಯ ಹಾಗೂ ಬೇಡವಾದ ವಸ್ತುಗಳ ವಿಲೇವಾರಿಗೆ 'ಡಿಕ್ಲಟರ್' (DClutter) ಆ್ಯಪ್ ಪರಿಚಯಿಸಲಾಗಿದೆ. ಈ ಆ್ಯಪ್ ಮೂಲಕ ಮಾಹಿತಿ ನೀಡಿದರೆ, ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತದ ತಂಡವು ಮನೆ ಬಾಗಿಲಿಗೆ ಬಂದು ಉಚಿತವಾಗಿ ಬೃಹತ್ ತ್ಯಾಜ್ಯವನ್ನು ಸಂಗ್ರಹಿಸುತ್ತೆ.