10:41 PM (IST) Feb 11

Karnataka News Live 11 February 2026ಬೆಂಗಳೂರಲ್ಲಿ ಡಬಲ್‌ ಮರ್ಡರ್‌ - ಪುತ್ರನಿಂದಲೇ ಹ*ತ್ಯೆಯಾದ ನಿವೃತ್ತ ಸೈನಿಕ ನವೀನ್‌ ಭಟ್‌, ದಂತವೈದ್ಯೆ ಶ್ಯಾಮಲಾ ಭಟ್‌!

ಬೆಂಗಳೂರಿನ ವಿಜ್ಞಾನ ನಗರದಲ್ಲಿ ನಡೆದ ಘೋರ ದುರಂತದಲ್ಲಿ, ಮಗನೊಬ್ಬ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ತಂದೆ-ತಾಯಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆರೋಪಿ ರೋಹನ್ ಭಟ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.
Read Full Story
09:17 PM (IST) Feb 11

Karnataka News Live 11 February 2026ಕರ್ನಾಟಕ ಪೊಲೀಸ್ ವರ್ಗಾವಣೆ - 129 ಇನ್ಸ್‌ಪೆಕ್ಟರ್, 23 ಡಿವೈಎಸ್ಪಿಗಳ ಎತ್ತಂಗಡಿ; ಬೆಂಗಳೂರು ಪೊಲೀಸರಿಗಿಲ್ಲ ಭಾಗ್ಯ!

ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಸುಧಾರಣೆಗಾಗಿ 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು 23 ಡಿವೈಎಸ್ಪಿ ದರ್ಜೆಯ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯದಾದ್ಯಂತ ಈ 'ಮೇಜರ್ ಸರ್ಜರಿ' ನಡೆದರೂ, ಬೆಂಗಳೂರು ನಗರದ ಆಂತರಿಕ ವರ್ಗಾವಣೆ ಪಟ್ಟಿ ಬಿಡುಗಡೆಯಾಗಿಲ್ಲ.

Read Full Story
07:37 PM (IST) Feb 11

Karnataka News Live 11 February 2026ಮೈಸೂರು- ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಸಂಸದ ಯದುವೀರ್‌ ಮನವಿ, ರೈಲ್ವೆಯೇ ಇಲ್ಲದ ಕೊಡಗಿಗೆ ಶೀಘ್ರ ಸಿಹಿಸುದ್ದಿ?

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ನನೆಗುದಿಗೆ ಬಿದ್ದಿರುವ ಮೈಸೂರು–ಕುಶಾಲನಗರ ರೈಲು ಯೋಜನೆಗೆ ಮರುಚಾಲನೆ ನೀಡಲು ಮತ್ತು ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

Read Full Story
07:17 PM (IST) Feb 11

Karnataka News Live 11 February 2026ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಪ್ರಕರಣ, ಸ್ಯಾಂಡಲ್‌ವುಡ್ ನಟಿಯ ಗೆಳೆಯ ವೈಶಾಕ್ ಬಂಧನ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ

ಸ್ಯಾಂಡಲ್‌ವುಡ್ ನಟಿಯ ಗೆಳೆಯ ಬಿ.ಕೆ. ವೈಶಾಕ್ ಬಂಧನ ಪ್ರಕ್ರಿಯೆಯಲ್ಲಿ ಕಾನೂನು ಪಾಲಿಸದ ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್ ನಡೆಗೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನೋಟಿಸ್ ನೀಡದೆ ಬಂಧಿಸಿರುವುದು ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 

Read Full Story
07:02 PM (IST) Feb 11

Karnataka News Live 11 February 2026ಜೈಲಲ್ಲೇ ವ್ಯಾಲಂಟೈನ್‌ ಡೇ ಆಚರಿಸಲಿರುವ ಅನೈತಿಕ ಪ್ರೇಮಿಗಳು; ಕಮಲಾಕರ್‌, ಸುಚಿತ್ರಾಗೆ ಕೋರ್ಟ್‌ ಶಾಕ್‌!

ಸಿದ್ಧಾಪುರದ ಸಂಚಲನಕಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಐವರ ನ್ಯಾಯಾಂಗ ಬಂಧನವನ್ನು ಫೆಬ್ರವರಿ 21ರವರೆಗೆ ವಿಸ್ತರಿಸಲಾಗಿದೆ. ಸಿದ್ಧಾಪುರ JMFC ನ್ಯಾಯಾಲಯ ಈ ಆದೇಶ ನೀಡಿದೆ.

Read Full Story
06:28 PM (IST) Feb 11

Karnataka News Live 11 February 2026ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ, ವಿದೇಶದಲ್ಲಿ 105 ಕೋಟಿ ರೂ ಬಾಚಿಕೊಂಡ ಯಶ್ ಮೂವಿ

ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮೊದಲೇ ದಾಖಲೆ, ಕಳೆದ ತಿಂಗಳು ಟಾಕ್ಸಿಕ್ ಟ್ರೇಲರ್ ರಿಲೀಸ್ ಆಗಿತ್ತು. ಇಷ್ಟೇ ನೋಡಿ, ಇದೀಗ ಟಾಕ್ಸಿಕ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು ಮಾತ್ರವಲ್ಲ, ಈಗಲೇ 105 ಕೋಟಿ ರೂಪಾಯಿ ಬಾಚಿಕೊಂಡಿದೆ.

Read Full Story
06:23 PM (IST) Feb 11

Karnataka News Live 11 February 2026ಲೈಂಗಿಕ ದೌರ್ಜನ್ಯ ಪ್ರಕರಣ - ಸಂಗೀತ ನಿರ್ದೇಶಕ ಸಾಧು ಕೋಕಿಲ, ನಟ ಮಂಡ್ಯ ರಮೇಶ್‌ಗೆ ಬಿಗ್ ರಿಲೀಫ್

ನಟರಾದ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಅವರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಮೈಸೂರಿನ ಮಹಿಳೆಯೊಬ್ಬರು ದಾಖಲಿಸಿದ್ದ ದೂರಿನಲ್ಲಿ ಸಮರ್ಪಕ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ, ನ್ಯಾಯಾಲಯವು ಕೇಸ್ ರದ್ದುಪಡಿಸಿ ಆದೇಶಿಸಿದೆ.

Read Full Story
06:21 PM (IST) Feb 11

Karnataka News Live 11 February 2026'ಜಗದ್ಧಾತ್ರಿ'ಯಾಗಿ ನಟಿ ಮೋಕ್ಷಿತಾ ಪೈ ಎಂಟ್ರಿ! ಕ್ರೈಂ ಬ್ರ್ಯಾಂಚ್​ ಆಫೀಸರ್​- ಏನಿದು ಸ್ಟೋರಿ? ನಾಯಕ ಯಾರು?

ಬಿಗ್‌ಬಾಸ್ ಹಾಗೂ 'ಪಾರು' ಖ್ಯಾತಿಯ ಮೋಕ್ಷಿತಾ ಪೈ ಇದೀಗ 'ಜಗದ್ಧಾತ್ರಿ' ಎಂಬ ಹೊಸ ಧಾರಾವಾಹಿಯ ಮೂಲಕ ಜೀ ಕನ್ನಡಕ್ಕೆ ಮರಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅವರು ಕ್ರೈಂ ಬ್ರ್ಯಾಂಚ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ತೆಲುಗಿನ ಜನಪ್ರಿಯ ಸೀರಿಯಲ್‌ನ ರಿಮೇಕ್ ಆಗಿದೆ. ನಟ ಯಾರು? 

Read Full Story
06:09 PM (IST) Feb 11

Karnataka News Live 11 February 2026ಶೀಘ್ರದಲ್ಲಿ Bhargavi LLB Serial ಮುಗಿತಿದ್ಯಾ? ಹೊಸ ಅಧ್ಯಾಯದ ಸೂಚನೆಯಾ?

'ಭಾರ್ಗವಿ LLB' ಧಾರಾವಾಹಿಯಲ್ಲಿ ಏನಾಗಲಿದೆ ಎಂಬ ಕುತೂಹಲ ಶುರುವಾಗಿದೆ. ವಿಶಿಷ್ಟ ಕಥೆ ಮೂಲಕ ಮನಗೆದ್ದಿರುವ ಈ ಸೀರಿಯಲ್‌, ಈಗ ಸೀರಿಯಲ್ ದಿಕ್ಕನ್ನೇ ಬದಲಿಸುವ ತಿರುವಿನಲ್ಲಿದೆ. ಇಷ್ಟುದಿನ ವಕೀಲೆಯಾಗಿ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದ ಭಾರ್ಗವಿಯ ಬದುಕಿನಲ್ಲಿ ಈಗ ವಿಧಿ ಆಟ ಆಡಿದೆ. 

Read Full Story
06:07 PM (IST) Feb 11

Karnataka News Live 11 February 2026‘ಆ’​ ವಿಡಿಯೋ ಇಟ್ಕೊಂಡು ಭಟ್ಟನಿಗೆ ಸುಚಿತ್ರಾ ‘ಹನಿ’ಟ್ರ್ಯಾಪ್? ಮುಸ್ಲಿಂ ಮಹಿಳೆ ಜೊತೆಯೂ ಕಮಲಾಕರ ಮದುವೆ!

ಜ್ಯೋತಿಷಿ ಕಮಲಾಕರ ಮತ್ತು ರೀಲ್ಸ್ ರಾಣಿ ಸುಚಿತ್ರಾ ಅವರ ಅಪರಾಧದ ಹಿನ್ನೆಲೆ ಬಯಲಾಗಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಇವರಿಬ್ಬರ ಹಿಂದೆ ಹಲವು ಮದುವೆಗಳು, ಮೋಸದ ಜಾಲ ಹಾಗೂ ಸುಪಾರಿ ನೀಡಿದ ಕರಾಳ ಕಥೆಯಿದೆ. ಸುಚಿತ್ರಾಳ ಆಪ್ತೆಯೇ ಇವರ ಸಂಬಂಧ ಮತ್ತು ಅಪರಾಧದ ಬಗ್ಗೆ ಸತ್ಯ ಬಾಯಿಬಿಟ್ಟಿದ್ದಾಳೆ.

Read Full Story
05:29 PM (IST) Feb 11

Karnataka News Live 11 February 2026ಐಷಾರಾಮಿ ರೆಸಾರ್ಟ್‌ ಹೊಂದಿರುವ ಕನ್ನಡದ ಸೆಲೆಬ್ರಿಟಿಗಳಿವರು! ಎಲ್ಲೆಲ್ಲಿದೆ ಗೊತ್ತಾ?

Sandalwood Celebrities Resort News: ಕನ್ನಡದ ಅನೇಕ ನಟ-ನಟಿಯರು ನಿರೂಪಣೆ, ನಟನೆ ಜೊತೆಗೆ ಉದ್ಯಮವನ್ನು ಕೂಡ ಹೊಂದಿದ್ದಾರೆ. ಕೆಲವು ಸೆಲೆಬ್ರಿಟಿಗಳು ರೆಸಾರ್ಟ್‌ ಕೂಡ ಹೊಂದಿದ್ದಾರೆ. ಅವರು ಯಾರು? ಎಲ್ಲಿದೆ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story
05:13 PM (IST) Feb 11

Karnataka News Live 11 February 2026ಫೆ.12ರಂದು ದೇಶವ್ಯಾಪಿ ಪ್ರತಿಭಟನೆ, ಭಾರತ ಬಂದ್! ಕರ್ನಾಟಕದಲ್ಲಿ ನಾಳೆ ಶಾಲಾ ಕಾಲೇಜುಗಳ ಕಥೆ ಏನು?

ಫೆಬ್ರವರಿ 12, 2026 ರಂದು ಕಾರ್ಮಿಕ ಮತ್ತು ರೈತ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಈ ಬಂದ್‌ನಿಂದಾಗಿ ಕರ್ನಾಟಕದಲ್ಲಿ ಶಾಲೆಗಳಿಗೆ ಅಧಿಕೃತ ರಜೆ ಘೋಷಿಸಿಲ್ಲವಾದರೂ, ಸ್ಥಳೀಯ ಪರಿಸ್ಥಿತಿ ಅವಲಂಬಿಸಿ ರಜೆ ನೀಡುವ ಸಾಧ್ಯತೆಯಿದೆ.

Read Full Story
05:07 PM (IST) Feb 11

Karnataka News Live 11 February 202670ರ ದಶಕಕ್ಕೆ ಜಾರಿದ Naa Ninna Bidalaare ಹಿತಾ - ಎಷ್ಟೂಂತ ಹೃದಯ ಕದೀತಿಯಮ್ಮಾ ಎಂದ ಫ್ಯಾನ್ಸ್​

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯ ಬಾಲ ನಟಿ ಹಿತಾ, ತನ್ನ ಅದ್ಭುತ ನಟನೆ ಮತ್ತು ಗಾಯನ ಪ್ರತಿಭೆಯಿಂದ ಗಮನ ಸೆಳೆದಿದ್ದಾಳೆ. ಇತ್ತೀಚೆಗೆ, ಹಳೆಯ ಹಿಂದಿ ಹಾಡೊಂದಕ್ಕೆ ರೆಟ್ರೋ ಶೈಲಿಯಲ್ಲಿ ರೀಲ್ಸ್ ಮಾಡಿ, ತನ್ನ ಮನೋಜ್ಞ ಅಭಿನಯದಿಂದ ನೆಟ್ಟಿಗರ ಹೃದಯ ಗೆದ್ದಿದ್ದಾಳೆ.
Read Full Story
04:44 PM (IST) Feb 11

Karnataka News Live 11 February 2026Photos - ಒಂದಲ್ಲ, ಎರಡಲ್ಲ, ಮೂರು ಮದುವೆಯಾದ ದಕ್ಷಿಣ ಭಾರತದ ನಟಿಯರು!

Actress Who Married Thrice: ವೈಯಕ್ತಿಕ ಕಾರಣಗಳಿಂದಾಗಿ ಕೆಲವು ನಟಿಯರು ಒಂದಲ್ಲ, ಎರಡಲ್ಲ, ಮೂರು ಬಾರಿ ಮದುವೆಯಾಗಿದ್ದಾರೆ. ಇವರ ಸಿನಿಮಾ ಕರಿಯರ್‌ ಚೆನ್ನಾಗಿದ್ದರೂ ಕೂಡ, ವೈಯಕ್ತಿಕ ಜೀವನದಲ್ಲಿ ಏರಿಳಿತ, ಸೋಲು ಹೆಚ್ಚಿತ್ತು. ಹಾಗಾದರೆ ಯಾರು? ಯಾರು ಮೂರು ಮದುವೆಯಾದರು? ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story
04:19 PM (IST) Feb 11

Karnataka News Live 11 February 2026Tejaswini weds Virat - ಸೀರಿಯಲ್​ನಲ್ಲಿ ಲವ್​- ರಿಯಲ್ಲಾಗಿ ಸಪ್ತಪದಿ ತುಳಿದ ತಾರಾ ಜೋಡಿ; ಸುಂದರ ಫೋಟೋಗಳು

ಕನ್ನಡ ಕಿರುತೆರೆ ನಟಿ ತೇಜಸ್ವಿನಿ ಆಚಾರ್ ಅವರು ಸಹನಟ ವಿರಾಟ್ ವತ್ಸಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 'ಸಂಘರ್ಷ' ಧಾರಾವಾಹಿಯ ಸೆಟ್‌ನಲ್ಲಿ ಪ್ರೀತಿಸಿ, ಇದೀಗ ದಾವಣಗೆರೆಯಲ್ಲಿ ವಿವಾಹವಾಗಿದ್ದಾರೆ. ಈ ಜೋಡಿ 'ರಾಧಿಕಾ' ಧಾರಾವಾಹಿಯಲ್ಲಿಯೂ ಒಟ್ಟಿಗೆ ನಟಿಸಿದ್ದರು.
Read Full Story
04:15 PM (IST) Feb 11

Karnataka News Live 11 February 2026ಸಾರಿ ಮಮ್ಮಿ, ಪಾಪ…ಐ ಲವ್ ಯು, ನವೋದಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಸಾವಿಗೆ ಶರಣು, ಹೆತ್ತವರ ಕಣ್ಣೀರಲ್ಲಿ ಮುಳುಗಿಸಿದ!

ಬೀದರ್ ಜಿಲ್ಲೆಯ ಬಸವಕಲ್ಯಾಣದ ನವೋದಯ ಹಾಸ್ಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿ ಶರತ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ "ಸಾರಿ ಮಮ್ಮಿ, ಪಾಪ… I love you" ಎಂದು ಬರೆದ ಡೆತ್‌ನೋಟ್ ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Read Full Story
03:55 PM (IST) Feb 11

Karnataka News Live 11 February 2026ದೊಡ್ಡದಾಗಿ ಮದ್ವೆ ಮಾಡ್ಕೋತೀರಿ ₹10 ಕೊಡೋ ಯೋಗ್ಯತೆ ಇಲ್ವಾ? ಮದುವೆ ಮಂಟಪದಲ್ಲಿ ಮಂಗಳಮುಖಿಯರ ರಂಪಾಟ!

ಚಿಕ್ಕಮಗಳೂರಿನ ರಂಗಣ್ಣನ ಛತ್ರದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ನುಗ್ಗಿದ ಇಬ್ಬರು ಮಂಗಳಮುಖಿಯರು, ₹10,000 ಹಣಕ್ಕಾಗಿ ಪಟ್ಟು ಹಿಡಿದು ವಧು-ವರರ ಮುಂದೆಯೇ ರಂಪಾಟ ನಡೆಸಿದ್ದಾರೆ. ಅಸಭ್ಯವಾಗಿ ವರ್ತಿಸಿ, ಪ್ರಶ್ನಿಸಿದವರಿಗೆ ಬೆದರಿಕೆ ಹಾಕಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story
03:40 PM (IST) Feb 11

Karnataka News Live 11 February 20262028ರವರೆಗೂ ಸಿದ್ದರಾಮಯ್ಯ ಫಿಕ್ಸ್ - ಆಮೇಲೆ ಬೀದಿ ದಾಸಯ್ಯನ್ನ ಸಿಎಂ ಮಾಡಿದ್ರೂ ಒಕೆ' ಜಮೀರ್ ಸ್ಫೋಟಕ ಹೇಳಿಕೆ!

Zameer Ahmed Khan Bold Statement ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಹಂಪಿಯಲ್ಲಿ, 2028ರವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ಚರ್ಚೆಗೆ ತೆರೆ ಎಳೆದಿದ್ದಾರೆ. 

Read Full Story
03:24 PM (IST) Feb 11

Karnataka News Live 11 February 2026ಮಂಗಳೂರು - ಮೊಹಮ್ಮದ್ ಜೊತೆ ವೈಶಾಲಿ ರನ್ನಿಂಗ್ ಮದುವೆ, ವಿದೇಶದಿಂದ ಓಡೋಡಿ ಬಂದ ತಂದೆ, ಮಗಳೊಂದಿಗೆ ಮಾತಾಡಿಲ್ಲವೆಂದು ಗೋಳಾಟ

ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಸರಗೋಡಿನ ಯುವತಿ, ಅನ್ಯಕೋಮಿನ ಯುವಕನೊಂದಿಗೆ ನೋಂದಣಿ ಮದುವೆಯಾಗಿದ್ದಾಳೆ. ಮಗಳಿಗೆ ಬ್ರೈನ್‌ವಾಶ್ ಮಾಡಿ, ಬ್ಲ್ಯಾಕ್‌ಮೇಲ್ ಮೂಲಕ ಕರೆದೊಯ್ಯಲಾಗಿದೆ ಎಂದು ಪೋಷಕರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story
03:21 PM (IST) Feb 11

Karnataka News Live 11 February 2026ಸ್ಕೂಲ್ ಬಸ್ ಹರಿದು ಇಬ್ಬರು ಮಕ್ಕಳು ದಾರುಣ ಸಾವು; ಅಪ್ಪ ಹಾಲು ತರಲು ಮಕ್ಕಳ ಕರೆದೊಯ್ದರೆ, ರಕ್ತದ ಹೊಳೆ ಹರಿಯಿತು!

ಬೆಂಗಳೂರಿನ ಥಣಿಸಂದ್ರದಲ್ಲಿ ಬೈಕ್ ಮೇಲೆ ಶಾಲಾ ಬಸ್ ಹರಿದು ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಲು ತರಲು ಮಕ್ಕಳನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ನಾಗನಗೌಡ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಮಗಳು ಮತ್ತು ಅಣ್ಣನ ಮಗಳು ದುರಂತದಲ್ಲಿ ಸಾವನ್ನಪ್ಪಿದ್ದಾರೆ.

Read Full Story