Asianet Suvarna News Asianet Suvarna News

ಬಿಪೊರ್‌ಜಾಯ್ ಚಂಡಮಾರುತದಿಂದ ಮುಂಗಾರು ಮಳೆ ವಿಳಂಬ: ಕರಾವಳಿಯಲ್ಲಿಯೂ ಆತಂಕ

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಬಿಪೋರ್‌ಜಾಯ್ ಚಂಡಮಾರುತ ರೂಪುಗೊಂಡಿದೆ. ಈ ಮಾರುತದಿಂದ ಮುಂಗಾರು ಮಳೆ ಆಗಮಿಸುವುದು ಮತ್ತಷ್ಟು ವಿಳಂಬವಾಗಲಿದೆ.

Biporjoy Cyclone likely to hit Karnataka coastal Monsoon rains delayed further sat
Author
First Published Jun 6, 2023, 8:53 PM IST

ಬೆಂಗಳೂರು (ಜೂ.06): ಅರಬ್ಬೀ ಸಮುದ್ರದಲ್ಲಿ ಕಳೆದ ಕೆಲ ದಿನಗಳಿಂದ ಕುಸಿತಗೊಂಡಿರುವ ವಾಯುಭಾರವು ಸದ್ಯ ಚಂಡಮಾರುತವಾಗಿ ರೂಪುಗೊಂಡಿದೆ. ಮುಂದಿನ 24 ಗಂಟೆಗಳ ಕಾಲ ಇದೇ ರೀತಿಯಲ್ಲಿ ಹವಾಮಾನ ಮುಂದುವರಿದರೆ ಕರಾವಳಿಗೆ ಬಿಪೊರ್ ಜಾಯ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಈ ಚಂಡಮಾರುತದಿಂದ ಮುಂಗಾರು ಮಳೆ ರಾಜ್ಯಕ್ಕೆ ಆಗಮಿಸುವುದು ಮತ್ತಷ್ಟು ವಿಳಂಬವಾಗಲಿದೆ.

ಅರಬ್ಬೀ ಸಮುದ್ರದಲ್ಲಿ ಕಳೆದ ಕೆಲ ದಿನಗಳಿಂದ ಕುಸಿತಗೊಂಡಿರುವ ವಾಯುಭಾರವು ಈಗ ಚಂಡಮಾರುತ ರೂಪ ಪಡೆದುಕೊಂಡಿದೆ. ಈ ಚಂಡಮಾಡುತಕ್ಕೆ ಬಿಪರ್‌ಜಾಯ್‌ ಎಂದು ಹೆಸರಿಡಲಾಗಿದೆ, ಮುಂದಿನ 24 ಗಂಟೆ ಹೀಗೆ ಮುಂದುವರೆದರೆ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದೆ. ಇದರಿಂದ ದಕ್ಷಿಣ ಭಾರತದ ಪಶ್ಚಿಮ ತೀರಗಳು ಅಪಾಯವನ್ನು ಎದುರಿಸಲಿವೆ. ಪ್ರಸ್ತುತ ಉತ್ತರದತ್ತ ಮುಖ ಮಾಡಿರುವ ಚಂಡಮಾರುತವು ಜೂನ್ 8ರಿಂದ 10ರವರೆಗೆ ಕರ್ನಾಟಕ ಕರಾವಳಿ ಪ್ರಕ್ಷುಬ್ಧ ವಾತಾವರಣ ಇರಲಿದೆ. ಮುಂದಿನ 24 ಗಂಟೆಗಳಲ್ಲಿ ಚಂಡಮಾರುತದ ತೀವ್ರತೆ ಹೆಚ್ಚಾಗಲಿದೆ. ಆದ್ದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈ ಬಾರಿ ಮಳೆ ವಿಳಂಬ: ನಾಡಿದ್ದು ಮುಂಗಾರು ಕೇರಳ ತೀರ ತಲುಪುವ ಸಾಧ್ಯತೆ

ಗೋವಾ, ಮುಂಬೈ ತೀರಕ್ಕೆ ಅಪ್ಪಳಿಸುವ ಚಂಡಮಾರುತ:  ಇನ್ನು ಕರ್ನಾಟಕ ಕರಾವಳಿ ತೀರ ಸ್ವಲ್ಪ ಅಂತರದಲ್ಲಿ ತಪ್ಪಿದರೂ ಗೋವಾ, ಮುಂಬೈ ತೀರಕ್ಕೆ ಬಿಪೊರ್ ಜಾಯ್ ಚಂಡಮಾರುತ ಅಪ್ಪಳಿಸಲಿದೆ. ಈಶಾನ್ಯ ದಿಕ್ಕಿಗೆ ತಿರುಗಿದರೆ ಓಮನ್, ಯೆಮನ್ ರಾಷ್ಟ್ರದ ಕರಾವಳಿಗೂ ಚಂಡಮಾರುತದ ಪರಿಣಾಮ ಬೀರಲಿದೆ. ಈಗಾಗಲೇ ಬಾಂಗ್ಲಾದೇಶದಲ್ಲಿ ಈ ಚಂಡಮಾರುತಕ್ಕೆ ಬಿಪೊರ್ ಜಾಯ್ ಎಂದು ಹೆಸರಿಡಲಾಗಿದೆ. ವಾರ್ಷಿಕ ಸರತಿಯಂತೆ ಈ ಬಾರಿಯ ಚಂಡಮಾರುತಕ್ಕೆ ಬಾಂಗ್ಲಾದೇಶ ಹೆಸರಿಟ್ಟಿದೆ. 

ಮುಂಗಾರು ಮಳೆಯ ಮಾನ್ಸೂನ್‌ ಮಾರುತ ವಿಳಂಬ:  ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ನೈರುತ್ಯ ಮಾನ್ಸೂನ್ ಮಾರುತಗಳು (ಮುಂಗಾರು ಮಳೆ) ರಾಜ್ಯಕ್ಕೆ ಆಗಮಿಸುವುದು ತಡವಾಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಜೂನ್ ಮೊದಲ ವಾರದಲ್ಲಿ ಕೇರಳ ಪ್ರವೇಶಿಸಬೇಕಾಗಿದ್ದ ನೈರುತ್ಯ ಮಾನ್ಸೂನ್ ಮಾರುತಗಳು, ವಾಯುಭಾರ ಕುಸಿತದಿಂದಾಗಿ ವಿಳಂಬವಾಗುತ್ತಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 

ರಾಜ್ಯದ ವಿಧಾನಪರಿಷತ್‌ ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂ.30 ಮತದಾನ

ಶಿಖರ ಪರ್ವತಗಳಲ್ಲಿ ಹಿಮಪಾತ ಸಾಧ್ಯತೆ:  ದೇಶದ ಉತ್ತರ ತೀರದ ಶೀಖರ ಪ್ರದೇಶಗಳಾದ ಜಮ್ಮು ಕಾಶ್ಮೀರ, ಲೇಹ್ ಲಡಾಖ್, ಗಿಲ್ಗಿಟ್, ಮುಜಫರಾಬಾದ್ ಸೇರಿದಂತೆ ಹರಿಯಾಣ ಪಂಜಾಬ್‌ನ ಕೆಲವು ಭಾಗಗಳಲ್ಲಿ ಲಘು ತುಂತುರು ಮಳೆಯನ್ನು ಕಾಣಬಹುದು. ಉತ್ತರಾಖಂಡ ಹಿಮಾಚಲದಲ್ಲಿಯೂ ಮಳೆ ಮತ್ತು ಹಿಮಪಾತ ಮುಂದುವರಿಯಲಿದೆ. ಎತ್ತರದ ಪ್ರದೇಶಗಳಲ್ಲಿ ಲಘು ಹಿಮಪಾತವನ್ನು ಕಾಣಬಹುದು. ಮೋಡ ಕವಿದ ವಾತಾವರಣದ ಮುನ್ಸೂಚನೆಯನ್ನೂ ನೀಡಲಾಗಿದೆ. ಜೂನ್ 11 ರಿಂದ, ದೆಹಲಿಯಲ್ಲಿ ತಾಪಮಾನ ಕುಸಿಯುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ತಾಪಮಾನವು 42 ಡಿಗ್ರಿ ಸೆಲ್ಸಿಯಸ್‌ಗೆ ಏರಬಹುದು. ಹರಿಯಾಣದಲ್ಲಿ, ಕನಿಷ್ಠ ತಾಪಮಾನವು 20 ಮತ್ತು ಗರಿಷ್ಠ ತಾಪಮಾನವು 36 ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತದೆ ಎಂದು ಊಹಿಸಲಾಗಿದೆ. ಮುಂದಿನ ದಿನಗಳಲ್ಲಿ ಕನಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಾಗಬಹುದು.

Follow Us:
Download App:
  • android
  • ios