ರಾಜ್ಯದಲ್ಲಿ ಮುಂಗಾರು ಚುರುಕು: 5 ದಿನ ಉತ್ತಮ ಮಳೆ ಸಂಭವ
ಮುಂಗಾರು ಮತ್ತೆ ಚುರುಕುಗೊಂಡಿದ್ದು, ಭಾನುವಾರ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ರೂಪಗೊಂಡ ಚಂಡಮಾರುತದಿಂದ ಮುಂಗಾರು ದುರ್ಬಲಗೊಂಡಿತ್ತು. ಇದೀಗ ಚಂಡಮಾರುತ ದುರ್ಬಲವಾಗಿ, ಮುಂಗಾರು ಚುರುಕುಗೊಳ್ಳುತ್ತಿದೆ. ಹೀಗಾಗಿ, ಭಾನುವಾರ ರಾಜಧಾನಿ ಬೆಂಗಳೂರು, ಮಂಗಳೂರು, ಹೊನ್ನಾವರದಲ್ಲಿ ಮಳೆಯಾಗಿದೆ.
ಬೆಂಗಳೂರು (ಜೂ.19): ಮುಂಗಾರು ಮತ್ತೆ ಚುರುಕುಗೊಂಡಿದ್ದು, ಭಾನುವಾರ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ರೂಪಗೊಂಡ ಚಂಡಮಾರುತದಿಂದ ಮುಂಗಾರು ದುರ್ಬಲಗೊಂಡಿತ್ತು. ಇದೀಗ ಚಂಡಮಾರುತ ದುರ್ಬಲವಾಗಿ, ಮುಂಗಾರು ಚುರುಕುಗೊಳ್ಳುತ್ತಿದೆ. ಹೀಗಾಗಿ, ಭಾನುವಾರ ರಾಜಧಾನಿ ಬೆಂಗಳೂರು, ಮಂಗಳೂರು, ಹೊನ್ನಾವರದಲ್ಲಿ ಮಳೆಯಾಗಿದೆ.
ಐದು ದಿನ ಮಳೆ: ಮುಂದಿನ ಐದು ದಿನ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಬಿರುಗಾಳಿ ಗಂಟೆಗೆ 45 ರಿಂದ 55 ಕಿ.ಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ಮೀನುಗಾರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಶನಿವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅತಿ ಹೆಚ್ಚು 12 ಸೆಂ.ಮೀ ಮಳೆಯಾಗಿದೆ.
ಮುಂಗಾರು ಮಳೆ ಬೆನ್ನಲ್ಲೇ ಕರಾವಳಿಯಲ್ಲಿ ಕಡಲ್ಕೊರೆತ: ಮನೆ, ಅಂಗಡಿಗಳು ಸಮುದ್ರಪಾಲು
ದಕ್ಷಣ ಕನ್ನಡದ ಪಣಂಬೂರಿನಲ್ಲಿ 10, ಮುಲ್ಕಿ, ಉಪ್ಪಿನಂಗಡಿ, ಉತ್ತರ ಕನ್ನಡದ ಮಂಕಿಯಲ್ಲಿ ತಲಾ 6, ಹೊನ್ನಾವರ, ಕುಮುಟಾ, ಕಾರವಾರ, ಕದ್ರಾದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರುನಾಡಿಗೆ ಮೂರು ದಿನದಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆ ಮಾಡಲು ನಿರ್ಧಾರ
ಕೊಲ್ಹಾರ ಸುತ್ತಮುತ್ತ ಭಾರಿ ಮಳೆ: ಸಂತಸ
ಕೊಲ್ಹಾರ: ಪಟ್ಟಣದ ಸುತ್ತಮುತ್ತ ಭಾನುವಾರ ಸಂಜೆ 6ರಿಂದ 7ಗಂಟೆವರೆಗೆ ಒಂದು ಗಂಟೆ ಭಾರಿ ಮಳೆ ಸುರಿಯಿತು.
ಕೊಲ್ಹಾರ ತಾಲೂಕಿನ ರೋಣಿಹಾಳ ಹಣಮಾಪೂರ, ಮಟ್ಟಿಹಾಳ, ಸಿದ್ದನಾಥ ಸೇರಿದಂತೆ ಅನೇಕ ಕಡೆ ಮಳೆ ಸುರಿದಿದೆ. ಸಂಜೆ ಮೋಡ ಕವಿದ ವಾತಾವರಣವಿತ್ತು. ಮಣ್ಣಿತ್ತೆನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬಹಳಷ್ಟುಜನ ದೇವಸ್ಥಾನಗಳಿಗೆ ತೆರಳಿ ಮಳೆಗಾಗಿ ಪ್ರಾರ್ಥಿಸಿದ್ದರು. ರೈತರ ಕೂಗಿಗೆ ಮನಸೋತ ವರುಣದೇವ ಇದ್ದಕಿದ್ದಂತೆ ಸಂಜೆ 5ಗಂಟೆ ಸುಮಾರಿಗೆ ಸುನಾಮಿಯಂತೆ ಮೋಡಕವಿದು ಇಳೆಗೆ ಮಳೆ ಸುರಿಸಿ ರೈತರ ಮನ ತನಿಸಿದ್ದಾನೆ. ಕಳೆದ ಒಂದು ತಿಂಗಳಿಂದ ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಸಂಜೆ ಮಳೆ ಸುರಿದು ಖುಷಿ ತಂದಿತು. ಬಿತ್ತನೆಗೆ ಜಮೀನು ಸಿದ್ಧಗೊಳಿಸಿದ್ದ ರೈತರಿಗೆ ಮಳೆಯ ಚಿಂತೆಕಾಡಿತ್ತು.ನೀರಿಲ್ಲದೆ ಕಬ್ಬುಒಣಗಿ ನಿಂತಿದ್ದವು. ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ಬೋರವೆಲ್ಲ ಹಾಗೂ ಬಾವಿಗಳು ಬತ್ತಿದ್ದವು. ಇದರಿಂದ ಜನ ಕಂಗಲಾಗಿದ್ದರು.