ಪ್ರಧಾನಿ ಮೋದಿಗೆ ಡಿಕೆ ಶಿವಕುಮಾರ ಕಂಡ್ರೆ ಅಂಜಿಕೆ ಇದೆ: ಸಚಿವ ಶರಣಬಸಪ್ಪ ದರ್ಶನಾಪುರ

ನಿನ್ನೆ'ಹೈಕಮಾಂಡ್ ಬಯಸಿದ್ರೆ ನಾನೇ ಸಿಎಂ ಆಗ್ತಿನಿ' ಎಂದಿದ್ದ ಸಚಿವ ಶರಣಬಸಪ್ಪ ದರ್ಶನಾಪುರ ಇಂದು ಸಿಎಂ ಸಿದ್ದರಾಮಯ್ಯರ ಪರ ಬ್ಯಾಟಿಂಗ್ ಮಾಡುವ ಮೂಲಕ ಉಲ್ಟಾ ಹೊಡೆದಿದ್ದಾರೆ. 

Karnataka minister sharanabasappa darshanapur reacts abou dk shivakumar met pm modi rav

ಯಾದಗಿರಿ (ಸೆ.10): ನಿನ್ನೆ'ಹೈಕಮಾಂಡ್ ಬಯಸಿದ್ರೆ ನಾನೇ ಸಿಎಂ ಆಗ್ತಿನಿ' ಎಂದಿದ್ದ ಸಚಿವ ಶರಣಬಸಪ್ಪ ದರ್ಶನಾಪುರ ಇಂದು ಸಿಎಂ ಸಿದ್ದರಾಮಯ್ಯರ ಪರ ಬ್ಯಾಟಿಂಗ್ ಮಾಡುವ ಮೂಲಕ ಉಲ್ಟಾ ಹೊಡೆದಿದ್ದಾರೆ. 

ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಮುಂದಿನ ಐದು ವರ್ಷ ಅಲ್ಲ, ಹತ್ತು ವರ್ಷ ಸಿಎಂ ಆಗಿ ಅಧಿಕಾರದಲ್ಲಿರ್ತಾರೆ. ರಾಜ್ಯದಲ್ಲಿ ಸಿದ್ದರಾಮಯ್ಯನವರಿಗೆ ಹೆಚ್ಚಿನ ಜನ ಬೆಂಬಲವಿದೆ. ಜನ ಬೆಂಬಲವಿರೋದಕ್ಕೆ ಬಿಜೆಪಿ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡುತ್ತಿದೆ. ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯುವ ಯತ್ನ ಮಾಡಿದ್ರೂ ಯಾರೂ ಬಿಜೆಪಿಗೆ ಹೋಗುತ್ತಿಲ್ಲ.  ಈ ಹಿಂದೆ ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದ ಮೂಲಕ 17 ಶಾಸಕರನ್ನು ಖರೀದಿ ಮಾಡಿ ಬಿಜೆಪಿ ಸರಕಾರ ರಚನೆ ಮಾಡಿತ್ತು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕುಟುಂಬಸಮೇತ 1 ವಾರ ಡಿಕೆಶಿ ಅಮೆರಿಕ ಪ್ರವಾಸಕ್ಕೆ; ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಭೇಟಿ?

ಇನ್ನು ಪಿಎಂ ನರೇಂದ್ರ ಮೋದಿ ಡಿಸಿಎಂ ಡಿಕೆ ಶಿವಕುಮಾರ ಭೇಟಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು,  ಬಿಜೆಪಿ ನಾಯಕರ ಫೇಸ್ ವ್ಯಾಲ್ಯೂ ಹೋಗಿದೆ. ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಮೋದಿ ಬಾಗಿಲವರೆಗೆ ಹೋಗಿ ಭೇಟಿ ಮಾಡ್ತಿದ್ದಾರೆ. ಡಿಕೆ ಶಿವಕುಮಾರ ಬಗ್ಗೆ ಪ್ರಧಾನಿ ಮೋದಿಗೆ ಅಂಜಿಕೆ ಇದೆ ಹೀಗಾಗಿ ಡಿಕೆಶಿ ಭೇಟಿಯಾಗಲು ಮೋದಿ ಸಮಯ ಕೊಟ್ಟು ಭೇಟಿಯಾಗಿದ್ದಾರೆ.  ಅಂಜಿಕೆ ಇದ್ರೆ ಭೇಟಿಯಾಗಲು ಕರೆಯುತ್ತಾರೆಂದ ಸಚಿವ ದರ್ಶನಾಪುರ. 

 

ದೇಶಪಾಂಡೆ, ಎಂಬಿ ಪಾಟೀಲ್ ಆಯ್ತು, ಈಗ ಜಾಲತಾಣದಲ್ಲಿ 'ಜಾರಕಿಹೊಳಿ ಫಾರ್ ಸಿಎಂ' ಅಭಿಯಾನ!

ರಾಜ್ಯ ಬಿಜೆಪಿ ಕಚೇರಿಗೆ ಬಾಂಬ್ ದಾಳಿ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಕಚೇರಿಗೆ ಯಾರು ಮುಟ್ಟೋಕೆ ಹೋಗ್ತಾರೆ. ಎನ್‌ಐಎ ವರದಿ ಕೊಟ್ಟಿದೆ ಅಂದ್ರೆ ಎನ್‌ಐಎ ಅವರದ್ದೇ ಇದೆ. ಬೇಕಾದ್ದು ವರದಿ ಕೊಡ್ತಾರೆ. ಬೆದರಿಕೆ ಇದೆ ಅಂದ್ರೆ ಕೇಂದ್ರ ಗುಪ್ತಚರ ಇಲಾಖೆ ವೈಫಲ್ಯ ಆಗಿದೆ ಎಂದೇ ಅರ್ಥ. ಹಾಗಾದ್ರೆ ಪ್ರಧಾನಿ ಮೋದಿ ರಾಜೀನಾಮೆ ಕೊಡ್ತಾರಾ? ಬಾಂಬ್‌ ಬೆದರಿಕೆ ಇರೋದು ಸುಳ್ಳು ಸುದ್ದಿ. ಕೇಂದ್ರ ಏಜೆನ್ಸಿಗಳು ಕೇಂದ್ರ ಸರ್ಕಾರದ ಕೈಗೊಂಬೆಯಾಗಿವೆ. ವಾಲ್ಮೀಕಿ ನಿಗಮ ಹಗರಣ ಸಂಬಂಧ ಇಡಿಯಿಂದ ಚಾರ್ಜ್ ಶೀಟ್ ಸಲ್ಲಿಸಿದ ವಿಚಾರ ನೋಡಿ. ವಾಲ್ಮೀಕಿ ನಿಗಮ ಹಗರಣಕ್ಕೂ ಇಡಿಗೂ ಏನು ಸಂಬಂಧ? ಸಿಬಿಐಗೆ ಸಂಬಂಧ ಇರೋ ಕೇಸ್ ಇದು. ಇವೆಲ್ಲಾ ಕೇಂದ್ರ ಕೈಯಲ್ಲಿ ಇದೆ ಏನ್ ಬೇಕಾದ್ರು ಮಾಡ್ತಾರೆ ಅವರು ಎಂದು ಕಿರಿಕಾರಿದರು.

Latest Videos
Follow Us:
Download App:
  • android
  • ios