ಎತ್ತಿನಹೊಳೆ ಏತ ಕಾಮಗಾರಿ ಉದ್ಘಾಟನೆ ಹಾಗೂ ಗಣೇಶ ಹಬ್ಬದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಎಂಟು ದಿನಗಳ ಪ್ರವಾಸಕ್ಕಾಗಿ ಕುಟುಂಬ ಸದಸ್ಯರ ಜತೆ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಬೆಂಗಳೂರು (ಸೆ.9): ಎತ್ತಿನಹೊಳೆ ಏತ ಕಾಮಗಾರಿ ಉದ್ಘಾಟನೆ ಹಾಗೂ ಗಣೇಶ ಹಬ್ಬದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಎಂಟು ದಿನಗಳ ಪ್ರವಾಸಕ್ಕಾಗಿ ಕುಟುಂಬ ಸದಸ್ಯರ ಜತೆ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್‌(DK Shivakumar) ಪಕ್ಷ ಸಂಘಟನೆ ಹಾಗೂ ಸರ್ಕಾರದ ಕಾರ್ಯಕ್ರಮಗಳ ಒತ್ತಡದಿಂದ ವಿರಾಮ ಪಡೆದು ಕುಟುಂಬದ ಜತೆ ಕಾಲ ಕಳೆಯಲು ಭಾನುವಾರ ಅಮೆರಿಕದ ವಾಷಿಂಗ್ಟನ್‌ಗೆ ತೆರಳಿದರು. ಈ ತಿಂಗಳ 16ರವರೆಗೆ ಡಿಕೆಶಿ ಪ್ರವಾಸದಲ್ಲಿ ಇರಲಿದ್ದಾರೆ.

'ಸಿಟ್ಟಾಗಬೇಡ್ರಿ ಮುನಿಯಪ್ಪ, ಯಾಕ್ರೀ ರೈಜ್ ಆಗ್ತೀರಾ?' ಎತ್ತಿನಹೊಳೆ ಉದ್ಘಾಟನೆ ವೇಳೆ ಮುನಿಸಿಕೊಂಡ ಮುನಿಯಪ್ಪಗೆ ಸಿಎಂ ಸಮಾಧಾನ

ಇದಕ್ಕೂ ಮೊದಲು ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ, ಪಕ್ಷ ಹಾಗೂ ಸರ್ಕಾರದ ಕುರಿತ ಹಲವು ವಿಚಾರಗಳ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಭಾನುವಾರ ಪತ್ರ ಬರೆದಿರುವ ಅವರು, ‘ನಿಮಗೆ ಮೊದಲೇ ಮಾಹಿತಿ ನೀಡಿದಂತೆ ಖಾಸಗಿ ಭೇಟಿಗಾಗಿ ಸೆ.8 ರಂದು ಸಂಜೆ ನಾನು ವಾಷಿಂಗ್ಟನ್‌ಗೆ ತೆರಳುತ್ತಿದ್ದೇನೆ. 16ರಂದು ವಾಪಸಾಗುತ್ತೇನೆ’ ಎಂದು ಹೇಳಿದ್ದಾರೆ.

ಬಯಲುಸೀಮೆಯನ್ನು ಬಂಗಾರದ ಸೀಮೆ ಮಾಡುವ ಶುಭ ಘಳಿಗೆ: ಡಿ.ಕೆ.ಶಿವಕುಮಾರ್

ಯಾವ ನಾಯಕರನ್ನೂ ಭೇಟಿಯಾಗಲ್ಲ: ಡಿಕೆಶಿ

ಕುಟುಂಬದ ಸದಸ್ಯರ ಜತೆ ಕೈಗೊಳ್ಳುತ್ತಿರುವ ಒಂದು ವಾರದ ಅಮೆರಿಕ ಪ್ರವಾಸ ಖಾಸಗಿಯದ್ದಾಗಿದೆ. ಈ ವೇಳೆ ನಾನು ಯಾವುದೇ ನಾಯಕರನ್ನು ಭೇಟಿ ಮಾಡುತ್ತಿಲ್ಲ ಎಂದು ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಅವರು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಹಾಗೂ ಹಾಲಿ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಕಮಲಾ ಹ್ಯಾರಿಸ್‌ರನ್ನು ಭೇಟಿಯಾಗಲಿದ್ದಾರೆ ಎಂದು ವದಂತಿ ಹರಡಿತ್ತು.