Asianet Suvarna News Asianet Suvarna News

ದೇಶಪಾಂಡೆ, ಎಂಬಿ ಪಾಟೀಲ್ ಆಯ್ತು, ಈಗ ಜಾಲತಾಣದಲ್ಲಿ 'ಜಾರಕಿಹೊಳಿ ಫಾರ್ ಸಿಎಂ' ಅಭಿಯಾನ!

ಮುಡಾ ಹಗರಣದ ವಿಚಾರಣೆ ಈಗಾಲೇ ಕೋರ್ಟ್‌ನಲ್ಲಿ ನಡೆಯುತ್ತಿದೆ. ಒಂದು ವೇಳೆ ಕೋರ್ಟ್‌ ತೀರ್ಪು ಸಿಎಂ ಸಿದ್ದರಾಮಯ್ಯ ವಿರುದ್ಧ ಬಂದರೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾದ ಸಂದರ್ಭ ಬರಬಹುದು. ನಂತರ ರಾಜ್ಯ ಸಿಎಂ ಯಾರಾಗಬಹುದು ಎಂಬ ಚರ್ಚೆ ಇದೀಗ ನಡೆದಿದೆ. 

If siddaramaiah resigns who will be the next cm of karnataka rav
Author
First Published Sep 9, 2024, 5:29 AM IST | Last Updated Sep 9, 2024, 5:29 AM IST

ಬೆಳಗಾವಿ (ಸೆ.9): ಮುಡಾ ಹಗರಣದ ವಿಚಾರಣೆ ಈಗಾಲೇ ಕೋರ್ಟ್‌ನಲ್ಲಿ ನಡೆಯುತ್ತಿದೆ. ಒಂದು ವೇಳೆ ಕೋರ್ಟ್‌ ತೀರ್ಪು ಸಿಎಂ ಸಿದ್ದರಾಮಯ್ಯ ವಿರುದ್ಧ ಬಂದರೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾದ ಸಂದರ್ಭ ಬರಬಹುದು. ನಂತರ ರಾಜ್ಯ ಸಿಎಂ ಯಾರಾಗಬಹುದು ಎಂಬ ಚರ್ಚೆ ಇದೀಗ ನಡೆದಿದೆ. 

ಸಿಎಂ ರೇಸ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ(DK Shivakumar), ಸಚಿವರಾದ ಆರ್‌.ವಿ.ದೇಶಪಾಂಡೆ, ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ ಇದ್ದಾರೆ. ಆದರೆ, ಈ ನಡುವೆಯೇ ಸತೀಶ ಜಾರಕಿಹೊಳಿ(Satish jarkiholi) ಸಿಎಂ ಆಗಲಿ ಎಂಬ ಅಭಿಯಾನವನ್ನು ಅವರ ಅಭಿಮಾನಿಗಳು ಆರಂಭಿಸಿದ್ದಾರೆ. ಈ ನಡುವೆ ಸತೀಶ ಜಾರಕಿಹೊಳಿ ಅವರ ಅಭಿಮಾನಿಯೊಬ್ಬರು ಜಾಹೀರಾತು ಪ್ರಕಟಿಸಿದ್ದಾರೆ. ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎನ್ನುವ ಜಾಹೀರಾತಿನಲ್ಲಿ ಬಿಜೆಪಿ ನಾಯಕರ ಪೋಟೋ ಪ್ರಕಟವಾಗಿದೆ.

ಸಿಎಂ ಆಗುವ ಆಸೆ ಇದೆ, ಸದ್ಯ ರೇಸ್‌ನಲ್ಲಿ ಇಲ್ಲ: ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟನೆ

 ಪ್ರಧಾನಿ ನರೇಂದ್ರ ಮೋದಿ, ರಮೇಶ್ ಜಾರಕಿಹೊಳಿ ಪೋಟೋ ಜೊತೆ ಸತೀಶ ಜಾರಕಿಹೊಳಿ ಪೋಟೋ ಪ್ರಕಟವಾಗಿದೆ. ರಜನೀಶ್ ಆಚಾರ್ಯ ಫೌಂಡೇಶನ್ ವತಿಯಿಂದ ಕಾಂಗ್ರೆಸ್‌ ನಾಯಕ ಸತೀಶ್‌ ಜಾರಕಿಹೊಳಿ ಮುಖ್ಯಮಂತ್ರಿಯಾಗಲಿ ಎಂದು ಜಾಹೀರಾತು ನೀಡಲಾಗಿದೆ. ಈ ಬ್ಯಾನರ್‌ನಲ್ಲಿ ಬೆಳಗಾವಿ ಜಿಲ್ಲೆಗೆ ಮೊದಲ ಸಿಎಂ ಸ್ಥಾನ ಸಿಗಲಿ ಎಂದು ಶುಭ ಹಾರೈಸಿದ್ದಾರೆ. ಇನ್ನೂ ಸಾಮಾಜಿಕ ಜಾಲತಾಣದಲ್ಲೂ ಸತೀಶ್‌ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದು ಅಭಿಮಾನ ಆರಂಭವಾಗಿದೆ.

ಸಚಿವ ಸತೀಶ ಜಾರಕಿಹೊಳಿ ಅವರು ಈಚೆಗೆ ಒಂದೆರಡು ಬಾರಿ ದೆಹಲಿ ಭೇಟಿ ನೀಡಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಕೂಡಾ ಸತೀಶ ಜಾರಕಿಹೊಳಿ ಸಿಎಂ ಆಗಲಿ ಎಂಬುವುದಕ್ಕೆ ಇಂಬು ನೀಡುವಂತಿದೆ.

ಸತೀಶ್ ಜಾರಕಿಹೊಳಿ ಹೈಕಮಾಂಡ್ ಭೇಟಿಯಲ್ಲಿ ವಿಶೇಷವಿಲ್ಲ: ಸಚಿವ ಎನ್.ಎಸ್.ಬೋಸರಾಜು

ಪಕ್ಷದ ವರಿಷ್ಠರು ಸಿದ್ದರಾಮಯ್ಯ ಅವರ ಒಪ್ಪಿಗೆ ಪಡೆದು ಅವರ ಬದಲಿಗೆ ಸತೀಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಬೇಕು ಎಂದು ಜನಾಭಿಪ್ರಾಯವಾಗಿದೆ. ಏಕೆಂದರೆ ಮೂವರು ಶಾಸಕರು, ಎಂಎಲ್‌ಸಿ ಹಾಗೂ ಸಂಸದರನ್ನು ಹೊಂದಿರುವ ಸತೀಶ್ ಜಾರಕಿಹೊಳಿ ಕುಟುಂಬದೊಂದಿಗೆ ಸಿದ್ದರಾಮಯ್ಯರವರು ನಿಕಟ ಸಂಪರ್ಕ ಹೊಂದಿದ್ದಾರೆ. ಈ ಬಾರಿ ಅವರಿಗೆ ಅವಕಾಶ ನೀಡಲು ಪಕ್ಷವೂ ಗಂಭೀರ ಚಿಂತನೆ ನಡೆಸುತ್ತಿದೆ. ಸಿದ್ದರಾಮಯ್ಯರವರ ನಂತರ ಹಿಂದುಳಿದ ವರ್ಗಗಳ ಪ್ರಬಲ ನಾಯಕರಾಗಿ ಸತೀಶ್ ಜಾರಕಿಹೊಳಿ ಅವರ ಜನಪ್ರಿಯತೆ ಹಾಗೂ ಎಸ್ಸಿ ಮತ್ತು ಎಸ್ ಟಿ ಸಮುದಾಯದ 15 ಶಾಸಕರು ಸೇರಿದಂತೆ 45ಕ್ಕೂ ಹೆಚ್ಚು ಶಾಸಕರ ಬೆಂಬಲವು ಸತೀಶ್ ಜಾರಕಿಹೊಳಿ ಅವರ ಪರವಾಗಿದೆ. ಹಾಗಾಗಿ ಈ ಬಾರಿ ಸತೀಶ್ ಜಾರಕಿಹೊಳಿ ರವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುವುದು ಹಿಂದುಳಿದ ವರ್ಗಗಳ ಒಮ್ಮತ ಅಭಿಪ್ರಾಯವಾಗಿದೆ.

Latest Videos
Follow Us:
Download App:
  • android
  • ios