ಬೆಂಗಳೂರು (ಸೆ.30): ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 32 ಅಪಾದಿತರು ದೋಷ ಮುಕ್ತರಾಗಿದ್ದಾರೆ. 

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಪೂರ್ವ ಯೋಜಿತವಲ್ಲ ಎನ್ನುವುದನ್ನು ತೀರ್ಪು ಎತ್ತಿ ಹಿಡಿದಿದೆ ಎಂದು ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ ರವಿ ಹೇಳಿದ್ದಾರೆ. 

ಬಿಜೆಪಿಯು ಬಾಬ್ರಿ ಮಸೀದಿ ಸಂಬಂಧ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತದೆ. ಬಾಬ್ರಿ ಮಸೀದಿ ಪ್ರಕರಣವನ್ನೇ ನೆಪವಾಗಿಟ್ಟುಕೊಂಡು 1992 ಬಿಜೆಪಿಯ ನಾಲ್ಕು ಸರ್ಕಾರಗಳನ್ನು ವಜಾ ಮಾಡುವ ಕೆಲಸ ನಡೆಯಿತು. ಆಗ ಅಂತಹ ಸಂವಿಧಾನ ಬಾಹಿರ ಕೆಲಸವಾಗಿತ್ತು ಎಂದು ಸಚಿವ ಸಿ ಟಿ ರವಿ ಹೆಳಿದರು. 

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿ ಸೇರಿ ಎಲ್ಲಾ ಆರೋಪಿಗಳು ಖುಲಾಸೆ! ..

ಸತ್ಯವನ್ನು ನ್ಯಾಯಾಲಯವು ಎತ್ತಿ ಹಿಡಿದಿದೆ.  ನ್ಯಾಯಾಲಯದ ತೀರ್ಪನ್ನು  ಸ್ವಾಗತಿಸುತ್ತೇನೆ. ಆವತ್ತು ನಾಲ್ಕು  ಬಿಜೆಪಿ ಸರ್ಕಾರಗಳನ್ನು ವಜಾ ಮಾಡಿದ ಕಾಂಗ್ರೆಸ್ ದೇಶದ ಜನತೆಯ ಕ್ಷಮೆ ಕೇಳಿ ಎಂದು ಸಿ ಟಿ ರವಿ ಆಗ್ರಹಿಸಿದರು. 

ಇತಿಹಾಸ ಬಲ್ಲ ದೇಶದ ಎಲ್ಲಾ ವ್ಯಕ್ತಿಗಳಿಗೂ ವಾಸ್ತವದ ಸತ್ಯ  ಗೊತ್ತಿದೆ.  ಬಿಜೆಪಿಯ ಅಜೆಂಡಾದಲ್ಲಿ ಮಸೀದಿ ಒಡೆಯುವುದು ಇರಲಿಲ್ಲ ಎಂದು ಸಿ ಟಿ ರವಿ ಹೇಳಿದರು. 

 1991 ರಲ್ಲಿ  ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿದ ಲಕ್ನೋ ಸಿಬಿಐ ಕೋರ್ಟ್ ಧ್ವಂಸ ಪ್ರಕರಣ ಪೂರ್ವ ಯೋಜಿತವಲ್ಲ.  ಇದರಲ್ಲಿ ಕ್ರಿಮಿನಲ್ ಪಿತೂರಿ ನಡೆದಿಲ್ಲ.  ಇದರಿಂದ  ಅಡ್ವಾಣಿ, ಜೋಶಿ ಸೇರಿ ಎಲ್ಲಾ ಆರೋಪಿಗಳು ನಿರ್ದೋಷಿಗಳೆಂದು ತೀರ್ಪು ನೀಡಿದೆ.