ಕರ್ನಾಟಕ ಮಾಧ್ಯಮ ಅಕಾಡೆಮಿ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುವರ್ಣ ನ್ಯೂಸ್ ವಾಹಿನಿಯ ನಾಲ್ವರು ಮತ್ತು ಕನ್ನಡ ಪ್ರಭ ಪತ್ರಿಕೆಯ ಒಬ್ಬರು ಸೇರಿದಂತೆ ಏಷ್ಯಾನೆಟ್ ಸಂಸ್ಥೆಯ ಐವರು ಪತ್ರಕರ್ತರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.

ಬೆಂಗಳೂರು (ಫೆ.03): ರಾಜ್ಯ ಸರ್ಕಾರದಿಂದ ವಾರ್ಷಿಕವಾಗಿ ಕೊಡಮಾಡುವ ಕರ್ನಾಟಕ ಮಾಧ್ಯಮ ಅಕಾಡೆಮಿ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಸುವರ್ಣ ನ್ಯೂಸ್ ವಾಹಿನಿಯ ನಾಲ್ವರು ಹಾಗೂ ಕನ್ನಡ ಪ್ರಭ ಪತ್ರಿಕೆಯ ಒಬ್ಬರು ಸೇರಿದಂತೆ ಏಷ್ಯಾನೆಟ್ ಸಂಸ್ಥೆಯ ಐವರು ಸೋಮವಾರ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಬೆಂಗಳೂರಿನ ಐಐಎಸಿಯಲ್ಲಿರುವ ಜೆಎನ್ ಟಾಟಾ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಮಾಧ್ಯಮ ಅಕಾಡೆಮಿ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗಿಯಾಗಿ ಪ್ರಶಸ್ತಿ ಪ್ರದಾನ ಮಾಡಿದರು. 2023-24ನೇ ಸಾಲಿನಲ್ಲಿ ರಾಜ್ಯದ ವಿವಿಧ ಸುದ್ದಿವಾಹಿನಿ ಮತ್ತು ಪತ್ರಿಕೆಯ 60 ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಲ್ಲ ಅರ್ಹ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಕಳೆದ ಜನವರಿ ತಿಂಗಳೇ ಪ್ರಕಟಿಸಲಾಗಿದ್ದು, ಇಂದು ಪ್ರಶಸ್ತಿ ಸ್ವೀಕರಿಸಿದರು.

ಇದನ್ನೂ ಓದಿ: ಏಷ್ಯಾನೆಟ್ ಸುವರ್ಣ ನ್ಯೂಸ್‌ನ ನಾಲ್ವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಏಷ್ಯಾನೆಟ್ ಸುವರ್ಣ ನ್ಯೂಸ್‌ ರಾಜಕೀಯ ವಿಭಾಗದ ಮುಖ್ಯಸ್ಥ ಆನಂದ ಪರಮೇಶ್ವರ ಬೈದನಮನೆ, ನಿರೂಪಣಾ ವಿಭಾಗದ ಮುಖ್ಯಸ್ಥೆ ಭಾವನಾ ನಾಗಯ್ಯ, ಡಿಜಿಟಲ್ ವಿಭಾಗದ ಮುಖ್ಯಸ್ಥೆ ನಿರುಪಮಾ ಕೆ.ಎಸ್., ಹಿರಿಯ ವರದಿಗಾರ ನಂದೀಶ್ ಮಲ್ಲೇನಹಳ್ಳಿ, ಕನ್ನಡ ಪ್ರಭ ಹುಬ್ಬಳ್ಳಿ ವಿಭಾಗದ ಹಿರಿಯ ವರದಿಗಾರ ಶಿವಾನಂದ ಗೊಂಬಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.

ಆನಂದ ಬೈದನಮನೆ, ಪ್ರಶಸ್ತಿ ಸ್ವೀಕಾರ

ನಿರುಪಮಾ ಕೆ.ಎಸ್. ಪ್ರಶಸ್ತಿ ಸ್ವೀಕಾರದ ಕ್ಷಣ

ಭಾವನಾ ನಾಗಯ್ಯ, ಪ್ರಶಸ್ತಿ ಸ್ವೀಕಾರ

ನಂದೀಶ್ ಮಲ್ಲೇನಹಳ್ಳಿ, ಪ್ರಶಸ್ತಿ ಸ್ವೀಕಾರ

ಪ್ರಶಸ್ತಿ ಸ್ವೀಕರಿಸಿ ನಗೆ ಬೀರಿದ ಶಿವಾನಂದ ಗೊಂಬಿ,