ಏಷ್ಯಾನೆಟ್ ಸುವರ್ಣ ನ್ಯೂಸ್‌ನ ನಾಲ್ವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
2023 ಮತ್ತು 2024ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ನಾಲ್ವರು ಸಿಬ್ಬಂದಿಗೆ ನೀಡಲಾಗಿದೆ. ಆನಂದ್ ಬೈದನಮನೆ, ಕೆ.ಎಸ್. ನಿರುಪಮಾ, ಭಾವನಾ ನಾಗಯ್ಯ ಮತ್ತು ನಂದೀಶ್ ಮಲ್ಲೇನಹಳ್ಳಿ ಪ್ರಶಸ್ತಿ ಪುರಸ್ಕೃತರು.
ಬೆಂಗಳೂರು (ಜ.02): ರಾಜ್ಯದಲ್ಲಿ ಪತ್ರಿಕೋದ್ಯಮ, ದೃಶ್ಯಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ನಾಲ್ವರಿಗೆ 2023 ಹಾಗೂ 2024ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಕೊಡಮಾಡುವ 2023-24ನೇ ಸಾಲಿನ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟ ಮಾಡಲಾಗಿದೆ. ಇದರಲ್ಲಿ ವಿವಿಧ ವಿಭಾಗಗಳ ಪ್ರಶಸ್ತಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ನಾಲ್ವರು ಭಾಜನರಾಗಿದ್ದಾರೆ. ಸುವರ್ಣ ನ್ಯೂಸ್ ಪೊಲಿಟಿಕಲ್ ಹೆಡ್ ಆನಂದ್ ಬೈದನಮನೆ, ಸುವರ್ಣ ನ್ಯೂಸ್ ಡಿಜಿಟಲ್ ಹೆಡ್ ಕೆ.ಎಸ್. ನಿರುಪಮಾ, ಸುವರ್ಣ ನ್ಯೂಸ್ ಆ್ಯಂಕರ್ ಭಾವನಾ ನಾಗಯ್ಯ ಹಾಗೂ ಸುವರ್ಣ ನ್ಯೂಸ್ ವರದಿಗಾರ ನಂದೀಶ್ ಮಲ್ಲೇನಹಳ್ಳಿಗೆ ಮೈಸೂರು ದಿಗಂತ ದತ್ತಿ ಪ್ರಶಸ್ತಿ ಪ್ರಕಟ ಮಾಡಲಾಗಿದೆ.
ಉಳಿದಂತೆ ರಾಜ್ಯದ ವಿವಿಧ ಪತ್ರಿಕೆಗಳು, ದೃಶ್ಯ ಮಾಧ್ಯಮಗಳ ಪತ್ರಕರ್ತರಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪ್ರಕಟ ಮಾಡಲಾಗಿದೆ. 2023ನೇ ಸಾಲಿನಲ್ಲಿ ಹಿರಿಯ ಪತ್ರಕರ್ತ ಅ.ಚ. ಶಿವಣ್ಣ ಅವರಿಗೆ ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿಯನ್ನು ಕೊಡಲಾಗಿದೆ. ಇನ್ನು 2024ನೇ ಸಾಲಿನ ವಾರ್ಷಿಕ ಜೀವಮಾನ ಸಾಧನೆಯ ವಿಶೇಷ ಪ್ರಶಸ್ತಿಗೆ ಮಂಗಳೂರಿನ ಹಿರಿಯ ಪತ್ರಕರ್ತ ಅಬ್ದುಲ್ ಸಲಾಂ ಪುತ್ತಿಗೆ ಅವರು ಭಾಜನರಾಗಿದ್ದಾರೆ.