ರಾಜ್ಯದಲ್ಲಿ ಮುಂದುವರಿದ ಬಾಣಂತಿಯರ ಸಾವು; ನಿನ್ನೆ ಕಲಬುರಗಿ ಭಾಗ್ಯ, ಇಂದು ಚಿಕ್ಕಮಗಳೂರು ಸವಿತಾ ಬಲಿ!

ಚಿಕ್ಕಮಗಳೂರು ಮತ್ತು ಕಲಬುರಗಿಯಲ್ಲಿ ಇಬ್ಬರು ಬಾಣಂತಿಯರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರಿನಲ್ಲಿ ಹೆರಿಗೆಯಾದ ಮೂರು ದಿನಗಳ ನಂತರ ಮಹಿಳೆಯೊಬ್ಬರು ಸಾವಿಗೀಡಾಗಿದ್ದರೆ, ಕಲಬುರಗಿಯಲ್ಲಿ ಹೆರಿಗೆಯ ನಂತರ ಲೋ ಬಿಪಿಯಿಂದ ಮತ್ತೊಬ್ಬ ಮಹಿಳೆ ಮೃತಪಟ್ಟಿದ್ದಾರೆ.

Karnataka Maternal death repeated in Kalaburagi and Chikkamagaluru Govt hospital sat

ಚಿಕ್ಕಮಗಳೂರು/ಕಲಬುರಗಿ (ಡಿ.18): ರಾಜ್ಯದಲ್ಲಿ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಕುರಿತು ಚರ್ಚೆ ನಡೆಯುತ್ತಿರುವ ವೇಳೆಯೇ ಕಲಬುರಗಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಿನ್ನೆ ಹಾಗೂ ಇಂದು ಬೆಳಗ್ಗೆ ಸೇರಿದಂತೆ ಕಳೆದೆರಡು ದಿನಗಳಲ್ಲಿ ದಿನಕ್ಕೊಬ್ಬ ಬಾಣಂತಿಯರ ಸಾವು ಸಂಭವಿಸಿದೆ. ಅಧಿವೇಶನದಲ್ಲಿ ಕೇವಲ ಭಾಷಣಕ್ಕೆ ಸೀಮಿತವಾಗಿವ ಭರವಸೆಗಳು ನೀಡುವ ಸರ್ಕಾರದಿಂದ ಯಾವುದೇ ಜೀವ ಉಳಿಸುವ ಕಾರ್ಯಕ್ರಮವಂತೂ ಜಾರಿ ಆಗುತ್ತಿಲ್ಲ ಎಂಬುದು ಪುನಃ ಸಾಬೀತಾಗುತ್ತಿದೆ.

ಚಿಕ್ಕಮಗಗಳೂರಿನಲ್ಲಿ ಇಂದು ಬೆಳಗ್ಗೆ 3 ದಿನದ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮೃತ ಮಹಿಳೆ ಸಂಬಂಧಿಕರು ಆರೋಪ ಮಾಡಿದ್ದಾರೆ. ಕಳೆದ 3 ದಿನದ ಹಿಂದೆ ಜಿಲ್ಲಾಸ್ಪತ್ರೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದ ಚಿಕ್ಕಮಗಳೂರು ನಗರದ ಶಂಕರಪುರ ನಿವಾಸಿ ಸವಿತಾ (26) ಮೃತ ದುರ್ದೈವಿ ಆಗಿದ್ದಾರೆ. ಕಳೆದ 2 ದಿನದ ಬಳಿಕ ಬಾಣಂತಿ ಆರೋಗ್ಯದಲ್ಲಿ ಏರುಪೇರು ಸಂಭವಿಸಿದೆ. ಆಗ ತಮ್ಮಿಂದ ಬಾಣಂತಿಗೆ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ, ಇಲ್ಲಿ ಆ ಸೌಲಭ್ಯಗಳಿಂದ ಎಂದು ಹೇಳುತ್ತಿದ್ದಂತೆ ಕೂಡಲೇ ಗರ್ಭಿಣಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಕೆ.ಆರ್.ಎಸ್. ಆಸ್ಪತ್ರೆಯಲ್ಲಿ ಬಾಣಂತಿ ಸಾವಿಗೀಡಾಗಿದ್ದಾರೆ.

ಇನ್ನು ಬಾಣಂತಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಅವರ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮಗುವಿನ ಸಿಜೇರಿಯನ್ ವೇಳೆ ಲೋ ಬಿಪಿಯಿಂದ ಗರ್ಭೀಣಿ ಅಸ್ವಸ್ಥಳಾಗಿದ್ದರು ಎಂದು ವೈದ್ಯರು ಹೇಳಿದ್ದರು. ಜೊತೆಗೆ, ಆಪರೇಷನ್‌ಗೂ ಮುನ್ನ ಶುಗರ್, ಬಿಪಿ ಪರೀಕ್ಷೆ ಮಾಡಿಲ್ಲವೇ ಎಂದು ಕುಟುಂಬಸ್ಥರ ಪ್ರಶ್ನೆ ಮಾಡಿದಾಗ ಈ ಬಗ್ಗೆ ಏನೂ ಉತ್ತರ ನೀಡಿರಲಿಲ್ಲ. ಹೀಗಾಗಿ, ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕುಟುಂಬಸ್ಥರು ಹಾಗೂ ಸ್ಥಳಿಯರ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ: ಲ್ಯಾಬ್‌ಗಳಿಂದ ರಿಂಗರ್‌ ಲ್ಯಾಕ್ಟೇಟ್‌ಗೆ ಕ್ಲೀನ್‌ಚಿಟ್‌

ಕಲಬುರಗಿ ಬಾಣಂತಿ ಭಾಗ್ಯಶ್ರೀ ನಿನ್ನೆ ಸಾವು: ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಮಂಗಳವಾರ ಹೆರಿಗೆಗೆ ಬಂದಿದ್ದ ಬಾಣಂತಿ ಭಾಗ್ಯಶ್ರೀ (22) ಹೆರಿಗೆ ನಂತರ ಸಾವಿಗೀಡಾಗಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಟಕಿ ಗ್ರಾಮದ ನಿವಾಸಿ ಭಾಗ್ಯಶ್ರೀ ಅವರು ನಿನ್ನೆ ಮಧ್ಯಾಹ್ನ ಹೆರಿಗೆಗಾಗಿ ಅಫಜಲಪುರ ತಾಲೂಕಾ ಆಸ್ಪತ್ರೆಗೆ ದಾಖಲು ಆಗಿದ್ದರು. ಬೆಳಿಗ್ಗೆ 8 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆಯ ನಂತರ ಬಾಣಂತಿಗೆ ಲೋ ಬಿಪಿ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯಿದೆ ಎಂದು ಕಲಬುರಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ, ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಣಂತಿ ಸಾವಿಗೀಡಾಗಿದ್ದಾರೆ.

ಬಾಣಂತಿ ಭಾಗ್ಯಶ್ರೀ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಣಂತಿ ಸಾವಿನ ತನಿಖೆ ಮಾಡುವಂತೆ ಕುಟುಂಬಸ್ಥರಿಂದ ಪ್ರತಿಭಟನೆ ಮಾಡಿ ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಶರಣಬಸಪ್ಪ ಕ್ಯಾತನಾಳ ಅವರು, ಲೋ ಬಿಪಿ ಕಾರಣ ಭಾಗ್ಯಶ್ರೀ ಸಾವಿಗೀಡಾಗಿದ್ದಾಳೆ. ಈ ಸಾವಿನ ಬಗ್ಗೆ ತನಿಖೆಗೆ ಅಧಿಕಾರಿಗಳ ತಂಡ ನೇಮಿಸಲಾಗುತ್ತದೆ. ತನಿಖೆಯಲ್ಲಿ ವೈದ್ಯರ ನಿರ್ಲಕ್ಷತೆ ಕಂಡು ಬಂದರೆ ಖಂಡಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಬಾಣಂತಿಯರ ಸಾವಿನ ಸರಣಿ: 7 ತಿಂಗಳಲ್ಲಿ 326 ಬಲಿ, ಬೆಂಗಳೂರಿನಲ್ಲಿಯೇ 50 ಸಾವು

Latest Videos
Follow Us:
Download App:
  • android
  • ios