ಜೈಲಿನಿಂದಲೇ ಸ್ಪರ್ಧಿಸಿರೋ ಖಲಿಸ್ತಾನಿ ಅಮೃತ್‌ಪಾಲ್ ಸಿಂಗ್ 40 ಸಾವಿರ ಮತಗಳ ಮುನ್ನಡೆ
ಖಾದೂರ್ ಸಾಹಿಬ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 'ವಾರಿಸ್ ಪಂಜಾಬ್ ದೇ' ಮುಖ್ಯಸ್ಥ ಅಮೃತಪಾಲ್ ಸಿಂಗ್ ಆರಂಭಿಕ ಟ್ರೆಂಡ್‌ಗಳಲ್ಲಿ ಭಾರಿ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ನವದೆಹಲಿ: ಜೈಲಿನಿಂದಲೇ ಲೋಕಸಭಾ ಚುನಾವಣೆಗೆ (Loksabha Election 2024) ಸ್ಪರ್ಧೆ ಮಾಡಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್‌ಪಾಲ್ ಸಿಂಗ್ (Radical Sikh preacher Amritpal Singh) ಸದ್ಯದ ಪ್ರಕಾರ ಮುನ್ನಡೆ ಕಾಯ್ದುಕೊಂಡಿದ್ದಾನೆ. ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್‌ಪಾಲ್ ಸಿಂಗ್ ಪಂಜಾಬ್‌ನ ಖಾದೂರ್ ಸಾಹಿಬ್ ಕ್ಷೇತ್ರದಿಂದ (Punjab's Khadoor Sahib) ಸ್ಪರ್ಧಿಸಿದ್ದು, ಎದುರಾಳಿ ಸ್ಪರ್ಧಿಗಳಿಗೆ ತೀವ್ರ ಪೈಪೋಟಿಯನ್ನು ನೀಡುತ್ತಿದ್ದಾನೆ. ಬೆಳಗ್ಗೆ 11 ಗಂಟೆಯ ಭಾರತೀಯ ಚುನಾವಣಾ ಆಯೋಗದ (Indian Election Commission) ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ, ಅಮೃತಪಾಲ್ ಸಿಂಗ್ 45,180 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಅಮೃತ್‌ಪಾಲ್ ಸಿಂಗ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (NSA-National Security Act) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಅಸ್ಸಾಂನ ದಿಬ್ರುಗಢ (Assam's Dibrugarh jail) ಜೈಲಿನಲ್ಲಿದ್ದಾನೆ
ಖಾದೂರ್ ಸಾಹಿಬ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 'ವಾರಿಸ್ ಪಂಜಾಬ್ ದೇ' ಮುಖ್ಯಸ್ಥ ಅಮೃತಪಾಲ್ ಸಿಂಗ್ ಆರಂಭಿಕ ಟ್ರೆಂಡ್‌ಗಳಲ್ಲಿ ಭಾರಿ ಅಂತರದಿಂದ ಮುನ್ನಡೆ ಸಾಧಿಸಿದ್ದಾನೆ.
ಮಧ್ಯಪ್ರದೇಶದಲ್ಲಿ ಕ್ವೀನ್ ಸ್ವೀಪ್‌ನತ್ತ ಬಿಜೆಪಿ? ಎಲ್ಲಾ 29 ಕ್ಷೇತ್ರಗಳಲ್ಲಿ ಕಮಲ ಕಲಿಗಳ ಮುನ್ನಡೆ
ಯಾರು ಈ ಅಮೃತ್‌ಪಾಲ್ ಸಿಂಗ್?
30 ವರ್ಷದ ಅಮೃತ್‌ಪಾಲ್ ಸಿಂಗ್ ಪ್ರತ್ಯೇಕ ರಾಷ್ಟ್ರಕ್ಕೆ ಹೋರಾಡ್ತಿದ್ದಾರೆ. ಈ ಅಮೃತ್‌ಪಾಲ್ ಸಿಂಗ್ ಖಲಿಸ್ತಾನಿ ನಾಯಕನಾಗಿದ್ದು, ಅಮೃತಸರದ ಜಲ್ಲುಪುರ್ ಖೈರಾ ಬಾಬಾ ಬಾಕಲ್ ಈತನ ಹುಟ್ಟೂರು. ಈತ ಖಲಿಸ್ತಾನಿ ಉಗ್ರ ಭಿಂದ್ರನ್‌ವಾಲೆಯ ಕಟ್ಟಾ ಅನುಯಾಯಿಯೂ ಆಗಿದ್ದಾನೆ. ಅಲ್ಲದೆ, ಪಂಜಾಬ್ ರಾಜ್ಯದಲ್ಲಿ 2ನೇ ಭಿಂದ್ರನ್‌ವಾಲೆ ಎಂಬ ಖ್ಯಾತಿಯನ್ನೂ ಪಡೆದಿದ್ದಾನೆ. 2012 ರಿಂದ 10 ವರ್ಷ ದುಬೈ ಟ್ರಾನ್ಸ್‌ಪೋರ್ಟ್ ಬ್ಯುಸಿನೆಸ್‌ನಲ್ಲಿ ಕೆಲಸ ಮಾಡಿದ್ದ ಎಂದೂ ತಿಳಿದುಬಂದಿದ್ದು, 2022 ರಲ್ಲಿ ಪಂಜಾಬ್‌ಗೆ ಹಿಂದಿರುಗಿದ್ದಾನೆ.
ಇಂದು ಫಲಿತಾಂಶ ಪ್ರಕಟ
ಏಪ್ರಿಲ್ 19 ರಿಂದ ಆರಂಭವಾಗಿದ್ದ 18ನೇ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆದು ಜೂನ್ 1 ರಂದು ಮುಕ್ತಾಯವಾಗಿತ್ತು. ಇಂದು ಲೋಕಕದನದ ಮಹಾತೀರ್ಪು ಇಂದು ಹೊರಬೀಳಲಿದೆ. ಜಿದ್ದಾಜಿದ್ದಿಯ ಚುನಾವಣೆಯ ಫಲಿತಾಂಶ ದೇಶದ ಕುತೂಹಲ ಕೆರಳಿಸಿದೆ. ಬಿಜೆಪಿಯ ಚಾರ್ ಸೌ ಪಾರ್ ಎನ್ನುವ ಟಾರ್ಗೆಟ್ ನಿಜವಾಗಲಿದೆಯೇ? ಅಥವಾ ಇಂಡಿಯಾ ಮೈತ್ರಿಯ ಅಧಿಕಾರದ ಆಸೆ ಈಡರೇಲಿದೆಯೇ ಅನ್ನೋದು ತಿಳಿಯಲಿದೆ.
Live Blog: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕೈ ಕೊಟ್ಟ ಮತದಾರ, ಎಂಪಿಯಲ್ಲಿ ಕ್ಲೀನ್ ಸ್ವೀಪ್ ಸೂಚನೆ!
ದೇಶದ 543 ಲೋಕಸಭಾ ಕ್ಷೇತ್ರಕ್ಕೆ ಶೇ. 66.33 ರಷ್ಟು ಮತದಾನವಾಗಿದೆ. ಬಿಜೆಪಿ ಒಟ್ಟು 441 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್ 328 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಚುನಾವಣಾ ಆರಂಭಕ್ಕೂ ಮುನ್ನವೇ ಸೂರತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಯನಾಡ್, ರಾಯ್‌ಬರೇಲಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ, ಗುಜರಾತ್‌ನ ಗಾಂಧಿನಗರದಲ್ಲಿ ಅಮಿತ್ ಶಾ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಅವರ ರಿಸಲ್ಟ್ ಬಗ್ಗೆ ಹೆಚ್ಚಿನ ನಿರೀಕ್ಷ ಗರಿಗೆದರಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಾಬಲ್ಯ ಹೇಗಿರಲಿದೆ, ಉತ್ತರ ಭಾರತದ ಮತದಾರರನ್ನು ಸೆಳೆಯಲು ಇಂಡಿಯಾ ಮೈತ್ರಿ ಯಶಸ್ವಿಯಾಗಿದ್ಯಾ ಅನ್ನೋದು ಇಂದು ತೀರ್ಮಾನವಾಗಲಿದೆ.