ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಗೆ ಬ್ರೇಕ್​ ಹಾಕಲು ಕ್ಲೋಸ್​​ ಡೌನ್ ಜಾರಿ ಮಾಡಿದ್ದ ಸರ್ಕಾರ, ಕೊರೊನಾ ಸೋಂಕಿನ ಪ್ರಕರಣಗಳ ಹೆಚ್ಚಳದ ಕಾರಣದಿಂದ ಲಾಕ್​​ಡೌನ್​ ಜಾರಿ ಮಾಡಿದೆ. ಈ ಬಗ್ಗೆ ಸಿಎಂ ಹೇಳಿದ್ದಿಷ್ಟು

ಬೆಂಗಳೂರು, (ಮೇ.07): ಕರ್ನಾಟದಲ್ಲಿ ಕೊರೋನಾ 2ನೇ ಅಲೆ ಅಬ್ಬರ ಹೆಚ್ಚಾಗಿರುವ ಕಾರಣ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್​ ಮೊರೆ ಹೋಗಿದೆ.

Add Asianetnews Kannada as a Preferred SourcegooglePreferred

ಲಾಕ್​ಡೌನ್​ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು (ಶುಕ್ರವಾರ) ಸಂಜೆ ಅಧಿಕೃತ ಘೋಷಣೆ ಮಾಡಿದರು. ಮೇ. 10ರ ಬೆಳಗ್ಗೆ 6ರಿಂದ ಮೇ. 24ರ ವರೆಗೆ ಲಾಕ್‌ಡೌನ್‌ ಜಾರಿಯಲ್ಲಿರಲಿದ್ದು, ಅಗತ್ಯ ಸೇವೆಗಳನ್ನ ಹೊರತುಪಡಿಸಿ ಇನ್ನುಳಿದ ಚಟುವಟಿಕೆಗಳು ಅನುಮತಿ ಇಲ್ಲ. ಇದು ತಾತ್ಕಾಲಿಕ ಕ್ರಮವಾಗಿದೆ ಎಂದರು.

ನಮ್ಮ ಅನುದಾನ ಬೇಕಿದ್ರೆ ವಾಪಸ್ ತಗೊಂಡು ಬಡವರಿಗೆ ಅಕ್ಕಿ, ಹಣ ಕೊಡಿ: ಬಿಜೆಪಿ ಶಾಸಕ ಮನವಿ

ಆಹಾರ, ಹಾಲು, ತರಕಾರಿ ಮಾರಾಟಕ್ಕೆ ಅನುಕೂಲುವಾಗುವಂತೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅನುಮತಿ ನೀಡಲಾಗಿದೆ. ಹಾಲಿನ ಅಂಗಡಿಗಳು ಸಂಜೆ 6 ಗಂಟೆಯವರೆಗೆ ತೆರೆದಿರಲು ಅವಕಾಶ ನೀಡಲಾಗಿದೆ. ತಳ್ಳೋ ಗಾಡಿಯಲ್ಲಿ ಕೂಡ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆಸ್ಪತ್ರೆಗೆ ಹೋಗದೋದಕ್ಕೆ ಅವಕಾಶ ನೀಡಲಾಗಿದೆ ಎಂದರು.

 ಈ ಅವಧಿಯಲ್ಲಿ ಅಂಗಡಿ, ಬಾರ್, ಹೋಟೆಲ್, ಪಬ್ ನಿರ್ಬಂಧಿಸಲಾಗಿದೆ. ನಿಗಧಿತ ಕಟ್ಟಡದೊಳಗೆ ಜನರನ್ನು ಬಳಸಿಕೊಂಡು ಕೆಲಸ ಮಾಡೋದಕ್ಕೆ ಅವಕಾಶ. ವಿವಾಹದಲ್ಲಿ 50 ಜನರಿಗೆ ಮಾತ್ರ ಭಾಗವಹಿಸೋದಕ್ಕೆ ಅವಕಾಶ ನೀಡಲಾಗಿದೆ. ಹೆಚ್ಚು ಜನರು ಭಾಗವಹಿಸಿದ್ರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.

ಕಾರ್ಮಿಕರಲ್ಲಿ ವಿಶೇಷ ಮನವಿ
ಈ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೂಲಿ ಕಾರ್ಮಿಕರಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದು, ಕಟ್ಟಡ ಕಾಮಗಾರಿ ನಡೆಯುತ್ತವೆ. ಅದಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಕಾರ್ಮಿಕರು ಯಾವುದೇ ಕಾರಣಕ್ಕೂ ನಗರಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿದರು.

ಕರ್ನಾಟಕ ಲಾಕ್​ಡೌನ್: ಏನಿರತ್ತೆ? ಏನಿರಲ್ಲ? ಇಲ್ಲಿದೆ ಹೊಸ ಗೈಡ್‌ಲೈನ್ಸ್