ಕರ್ನಾಟಕ ಲಾಕ್‌ಡೌನ್: ಏನಿರತ್ತೆ? ಏನಿರಲ್ಲ? ಇಲ್ಲಿದೆ ಹೊಸ ಗೈಡ್‌ಲೈನ್ಸ್
ಮೇ 10 ರಿಂದ ಮೇ 24 ರವೆರೆಗೆ ಕರ್ನಾಟಕವನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಘೋಷಿಸಿದ್ದಾರೆ. ಇನ್ನೂ ಲಾಕ್‌ಡೌನ್ ಸಮಯದಲ್ಲಿ ಏನಿರುತ್ತೆ? ಏನಿರಲ್ಲ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಮೇ.07): ಕರ್ನಾಟದಲ್ಲಿ ಕೊರೋನಾ 2ನೇ ಅಲೆ ಅಬ್ಬರ ಹೆಚ್ಚಾಗಿರುವ ಕಾರಣ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದೆ.
ಲಾಕ್‌ಡೌನ್ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು (ಶುಕ್ರವಾರ) ಸಂಜೆ ಅಧಿಕೃತ ಘೋಷಣೆ ಮಾಡಿದರು.
ಮೇ. 10ರ ಬೆಳಗ್ಗೆ 6ರಿಂದ ಮೇ. 24ರ ವರೆಗೆ ಲಾಕ್‌ಡೌನ್ ಜಾರಿಯಲ್ಲಿರಲಿದ್ದು, ಅಗತ್ಯ ಸೇವೆಗಳನ್ನ ಹೊರತುಪಡಿಸಿ ಇನ್ನುಳಿದ ಚಟುವಟಿಕೆಗಳಿಗೆ ಅನುಮತಿ ಇರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಕರ್ನಾಟಕ ಲಾಕ್‌ಡೌನ್, ಸಿಎಂ ಬಿಎಸ್‌ವೈ ಅಧಿಕೃತ ಘೋಷಣೆ.
ಆಹಾರ, ಹಾಲು, ತರಕಾರಿ ಮಾರಾಟಕ್ಕೆ ಅನುಕೂಲುವಾಗುವಂತೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅನುಮತಿ ನೀಡಲಾಗಿದೆ. ಹಾಲಿನ ಅಂಗಡಿಗಳು ಸಂಜೆ 6 ಗಂಟೆಯವರೆಗೆ ತೆರೆದಿರಲು ಅವಕಾಶ ಕಲ್ಪಿಸಲಾಗಿದೆ. ಹಾಗಾದ್ರೆ, ಇನ್ನೂ ಲಾಕ್‌ಡೌನ್ ಸಮಯದಲ್ಲಿ ಏನಿರುತ್ತೆ? ಏನಿರಲ್ಲ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
ಏನಿರುತ್ತೆ..?
* ಅಗತ್ಯ ವಸ್ತುಗಳ ಸಾಗಾಟಕ್ಕೆ ಮಾತ್ರ ಸರ್ಕಾರದ ಅನುಮತಿ
* ಅಗತ್ಯ ವಸ್ತುಗಳನ್ನ ಕೊಳ್ಳುವುದಕ್ಕೂ ಪ್ರತ್ಯೇಕ ಸಮಯ ನಿಗದಿ
* ವೈದ್ಯಕೀಯ ಸೇವೆಗೆ ಮಾತ್ರವೇ ಅವಕಾಶ
* ಬೆಳಗ್ಗೆ 6-10ರವರೆಗೆ ಅಗತ್ಯವಸ್ತು ಖರೀದಿಗೆ ಅವಕಾಶ
* ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಅನುಮತಿ
* ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮದ್ಯದ ಪಾರ್ಸಲ್‌ಗೆ ಅವಕಾಶ
* ಸ್ಥಳದಲ್ಲಿಯೇ ಕಾರ್ಮಿಕರು, ಕೆಲಸಗಾರರನ್ನು ಹೊಂದಿರುವ ನಿರ್ಮಾಣ ಚಟುವಟಿಕೆಗಳಿಗೆ ಹಾಗೂ ರಸ್ತೆ ಕಾಮಗಾರಿಗಳಿಗೆ ಅನುಮತಿ.
*ಮದುವೆ ಸಮಾರಂಭಗಳಲ್ಲಿ ಗರಿಷ್ಠ 50 ಜನರಿಗೆ ಅವಕಾಶ.
* ಅಂತ್ಯಸಂಸ್ಕಾರದಲ್ಲಿ 20 ಜನರಿಗೆ ಪಾಲುಗೊಳ್ಳಲು ಅವಕಾಶ
* ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿ, ಧಾರ್ಮಿಕ ಕಾರ್ಯಕ್ರಮಗಳು ಮೊದಲಾದ ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳು, ಸಮಾವೇಶಗಳನ್ನು ನಿಷೇಧಿಸಲಾಗಿದೆ.
ಏನಿರಲ್ಲ.?
* ಅಂತಾರಾಜ್ಯ, ಅಂತರ್ ಜಿಲ್ಲೆ ಪ್ರಯಾಣ ನಿಷೇಧ
* ರಾಜ್ಯದಲ್ಲಿ ಬಸ್, ಕ್ಯಾಬ್, ಆಟೋ ಸಂಚಾರ ಇರಲ್ಲ
* ಥಿಯೇಟರ್, ಜಿಮ್, ಮಾಲ್ ಸಂಪೂರ್ಣ ಬಂದ್
* ಪಬ್ , ಬಾರ್ ರೆಸ್ಟೋರೆಂಟ್ ಇರಲ್ಲ.
* ಶಾಲಾ-ಕಾಲೇಜು, ಕೋಚಿಂಗ್ ಸೆಂಟರ್ ಸೇರಿದಂತೆ ಶಿಕ್ಷಣ ಚಟುವಟಿಕೆಗಳು ಬಂದ್
* ವಾಹನ ಓಡಾಟಕ್ಕೆ ಸಂಪೂರ್ಣ ಬಂದ್
* ಖಾಸಗಿ ಕಚೇರಿಗಳು ಪೂರ್ತಿ ಕ್ಲೋಸ್
* ಗೂಡ್ಸ್ ವಹಿಕಲ್ ಓಡಾಟಕ್ಕೆ ಅವಕಾಶ