ಕೈಗಾರಿಕೆ ಉದ್ದೇಶಕ್ಕಾಗಿ ಕೈಗಾರಿಕೋದ್ಯಮಿಗಳು ಕೃಷಿ ಭೂಮಿ ಖರೀದಿಸಲು ಅವಕಾಶ ಮಾಡಿಕೊಡಲು ಇತ್ತೀಚೆಗೆ ತಾನೇ ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತಂದಿದ್ದ ಸರ್ಕಾರ ಈಗ, ಭೂಮಿ ಖರೀದಿಸುವ ಸಂಬಂಧ ಅನುಸರಿಸಬೇಕಾದ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿ ಸುತ್ತೋಲೆ ಹೊರಡಿಸಿದೆ.

ಬೆಂಗಳೂರು (ಜೂ. 17): ಕೈಗಾರಿಕೆ ಉದ್ದೇಶಕ್ಕಾಗಿ ಕೈಗಾರಿಕೋದ್ಯಮಿಗಳು ಕೃಷಿ ಭೂಮಿ ಖರೀದಿಸಲು ಅವಕಾಶ ಮಾಡಿಕೊಡಲು ಇತ್ತೀಚೆಗೆ ತಾನೇ ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತಂದಿದ್ದ ಸರ್ಕಾರ ಈಗ, ಭೂಮಿ ಖರೀದಿಸುವ ಸಂಬಂಧ ಅನುಸರಿಸಬೇಕಾದ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿ ಸುತ್ತೋಲೆ ಹೊರಡಿಸಿದೆ.

ಕೃಷಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕಾಗಿ ಕಾಯ್ದೆಯ 109ನೇ ಕಲಮಿನ ಅಡಿ ಖರೀದಿಸಲು ಇಚ್ಛಿಸುವ ಕೈಗಾರಿಕೋದ್ಯಮಗಳು ಕರ್ನಾಟಕ ಉದ್ಯೋಗ ಮಿತ್ರ ವೆಬ್‌ ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಕೈಗಾರಿಕೋದ್ಯಮಿಗಳು ಇನ್‌ವೆಸ್ಟ್‌ಮೆಂಟ್‌ ಮೆಮೊರಾಡಂ ನಲ್ಲಿ ಕೋರಿಕೆ ಸಲ್ಲಿಸಲಾಗಿರುವ ಜಮೀನಿನ ದಾಖಲೆ ಅಥವಾ ವಿವರದೊಂದಿಗೆ ಆನ್‌ಲೈನ್‌ ಮೂಲಕ ಓಖಿಋ pಟ್ಟಠಿa್ಝ ಪೋರ್ಟಲ್‌ನಿಂದ ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಸದರಿ ಜಮೀನಿನ ವಾಸ್ತವಾಂಶದ ಬಗ್ಗೆ ವರದಿ ಹಾಗೂ ನಿಯಮಾನುಸಾರ ಭೂ ಪರಿವರ್ತನಾ ಶುಲ್ಕ ನಿಗದಿಪಡಿಸಿ ನೀಡಲು ಕರ್ನಾಟಕ ಉದ್ಯೋಗ ಮಿತ್ರ ಕಳುಹಿಸತಕ್ಕದ್ದು. ಸದರಿ ವರದಿಯನ್ನು 15 ದಿನಗಳೊಳಗಾಗಿ ಜಿಲ್ಲಾಧಿಕಾರಿಗಳು ನೀಡಬೇಕಾಗುತ್ತದೆ.

'ಕೊರೋನಾ ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಸರ್ಕಾರದಿಂದ ರೈತರಿಗೆ ಅನ್ಯಾಯ'

ಜಮೀನುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಸಂಬಂಧಪಟ್ಟಜಿಲ್ಲಾಧಿಕಾರಿಗಳಿಂದ ಪಡೆದ ನಂತರ ಅಥವಾ ನಿಗದಿ ಅವಧಿಯೊಳಗೆ ಮಾಹಿತಿ ಬರದಿದ್ದಲ್ಲಿ ಓಖಿಋ pಟ್ಟಠಿa್ಝ ನಲ್ಲಿರುವ ಮಾಹಿತಿಯೊಂದಿಗೆ ಪ್ರಸ್ತಾವನೆಯನ್ನು ಲ್ಯಾಂಡ್‌ ಅಡಿಟ್‌ ಕಮಿಟಿ ಮುಂದೆ ಮಂಡಿಸತಕ್ಕದ್ದು. ಲ್ಯಾಂಡ್‌ ಆಡಿಟ್‌ ಕಮಿಟಿ ಅನುಮೋದಿಸಿದ ಪ್ರಸ್ತಾವನೆಯನ್ನು ಕರ್ನಾಟಕ ಉದ್ಯೋಗ ಮಿತ್ರವು ‘ರಾಜ್ಯಮಟ್ಟದ ಏಕ ಗವಾಕ್ಷಿ ಒಪ್ಪಿಗೆ ಸಮಿತಿ’ ಮತ್ತು ‘ರಾಜ್ಯ ಮಟ್ಟದ ಒಪ್ಪಿಗೆ ಸಮಿತಿ’ ಮುಂದೆ ಮಂಡಿಸಬೇಕು.

ಈ ಎರಡು ಸಮಿತಿಗಳಿಂದ ಅನುಮೋದನೆಗೊಂಡ ಪ್ರಸ್ತಾವನೆಗಳಿಗೆ ಹೊರಡಿಸಲಾಗುವ ಸರ್ಕಾರಿ ಆದೇಶ/ ಆಯುಕ್ತರು,ಕೈಗಾರಿಕಾಭಿವೃದ್ಧಿ ಅವರು ಹೊರಡಿಸಲಾಗುವ ಆದೇಶಗಳು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109 ಅಡಿ ನೀಡುವ ಆದೇಶವಗಿರುತ್ತದೆ. ಈ ರೀತಿ ಹೊರಡಿಸುವ ಆದೇಶದ ಆಧಾರದ ಮೇಲೆ ಸಂಬಂಧಪಟ್ಟಉಪನೊಂದಣಾಧಿಕಾರಿಗಳು ಭೂಮಿಯನ್ನು ನೋಂದಣಿ ಮಾಡತಕ್ಕದ್ದು, ಈ ಸಂಬಂಧ ನೋಂದಣಿ ದಿನಾಂಕ ಗೊತ್ತುಪಡಿಸಲು ಹಾಗೂ ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕವನು ಓಖಿಋ pಟ್ಟಠಿa್ಝ ನಲ್ಲಿ ನಿರ್ವಹಿಸಲು ಅನುವಾಗಲು ‘ಕಾವೇರಿ’ ಪೋರ್ಟಲ್‌ ಜೊತೆ ಜೋಡಿಸಬೇಕು.

ಕೃಷಿ ಭೂಮಿ ಖರೀದಿ ಮೇಲಿನ ನಿರ್ಬಂಧ ಸಡಿಲ ?

ಅನುಮೋದನೆಗೊಂಡ ಜಮೀನುಗಳನ್ನು ಕೈಗಾರಿಕೋದ್ಯಮಿಗಳು ನಿಯಮಾನುಸಾರ ಸಂಬಂಧಪಟ್ಟವರಿಂದ ಖರೀದಿಸಿದ ಮೇಲೆ ಕಂದಾಯ ಇಲಾಖೆಯ ನಿಯಮಾನುಸಾರ ಭೂಮಿ ತಂತ್ರಾಂಶದಲ್ಲಿ ಆನ್‌ಲೈನ್‌ ಮೂಲಕ ಹಕ್ಕು ಬದಲಾವಣೆ ಮಾಡತಕ್ಕದ್ದು. ಕಂಪನಿಯು ಪರಿವರ್ತನಾ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿದ ಕೂಡಲೇ ‘ಡಿಜಿಟಲಿ ಸೈನ್‌್ಡ’ ಪರಿಭಾವಿತ ಭೂ ಪರಿವರ್ತನೆ ಆದೇಶವನ್ನು ‘ಭೂಮಿ’ ಆನ್‌ಲೈನ್‌ ಪೋರ್ಟಲ್‌ ಮೂಲಕ ಹೊರಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.