ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ಕೊಟ್ಟ ಮದ್ಯಪ್ರಿಯರು: ಎಣ್ಣೆ ಮಾರಾಟದಲ್ಲಿ ಭಾರಿ ಇಳಿಮುಖ
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಮದ್ಯದ ಬೆಲೆಯನ್ನು ಕಾಂಗ್ರೆಸ್ ಸರ್ಕಾರ ಹೆಚ್ಚಳ ಮಾಡಿದ ಬೆನ್ನಲ್ಲಿಯೇ ರಾಜ್ಯದ ಜನರೂ ಕೂಡ ಸರ್ಕಾರಕ್ಕೆ ಭರ್ಜರಿ ಶಾಕ್ ಕೊಟ್ಟಿದ್ದಾರೆ.
ಬೆಂಗಳೂರು (ಆ.20): ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಮದ್ಯದ ಬೆಲೆಯನ್ನು ಕಾಂಗ್ರೆಸ್ ಸರ್ಕಾರ ಹೆಚ್ಚಳ ಮಾಡಿದ ಬೆನ್ನಲ್ಲಿಯೇ ರಾಜ್ಯದ ಜನರೂ ಕೂಡ ಸರ್ಕಾರಕ್ಕೆ ಭರ್ಜರಿ ತೊರುಗೇಟು ನೀಡಿದ್ದಾರೆ. ಮದ್ಯ ಮಾರಾಟದ ದರ ಏರಿಕೆ ಮಾಡಿದ ಒಂದು ತಿಂಗಳಲ್ಲಿ ಮದ್ಯ ಖರೀದಿ ಪ್ರಮಾಣ ಭಾರಿ ಪ್ರಮಾಣದಲ್ಲಿ ತಗ್ಗಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮದಿಂದಾಗಿ ಕಅಬಕಾರಿ ಸುಂಕ ಹೆಚ್ಚಳ ಮಾಡಲಾಗಿತ್ತು. ಆದರೆ, ಇದನ್ನು ತಗ್ಗಿಸುವಂತೆ ಕೆಲವೆಡೆ ಸಣ್ಣಪುಟ್ಟ ಪ್ರತಿಭಟನೆ ಮಾಡಿದರೂ ಇದಕ್ಕೆ ಸರ್ಕಾರ ಬಗ್ಗಿರಲಿಲ್ಲ. ಇದರಿಂದ ಮದ್ಯಪ್ರಿಯರು ಈಗ ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ. ಅಂದರೆ, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮದ್ಯ ಮಾರಾಟದ ಪ್ರಮಾಣದಲ್ಲಿ ಭಾರಿ ಇಳಿಮುಖವಾಗಿದೆ. ಭಾರತೀಯ ಮದ್ಯ ಮಾರಾಟ (IML) ಪ್ರಮಾಣ ಶೇ.15 ರಷ್ಟು ಕುಸಿತವಾಗಿದೆ. ಆದರೆ, ಬಿಯರ್ ಮಾರಾಟದಲ್ಲಿ ಮಾತ್ರ ಯಾವುದೇ ವ್ಯತ್ಯಯ ಕಂಡುಬಂದಿಲ್ಲ. ಒಟ್ಟಾರೆ ಕರ್ನಾಟಕ ಪಾನೀಯ ನಿಗಮಕ್ಕೆ ಲಿಕ್ಕರ್ ಗೆ ಸಲ್ಲಿಸುವ ಖರೀದಿ ಬೇಡಿಕೆಯೂ ಇಳಿಕೆಯಾಗಿದೆ.
ಡಿ.31ರ ವರೆಗೆ ಈರುಳ್ಳಿ ರಫ್ತು ಮೇಲೆ ಶೇ.40 ರಷ್ಟು ಸುಂಕ
ವರ್ಷವಾರು ಮದ್ಯ ಮಾರಾಟದ ವಿವರ:
ಕಳೆದ ವರ್ಷ 2022-ಆಗಸ್ಟ್
ಮಾರಾಟ - 25.50 ಲಕ್ಷ ಬಾಕ್ಸ್ ಸ್ವದೇಶಿ ಬ್ರ್ಯಾಂಡ್
ಮಾರಾಟ -ಬಿಯರ್-10.34 ಲಕ್ಷ ಬಾಕ್ಸ್
ಈ ವರ್ಷ 2023 ಆಗಸ್ಟ್ 19ರವರೆಗೆ ಮದ್ಯ ಮಾರಾಟ
ಮಾರಾಟ-21.87 ಲಕ್ಷ ಬಾಕ್ಸ್ ದೇಶಿ ಬ್ರ್ಯಾಂಡ್
ಮಾರಾಟ -ಬಿಯರ್-12.52 ಲಕ್ಷಬಾಕ್ಸ್
ಕಡಿಮೆ ದರದ ಬ್ರ್ಯಾಂಡ್ ಗಳಿಗೆ ಹೆಚ್ಚಿದ ಬೇಡಿಕೆ
ಕಡಿಮೆ ದರದ ಬ್ರ್ಯಾಂಡ್‌ಗೆ ಶಿಫ್ಟ್ ಆದ ಮಧ್ಯಪ್ರಿಯರು: ರಾಜ್ಯದಲ್ಲಿ ಮದ್ಯದ ದರ ಏರಿಕೆಯಾದ ಬೆನ್ನಲ್ಲಿಯೇ ದುಬಾರಿ ಬೆಲೆಯ ಬ್ರ್ಯಾಂಡ್‌ಗಳಿಂದ ಕಡಿಮೆ ಬೆಲೆಯ ಬ್ರ್ಯಾಂಡ್ ಸೇವನೆಗೆ ಮುಂದಾಗಿದ್ದಾರೆ. ಸ್ಕಾಚ್ ಪ್ರಿಯರು ಪ್ರೀಮಿಯರ್ ಬ್ರ್ಯಾಂಡ್ ಗೆ ಶಿಫ್ಟ್ ಆಗಿದ್ದಾರೆ. ಇನ್ನು ಪ್ರೀಮಿಯಮ್ ಪ್ರಿಯರು ನಾರ್ಮಲ್ ಬ್ರ್ಯಾಂಡ್ ಗೆ ಶಿಫ್ಟ್ ಆಗಿದ್ದಾರೆ. ಇದರಿಂದ ಸರ್ಕಾರಿ ಆದಾಯ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. ಕಳೆದ ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು ಎರಡೂವರೆ ಸಾವಿರ ಕೋಟಿ ಆದಾಯ ಬರ್ತಿತ್ತು. ಆದರೆ, ಈಗ ಈ ಆಗಸ್ಟ್ ನಲ್ಲಿ 20 ದಿನಗಳು ಕಳೆದರೂ ಕೇವಲ 962 ಕೋಟಿ ಮಾತ್ರ ಸಂಗ್ರಹವಾಗಿದೆ.
2023ರ ಆರ್ಥಿಕ ವರ್ಷದಲ್ಲಿ ತಿಂಗಳವಾರು ಮದ್ಯ ಮಾರಾಟದಿಂದ ಬಂದ ಆದಾಯ ವಿವರ:
-ಏಪ್ರಿಲ್-2,308 ಕೋಟಿ ರೂ.
-ಮೇ-2,607 ಕೋಟಿ ರೂ.
-ಜೂನ್ -3,549 ಕೋಟಿ ರೂ.
-ಜುಲೈ-2,980 ಕೋಟಿ ರೂ.
-ಆ.18ರವರೆಗೆ 962 ಕೋಟಿ ರೂ.
ಕೋವಿಡ್ ನಂತರ ಯುವಜನತೆಯಲ್ಲಿ ಹಾರ್ಟ್‌ಅಟ್ಯಾಕ್ ಹೆಚ್ಚಳ; ICMRನಿಂದ ಅಧ್ಯಯನ
- ಐಎಂಎಲ್ ಮೇಲೆ ಶೇ.20 ರಷ್ಟು ಸುಂಕ ಹೆಚ್ಚಳ ಪರಿಣಾಮ
- ಎಲ್ಲಾ 18 ಸ್ಲಾಬ್ ಗಳ ಲಿಕ್ಕರ್ ದರ ಏರಿಕೆ
- ಪ್ರತಿ ಪೆಗ್ ಗೆ 10 ರಿಂದ 20 ರೂಪಾಯಿ ಏರಿಕೆ
- ಪ್ರತಿ ಬಾಟಲ್ ಗೆ 50 ರಿಂದ 200 ರೂ.ಏರಿಕೆ
- ಪ್ರತಿ ತಿಂಗಳು ಸರಾಸರಿ 61 ಲಕ್ಷ ಟನ್ ಬಾಕ್ಸ್ ಮಾರಾಟವಾಗ್ತಿತ್ತು
- ಆಗಸ್ಟ್ ನಲ್ಲಿ 18.8 ಲಕ್ಷ ಟನ್ ಬಾಕ್ಸ್ ಮಾತ್ರ ಮಾರಾಟ