Asianet Suvarna News Asianet Suvarna News

CM Condolence Message: ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮಂಜುನಾಥ್‌ ನಿಧನ

*  ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಕೆ.ಎಲ್‌. ಮಂಜುನಾಥ್‌
*  ಇಂದು ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ
*  ಮಂಜುನಾಥ್ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ
 

Karnataka High Court Retired Judge KL Manjunath Passed Away Due to Heart Attack grg
Author
Bengaluru, First Published Jan 23, 2022, 10:26 AM IST

ಬೆಂಗಳೂರು(ಜ.23): ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್(68) ನಿನ್ನೆ(ಶನಿವಾರ) ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ(Passed Away). ನಗರದ ಕಾಮಾಕ್ಷಿಪಾಳ್ಯದ ಸ್ವಗೃಹದಲ್ಲಿ ಶನಿವಾರ ರಾತ್ರಿ ಸುಮಾರು 12 ಗಂಟೆಗೆ ತೀವ್ರ ಹೃದಯಾಘಾತದಿಂದ(Heart Attack) ಇಹಲೋಕ ತ್ಯಜಿಸಿದ್ದಾರೆ. 

ಕೆ.ಎಲ್. ಮಂಜುನಾಥ್(KL Manjunath) ಪತ್ನಿ, ಪುತ್ರ ಮತ್ತು ಪುತ್ರಿಯನ್ನ ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ(Funeral) ಇಂದು(ಭಾನುವಾರ) ಮಧ್ಯಾಹ್ನ 3 ಗಂಟೆಗೆ ನಗರದ ಕುಣಿಗಲ್‌ ರಸ್ತೆಯಲ್ಲಿರುವ ಕೆಂಪಲಿಂಗನಹಳ್ಳಿಯ ಅವರ ತೋಟದಲ್ಲಿ ನೆರವೇರಲಿದೆ ಎಂಬ ಮಾಹಿತಿ ಅವರ ಕುಟುಂಬಸ್ಥರಿಂದ ಲಭ್ಯವಾಗಿದೆ. ಮೃತರ ಅಂತಿಮ ದರ್ಶನಕ್ಕೆ ಮಧ್ಯಾಹ್ನ 12 ರವರೆಗೆ ಕಾಮಾಕ್ಷಿಪಾಳ್ಯದ ಸ್ವಗೃಹದಲ್ಲಿ ಇರಿಸಲಾಗಿದೆ.
ಕೆ ಎಲ್. ಮಂಜುನಾಥ್ ಅವರು 2000 ರಲ್ಲಿ ಕರ್ನಾಟಕ ಹೈಕೋರ್ಟ್‌ನ(High Court of Karnataka) ಹೆಚ್ಚುವರಿ ನ್ಯಾಯಧೀಶರಾಗಿ(Judge) ನೇಮಕಗೊಂಡಿದ್ದರು. ಬಳಿಕ 2001ನ ರಲ್ಲಿ ಖಾಯಂ ನ್ಯಾಮಮೂರ್ತಿಯಾಗಿ ನೇಮಕಗೊಂಡಿದ್ದರು. 

Dakshina Kannada: ರಸ್ತೆ ಅಪಘಾತ: ಯಕ್ಷಗಾನ ಕಲಾವಿದ ವಾಮನ ಕುಮಾರ್ ದಾರುಣ ಸಾವು

ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಕೆ.ಎಲ್. ಮಂಜುನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸಂತಾಪ(Condolences) ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿ ಮಂಜುನಾಥ್ ಅವರು ಅತ್ಯುತ್ತಮ ವಕೀಲರಾಗಿ, ವಕೀಲರ ಸಂಘದ ಅಧ್ಯಕ್ಷರಾಗಿ, ಹೈಕೋರ್ಟ್ ನ್ಯಾಯಾಧೀಶರಾಗಿ, ಕರ್ನಾಟಕ ನದಿ ನೀರು ಮತ್ತು ಗಡಿ ವಿವಾದ ಪ್ರಾಧಿಕಾರದ ಅಧ್ಯಕ್ಷರಾಗಿ, ಆಂಧ್ರ ಪ್ರದೇಶದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯವಾಗಿದೆ. 

ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದವರು ಹಾಗೂ ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios