Asianet Suvarna News Asianet Suvarna News

ನಿರ್ಮಾಪಕ ಎನ್ಎಂ ಸುರೇಶ್‌ಗೆ ಹಿನ್ನಡೆ, ಕಿಚ್ಚ ಸುದೀಪ್ ದಾಖಲಿಸಿದ್ದ ಕೇಸ್ ರದ್ದುಪಡಿಸಲು ಕೋರ್ಟ್ ನಕಾರ!

ಚಿತ್ರನಟ ಸುದೀಪ್ ವಿರುದ್ಧ ಸುಳ್ಳು ಆಸ್ತಿ ಸಂಪಾದಿಸಿದ ಆರೋಪ ಮಾಡಿದ್ದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಪದಾಧಿಕಾರಿ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಎನ್ ಎಂ ಸುರೇಶ್ ವಿರುದ್ಧ ಕನ್ನಡ ನಟ ಸುದೀಪ್ ಎಸ್ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

Karnataka high court refuses to quash kannada actor Kichcha Sudeeps defamation complaint against NM Suresh rav
Author
First Published Mar 26, 2024, 9:35 PM IST

ಬೆಂಗಳೂರು (ಮಾ.26): ಚಿತ್ರನಟ ಸುದೀಪ್ ವಿರುದ್ಧ ಸುಳ್ಳು ಆಸ್ತಿ ಸಂಪಾದನೆ, ವಂಚನೆ ಆರೋಪ ಮಾಡಿದ್ದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಪದಾಧಿಕಾರಿ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಎನ್ ಎಂ ಸುರೇಶ್ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕೋರಿ ಸುರೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. ಇದೇ ನಟ ಸುದೀಪ್ ವಿರುದ್ಧ ಮಾನಹಾನಿಕರ ಮತ್ತು ಸಮಾಜದಲ್ಲಿ ಅವರ ಹೆಸರು, ಖ್ಯಾತಿಗೆ ಧಕ್ಕೆ ತರುವಂಥ ಆರೋಪಗಳನ್ನು ಮಾಡಿರುವುದರಿಂದ ಆರೋಪಿಗಳ ವಿರುದ್ಧ ಪ್ರಾಥಮಿಕ ಪ್ರಕರಣವನ್ನು ದಾಖಲಿಸಲಾಗಿದೆ. ಸಮನ್ಸ್‌ ಜಾರಿ ಮಾಡುವ ಕ್ರಮದಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

IPL 2024 ಕಿಚ್ಚ ಸುದೀಪ್ ಯಾಕೆ ಆ ಇಡ್ಲಿ ಬೇಡ ಅಂದ್ರು ಅರ್ಥ ಆಯ್ತಾ?

ಏನಿದು ಪ್ರಕರಣ?

9 ಕೋಟಿ ರೂಪಾಯಿ ಅಡ್ವಾನ್ಸ್ ಪಡೆದುಕೊಂಡು ಸಿನಿಮಾಗೆ ಡೇಟ್ಸ್ ಕೊಡದೇ ವಂಚನೆ ಮಾಡಿದ್ದಾರೆಂದು ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕರಾದ ಎಂಎನ್ ಕುಮಾರ್ ಹಾಗೂ ಎಂ ಎನ್ ಸುರೇಶ್ ಆರೋಪ ಮಾಡಿದ್ದರು. ಈ ಪ್ರಕರಣ ಸಂಬಂಧ ಸುದೀಪ್ ಕೋರ್ಟ್‌ ಮೆಟ್ಟಿಲೇರಿ ಮಾನನಷ್ಟ ಮೊಕದ್ದೊಮೆ ದಾಖಲಿಸಿದ್ದರು.

10 ಕೋಟಿಯಿಂದ 150 ಕೋಟಿವರೆಗೆ; ಕನ್ನಡ ಹಿಟ್ ನಟರ ಸಂಭಾವನೆ ಎಷ್ಟು?

ಎಮ್ ಎನ್ ಕುಮಾರ್ ಮಾಡಿರುವ ಆರೋಪಗಳಿಗೆ ಸೂಕ್ತ ದಾಖಲೆ ನೀಡಬೇಕು, ಇಲ್ಲವೇ ಸುಳ್ಳು ಆರೋಪ ಮಾಡಿದ್ದಕ್ಕೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಸುದೀಪ್ 10 ದಿನ ಗಡುವು ನೀಡಿದ್ದರು. ಆದರೆ ಅದಕ್ಕೆ ಯಾವುದೇ ಉತ್ತರ ನೀಡದ ಹಿನ್ನೆಲೆ ಸುದೀಪ್ ಮಾನನಷ್ಟ ಮೊಕದ್ದಮೆ ದಾಖಲಿಸಿ ಕಾನೂನು ಸಮರ ಸಾರಿದ್ದರು.

Follow Us:
Download App:
  • android
  • ios