ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕಳೆದ ಕೆಲದಿನಗಳಿಂದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದ ಬಗ್ಗೆ ಪ್ರೋಮೋಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಇದೀಗ ಕಿಚ್ಚ ಸುದೀಪ್ ಹೊಸ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು: 2024ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಟೂರ್ನಿ ಆರಂಭಕ್ಕೂ ಮುನ್ನ ಇದೇ ಮಾರ್ಚ್ 19ರಂದು ಬೆಂಗಳೂರಿನಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಆರ್‌ಸಿಬಿ ಫ್ರಾಂಚೈಸಿ ಸಾಕಷ್ಟು ತಯಾರಿ ನಡೆಸುತ್ತಿದೆ. ಹೀಗಿರುವಾಗ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್, ಮತ್ತೊಮ್ಮೆ ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕಳೆದ ಕೆಲದಿನಗಳಿಂದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದ ಬಗ್ಗೆ ಪ್ರೋಮೋಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಇದೀಗ ಕಿಚ್ಚ ಸುದೀಪ್ ಹೊಸ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕಿಚ್ಚ ಸುದೀಪ್ ಎದುರಿಗೆ ಮೂರು ಇಡ್ಲಿಗಳನ್ನು ತಂದಿಡಲಾಗುತ್ತದೆ. ಈ ಪೈಕಿ ಒಂದು ಇಡ್ಲಿಗೆ ರಾಯಲ್, ಇನ್ನೊಂದು ಇಡ್ಲಿಗೆ ಚಾಲೆಂಜರ್ಸ್ ಹಾಗೂ ಮೂರನೇ ಇಡ್ಲಿ 'ಬ್ಯಾಂಗಳೂರ್' ಬೇಡ ಎನ್ನುತ್ತಾರೆ.
ಹೀಗಿದೆ ನೋಡಿ ಪ್ರೋಮೋ
ಈ ಹಿಂದೆ, ಆರ್‌ಸಿಬಿ ಬಿಡುಗಡೆ ಮಾಡಿದ ಮೊದಲ ಪ್ರೋಮೋದಲ್ಲಿ ರಿಷಭ್ ಶೆಟ್ಟಿ, ಅಶ್ವಿನಿ ಪುನೀತ್‌ರಾಜ್‌ಕುಮಾರ್, ಡ್ಯಾನೀಶ್ ಶೇಠ್(ಮಿಸ್ಟರ್ ನ್ಯಾಗ್ಸ್), ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ.
ಆರ್‌ಸಿಬಿ ಹೆಸರು ಬದಲಾವಣೆ ಫಿಕ್ಸ್: ಮೇಲಿನ ಎಲ್ಲಾ ಪ್ರೋಮೋದಲ್ಲೂ ಬ್ಯಾಂಗಳೂರು ಬದಲು ಬೆಂಗಳೂರು ಆಗಿ ಬದಲಾಗುವ ಸುಳಿವನ್ನು ಆರ್‌ಸಿಬಿ ಫ್ರಾಂಚೈಸಿ ಬಿಟ್ಟುಕೊಟ್ಟಿದೆ. ರಾಯಲ್ ಚಾಲೆಂಜರ್ಸ್ ಬ್ಯಾಂಗಳೂರು(Royal Challengers Bangalore) ತಂಡದ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ಎಂದು ಬದಲಿಸಬೇಕು ಎಂದು ಕಳೆದ 16 ವರ್ಷಗಳಿಂದಲೂ ಕನ್ನಡದ ಆರ್‌ಸಿಬಿ ಅಭಿಮಾನಿಗಳು ಆಗ್ರಹಿಸುತ್ತಲೇ ಬಂದಿದ್ದರು. ಆದರೆ ಸಾಕಷ್ಟು ವರ್ಷಗಳ ಬಳಿಕ ಕೊನೆಗೂ ಆ ನಿರ್ಧಾರ ಕೈಗೊಳ್ಳುವ ಸುಳಿವನ್ನು ಫ್ರಾಂಚೈಸಿ ಬಿಟ್ಟುಕೊಟ್ಟಿದೆ.
ಕಳೆದ 16 ವರ್ಷಗಳಿಂದಲೂ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಮೂರು ಬಾರಿ ಫೈನಲ್ ಪ್ರವೇಶಿಸಿದ್ದೇ ಆರ್‌ಸಿಬಿಯ ಶ್ರೇಷ್ಠ ಪ್ರದರ್ಶನ ಎನಿಸಿದೆ. 2016ರಲ್ಲಿ ಆರ್‌ಸಿಬಿ ತಂಡವು ಕೊನೆಯ ಬಾರಿಗೆ ಫೈನಲ್ ಪ್ರವೇಶಿಸಿತ್ತು.
