ಸಿಟಿ ರವಿಗೆ ರಿಲೀಫ್; ಪೊಲೀಸರಿಗೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ

ಪೊಲೀಸರು ಬಂಧಿಸಿರುವ ಸಿ.ಟಿ. ರವಿ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

Karnataka High Court orders to release of MLC C T Ravi sat

ಬೆಂಗಳೂರು (ಡಿ.20): ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿದ್ದ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂಬ ಆರೋಪದ ಬೆನ್ನಲ್ಲಿಯೇ ಬೆಳಗಾವಿ ಪೊಲೀಸರು ಬಂಧಿಸಿದ್ದರು. ಅವರ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್‌ನಿಂದ ಕೂಡಲೇ ಸಿ.ಟಿ. ರವಿ ಅವರನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.

ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಸಿ.ಟಿ. ರವಿ ಅವರ ಪರವಾಗಿ ವಾದ ಮಂಡಿಸಿದ ವಕೀಲರು, ಆರೋಪಿಗಳಿಗೆ 7 ವರ್ಷಕ್ಕಿಂದ‌ ಕಡಿಮೆ‌ ಶಿಕ್ಷೆ ಇರುವ ಪ್ರಕರಣದಲ್ಲಿ 41a ನೋಟಿಸ್ ನೀಡಬೇಕಿತ್ತು. ಪೊಲೀಸರು ಬಂಧನಕ್ಕೆ‌ಕಾರಣ ನೀಡಬೇಕಿತ್ತು. ಆದರೆ, ಅದನ್ನು ನೀಡಿರುವ ಬಗ್ಗೆ ದಾಖಲೆಗಳು ಇಲ್ಲ. ಪೊಲೀಸರು ಹಲ್ಲೆ ನಡೆಸಿದ್ದರಿಂದ ಗಾಯ ಆಗಿದೆ ಎಂದು ಸಿಟಿ ರವಿ ವಕೀಲರು ಹೇಳಿದ್ದಾರೆ. ಇನ್ನು ಸಿ.ಟಿ. ರವಿ ಅವರಿಗೆ ಚಿಕಿತ್ಸೆ ನೀಡಿದ ವಿವರವನ್ನ ವೈದ್ಯಾಧಿಕಾರಿ ಸರಿಯಾಗಿ ನಮೂದಿಸಿಲ್ಲ. ಕೇವಲ ಸ್ಕ್ಯಾನಿಂಗ್ ಮಾಡಿಸಿರುವ ಬಗ್ಗೆ ವರದಿ ಇದೆ ಎಂದು ಕೋರ್ಟ್ ಮುಂದೆ ತಿಳಿಸಿದರು.

ಮುಮದುವರೆದು, ಸಭಾಪತಿ ಬಸವರಾಜ ಹೊರಟ್ಟಿ ಅವರು ಪರಿಷತ್ ಸಭಾಂಗಣದಲ್ಲಿ ನಡೆದ ಏನನ್ನೂ ರೆಕಾರ್ಡ್ ಮಾಡಿಲ್ಲ ಎಂದು ಹೇಳಿದ್ದಾರೆ. ಈ ಘಟನೆ ನಡೆಸಿರುವುದು ದುರದೃಷ್ಟಕರ. ಆರೋಪಿ ರವಿ ಬಂಧಿಸಲು ಹಲ್ಲೆ‌ ಮಾಡುವ ಅಗತ್ಯ ಇರಲಿಲ್ಲ. ಕಾನೂನು ಪಾಲಿಸಿ ಕ್ರಮಕೈಗೊಳ್ಳಬಹುದಿತ್ತು ಎಂದು ವಾದ ಮಂಡಿಸಿದರು.

ಇದನ್ನೂ ಓದಿ: ಸುವರ್ಣ ಸೌಧದಲ್ಲಿಯೇ ವಿಪಕ್ಷ ನಾಯಕರಿಗೆ ರಕ್ಷಣೆಯಿಲ್ಲ ಎಂದರೆ ಸಂವಿಧಾನ ಉಳಿದಿದೆಯೇ? ಹೆಚ್.ಡಿ. ಕುಮಾರಸ್ವಾಮಿ!

ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಪೀಠದಿಂದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಕೂಡಲೇ ಬಂಧನದಿಂದ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ. ಮುಂದುವರೆದು, ಈ ಘಟನೆಯ ಪೊಲೀಸರ ತನಿಖೆಗೆ ಸಹಕರಿಸಬೇಕೆಂದು ಷರತ್ತು ವಿಧಿಸಲಾಗಿದೆ.

ಸಿಟಿ ರವಿ ಅವರನ್ನು ಬಂಧಿಸಿದ ನಂತರ ನಿನ್ನೆ ರಾತ್ರಿ ನಡೆದ ಹೈಡ್ರಾಮಾ:

 

Latest Videos
Follow Us:
Download App:
  • android
  • ios