Asianet Suvarna News Asianet Suvarna News

Bengaluru Roads: ರಸ್ತೆಗಳು ದೀರ್ಘಾವಧಿಗೆ ಏಕೆ ಬಾಳಲ್ಲ ಎಂದು ಪ್ರಶ್ನಿಸಿದ ಹೈಕೋರ್ಟ್‌

ಪ್ರತಿ ಮಳೆಗಾಲದಲ್ಲೂ ರಸ್ತೆಗುಂಡಿ ಪ್ರತ್ಯಕ್ಷ
ಇದಕ್ಕೆ ಪಾಲಿಕೆ ಮುಖ್ಯ ಎಂಜಿನಿಯರ್ ಹೊಣೆ
ಅವರನ್ನು ಜೈಲಿಗೆ ಹಾಕಿದರೆ ಎಲ್ಲಾ ಸರಿಯಾಗುತ್ತದೆ

Karnataka High Court issued strict warning to the BBMP regarding Roads in Bengaluru san
Author
Bengaluru, First Published Jan 28, 2022, 2:15 AM IST

ಬೆಂಗಳೂರು (ಜ. 28): ನಗರದಲ್ಲಿ ರಸ್ತೆಗುಂಡಿಗಳನ್ನು(potholes) ಸಮರ್ಪಕವಾಗಿ ಮುಚ್ಚಲು ವಿಫಲವಾಗಿರುವ ಬಿಬಿಎಂಪಿಯನ್ನು (BBMP) ಹೈಕೋರ್ಟ್‌ (High Court) ಗುರುವಾರ ಪುನಃ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು. ನಗರದ ರಸ್ತೆಗಳ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ (Chief Justice Ritu Raj Awasthi ) ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ (Division Bench ), ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಪ್ರತಿಬಾರಿ ಮಳೆ (Rain) ಬಂದಾಗಲೂ ರಸ್ತೆಗಳಲ್ಲಿ ಗುಂಡಿಗಳು ಪ್ರತ್ಯಕ್ಷವಾಗುವುದನ್ನು ನೋಡಿದರೆ ಬಿಬಿಎಂಪಿಯ ಕೆಲಸದ ಗುಣಮಟ್ಟತಿಳಿಯುತ್ತದೆ. ಇದಕ್ಕೆಲ್ಲಾ ಪಾಲಿಕೆ ಮುಖ್ಯ ಎಂಜಿನಿಯರ್‌ (BBMP Chief Engineer )ಹೊಣೆಯಾಗುತ್ತಾರೆ. ಅವರನ್ನು ಕಂಬಿ ಹಿಂದೆ ಕಳುಹಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಇದೇ ವೇಳೆ ಚಾಟಿ ಬೀಸಿದೆ. ಅಲ್ಲದೆ, ರಸ್ತೆ ಗುಂಡಿಗಳನ್ನು ಮುಚ್ಚಲು ಯಾವ ಕಾರ್ಯವಿಧಾನ ಅನುಸರಿಸಲಾಗುತ್ತದೆ. ರಸ್ತೆ ನಿರ್ಮಾಣ, ದುರಸ್ತಿಗೆ ತಜ್ಞರ ಸಲಹೆ ಪಡೆಯಲಾಗಿದೆಯೇ. ಬೆಸ್ಕಾಂ (BESCOM), ಜಲಮಂಡಳಿ (BWSSB) ಸೇರಿ ಕಾಮಗಾರಿ ನೆಪದಲ್ಲಿ ರಸ್ತೆ ಅಗೆದು, ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಮುಗಿಸದ ಪ್ರಾಧಿಕಾರಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಿಬಿಎಂಪಿ ವರದಿ ಸಲ್ಲಿಸಬೇಕು. ತಪ್ಪಿದರೆ ಮುಂದಿನ ವಿಚಾರಣೆಗೆ ಪಾಲಿಕೆಯ ಮುಖ್ಯ ಎಂಜಿನಿಯರ್‌ ಖುದ್ದು ಹಾಜರಾಗಬೇಕು ಎಂದು ತಾಕೀತು ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಫೆ.7ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಬಿಬಿಎಂಪಿ ಪರ ವಕೀಲರು, ನಗರದಲ್ಲಿನ ಬಹುತೇಕ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದೆ. ಮೊದಲಿಗಿಂತ ಬೆಂಗಳೂರು ನಗರ ಬೆಳೆದಿದೆ. ವಾಹನ ದಟ್ಟಣೆ ಹೆಚ್ಚಿದೆ. ಪ್ರಮುಖ ರಸ್ತೆಗಳಲ್ಲಿ ಗುಂಡಿ ಸಮಸ್ಯೆ ಇಲ್ಲ. ಸಣ್ಣ ರಸ್ತೆಗಳಲ್ಲಿ ಮಾತ್ರ ಗುಂಡಿಗಳಿದ್ದು, ಅವುಗಳ ಮುಚ್ಚವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಅರ್ಜಿದಾರರ ಪರ ವಕೀಲರು, ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ 2015ರಿಂದಲೂ ನ್ಯಾಯಾಲಯ ಪಾಲಿಕೆಗೆ ಹಲವು ನಿರ್ದೇಶನ ನೀಡಿದೆ. ಆದರೂ ಪರಿಸ್ಥಿತಿ ಬದಲಾಗಿಲ್ಲ. ಪ್ರತಿ ಬಾರಿ ಮಳೆ ಬಂದಾಗಲೂ ರಸ್ತೆ ದುಸ್ಥಿತಿಗೆ ತಲುಪುತ್ತದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ದೂರಿದರು.

Bengaluru Market ಕೊರೋನಾ ಕಾರಣ ಕೆಆರ್ ಮಾರುಕಟ್ಟೆ ವಿವಿಧೆಡೆಗೆ ಸ್ಥಳಾಂತರ, ವ್ಯಾಪಾರಿಗಳಿಗೆ ಸಂಕಷ್ಟ!
ಬಿಬಿಎಂಪಿಯ ಕಾರ್ಯವೈಖರಿ ವಿರುದ್ಧ ಅಸಮಾಧಾನಗೊಂಡ ನ್ಯಾಯಪೀಠ, ಬಿಬಿಎಂಪಿ ಗುಂಡಿ ಮುಚ್ಚಿದೆ ಎಂದರೆ ಅದನ್ನು ಯಾರೂ ನಂಬುವುದಿಲ್ಲ. ದುರಸ್ತಿ ಮಾಡುವ ರಸ್ತೆಗಳು ದೀರ್ಘಕಾಲ ಬಾಳಿಕೆ ಬರುವುದಿಲ್ಲವೇಕೇ? ಪ್ರತಿ ಮಳೆ ಬಂದಾಗ ರಸ್ತೆಗಳಲ್ಲಿ ಗುಂಡಿಗಳು ಆಗುತ್ತಿವೆ. ಇದರಿಂದ ಪಾಲಿಕೆ ಕಾಮಗಾರಿಯ ಗುಣಮಟ್ಟಏನೆಂಬುದು ತಿಳಿಯುತ್ತದೆ? ಸುಮ್ಮನೆ ಕಾರಣ ನೀಡಿ ತಪ್ಪಿಸಿಕೊಳ್ಳಲಾಗದು ಎಂದು ತರಾಟೆಗೆ ತೆಗೆದುಕೊಂಡಿತು.

ಬೇರೆ ಏಜೆನ್ಸಿ ಹೊಣೆ?: ಬೆಂಗಳೂರಿನ ರಸ್ತೆ ದುಸ್ಥಿತಿಗೆ ಎಂಜಿನಿಯರ್‌ಗಳೇ ಕಾರಣ. ಅವರೆಲ್ಲಾ ಏನು ಮಾಡುತ್ತಿದ್ದಾರೆ? ಅವರ ವಿರುದ್ಧ ಎಫ್‌ ಐಆರ್‌ ಹಾಕಿ ಅವರನ್ನು ಜೈಲಿಗೆ ಕಳಿಸಿದರೆ ಬುದ್ಧಿ ಬರುತ್ತದೆ ಎಂದ ನ್ಯಾಯಪೀಠ, ರಸ್ತೆ ನಿರ್ಮಾಣ ಹಾಗೂ ಗುಂಡಿ ಮುಚ್ಚಲು ಬಿಬಿಎಂಪಿ ಸಮರ್ಥವಿಲ್ಲ. ಹಾಗಾಗಿ, ಆ ಹೊಣೆಯನ್ನು ಬೇರೆ ಏಜೆನ್ಸಿಗೆ ನೀಡುವಂತೆ ಸರ್ಕಾರಕ್ಕೆ ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

Bengaluru: ಏಪ್ರಿಲ್‌ನಲ್ಲಿ ಬಿಬಿಎಂಪಿ ಚುನಾವಣೆಗೆ ಚಿಂತನೆ
ಸಮನ್ವಯತೆ ಇಲ್ಲ?: ಜಲಮಂಡಳಿ, ಬೆಸ್ಕಾಂ ಮತ್ತು ಬಿಬಿಎಂಪಿ ನಡುವೆ ಮಧ್ಯೆ ಯಾವುದೇ ಸಮನ್ವತೆ ಇಲ್ಲವಾಗಿದೆ. ಪಾಲಿಕೆ ಅನುಮತಿಯಿಲ್ಲದೆ ರಸ್ತೆ ಅಗೆಯುವ ಸಂಸ್ಥೆಗಳ ವಿರುದ್ಧ ಏನು ಕ್ರಮ ಕೈಗೊಂಡಿದೆ? ಎಷ್ಟುಎಫ್‌ಐಆರ್‌ ದಾಖಲಿಸಲಾಗಿದೆ? ಎಷ್ಟುದಂಡ ವಿಧಿಸಲಾಗಿದೆ ಎಂದು ಪ್ರಶ್ನಿಸಿದ ನ್ಯಾಯಪೀಠ, ಈ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿತು.

Follow Us:
Download App:
  • android
  • ios