ಬೆಂಗಳೂರು, (ಫೆ.22): ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.

ಖಡಕ್ ಡಿಸಿ, ಜನ ಮೆಚ್ಚಿದ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ

ರೋಹಿಣಿ ಸಿಂಧೂರಿ ಸ್ಥಾನಕ್ಕೆ ಅಕ್ರಂ ಪಾಷಾ ಅವರನ್ನು ನೇಮಕ ಮಾಡಿ ಇಂದು [ಶುಕ್ರವಾರ] ಆದೇಶ ಹೊರಡಿಸಿದೆ. ಈ ಮೊದಲು ಅಕ್ರಂ ಪಾಷಾ ಅಲ್ಪ ಸಂಖ್ಯಾತ ನಿರ್ದೇಶನಾಲಯದ ನಿರ್ದೇಶಕರಾಗಿದ್ದರು.

ಸಚಿವ ರೇವಣ್ಣ ಬೆಂಬಲಿಗನಿಗೆ ಡಿಸಿ ರೋಹಿಣಿ ಕೊಟ್ಟ ‘ಮರಳೇಟು’

ಇನ್ನು ಹಾವೇರಿ ಜಿಲ್ಲಾಧಿಕಾರಿಯಾಗಿದ್ದ ಎಂ.ವಿ ವೆಂಕಟೇಶ್ ಅವರನ್ನು ರಾಷ್ಟ್ರೀಯ ತೋಟಗಾರಿಕಾ ಮಿಷನ್ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದ್ದು, ಹಾವೇರಿ ಜಿಲ್ಲಾಧಿಕಾರಿಯಾಗಿ ಕೆಪಿಎಸ್ಸಿ ಪರೀಕ್ಷಾಧಿಕಾರಿಯಾಗಿದ್ದ ಕೃಷ್ಣಾ ಬಾಜಪೇಯಿ ಅವರನ್ನು ನೇಮಿಸಲಾಗಿದೆ.

ವರ್ಗಾವಣೆ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದು, ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಲಿಲ್ಲ. ರೋಹಿಣಿ ಬದಲಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಅವರು ಹಾಸನ ನೂತನ ಡಿಸಿ ಅಕ್ರಂ ಪಾಷಾ  ಅವರಿಗೆ ಅಧಿಕಾರ ಹಸ್ತಾಂತರಿಸಿದರು.