Asianet Suvarna News Asianet Suvarna News

Old Age Home : ಸರ್ಕಾರದಿಂದಲೇ ವೃದ್ಧಾಶ್ರಮ ಆರಂಭಕ್ಕೆ ಚಿಂತನೆ

  • ಸರ್ಕಾರದಿಂದಲೇ ವೃದ್ಧಾಶ್ರಮ ಆರಂಭಕ್ಕೆ ಚಿಂತನೆ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‌ ಭರವಸೆ
     
Karnataka Govt Plan To open Old age Home Says Halappa achar  snr
Author
Bengaluru, First Published Dec 22, 2021, 8:23 AM IST

 ವಿಧಾನ ಪರಿಷತ್‌ (ಡಿ.22):  ಸರ್ಕಾರದಿಂದಲೇ (Govt) ವೃದ್ಧಾಶ್ರಮ ಆರಂಭಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‌ (Halappa Achar) ಹೇಳಿದ್ದಾರೆ.  ಕಾಂಗ್ರೆಸ್‌ ಸದಸ್ಯ ಎಂ. ನಾರಾಯಣಸ್ವಾಮಿ ಹಾಗೂ ಬಿಜೆಪಿಯ (BJP) ತೇಜಸ್ವಿನಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದ್ಯ ಖಾಸಗಿಯವರಿಂದ ವೃದ್ದಾಶ್ರಮಗಳು ನಡೆಯುತ್ತಿದ್ದು, ಕೇಂದ್ರ ಸರ್ಕಾರ (Central Govt) 25 ಲಕ್ಷ ರು. ಅನುದಾನ ನೀಡುತ್ತಿದೆ. ರಾಜ್ಯ ಸರ್ಕಾರ (Karnataka Govt) 8 ಲಕ್ಷ ರು. ಕೊಡುತ್ತಿತ್ತು. ಹೀಗಾಗಿ ರಾಜ್ಯ ಸರ್ಕಾರ (Govt Of Karnataka ) ಸಹ ಇತ್ತೀಚೆಗೆ ಈ ಮೊತ್ತವನ್ನು 15 ಲಕ್ಷ ರು.ಗಳಿಗೆ ಹೆಚ್ಚಿಸಿದೆ ಎಂದರು.

ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ, ಶೋಷಣೆ, ವಂಚನೆಗೆ ಒಳಗಾದ ಹಿರಿಯ ನಾಗರಿಕರಿಗೆ ನ್ಯಾಯ ಒದಗಿಸಲು ಕೇಂದ್ರದ ಕಾನೂನು ಜಾರಿ ಮಾಡಲಾಗಿದೆ. ದೂರುಗಳ (Complaint) ಬಗ್ಗೆ ವಿಚಾರಣೆ ನಡೆಸಲು ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ನಿರ್ವಹಣಾ ನ್ಯಾಯಮಂಡಳಿ ರಚಿಸಲಾಗಿದೆ. 90 ದಿನದೊಳಗೆ ಪ್ರಕರಣ ಇತ್ಯರ್ಥಕ್ಕೆ ಕಾಲ ನಿಗದಿ ಮಾಡಲಾಗಿದೆ. ಜೊತೆಗೆ ತಿಂಗಳಿಗೆ ಗರಿಷ್ಠ 10 ಸಾವಿರ ರು. ಮಾಸಿಕ ಭತ್ಯೆ ಪಡೆಯಬಹುದಾಗಿದೆ, ನಿರ್ವಹಣಾ ನ್ಯಾಯಮಂಡಳಿ ತೀರ್ಪಿನ ವಿರುದ್ಧ ಜಿಲ್ಲಾಧಿಕಾರಿಗಳ (DC) ಅಧ್ಯಕ್ಷತೆಯಲ್ಲಿ ರಚಿತವಾದ ಮೇಲ,್ಮನವಿ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿ ಒಂದು ತಿಂಗಳ ಒಳಗಾಗಿ ನ್ಯಾಯ ಪಡೆಯಬಹುದಾಗಿದೆ ಎಂದು ವಿವರಿಸಿದರು.

5774 ಪ್ರಕರಣ ದಾಖಲು:  2020-21ನೇ ಸಾಲಿನಲ್ಲಿ ಹಿರಿಯ ನಾಗರಿಕರ (old Age) ಮೇಲೆ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ 5774 ಪ್ರಕರಣ ದಾಖಲಾಗಿವೆ. ಇದರ ಜೊತೆಗೆ ಎಲ್ಲ ಜಿಲ್ಲೆಗಳಲ್ಲಿ ಹಿರಿಯ ನಾಗರಿಕ ಸಹಾಯವಾಣಿ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಇದೇ ಸಂದರ್ಭ ವಿವರಿಸಿದರು. ರಾಜ್ಯದಲ್ಲಿ 2011 ಜನಗಣತಿಯ ಪ್ರಕಾರ ರಾಜ್ಯದಲ್ಲಿ 57,91,032 ಹಿರಿಯ ನಾಗರಿಕರು ಇದ್ದಾರೆ. ಈ ಪೈಕಿ 42,35,609 ಹಿರಿಯ ನಾಗರಿಕರು ಮಾಸಾಶನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ವೃದ್ಧಾಶ್ರಮ ಅನುದಾನ ಹೆಚ್ಚಳ : 

ವೃದ್ಧಾಶ್ರಮಗಳಿಗೆ ಸರ್ಕಾರದಿಂದ ಒದಗಿಸುವ ಅನುದಾನವನ್ನು25 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಳ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದರು.ಇಂದು  ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಈ ಘೋಷಣೆ ಮಾಡಿದರು.

ವೃದ್ಧಾಪ್ಯ ಆಶ್ರಮಗಳಿಗೆ ರಾಜ್ಯದಿಂದ ವಾರ್ಷಿಕ 8 ಲಕ್ಷ ಅನುದಾನ ಕೊಡಲಾಗ್ತಿದೆ. ಅನುದಾನ ಮೊತ್ತದಲ್ಲಿ 7 ಲಕ್ಷ ಏರಿಕೆ ಮಾಡಿ ಒಟ್ಟು 15 ಲಕ್ಷ ಅನುದಾನ ಕೊಡ್ತೇವೆ. ಕೇಂದ್ರದಿಂದ ಸದ್ಯ 25 ಲಕ್ಷ ಅನುದಾನ ಬರ್ತಿದೆ. ರಾಜ್ಯದ ಅನುದಾನವೂ ಸೇರಿ ಒಟ್ಟು 40 ಲಕ್ಷ ಅನುದಾನ ಕೊಡುವ ಕೆಲಸ ಮಾಡ್ತೇವೆ ಎಂದು ತಿಳಿಸಿದರು.

ವಯಸ್ಸಿನಿಂದ ಅನುಭವದಿಂದ ನಡವಳಿಕೆಯಿಂದ ನಿರ್ಧಾರವಾಗುತ್ತದೆ. ಮಾನಸಿಕವಾಗಿ ನಾವೂ ಗಟ್ಟಿಯಿದ್ದರೆ ಹಿರಿತನ ನಿರ್ಧಾರವಾಗುತ್ತದೆ. ಸಮಾಜಕ್ಕೆ ಇನ್ನೂ ಕೊಡುಗೆ ಕೊಡಬಹುದು ಅನ್ನುವ ಮನಸಿದ್ದರೆ ನಮ್ಮ ಹಿರಿತನವನ್ನು ಯಶಸ್ವಿಯಾಗಿ ಕಳೆಯಬಹುದು ಎಂದರು. 

ಕುಟುಂಬ, ಸರ್ಕಾರ, ವ್ಯವಸ್ಥೆ, ಸಮಾಜ ಹಿರಿಯರ ಜೊತೆಗಿರಬೇಕು. ಹಿರಿಯರಾಗಿದ್ದ ಸಿ.ಎಂ.ಉದಾಸಿಯವರು ಇತ್ತೀಚೆಗೆ ನಿಧನರಾದರು. ಅವರ ವಯಸ್ಸು ಕೇಳಿದ್ರೆ, ಏ ತಮ್ಮ ಹಾಗೆಲ್ಲ ಕೇಳಬಾರದು ಅಂತಿದ್ದರು. ನಾನು ಮಾಜಿ ಯುವಕ, ನೀನು ಭಾವಿ ಮುದುಕ ಎಂದು ಹೇಳುತ್ತಿದ್ದರು. ಅದು ಒಳ್ಳೆಯ ಮನಸ್ಥಿತಿ ಎಂದು ಬೊಮ್ಮಾಯಿ ನೆನಪುಗಳನ್ನು ಮೆಲುಕುಹಾಕಿದರು.

Follow Us:
Download App:
  • android
  • ios