2ನೇ ಹಂತದ ಲಾಕ್‌ಡೌನ್ ವಿಭಿನ್ನ: ಮದ್ಯಪ್ರಿಯರಿಗೆ ಸಿಗುತ್ತಾ ಗುಡ್‌ನ್ಯೂಸ್..?
ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಜಾರಿಯಾಗಿದ್ದು, ಕುಡುಕರಿಗೆ ಎಣ್ಣೆ ಸಿಗದಂತಾಗಿದೆ. ಇದರಿಂದ ಕಂಗೆಟ್ಟಂತಾಗಿರುವ ಕುಡುಕರಿಗೆ ಗುಡ್ ನ್ಯೂಸ್ ಸಿಗುವ ಲಕ್ಷಣಗಳು ಕಾಣುತ್ತಿವೆ.
ಬೆಂಗಳೂರು,(ಏ.11): ಕೊರೋನಾ ಲಾಕ್‌ಡೌನ್‌ನಿಂದ ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಕುಡುಕರ ಪರಿಸ್ಥಿತಿಯಂತೂ ನೋಡಬಾರದು.
ಕೆಲವರು ಕಳ್ಳಭಟ್ಟಿ ಮೊರೆ ಹೋದ್ರೆ, ಇನ್ನು ಕೆಲವರು ಮದ್ಯದಂಗಡಯನ್ನೇ ದೋಚುತ್ತಿದ್ದಾರೆ. ಮತ್ತೊಂದಡೆ ಕೆಲ ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಏಪ್ರಿಲ್ 14ರ ನಂತರ ರಾಜ್ಯ ಸರಕಾರದಿಂದ ಮದ್ಯಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಗಲಿದೆ ಎನ್ನಲಾಗುತ್ತಿದ್ದು, ಎಂಎಸ್‌ಐಎಲ್ ಮೂಲಕ ರಾಜ್ಯ ಸರಕಾರ ಮದ್ಯಪಾನ ಮಾರಾಟ ಮಾಡುವುದಕ್ಕೆ ಚಿಂತನೆಗಳು ನಡೆದಿವೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಸಿಎಂ ಸುದ್ದಿಗೋಷ್ಠಿ: ಲಾಕ್‌ಡೌನ್ ವಿಸ್ತರಣೆ ಅನಿವಾರ್ಯ, ವಿಭಿನ್ನವಾಗಿರಲಿದೆ ಎಂದ ಬಿಎಸ್‌ವೈ
ಬಾರ್ ಮತ್ತು ಪಬ್ ಗಳಿಗಿಲ್ಲ ಅವಕಾಶ. ಅದರ ಬದಲಿಗೆ ಕೇವಲ ಸರ್ಕಾರದ ಔಟ್ ಲೆಟ್ ಗಳಾದ ಎಂಎಸ್ ಐಎಲ್ ಮಾತ್ರಾ ತೆರೆಯುವ ಬಗ್ಗೆ ಚಿಂತನೆ ನಡೆದಿದೆ ಎಂದು ಮಾಹಿತಿ ಸುವರ್ಣ ನ್ಯೂಸ್‌ಗೆ ಮೂಲಗಳು ತಿಳಿಸಿವೆ.
ಇಂದು (ಶನಿವಾರ) ನಡೆದ ಮಾಧ್ಯಮ ಗೋಷ್ಠಿ ಸಿಎಂ ಬಿಎಸ್ ಯಡಿಯ್ಯೂರಪ್ಪನವರು ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೇ ಇದ್ದರೂ, ಈ ಬಾರಿಯ ಲಾಕ್‌ಡೌನ್ ಕೆಲವೊಂದಿಕ್ಕೆ ವಿನಾಯಿತಿಯೊಂದಿಗೆ ವಿಭಿನ್ನವಾಗಿರಲಿದೆ ತಿಳಿಸಿದ್ದಾರೆ.
ಇನ್ನೆರಡು ದಿನಗಳಲ್ಲಿ ಮಾರ್ಗಸೂಚಿ ಹೊರಡಿಸುವುದಾಗಿ ಸಿಎಂ ಹೇಳಿದ್ದು, ಎಲ್ಲೋ ಒಂದು ಕಡೆ ಕುಡುಕರಿಗೆ ಗುಡ್‌ನ್ಯೂಸ್ ಸಿಗುತ್ತಾ ಎನ್ನುವ ಆಶಾಭಾವನೆಯಲ್ಲಿ ಮದ್ಯವ್ಯಸನಿಗಳು ಕಾದು ಕುಳಿತ್ತಿದ್ದಾರೆ.