ಬೆಂಗಳೂರು, [ಫೆ.25]: ಕರ್ನಾಟಕ ರಾಜ್ಯ ಸಾರಿಗೆ ಬಸ್ ಪ್ರಯಾಣ ದರ ಏರಿಕೆಯಾಗಿದೆ.  ಬಿಎಂಟಿಸಿ ಹೊರತುಪಡಿಸಿ ಕೆ.ಆರ್.ಟಿ.ಸಿ, ಈಶಾನ್ಯ ಮತ್ತು ವಾಯುವ್ಯ ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಭಾರತ-ಅಮೆರಿಕಾ ಮಹತ್ವದ ಒಪ್ಪಂದ, ನಿವೇದಿತಾ-ಚಂದನ್ ಮದ್ವೆ ಅನುಬಂಧ, ಫೆ.25ರ ಟಾಪ್ 10 ಸುದ್ದಿ

ಶೇ.12ರಷ್ಟು ಪ್ರಯಾಣ ದರ ಹೆಚ್ಚಿನ ರಾಜ್ಯ ಸರ್ಕಾರ ಇಂದು [ಮಂಗಳವಾರ] ಅನುಮೋದನೆ ಹೊರಡಿಸಿದ್ದು, ಮಂಗಳವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.

ಸಾರಿಗೆ ನಿಗಮಗಳು ಶೇ.18ರಷ್ಟು ಪ್ರಯಾಣ ದರ ಏರಿಕೆಗೆ ಸಾರಿಗೆ ನಿಗಮಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾನೆ ಕಳುಹಿಸಲಾಗಿತ್ತು. ಆದ್ರೆ, ಸರ್ಕಾರ ಶೇ.12ರಷ್ಟು ದರ ಹೆಚ್ಚಿಸಲು ಒಪ್ಪಿಗೆ ಸೂಚಿಸಿದೆ.

KSRTC ನೇಮಕಾತಿ: 3745 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಹಲವು ವರ್ಷಗಳಿಂದ ರಾಜ್ಯ ಸಾರಿಗೆ ಬಸ್ ದರ ಪರಿಷ್ಕರಣೆ ಮಾಡಿ ಬಹಳ ವರ್ಷವಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಬಸ್ ಪ್ರಯಾಣ ದರಲ್ಲಿ ಏರಿಕೆ ಮಾಡಲಾಗಿದೆ ಎನ್ನುವುದು ಸಾರಿಗೆ ನಿಗಮದ ಮಾತು.

"