Asianet Suvarna News Asianet Suvarna News

BH series Registration : ರಾಜ್ಯದಿಂದ ರಾಜ್ಯಕ್ಕೆ ವಾಹನ ವರ್ಗಾವಣೆ ಮಾಡಿದ್ರೂ  ನಂಬರ್ ಬದಲಾಗಲ್ಲ!

* ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರದಿಂದ ಶುಭ ಸುದ್ದಿ
* ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆ ಬಹಳ ಸುಲಭ
* ಮರು ನೋಂದಣಿ ಮಾಡುವ ಅಗತ್ಯ ಇಲ್ಲ
* ಬಿಎಚ್ ನೋಂದಣಿ ಸಹ ಆರಂಭ

good news for motorists BH series registration plates rolled out in 15 states mah
Author
Bengaluru, First Published Nov 24, 2021, 4:59 PM IST

ನವದೆಹಲಿ(ನ. 24)  ಇಡೀ ದೇಶಕ್ಕೆ ಒಂದೇ ವಾಹನ ನೋಂದಣಿ ಸಂಖ್ಯೆ.. ಕೇಂದ್ರ ಸರ್ಕಾರ(Union Govt) ಈ ವಿಚಾರವನ್ನು ಅಧಿಕೃತ ಮಾಡಿದೆ. ಕೆಎ(ಕರ್ನಾಟಕ) ಟಿನ್(ತಮಿಳುನಾಡು), ಆರ್ ಜೆ(ರಾಜಸ್ಥಾನ)  ಜಾಗದಲ್ಲಿ ಇನ್ನು ಮುಂದೆ ಬಿಚ್‌ (BH series) ಕಾಣಿಸಿಕೊಳ್ಳಲಿದೆ. 

ಕೇಂದ್ರ ಸರ್ಕಾರ ವಾಹನ ಖರೀದಿ ಮಾಡುವವರಿಗೆ ಅತಿ ದೊಡ್ಡ ಶುಭ ಸುದ್ದಿಯೊಂದನ್ನು ನೀಡಿದೆ.  ಒಂದು ರಾಜ್ಯದಲ್ಲಿ ನೋಂದಣಿ (Registration)ಆಗಿರುವ ವಾಹನವನ್ನು(Vechile) ಇನ್ನೊಂದು ರಾಜ್ಯಕ್ಕೆ ಬಹಳ ಸರಳವಾಗಿ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ.  ಅದೇ  ನೋಂದಣಿ (Registration Number)ಸಂಖ್ಯೆಯೂ ಇರಲಿದೆ. ಇದರ ಜತೆಗೆ   15  ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಭಾರತ್ ಸೀರಿಸ್ (The New Bharat Series) ನೋಂದಣಿಗೂ ಅವಕಾಶ ಮಾಡಿಕೊಡಲಾಗಿದೆ.

ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕಾರ್ಯದರ್ಶಿ ಗಿರಿಧರ್ ಅರ್ಮಾನೆ  ಅಧಧಿಕೃತ ಹೇಳಿಕೆ ನೀಡಿದ್ದಾರೆ.  ಆಗಸ್ಟ್‌ನಲ್ಲಿ ಹೊಸ ವಾಹನ ನೋಂದಣಿ ಪದ್ಧತಿಯನ್ನು  ಆರಂಭಿಸಲು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದರ ಅಡಿಯಲ್ಲಿ, ವಾಹನ ಮಾಲೀಕರು ತಮ್ಮ ವಾಹನವನ್ನು ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಿಂದ ಮತ್ತೊಂದು ರಾಜ್ಯ/ಕೇಂದ್ರಾಡಳಿತ ಪ್ರದೇಶಕ್ಕೆ ವರ್ಗಾಯಿಸಿದಾಗ ಮರು-ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ.

ಭಾರತ್ ಸೀರಿಸ್ ಗೆ ಸಂಬಂಧಿಸಿ ಕೆಲ ಆರಂಭಿಕ ನಿಯಮಗಳನ್ನು ಹಾಕಿಕೊಳ್ಳಲಾಗಿದೆ. ರಕ್ಷಣಾ  ಇಲಾಖೆ, ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ, ಕೇಂದ್ರ / ರಾಜ್ಯ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದು ಸ್ವಯಂ ನಿವೃತ್ತಿ ತೆಗೆದುಕೊಂಡ ಸಿಬ್ಬಂದಿ ಮೊದಲ ಆದ್ಯತೆಯಲ್ಲಿ ಇರುತ್ತಾರೆ.

Tata Motors: ಬೆಂಗಳೂರಿನಲ್ಲಿ ಟಾಟಾ ಮೋಟಾರ್ಸ್ ಅತೀ ದೊಡ್ಡ EXPO,ಏಸ್ ಮಹೋತ್ಸವ!

ಮೋಟಾರು ವಾಹನ ಕಾಯಿದೆ, 1988 ರ ಸೆಕ್ಷನ್ 47 ರ ಅಡಿಯಲ್ಲಿ, ವಾಹನವನ್ನು ನೋಂದಾಯಿಸಿದ ರಾಜ್ಯವನ್ನು ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ 12 ತಿಂಗಳಿಗಿಂತ ಹೆಚ್ಚು ಕಾಲ ವಾಹನವನ್ನು ಇಟ್ಟುಕೊಳ್ಳಲು ವ್ಯಕ್ತಿಗೆ ಅನುಮತಿಯನ್ನು ನೀಡಲಾಗಿದೆ.  ರಾಜ್ಯಗಳಲ್ಲಿಯೂ ಹೊಸ ನೋಂದಣಿ ವೇಗ ಹೆಚ್ಚಳ ಮಾಡಲಾಗುವುದು.  ಖಾಸಗಿ ವಾಹನಗಳ ವರ್ಗಾವಣೆ ಅತ್ಯಂತ ಸುಲಭವಾಗಿ ಮತ್ತು ಯಾವುದೇ ತೊಂದರೆಯಿಲ್ಲದೆ ಮಾಡಲು ಬಿಎಚ್ ಸರಣಿಯನ್ನು ಪರಿಚಯಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಹೊಸ ರಾಷ್ಟ್ರೀಯ ವಾಹನ ನೀತಿಯಡಿ ರಾಜ್ಯಗಳಲ್ಲಿ ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. "ನಾವು ಈಗಾಗಲೇ ಗುಜರಾತ್‌ನಿಂದ ಒಂದು ಅರ್ಜಿಯನ್ನು ಸ್ವೀಕರಿಸಿದ್ದೇವೆ, ನಾವು ಅಸ್ಸಾಂನಿಂದ ಇನ್ನೂ ಒಂದು ಪ್ರಸ್ತಾವನೆ ಬರಲಿದೆ. ರಾಷ್ಟ್ರೀಯ ವಾಹನ ಸ್ಕ್ರ್ಯಾಪ್ ನೀತಿಯ ಅಡಿಯಲ್ಲಿ, ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ನೀಡಿದ ನಂತರ ಖರೀದಿಸುವ ಹೊಸ ವಾಹನಗಳಿಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ರಸ್ತೆ ತೆರಿಗೆಯಲ್ಲಿ ಶೇಕಡಾ 25 ರಷ್ಟು ಕಡಿತಕ್ಕೆ ಒಳಪಟ್ಟಿರುತ್ತದೆ. ಈ ಸೌಲಭ್ಯ ಸಹ ಅಗತ್ಯ ದಾಖಲೆಗಳೊಂದಿಗೆ ಲಭ್ಯವಾಗಲಿದೆ.

ತೆರಿಗೆ ಹಣ ಹೇಗೆ ಪಾವತಿ?: ಭಾರತ್‌ ಸೀರೀಸ್‌ ಅಡಿ ನೋಂದಣಿ ಸಂಖ್ಯೆ ಖಾಸಗಿ ಬಳಕೆಯ ವಾಹನಗಳಿಗಷ್ಟೇ ಸಿಗಲಿದೆ. ಈ ಸಂಖ್ಯೆ ಪಡೆಯಲು 10 ಲಕ್ಷ ರು.ವರೆಗಿನ ಬೆಲೆಯ ವಾಹನಕ್ಕೆ ಶೇ.8, 10ರಿಂದ 20 ಲಕ್ಷ ರು. ವಾಹನಕ್ಕೆ ಶೇ.10 ಹಾಗೂ 20 ಲಕ್ಷ ರು.ಗಿಂತ ಹೆಚ್ಚಿನ ಬೆಲೆಯ ವಾಹನಕ್ಕೆ ಶೇ.12ರಷ್ಟುತೆರಿಗೆ ಪಾವತಿಸಬೇಕು. ಎಲೆಕ್ಟ್ರಿಕ್‌ ವಾಹನಕ್ಕೆ ಶೇ.2ರಷ್ಟುಕಡಿಮೆ ತೆರಿಗೆ ಮತ್ತು ಡೀಸೆಲ್‌ ವಾಹನಕ್ಕೆ ಶೇ.2ರಷ್ಟುಹೆಚ್ಚು ತೆರಿಗೆ ಪಾವತಿಸಬೇಕು.

ಕಾರು ಮಾಲೀ​ಕ​ರಿಗೆ ‘ಬಿ​ಎ​ಚ್‌’ ಸರ​ಣಿ​ಯಲ್ಲಿ ಎರ​ಡು ವರ್ಷದ ಅವ​ಧಿಗೆ ಅಥವಾ ನಾಲ್ಕು/ಆರು/ಎಂಟು ವರ್ಷ... ಹೀಗೆ ‘ಮ​ಲ್ಟಿ​ಪಲ್‌ ಟು’ ಮಾದ​ರಿ​ಯ​ಲ್ಲಿ ರಸ್ತೆ ತೆರಿಗೆ ಪಾವ​ತಿ​ಸಲು ಅವ​ಕಾ​ಶ​ವಿ​ರ​ಲಿ​ದೆ. ಇಡೀ ಪ್ರಕ್ರಿಯೆ ಆನ್‌​ಲೈ​ನ್‌​ನಲ್ಲಿ ನಡೆ​ಯ​ಲಿ​ದೆ.

ಶೀಘ್ರವೇ ಪೆಟ್ರೋಲ್, ಡಿಸೇಲ್ ವಾಹನಗಳ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನ: ತೈಲೋತ್ಪನ್ನಗಳ ಬೆಲೆ ಹಾಗೂ ಪರಿಸರ ಮಾಲಿನ್ಯವನ್ನು ತಡೆಯುವುದಕ್ಕಾಗಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ (Electric Vehical)ಗಳ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರಕಾರ (Central Govt) ಹಾಗೂ ರಾಜ್ಯ ಸರಕಾರ (State Govt)ಗಳು ಸಾಕಷ್ಟು ಉತ್ತೇಜನವನ್ನು ನೀಡುತ್ತಿವೆ. ಇದರ ಪರಿಣಾಮ ಕಳೆದ ಎರಡ್ಮೂರು ವರ್ಷದಲ್ಲಿ ಸಾಕಷ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಹೆಚ್ಚಳವನ್ನು ಕಾಣಬಹುದಾಗಿದೆ.

 ಮುಂದಿನ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆಯು, ಸಾಂಪ್ರದಾಯಿಕ ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳ ಬೆಲೆಗೆ ಸಮನಾಗಿರುತ್ತದೆ ಎಂದು ಹೇಳಿದ್ದಾರು. ಸರಕಾರದ ಭಾರೀ ಉತ್ತೇಜನದ ಹೊರತಾಗಿಯೂ ದುಬಾರಿ ಬೆಲೆಯ ಕಾರಣದಿಂದಾಗಿ ಎಲೆಕ್ಟ್ರಿಕ್ ವಾಹನಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಲ್ಲಿ ಜನರು ಖರೀದಿಸುತ್ತಿಲ್ಲ ಎಂಬ ಆರೋಪವಿದೆ. ಆ ಹಿನ್ನನೆಯಲ್ಲಿ ಗಡ್ಕರಿ ಅವರು ಮಾತುಗಳು ಮಹತ್ವ ಪಡೆದುಕೊಂಡಿದ್ದವು.

ಎಲೆಕ್ಟ್ರಿಕ್ ವಾಹನಗಳ ವೆಚ್ಚ ಅಧಿಕವಾಗಿದೆ ಯಾಕೆಂದರೆ, ಅವುಗಳ ಸಂಖ್ಯೆ ಕಡಿಮೆ ಇದೆ. 250ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಹೆಚ್ಚು ಅಗ್ಗದಲ್ಲಿ ಇವಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಬಗ್ಗೆ  ಕೆಲಸ ಮಾಡುತ್ತಿವೆ. ಹಾಗಾಗಿ, ಭಾರತವು ಇವಿ ಕ್ರಾಂತಿಯನ್ನು ಎದುರು ನೋಡುತ್ತಿದೆ ಎಂದು  ತಿಳಿಸಿದ್ದರು. 

ಎಲೆಕ್ಟ್ರಿಕ್ ವಾಹನಗಳಿಗೆ ಭಾರತವು ಶೀಘ್ರವೇ ಬೃಹತ್ ಇವಿ ಮಾರುಕಟ್ಟೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದ ಗಡ್ಕರಿ ಅವರು, ಮುಂದಿನ ಐದು ವರ್ಷಗಳಲ್ಲಿ 600 ಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯವೂ ಸೇರಿದಂತೆ ವೇಸೈಡ್ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು. 

Follow Us:
Download App:
  • android
  • ios