ಕೊರೋನಾ 3ನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಸಜ್ಜು: ತಜ್ಞ ವೈದ್ಯರ ಉನ್ನತ ಮಟ್ಟದ ಸಮಿತಿ ರಚನೆ
* ಕೊರೋನಾ 3ನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಸಜ್ಜು
* ರಾಜ್ಯದಲ್ಲಿ ಕೋವಿಡ್ ಉನ್ನತ ವೈದ್ಯ ಸಮಿತಿ ರಚನೆ
* ತಜ್ಞ ವೈದ್ಯರ ಉನ್ನತ ಮಟ್ಟದ ಸಮಿತಿ ರಚಿಸಿದ ರಾಜ್ಯ ಸರ್ಕಾರ
ಬೆಂಗಳೂರು, (ಮೇ.26): ಕರ್ನಾಟಕ ಕೋವಿಡ್ ನಿಯಂತ್ರಣ ಕಾರ್ಯಪಡೆ ಮುಖ್ಯಸ್ಥ, ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥ ನಾರಾಯಣ್ ಅವರು ಕೊರೊನಾ 3ನೇ ಅಲೆ ಎದುರಿಸಲು ಸಜ್ಜಾಗಿದ್ದಾರೆ.
ಈ ಸಂಬಂಧ ಖ್ಯಾತ ವೈದ್ಯ ಡಾ. ದೇವಿ ಶೆಟ್ಟಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕೋವಿಡ್ ಉನ್ನತ ವೈದ್ಯ ಸಮಿತಿ ರಚನೆ ಮಾಡಿದ್ದಾರೆ. ತಜ್ಞ ವೈದ್ಯರ ಉನ್ನತ ಮಟ್ಟದ ಸಮಿತಿ ರಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಸಮಿತಿಯಲ್ಲಿ ಒಟ್ಟು 13 ಮಂದಿ ವೈದ್ಯರು ಇದ್ದಾರೆ.
ಈ ಬಗ್ಗೆ ಕರ್ನಾಟಕ ಕೋವಿಡ್ ನಿಯಂತ್ರಣ ಕಾರ್ಯಪಡೆ ಮುಖ್ಯಸ್ಥ ಡಾ. ಸಿ ಎನ್ ಅಶ್ವತ್ಥ ನಾರಾಯಣ್ ಟ್ವೀಟ್ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾತುಕತೆ ಸಫಲ: ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಹಂಚಿಕೆ
ಕೊರೋನಾ ಸೋಂಕು ಎರಡನೇ ಅಲೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಡವಿದ್ದು ಸ್ಪಷ್ಟವಾಗಿತ್ತು. ಅದರ ಸರಿಪಡಿಸಿಕೊಂಡು ಮುಂದೆ ಎದುರಾಗಬಹುದಾದ ಮೂರನೇ ಕೊವಿಡ್ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರ ಈ ಬಾರಿ ಮುಂಚಿತವಾಗಿಯೇ ಸಿದ್ಧತೆ ನಡೆಸಿದೆ.
ಮುಖ್ಯವಾಗಿ ಪರಿಣತ ವೈದ್ಯರಿಂದ ಸಲಹೆ, ಸೂಚನೆ ಪಡೆಯಲು ತಯಾರಿ ನಡೆಸಿದೆ. ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಮೂರನೇ ಕೊವಿಡ್ ಅಲೆ ಎದುರಾಗುವ ಸಾಧ್ಯತೆಯಿದೆ. ಖ್ಯಾತ ಹೃದಯತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಕೋವಿಡ್ ವೈದ್ಯಕೀಯ ಉನ್ನತ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಗಮನಾರ್ಹವೆಂದರೆ ಕೇಂದ್ರ ಸರ್ಕಾರವೂ ಸಹ ಕೊರೊನಾ ನಿಯಂತ್ರಣದಲ್ಲಿ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ವೈದ್ಯ ನೆರವು ಪಡೆದಿದೆ ಎಂದು ಅಶ್ವತ್ಥ್ ನಾರಾಯಣ ಹೇಳಿದ್ದಾರೆ.