ಮಂಡ್ಯ ವಿಶ್ವವಿದ್ಯಾಲಯವನ್ನು ಮುಚ್ಚುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ ಎಂದು ಅಶ್ವತ್ಥನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿ ವಿಶ್ವವಿದ್ಯಾಲಯವನ್ನು ಸ್ವಾಗತಿಸುತ್ತೇವೆ ಆದರೆ ಮಂಡ್ಯ ವಿವಿ ಮುಚ್ಚುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಮಂಡ್ಯ (ಮಾ.01): ಮಂಡ್ಯ ಜಿಲ್ಲೆಗೆ ವಿಶ್ವವಿದ್ಯಾಲಯ ಬೇಕು ಎಂದು ಕೇಂದ್ರ ಸರ್ಕಾರ ಗುರುತಿಸಿದೆ. 2013ರಲ್ಲಿ ಇಡೀ ದೇಶದಲ್ಲಿ ನಾಲ್ಕು‌ ಕಾಲೇಜುಗಳನ್ನು ಆಯ್ಕೆ ಮಾಡಿದಾಗ ಅದರಲ್ಲಿ ಮಂಡ್ಯದ ಕಾಲೇಜನ್ನೂ ಗುರುತಿಸಿ ವಿಶ್ವವಿದ್ಯಾಲಯ ಮಾಡುತ್ತಾರೆ. ಕಾನೂನು ಪ್ರಕಾರವಾಗಿಯೇ ಮಂಡ್ಯ ವಿಶ್ವವಿದ್ಯಾಲಯ ರಚನೆ ಆಗಿರೋದು. ಶಿಕ್ಷಣ ಅಂದರೆ ಹೇಗೆ ಬೇಕಾದರೂ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಹೇಗೆ ಬೇಕಾದರೂ ನಡೆದುಕೊಳ್ಳಬಹುದು ಎಂದು ಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಕೇವಲ ಕಮಿಷನ್ ಅಷ್ಟೇ ಬೇಕಿರೋದು. ಅದಕ್ಕಾಗಿ ಈ ಕಾಲೇಜನ್ನು ಮುಚ್ಚುತ್ತಿದ್ದಾರೆ ಎಂದು ಹೇಳಿದರು.

ಮಂಡ್ಯ ವಿಶ್ವವಿದ್ಯಾಲಯ ಚನ್ನಾಗಿ ನಡೆದುಕೊಂಡು ಬರುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ಸಹ ಹೆಚ್ಚಾಗಿದೆ. ಹಲವು ಉಪನ್ಯಾಸಕರಿಗೆ ಕೆಲಸ ದೊರಕಿದೆ. ದಕ್ಷಿಣ ಭಾಗದಲ್ಲಿ ಕೃಷಿ ಸಮೃದ್ಧಿಯಾಗಿದ್ದ ಜಿಲ್ಲೆ ಎಂದರೆ ಮಂಡ್ಯ ಜಿಲ್ಲೆ. ಆದರೆ, ಇದೀಗ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಇದೆ. ಬಡತನ ಹೆಚ್ಚುತ್ತಿರುವ ಜಿಲ್ಲೆ ಮಂಡ್ಯ ಆಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ನಮ್ಮ ಜಿಲ್ಲೆ ತಂಟೆಗೆ ಬಂದರೆ ನಾನು ಸುಮ್ಮನೆ ಇರಲ್ಲ ಅಂತಾ ಇದ್ದಾರೆ. ಹಾಗಾದರೆ, ಮಂಡ್ಯದ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಏನು ಮಾಡುತ್ತಿದ್ದಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲೆಗೆ ಕೃಷಿ ವಿಶ್ವವಿದ್ಯಾಲಯ ತರುತ್ತಿರುವುದನ್ನು ನಾವು ಕೂಡ ಸ್ವಾಗತ‌ ಮಾಡುತ್ತೇವೆ. ಆದರೆ, ಮಂದ್ಯ ವಿಶ್ವವಿದ್ಯಾಲಯವನ್ನು ಮುಚ್ಚುತ್ತಿರುವುದು‌ ಏಕೆ? ಆರ್ಥಿಕ‌ ಕಾರಣವನ್ನು ಮುಂದಿಟ್ಟು ವಿವಿಯನ್ನು‌ ಮುಚ್ಚುತ್ತಿದ್ದಾರೆ. ಹಾಗಾದರೆ, ರಾಜ್ಯ ಸರ್ಕಾರ ಆರ್ಥಿಕವಾಗಿ ಪಾಪರ್ ಆಗ್ತಾ ಇದ್ಯಾ? ಕಾನೂನಾತ್ಮಕವಾಗಿ ಮಂಡ್ಯ ವಿಶ್ವವಿದ್ಯಾಲಯವನ್ನು ನಿಲ್ಲಿಸಲು ಸಾಧ್ಯವಿಲ್ಲ. ಇವರು ಗೊಂದಲ ನಿರ್ಮಾಣ ಮಾಡಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ನಮ್ಮ ಹೋರಾಟ ಮಕ್ಕಳ ಭವಿಷ್ಯದ ಉಜ್ವಲಕ್ಕಾಗಿ ಹೋರಾಟವಾಗಿದೆ. ಯೋಗ್ಯವಾದ ಶಿಕ್ಷಣ ಕಲಿತಾಗ ಮಾತ್ರ ಸಮ ಸಮಾಜ ನಿರ್ಮಾಣವಾಗಲು ಸಾಧ್ಯ. ಈ ಸರ್ಕಾರ ಬಂದಾಗಿನಿಂದಲೂ ಶಿಕ್ಷಣ ಸಚಿವರೇ ಮಂಡ್ಯ ವಿವಿ ಮುಚ್ಚುವುದಾಗಿ ಹೇಳಿದ್ದರು. ಈ ಸರ್ಕಾರದಿಂದ ಒಳ್ಳೆಯದನ್ನು ಮಾಡೋಕೆ ಆಗದಿದ್ದರೂ ಪರವಾಗಿಲ್ಲ, ಕೆಟ್ಟದ್ದನ್ನೂ ಮಾಡಬೇಡಿ ಎಂದು ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಯಾವ ಸೀಮೆ ಆರ್ಥಿಕ ತಜ್ಞ, ಸರ್ಕಾರಿ ಖಜಾನೆ ತುಂಬೆಲ್ಲಾ ಹೆಗ್ಗಣ ತುಂಬಿವೆ; ಆರ್. ಅಶೋಕ

ಮಂಡ್ಯ ವಿ ವಿಚಾರಕ್ಕೆ ಬಿಜೆಪಿ, ಜೆಡಿಎಸ್ ಹೋರಾಟ ವಿಚಾರ: ಬಿಜೆಪಿ ಸರ್ಕಾರದಲ್ಲಿ ಮಂಡ್ಯ ವಿಶ್ವವಿದ್ಯಾಲಯ ಓಪನ್ ಮಾಡಿದ್ರು ಕನಿಷ್ಠ ಸಂಬಳ ಕೊಟ್ಟಿಲ್ಲ. ಓಪನ್ ಮಾಡಿಬಿಟ್ಟು ದೊಡ್ಡಸ್ತಿಕೆ ತೋರುವುದಲ್ಲ. ವಿವಿ ವಿಲೀನ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ಉತ್ತರ ಹೇಳ್ತೇವೆ. ಮಂಡ್ಯ ವಿಶ್ವವಿದ್ಯಾಲಯ ಬೇಕಾ? ಬೇಡ್ವಾ ಅಂತ. ಕಾಂಗ್ರೆಸ್ ಸಂಪರ್ಕದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಬಂದರೆ ಬೇಜಾರಿಲ್ಲ, ನನ್ನ ಸಂಪರ್ಕದಲ್ಲಿ ಯಾರು ಇಲ್ಲ. ಪಕ್ಷದ ಸಿದ್ದಾಂತ ಒಪ್ಪಿ ಬರಲಿ. ಸಿಎಂ, ಅಧ್ಯಕ್ಷರು ಹೇಳಿದ್ದಾರೆ. ಅವರು ಬಂದರೆ ಮಾತ್ರ ಕರೆದುಕೊಳ್ಳುತ್ತೇವೆ. ಮಾ.22 ರಂದು ಕರ್ನಾಟಕ ಬಂದ್ ಮಾಡಲಿ. ಕನ್ನಡಪರ ಸಂಘಟನೆ ಪ್ರತಿಭಟನೆಗೆ ನಮ್ಮ ವಿರೋದ ಇಲ್ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.