ಸುವರ್ಣನ್ಯೂಸ್​​ನ ವಿನೋದ್​ಕುಮಾರ್, ಕನ್ನಡ ಪ್ರಭದ ಗಿರೀಶ್‌ ಸೇರಿ ರಾಜ್ಯದ 14 ಪತ್ರಕರ್ತರಿಗೆ ಪ್ರಶಸ್ತಿ ಘೋಷಣೆ

2017 ರಿಂದ 2023ರ ಅವಧಿಯ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಒಟ್ಟು 14 ಪತ್ರಕರ್ತರಿಗೆ ಪ್ರಶಸ್ತಿ ಫಲಕ ಮತ್ತು 1 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು.

karnataka government announced environmental journalism awards gow

ರಾಜ್ಯದ ಪತ್ರಕರ್ತರಿಗೆ 2017 ರಿಂದ 2023ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ, ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟಿಸಲಾಗಿದೆ. ಸುವರ್ಣ ನ್ಯೂಸ್‌ ವಿನೋದ್‌ಕುಮಾರ್ ನಾಯ್ಕ್‌  2019ನೇ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಕನ್ನಡಪ್ರಭ ಎಕ್ಸಿಕ್ಯುಟಿವ್ ಎಡಿಟರ್​ ಎಸ್​.ಗಿರೀಶ್​ ಬಾಬುಗೆ 2023ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಬಾಹ್ಯಾಕಾಶ, ರಕ್ಷಣಾ ವಿಶ್ಲೇಷಕರಾದ ಲೇಖಕ, ಸುವರ್ಣ ನ್ಯೂಸ್ ವೆಬ್ ಅಂಕಣಕಾರರಾರದ ಗಿರೀಶ್ ಲಿಂಗಣ್ಣ ಅವರಿಗೆ 2019ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟವಾಗಿದೆ. ರಾಜ್ಯದ ವಿವಿಧ ಒಟ್ಟು 14 ಪತ್ರಕರ್ತರಿಗೆ ಸರ್ಕಾರ ಪ್ರಶಸ್ತಿ ಪ್ರಕಟಿಸಿದ್ದು, ಪ್ರಶಸ್ತಿ ಫಲಕದ ಜೊತೆಗೆ 1 ಲಕ್ಷ ರೂ ನಗದು ಬಹುಮಾನ ದೊರೆಯಲಿದೆ.

ನ್ಯಾಚುರಲ್‌ ಸ್ಟಾರ್‌ ನಾನಿ 'ಹಿಟ್ 3' ಚಿತ್ರೀಕರಣದ ವೇಳೆ ದುರಂತ: ಸಹಾಯಕ ಛಾಯಾಗ್ರಾಹಕಿ ನಿಧನ

ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಪ್ರಶಸ್ತಿ ಪಡೆದ ಪತ್ರಕರ್ತರು:
ಚೀ.ಜ ರಾಜೀವ್ -ಸುದ್ದಿ ಸಂಪಾದಕರು ವಿಜಯ ಕರ್ನಾಟಕ (2017)
ದೇವಯ್ಯ ಗುತ್ತೇದಾರ್‌ - ಸ್ಥಾನಿಕ ಸಂಪಾದಕರು ವಿಜಯ ಕರ್ನಾಟಕ (2018)
ಗಿರೀಶ್ ಲಿಂಗಣ್ಣ- ಅಂಕಣಕಾರರು, ಸುವರ್ಣನ್ಯೂಸ್‌ ವೆಬ್‌ (2019)
ಯೋಗೇಶ್ ಎಂ ಎನ್‌ - ಹಿರಿಯ ವರದಿಗಾರರು ಪ್ರಜಾವಾಣಿ (2020)
ನೌಶಾದ್ ಬಿಜಾಪುರ - ಹಿರಿಯ ಸಂಪಾದಕರು, ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ (2022)
ಸತೀಶ್ ಜಿ ಟಿ - ಹಿರಿಯ ಸಹ ಸಂಪಾದಕರು,ದಿ ಹಿಂದೂ ಆಂಗ್ಲ ದಿನ ಪತ್ರಿಕೆ (2022)
ಎಸ್‌ ಗಿರೀಶ್ ಬಾಬು - ಕಾರ್ಯ ನಿರ್ವಾಹಕ ಸಂಪಾದಕರು, ಕನ್ನಡಪ್ರಭ (2023)

ಖಾಸಗಿ ಬಾಹ್ಯಾಕಾಶ ಉದ್ದಿಮೆಗೆ ಉತ್ತೇಜನ: ಇನ್-ಸ್ಪೇಸ್ ಹೆಗಲೇರಿ ಪಿಎಸ್ಎಲ್‌ವಿ-ಸಿ60 ಸ್ಪೇಡೆಕ್ಸ್‌ನಲ್ಲಿ ಯಶಸ್ಸು ಕಂಡ ಎನ್‌ಜಿಇಗಳು

ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪಡೆದ ಪತ್ರಕರ್ತರು:
ವಿಜಯಲಕ್ಷ್ಮಿ ಶಿಬರೂರು- ಹಿರಿಯ ಪತ್ರಕರ್ತೆ (2017)
ಬಿಎಂಟಿ ರಾಜೀವ್‌ , ಹವ್ಯಾಸಿ ಪತ್ರಕರ್ತರು (2018)
ವಿನೋದ್ ನಾಯ್ಕ್‌ - ಸಂಪಾದಕರು -ವಿಶೇಷ ಯೋಜನೆಗಳು ಏಷ್ಯಾನೆಟ್‌ ಸುವರ್ಣನ್ಯೂಸ್ (2019)
ಮಾಲತೇಶ ಅಂಗೂರ - ಮುಖ್ಯ ವರದಿಗಾರರು ಕೌರವ ಪತ್ರಿಕೆ (2020)
ಸುಧೀರ್‌  ಶೆಟ್ಟಿ - ಹವ್ಯಾಸಿ ಪರಿಸರ ಛಾಯಾಗ್ರಾಹಕ (2021)
ಮಲ್ಲಿಕಾರ್ಜುನ ಹೊಸಪಾಳ್ಯ, ಹವ್ಯಾಸಿ ಪತ್ರಕರ್ತರು (2022)
ಆರ್.ಮಂಜುನಾಥ್ , ಪ್ರಧಾನ ವರದಿಗಾರರು ಪ್ರಜಾವಾಣಿ (2023)

ನಿರ್ಮಲಾನಂದ ಸ್ವಾಮೀಜಿ ಅಭಿನಂದನೆ:
ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ನಿರ್ಮಲಾನಂದ ಸ್ವಾಮೀಜಿಯವರು ಅಭಿನಂದಿಸಿದ್ದಾರೆ.

 

 

 

Latest Videos
Follow Us:
Download App:
  • android
  • ios