Asianet Suvarna News Asianet Suvarna News

ರಾಮನಗರದಲ್ಲಿ ಇಬ್ಬರು ರೈತರನ್ನು ಬಲಿ ಪಡೆದಿದ್ದ ಪುಂಡಾನೆ ಸೆರೆ: ನಾಗರಹೊಳೆ ಅಭಿಮನ್ಯು ಸಾಹಸಕ್ಕೆ ಮೆಚ್ಚುಗೆ

ರಾಮನಗರ ಜಲ್ಲೆಯಲ್ಲಿ ಇಬ್ಬರು ರೈತರನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸತತ ಮೂರನೇ ದಿನ ಕಾರ್ಯಾಚರಣೆಯಿಂದ ಸೆರೆ ಹಿಡಿದಿದ್ದಾರೆ.

Karnataka Forest officials have captured elephant that killed two people in Ramanagara sat
Author
First Published Jun 8, 2023, 5:23 PM IST

ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣ ನ್ಯೂಸ್
ರಾಮನಗರ (ಜೂ.08): ರಾಮನಗರದಲ್ಲಿ ಮೂರು ದಿನಗಳ ಅರಣ್ಯ ಇಲಾಖೆಯ ಕಾರ್ಯಾಚರಣೆಯ ನಂತರ ಎರಡು ಜೀವಗಳನ್ನು ಬಲಿ ಪಡೆದಿದ್ದ ಒಂಟಿಸಲಗ ಕೊನೆಗೂ ಸೆರೆಯಾಗಿದೆ. ಜಿಲ್ಲೆಯಲ್ಲಿ ರೈತರು, ಗ್ರಾಮಸ್ಥರಿಗೆ ಪ್ರತಿನಿತ್ಯ ತೊಂದರೆ ನೀಡ್ತಿದ್ದ, ಕಾಡಿನಲ್ಲಿ ಅಡ್ಡಾದಿಡ್ಡಿ ಓಡಾಟ ನಡೆಸುತ್ತಿದ್ದ ಪುಂಡಾನೆಯನ್ನು ನಾಗರಹೊಳೆಯ ಅಭಿಮನ್ಯು ಆನೆಯ ತಂಡದ ಸಹಾಯದಿಂದ ಸೆರೆ ಹಿಡಿಯಲಾಗಿದೆ.

ನಾನು ಹೋಗೊಲ್ಲ ಅಂತಾ ಹಠ ಹಿಡಿಯುತ್ತಿರೋ ಸಲಗ, ಕ್ರೇನ್ ನನ್ನೇ ಅಳ್ಳಾಡಿಸಿ, ಬೀಳಿಸಿ ಬಿಡ್ತೀನಿ ಅಂತಿರೋ ಪುಂಡಾನೆ. ಬಿದ್ದು ಬಿದ್ದು ಓಡ್ತೊರೋ ಜನರು, ಇಷ್ಟೆಲ್ಲಾ ದೃಶ್ಯಗಳು ಕಂಡು ಬಂದಿದ್ದು, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದ ಕಾಡನಕುಪ್ಪೆ- ಅರಳಾಳುಸಂದ್ರ ಗ್ರಾಮದಲ್ಲಿ. ಕಳೆದ ಹಲವು ತಿಂಗಳಿಂದ ಸಾಕಷ್ಟು ತೊಂದರೆ ನೀಡ್ತಿದ್ದ, ಪುಂಡಾನೆಯನ್ನು ಸೆರಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನಾಗರಹೊಳೆ ವೈದ್ಯಾಧಿಕಾರಿಗಳ ತಂಡ ಯಶಸ್ವಿಯಾಗಿದೆ. 

ಕೋಡಿಮಠ ಶ್ರೀಗಳ ಭವಿಷ್ಯ: ದೇಶಕ್ಕೆ ಕಾದಿದೆ ಮತ್ತೊಂದು ಗಂಡಾಂತರ, ಸಮುದ್ರದಲ್ಲಿ 2 ರಾಷ್ಟ್ರ ಮುಳುಗಡೆ

ಒಂಟಿ ಸಲಗ ಕೊನೆಗೂ ಅಂದರ್‌: ಕಳೆದ 15 ದಿನಗಳ ಅಂತರದಲ್ಲಿ ಎರಡು ಜೀವಗಳನ್ನು ಬಲಿ ಪಡೆದಿದ್ದ ಒಂಟಿಸಲಗ ಕೊನೆಗೂ ಅಂದರ್ ಆಗಿದೆ.  ಒಂಟಿ ಸಲಗ ಸೆರೆಹಿಡಿಯುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದ ಹಿನ್ನಲೆ, ಅರಣ್ಯ ಇಲಾಖೆ ಪರ್ಮಿಷನ್ ತೆಗೆದುಕೊಂಡಿತ್ತು. ಅದೇ ರೀತಿ ಕಳೆದ ಮೂರು ದಿನಗಳಿಂದ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಕ್ಯೂಬಿಂಗ್ ಮಾಡಲಾಗಿತ್ತು ಇಂದು ಬೆಳಗ್ಗಿನ ಜಾವ ಅರವಳಿಕೆ ನೀಡಿ ಒಂಟಿ ಸಲಗವನ್ನು ಸೆರೆಹಿಡಿಯಲಾಗಿದೆ. ಜೊತೆಗೆ ಈ ಭಾಗದಲ್ಲಿ ನಾಲ್ಕೈದು ಆನೆಗಳಿದ್ದು, ಮೂರು ದಿನಗಳ ನಂತರ ಮತ್ತೆ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಅಭಿಮನ್ಯು ನೇತೃತ್ವದ 5 ಆನೆಗಳ ತಂಡ: ಭಾನುವಾರ ನಾಗರಹೊಳೆ ಅರಣ್ಯ ಪ್ರದೇಶದಿಂದ ಅಭಿಮನ್ಯು, ಭೀಮ, ಅರ್ಜುನ, ಮಹೇಂದ್ರ, ಶ್ರೀ ಕಂಠ ಹೆಸರಿನ 5 ಆನೆಗಳನ್ನು ಕ್ಯಾಂಪ್ ಗೆ ಕರೆತಂದು, ಕಾಡಾನೆಗಳನ್ನು ಸೆರೆ ಹಿಡಿಯಲು ಪ್ಲಾನ್ ಮಾಡಿಕೊಂಡಿದ್ದೆವು. ಅದೇ ರೀತಿ ನಾವು ಸೆರೆಹಿಡಿದಿರುವ ಆನೆಯನ್ನು ಹುಡುಕಲು ಸಾಕಷ್ಟು ತೊಂದರೆಯಾಗಿತ್ತು. ಬೆಟ್ಟ ಗುಡ್ಡಗಳ ನಡುವೆ ಓಡಾಡುವಾಗ ಸಮಸ್ಯೆಯಾಗಿತ್ತು. ಇಂದು ಬೆಳಿಗ್ಗೆ  ಅಭಿಮನ್ಯು ಆನೆಯ ಸಹಾಯದಿಂದ  ಈ ಆನೆಗೆ ಅರವಳಿಕೆ ನೀಡಿ ಸೆರೆಹಿಡಿಯಲಾಗಿದೆ. ಆನೆಗೆ ತಲೆ ಭಾಗದಲ್ಲಿ ಸಣ್ಣ ಗಾಯಗಳಾಗಿದ್ದು, ಯಾವುದೇ ಸಮಸ್ಯೆ ಇಲ್ಲ. ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಆನೆಯನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ನಾಗರಹೊಳೆ ವೈದ್ಯಾಧಿಕಾರಿ ರಮೇಶ್ ತಿಳಿಸಿದರು.

Bengaluru- ಡಿಸಿಎಂ ಖಡಕ್‌ ವಾರ್ನಿಂಗ್: ದಿವ್ಯಶ್ರೀ, ಶಿವಕುಮಾರ ಯಾರೇ ಇರ್ಲಿ, ರಾಜಕಾಲುವೆ ಒತ್ತುವರಿ ತೆರವು ಮಾಡ್ಬೇಕಷ್ಟೇ!

ಕನಕಪುರ- ಚನ್ನಪಟ್ಟಣದಲ್ಲಿ ಭಾರಿ ಆತಂಕ:  ಚನ್ನಪಟ್ಟಣ ಹಾಗೂ ಕನಕಪುರ ತಾಲ್ಲೂಕಿನ ತೆಂಗಿನಕಲ್ಲು,ಕಬ್ಬಾಳು, ಬಿ.ವಿ ಹಳ್ಳಿ ಸೇರಿದಂತೆ ಅರಣ್ಯ ಭಾಗದಲ್ಲಿ ಇನ್ನೂ ನಾಲ್ಕೈದು ಆನೆಗಳಿದ್ದು, ರೈತರಿಗೆ ಹಾಗೂ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗ್ತಿದೆ. ರೈತರು ಬೆಳೆದ ಬೆಳೆಗಳು ಹಾಳು ಮಾಡ್ತಿವೆ. ಜಮೀನಿನಲ್ಲಿ ಕೆಲಸ ಮಾಡಲು ಹೋಗುವ ರೈತರ ಜೀವವನ್ನು ಬಲಿ ಪಡೆಯುತ್ತಿವೆ. ಆದಷ್ಟು ಬೇಗ ಇನ್ನುಳಿದ ಆನೆಗಳನ್ನು ಸೆರೆಹಿಡಿಯಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಒಟ್ಟಾರೆ ಎರಡು ಜೀವಗಳನ್ನು ಪಡೆದಿದ್ದ, ಒಂಟಿ ಸಲಗ ಕೊನೆಗೂ ಸೆರೆ ಸಿಕ್ಕಿದ್ದು, ಗ್ರಾಮಸ್ಥರು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೂಳಿದ ಆನೆಗಳನ್ನು ಆದಷ್ಟು ಬೇಗ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

Follow Us:
Download App:
  • android
  • ios