* ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಸೇವೆ ಸ್ಥಗಿತ* ಜುಲೈ 20 ರಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧಾರ* ಇವರ ಮುಖ್ಯ ಬೇಡಿಕೆಗಳೇನು?

ಬೆಂಗಳೂರು, ಜುಲೈ.24): ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (KFCSC)ತನ್ನ ಸೇವೆಯನ್ನು ಜುಲೈ 20 ರಿಂದ ಸ್ಥಗಿತಗೊಳಿಸಲಿದೆ. KFCSC ನ ಲೋಡಿಂಗ್ ಅಂಡ್ ಅನ್ ಲೋಡಿಂಗ್ ಕಾರ್ಮಿಕರಿಗೆ ಕಾನೂನಿನ ಪ್ರಕಾರ ನೀಡಬೇಕಾದ ಸವಲತ್ತು ನೀಡದೆ ಇರುವ ಹಿನ್ನಲೆ ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಆಹಾರ ಸರಬರಾಜು ಇಲಾಖೆಗೆ ಬಿಸಿ ಮುಟ್ಟಿಸಲು ನಿರ್ಧರಿಸಿದೆ. 

ನಿತ್ಯ ಕಾರ್ಮಿಕರು ಅಕ್ಕಿ, ಗೋಧಿ ಮೂಟೆಗಳನ್ನು ಗೋಡಾನ್ ಗಳಿಗೆ ಲೋಡ್ ಅನ್ ಲೋಡ್ ಮಾಡ್ತಾರೆ. ನಿರಂತರವಾಗಿ ಕೆಲಸ ಮಾಡೋ ಈ ಕಾರ್ಮಿಕರೆಲ್ಲ ಗುತ್ತಿಗೆ ನೌಕರರು. ಬೆಳಗ್ಗೆಯಿಂದ ಸಂಜೆಯಾಗುವಷ್ಟರಲ್ಲಿ ಮೂಟೆ ಹೊತ್ತು ಈ ಕೆಲಸದ ಸಹವಾಸವೇ ಬೇಡ ಅನ್ನುವಷ್ಟು ಬೇಸರಗೊಂಡಿದ್ದಾರೆ. ನಗರದಲ್ಲಿ 14 ಸೇರಿದಂತೆ ರಾಜ್ಯಾದ್ಯಂತ ಸುಮಾರು 191 ಗೋಡನ್ ಗಳಿದ್ದು ಪ್ರತಿಯೊಂದು ಗೋಡನಲ್ಲಿ 9 ಸಿಬ್ಬಂದಿಗಳು ಅಕ್ಕಿ, ಗೋಧಿ ಮೂಟೆಗಳನ್ನು ಲೋಡ್ ಅನ್ ಲೋಡ್ ಮಾಡ್ತಾರೆ. ರಾಜ್ಯಾದ್ಯಂತ ಸುಮಾರು 2ಸಾವಿರಕ್ಕೂ ಅಧಿಕ ನೌಕರರಿದ್ದಾರೆ. ಆದ್ರೆ ಸಿಬ್ಬಂದಿಗಳಿಗೆ ಸಿಗಬೇಕಾದ ಸಂಬಳ, ಪಿಎಫ್ ಹೀಗೆ ಕಾರ್ಮಿಕ ಸೇವಾ ಸವಲತ್ತುಗಳು ಸಿಗುತ್ತಿಲ್ಲ. 

ಕಿತ್ತ ಬಾಗಿಲು.. ಸೋರುವ ಮಾಳಿಗೆ.. ಇದು ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯ ರೈತ ಸಂಪರ್ಕ ಕೇಂದ್ರ

ಮುಖ್ಯ ಬೇಡಿಕೆಗಳೇನು?
* ಲೋಡಿಂಗ್ ಅನ್ಲೋಡಿಂಗ್ ಕಾರ್ಮಿಕರಿಗೆ ಸಾರಿಗೆ ಗುತ್ತಿಗೆದಾರರಾಗಲಿ ಅಥವಾ ಗೋಡನ್ ವ್ಯವಸ್ಥಾಪಕರಾಗಲಿ ವೇತನ ಚೀಟಿ ಉದ್ಯೋಗ ಪತ್ರ ಗುರುತಿನ ಚೀಟಿ, ರಜೆಗಳ ಸವಲತ್ತು ನೀಡ್ಬೇಕು
* ಕಾರ್ಮಿಕರಿಗೆ ಭವಿಷ್ಯನಿಧಿ ಇಎಸ್ ಐ ಕಟ್ಟಬೇಕಿರುವ ದಿನಾಂಕದಿಂದ ಕಟ್ಟಿ, ಬಳಿಕ ಪೂರ್ಣ ಮಾಹಿತಿಯನ್ನು ಸಂಘಟನೆಗೆ ವಹಿಸ್ಬೇಕು
* ಒಂದು ಮೂಟೆಗೆ 16 ರೂ ನಿಗದಿ ಪಡಿಸಲಾಗಿದೆ ಇದರಿಂದ ಜೀವನ‌ ನಿರ್ವಹಣೆ ಸಾಧ್ಯವಾಗ್ತಿಲ್ಲ ಹೀಗಾಗಿ 25ರೂ ಗೆ ಏರಿಸ್ಬೇಕು
* ಕಾರ್ಮಿಕ ಕಾಯ್ದೆ ಪ್ರಕಾರ ನಿವೃತ್ತಿಯಾದವಕಾರ್ಮಿಕರಿಗೆ ಗ್ರಾಚ್ಯುಟಿ, ಮತ್ತು ನಿವೃತ್ತಿ ವೇತನ ನೀಡಬೇಕು
* ಕಾರ್ಮಿಕರಿಗೆ ಕಾನೂನು ಪ್ರಕಾರ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು
* ಕಾರ್ಮಿಕರಿಗೆ ಅಪಘಾತವುಂಟಾದಲ್ಲಿ ಪರಿಹಾರ ನೀಡಬೇಕು
* ಕೆಲಸ ಮಾಡುವ ಕಚೇರಿ ಬಳಿ ಹಾಜರಾತಿ ಪುಸ್ತಕ ಕಡ್ಡಾಯಗೊಳಿಸಬೇಕು ಹಾಗೂ ಒಬ್ಬ ಮೇಲ್ವಿಚಾರಕರಿರಬೇಕು

ಹಲವು ಬಾರಿ ತಮ್ಮ ಬೇಡಿಕೆಗಳನ್ನು ಆಯುಕ್ತರು, ಸಿಎಂ ಮುಂದಿಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಒಂದು ದಿನ ಸೇವೆ ಸ್ಥಗಿತಗೊಳಿಸಲು KFCSC ನಿರ್ಧರಿಸಿದೆ. ಜುಲೈ 20 ರಂದು ರಾಜ್ಯದಲ್ಲೆಡೆ ಒಂದು ಶಾಂತಿಯುತ ಮುಷ್ಕರಕ್ಕೆ ನಿರ್ಧಾರ ಮಾಡಲಾಗಿದೆ. ಗೋಡಾನ್ ಗಳಿಗೆ ಅಕ್ಕಿ ಗೋಧಿ ಲೋಡ್ ಅನ್ಲೋಡ್ ಮಾಡದೆ ಸರ್ಕಾರವನ್ನು ಎಚ್ಚರಿಸ್ಬೇಕು. ಹಾಗೂ ಲಿಖಿತ ರೂಪದಲ್ಲಿ ಬೇಡಿಕೆ ಬಗೆಹರಿಸುವ ಭರವಸೆ ನೀಡಿದಲ್ಲಿ ತಮ್ಮ ಮುಷ್ಕರ ವಾಪಾಸ್ ಪಡೆಯಲಾಗುವುದು ಎಂದು ಲೇಬರ್ಸ್ ಯೂನಿಯನ್ ಅಧ್ಯಕ್ಷ ಶಿವಶಂಕರ್ ಎಚ್ಚರಿಕೆ ನೀಡಿದ್ದಾರೆ.