ಕಿತ್ತ ಬಾಗಿಲು.. ಸೋರುವ ಮಾಳಿಗೆ.. ಇದು ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯ ರೈತ ಸಂಪರ್ಕ ಕೇಂದ್ರ
ಕಿತ್ತ ಬಾಗಿಲು.. ಸೋರುವ ಮಾಳಿಗೆ.. ಇದು ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿನ ರೈತ ಸಂಪರ್ಕ ಕೇಂದ್ರದ ಬಿಲ್ಡಿಂಗ್ ಪರಿಸ್ಥಿತಿ. ಕೃಷಿ ಸಚಿವರ ಜಿಲ್ಲೆಯಲ್ಲೇ ಡೇಂಜರ್ ಸ್ಥಿತಿಯಲ್ಲಿ ಕೃಷಿ ಕಟ್ಟಡದ ಒಂದು ವರದಿ ಇಲ್ಲಿದೆ.
ಗದಗ, (ಜುಲೈ.14) : ಜಿಲ್ಲೆಯ ನರಗುಂದ ಪಟ್ಟಣದ ರೈತ ಸಂಪರ್ಕ ಕೇಂದ್ರದ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ.. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಡಿಮಳೆಯಾಗ್ತಿದ್ದು, ಪರಿಣಾಮ ಪಟ್ಟಣದ ರೈತ ಸಂಪರ್ಕ ಕೇಂದ್ರದ ಗೋಡೌನ್ ಹಾಗೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಸಂಪೂರ್ಣ ಸೋರುತ್ತಿದೆ.
.ಮೂರು ವರ್ಷದ ಹಿಂದೆಯೇ ಕಟ್ಟಡ ಭಾಗಶಃ ಶಿಥಿಲವಾಗಿದೆ.. ಸದ್ಯ ಮಳೆಯಿಂದಾಗಿ ಛಾವಣಿಯಿಂದ ನೀರು ಬೀಳ್ತಿದ್ದು ಪೀಠೋಪಕರಣ, ತಂತ್ರೋಪಕರಣ ಹಾಳಾಗಿವೆ.. ಕಂಪ್ಯೂಟರ್ ಸಿಸ್ಟಮ್ ಮೇಲೆಯೇ ಹನಿ ಹನಿ ನೀರು ಬೀಳುತ್ತೆ.. ಕಂಪ್ಯೂಟರ್ ಹಾಳಾಗ್ಬಾರ್ದು ಅಂತಾ ಪ್ಲಾಸ್ಟಿಕ್ ಕವರ್ ಮಾಡಿ ಕೆಲಸ ಮಾಡ್ಲಾಗ್ತಿದೆ.
ನಮ್ಮ ಪಕ್ಷದ ಕಾರ್ಯಕರ್ತ, ಇವರ ಕಾರನ್ನು ಯಾರು ಹಿಡಿಯಬಾರದು, ಬಿಜೆಪಿ ಶಾಸಕರೊಬ್ಬರ ಲೆಟರ್ ವೈರಲ್
ಕಟ್ಟಡ ದುರಸ್ಥಿಗೆ ಮನವಿ ಸಲ್ಲಿಸಿದ್ರೂ ಕೆಲಸ ಆಗಿಲ್ಲ..!
ಕಟ್ಟಡ ದುರಸ್ಥಿ ವಿಚಾರವಾಗಿ ಸುಮಾರು ಎಂಟು ತಿಂಗಳ ಹಿಂದೆ PWD ಇಲಾಖೆಗೆ ಮನವಿ ಸಲ್ಲಿಸಲಾಗಿದ್ಯಂತೆ.. ಆದ್ರೆ ಈವರೆಗೂ ಯಾವುದೇ ಉತ್ತರ ಬಂದಿಲ್ಲ ಅಂತಾ ಅಧಿಕಾರಿಗಳು ತಿಳಿಸ್ತಾರೆ.. PWD ಸಚಿವ ಸಿಸಿ ಪಾಟೀಲರ ತವರು ಕ್ಷೇತ್ರದಲ್ಲೇ ಕೃಷಿ ಕಟ್ಟಡ ನೆಲ ಕಚ್ಚುವ ಹಂತದಲ್ಲಿದೆ.. ಹೀಗಿದ್ರೂ ಈ ಬಗ್ಗೆ ಸಚಿವರ ಗಮನಕ್ಕೆ ಬಂದಿದ್ವಾ ಅನ್ನೋದು ರೈತರ ಪ್ರಶ್ನೆ..
ಕೃಷಿ ಸಚಿವರ ಜಿಲ್ಲೆಯಲ್ಲೇ ಡೇಂಜರ್ ಸ್ಥಿತಿಯಲ್ಲಿ ಕೃಷಿ ಕಟ್ಟಡ..!
ಕೃಷಿ ಸಚಿವ ಬಿಸಿ ಪಾಟೀಲರ ಉಸ್ತುವಾರಿ ಜಿಲ್ಲೆಯಲ್ಲೇ ಕೃಷಿ ಇಲಾಖೆಗೆ ಸಂಬಂಧಿಸಿದ ಕಟ್ಟಡ ಹಾಳಾಗಿದೆ.. ಕೃಷಿ ಸಂಪರ್ಕ ಕೇಂದ್ರದ ಗೋಡೌನ್ ನಲ್ಲಿ ಸುಮಾರು 30 ಟನ್ ಸಾವಯವ ಗೊಬ್ಬರ ಇರಿಸಲಾಗಿದೆ.. ಛಾವಣಿ ಬಿರುಕು ಬೊಟ್ಟು ಗೊಬ್ಬರವೂ ಹಾಳಾಗುವ ಹಂತದಲ್ಲಿದೆ.. ಸಚಿವರು, ಅಧಿಕಾರಿಗಳು ರೈತ ಸಂಪರ್ಕ ಕೇಂದ್ರದ ಆಗಾಗ ಬರ್ತಿರ್ತಾರೆ.. ಆದ್ರೆ ಈ ಬಗ್ಗೆ ಗಮನ ಹರಿಸ್ತಿಲ್ಲ ಅನ್ನೋಆರೋಪವೂ ಇದೆ..
ಕೆಸರು ಗದ್ದೆಯಂತಾಗಿರುವ ರೈತ ಸಂಪರ್ಕ ಕೇಂದ್ರದ ರಸ್ತೆ..!
ಹುಬ್ಬಳ್ಳಿ ವಿಜಯಪುರ ಮುಖ್ಯ ರಸ್ತೆಯಿಂದ ಸಂಪರ್ಕ ಕೇಂದ್ರಕ್ಕೆ ಹೋಗುವ ರಸ್ತೆಯೂ ಸಂಪೂರ್ಣ ಹಾಳಾಗಿದೆ.. ರಾಡಿ ತುಂಬಿದ ರಸ್ತೆಯಲ್ಲಿ ರೈತ್ರು ನಿತ್ಯ ಸರ್ಕಸ್ ಮಾಡ್ತಾನೆ ಸಾಗ್ಬೇಕು.. ಕೃಷಿ ಕಚೇರಿ ಅಂಗಳವೂ ರಾಡಿಯಿಂದ ತಿಂಬಿದೆ.. ಗೊಬ್ಬರ, ಬೀಜ ತೆಗೆದುಕೊಂಡು ಹೋಗುವ ವಾಹನಗಳು ಅಂಗಳದಲ್ಲೇ ಸಿಲುಕಿ ಪರದಾಡುವ ಪರಿಸ್ಥಿತಿ ಎದುರಾಗಿದೆ.. ಹೀಗಾಗಿ ಇತ್ತ ಗಮನ ಹರಿಸಿ ಕೂಡ್ಲೆ ಕ್ರಮ ಕೈಗೊಳ್ಳಬೇಕು ಅಂತಾ ರೈತ್ರು ಮನವಿ ಮಾಡ್ತಿದಾರೆ..